ಭಾರತ-ಕೆನಡಾ ಸಂಬಂಧ ಪುನರುಜ್ಜೀವನಕ್ಕೆ ಪ್ರಧಾನಿ ಮೋದಿ-ಕಾರ್ನಿ ನಿರ್ಧಾರ ; ಹೈಕಮಿಷನರ್‌ಗಳ ಮರುಸ್ಥಾಪನೆಗೆ ತೀರ್ಮಾನ

ನವದೆಹಲಿ: ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಭಾರತ ಮತ್ತು ಕೆನಡಾ ಬುಧವಾರ ಪರಸ್ಪರ ದೇಶಗಳ ರಾಜಧಾನಿಗಳಲ್ಲಿ ಹೈಕಮಿಷನರ್‌ಗಳನ್ನು ಪುನಃಸ್ಥಾಪಿಸಲು ನಿರ್ಧರಿಸಿವೆ. ಇದು ಜಸ್ಟಿನ್ ಟ್ರುಡೊ ನೇತೃತ್ವದ ಹಿಂದಿನ ಆಡಳಿತದಲ್ಲಿ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸದಾಗಿ ಆಯ್ಕೆಯಾದ ಕೆನಡಾದ ಪ್ರಧಾನಿ … Continued

ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ನಿಕ್ಷೇಪದ ಶೋಧದ ಸನಿಹದಲ್ಲಿ ಭಾರತ ; ದೇಶಕ್ಕೆ ತೈಲ ಜಾಕ್‌ಪಾಟ್..?

ನವದೆಹಲಿ: ಅಂಡಮಾನ್ ಸಮುದ್ರದಲ್ಲಿ ಮಹತ್ವದ ತೈಲ ನಿಕ್ಷೇಪ ಪತ್ತೆಯಾಗುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಸೂಚಿಸುತ್ತಿದ್ದು, ಭಾರತಕ್ಕೆ ಒಂದು ಪ್ರಮುಖ ಪ್ರಗತಿಯ ನಿರೀಕ್ಷೆಯಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ ಸಿಂಗ್ ಪುರಿ, ಈ ಸಂಭಾವ್ಯ ಶೋಧ ಮತ್ತು ಗಯಾನಾದಲ್ಲಿ ಪತ್ತೆಯಾದ ಬೃಹತ್ ತೈಲ ನಿಕ್ಷೇಪಗಳ ನಡುವೆ ಹೋಲಿಕೆಗಳನ್ನು ಮಾಡಿದ್ದಾರೆ, ಅದು ಪ್ರಸ್ತುತ ಸುಮಾರು … Continued

ವೀಡಿಯೊ | ನಾವು ಭಾರತದ ಐಪಿಎಲ್ ಫ್ಲಡ್‌ಲೈಟ್‌ ಆಫ್‌ ಮಾಡಿದ್ದೇವೆ : ವಿಚಿತ್ರ ಹೇಳಿಕೆಯಿಂದ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ-ವೀಕ್ಷಿಸಿ

ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ತಮ್ಮ ವಿಲಕ್ಷಣ ಹೇಳಿಕೆಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ “ಐಪಿಎಲ್ ಫ್ಲಡ್‌ಲೈಟ್‌ಗಳನ್ನು ಪಾಕಿಸ್ತಾನದವರು ಹ್ಯಾಕಿಂಗ್ ಮಾಡಿದ್ದರು” ಎಂದು ಹೇಳುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜಾ ಆಸಿಫ್ ಅವರು , ತಮ್ಮ ದೇಶದ “ಸೈಬರ್ ವಾರಿಯರ್ಸ್” ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ … Continued

ತಾನು ಮಾಡಿದ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ ಇಸ್ರೇಲ್‌

ನವದೆಹಲಿ: ಮೊದಲ ಬಾರಿಗೆ, ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿಗಳ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ ನಂತರ ಇಸ್ರೇಲ್‌ ಭಾರತದ ಕ್ಷಮೆ ಕೋರಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾಗಿ ತೋರಿಸಲಾಗಿದೆ. X ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಐಡಿಎಫ್ ನಕ್ಷೆಯು “ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ” ಎಂದು ಒಪ್ಪಿಕೊಂಡಿದೆ. ಆದರೆ ಅದು … Continued

ಭಾರತದ ವಾಯುನೆಲೆ ಹೊಡೆದಿದ್ದೇವೆ ಎಂದ ಪಾಕಿಸ್ತಾನದ ಹಸಿ ಸುಳ್ಳು ಬಯಲಿಗೆ …! ಅದು ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ ಎಂದ ಡೇಮಿಯನ್ ಸೈಮನ್

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಡಿ ಪಾಕಿಸ್ತಾನ ವಾಯು ನೆಲೆಗಳ ಮೇಲೆ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ಭಾರತದ ಮೇಲೆ ದಾಳಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಈಗ ಬಯಲಾಗಿದೆ. ಪಂಜಾಬ್‌ನ … Continued

ಭಾರತದಲ್ಲಿ ತೀವ್ರ ಬಡತನದ ಪ್ರಮಾಣ 27.1%ರಿಂದ 5.3%ಕ್ಕೆ ಇಳಿಕೆ ; ವಿಶ್ವಬ್ಯಾಂಕ್ ವರದಿ

ನವದೆಹಲಿ: ಭಾರತವು ಕಳೆದ ದಶಕದಲ್ಲಿ ತನ್ನ ತೀವ್ರ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿ ಸಾಧಿಸಿದೆ, ಇದು 2011-12ರಲ್ಲಿ ಶೇಕಡಾ 27.1ರಷ್ಟು ಇದ್ದಿದ್ದು, 2022-23ರಲ್ಲಿ ಶೇಕಡಾ 5.3 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ದತ್ತಾಂಶವು ಬಹಿರಂಗಪಡಿಸಿದೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 7.52 ಕೋಟಿ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಇದು 2011-12ರಲ್ಲಿ … Continued

ಈ ತಿಂಗಳು ಕೆನಡಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಮೋದಿಗೆ ಆಹ್ವಾನ ನೀಡಿದ ಪ್ರಧಾನಿ ಮಾರ್ಕ್ ಕಾರ್ನಿ

ನವದೆಹಲಿ: ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ನೇತೃತ್ವದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತ-ಕೆನಡಾ ಸಂಬಂಧಗಳು ಚೇತರಿಸಿಕೊಳ್ಳುತ್ತಿರುವ ದೊಡ್ಡ ಸಂಕೇತವಾಗಿ, ಅವರ ಉತ್ತರಾಧಿಕಾರಿ ಹಾಲಿ ಪ್ರಧಾನಿ ಮಾರ್ಕ್ ಕಾರ್ನಿ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ. ಜೂನ್ 15 ರಿಂದ 17 ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಪ್ರಧಾನಿ ಮೋದಿ … Continued

ಪಾಕಿಸ್ತಾನದಲ್ಲಿ ಜಲ ಬಿಕ್ಕಟ್ಟು | ಸಿಂಧೂ ಜಲ ಒಪ್ಪಂದ ಅಮಾನತು ಬೇಡ ; ಭಾರತಕ್ಕೆ 4 ಪತ್ರ ಬರೆದ ಪಾಕಿಸ್ತಾನ…!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ನಂತರ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಿರ್ಧಾರವನ್ನು ಭಾರತವು ಮರುಪರಿಶೀಲಿಸಬೇಕು ಎಂದು ಕೋರಿ ಪಾಕಿಸ್ತಾನವು ಒಂದರ ನಂತರ ಒಂದರಂತೆ ನಾಲ್ಕು ಪತ್ರಗಳನ್ನು ಬರೆದಿದೆ ಎಂದು ವರದಿಯಾಗಿದೆ. ಪಾಕಿಸ್ತಾನವು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಹತಾಶವಾಗಿರುವಂತೆ ತೋರುತ್ತಿದೆ ಎಂದು ಈ … Continued

ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡಲು ತನ್ನ ಪ್ರಿಯಕರ-ಸಹಾಯಕನಿಗೆ ಕುಮ್ಮಕ್ಕು ನೀಡಿದ ಬಿಜೆಪಿ ಮಾಜಿ ನಾಯಕಿ..! ಮೂವರ ಬಂಧನ

ಹರಿದ್ವಾರ: ಉತ್ತರಾಖಂಡದ ಮಾಜಿ ಬಿಜೆಪಿ ನಾಯಕಿಯ ಗೆಳೆಯ ಮತ್ತು ಆತನ ಸಹಾಯಕ ಅವಳ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಇದಕ್ಕೆ ಮಹಿಳೆಯೇ ಅವಕಾಶ ನೀಡಿದ್ದಾಳೆ ಎಂಬ ಆರೋಪ ಹೊರಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ 13 ವರ್ಷದ ಬಾಲಕಿಯ ಮೇಲೆ ಹಲವು … Continued

ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ಎಲಾನ್‌ ಮಸ್ಕ್‌ ತಂದೆ ; ಭಾರತ ಅದ್ಭುತ ಎಂದು ಬಣ್ಣನೆ

ಅಯೋಧ್ಯೆ: ವಿಶ್ವದ ಅತಿ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆ ಅನುಭವವನ್ನು “ಅದ್ಭುತ” ಮತ್ತು ಅವರು ಮಾಡಿದ “ಅತ್ಯುತ್ತಮ ಕೆಲಸಗಳಲ್ಲಿ” ಒಂದು ಎಂದು ಬಣ್ಣಿಸಿದ್ದಾರೆ. ಅವರು ಹತ್ತಿರದ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. “ಇದು … Continued