ಮಹಿಳೆಗೆ ಗರ್ಭಕೋಶದ ಬದಲು ಯಕೃತ್ತಿನಲ್ಲಿ ಬೆಳೆದ ಭ್ರೂಣ : ವೈದ್ಯರೇ ದಿಗ್ಭ್ರಮೆ ; ವಿಶ್ವದಲ್ಲಿ ಈವರೆಗೆ 18 ಜನರಿಗೆ ಹೀಗಾಗಿದೆ ; ಏನಿದು ಈ ಅಪರೂಪದ ಗರ್ಭಧಾರಣೆ..?

ಉತ್ತರ ಪ್ರದೇಶದ ಬುಲಂದ್‌ ಶಹರ್ ಜಿಲ್ಲೆಯಲ್ಲಿ ಕಂಡುಬಂದ ಅಪರೂಪದ ಗರ್ಭಧಾರಣೆಯ ಪ್ರಕರಣವೊಂದು ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ. 30 ವರ್ಷದ ಮಹಿಳೆಯೊಬ್ಬರು ನಿರಂತರ ಹೊಟ್ಟೆ ನೋವು ಕಂಡುಬಂದ ನಂತರ ವೈದ್ಯರ ಬಳಿ ಹೋದಾಗ ಎಂಆರ್‌ಐ ಸ್ಕ್ಯಾನ್‌ ಮಾಡಿದ ನಂತರ ಈ ಅಪರೂಪದ ಗರ್ಭಧಾರಣೆ ಪತ್ತೆಯಾಗಿದೆ. ಮಹಿಳೆಯ ಹೊಟ್ಟೆಯ ಎಂಆರ್‌ಐ ಸ್ಕ್ಯಾನ್‌ನಲ್ಲಿ ಆಶ್ಚರ್ಯಕರವಾದದ್ದು ಕಂಡುಬಂದಿದೆ. 12 ವಾರಗಳ ಭ್ರೂಣವು ಆಕೆಯ … Continued

ಟೈಬ್ರೇಕರ್‌ನಲ್ಲಿ ಕೊನೆರು ಹಂಪಿ ಸೋಲಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್ ಆದ ಭಾರತದ ದಿವ್ಯಾ ದೇಶಮುಖ

ನವದೆಹಲಿ: ಜಾರ್ಜಿಯಾದ ಬಟುಮಿಯಲ್ಲಿ ಮಹಿಳಾ ಚೆಸ್ ವಿಶ್ವಕಪ್ ಭಾರತದ ಹೊಸ ಚೆಸ್ ಸೆನ್ಸೇಷನ್ ದಿವ್ಯಾ ದೇಶಮುಖ (Divya Deshmukh) ಅವರು 19ನೇ ವಯಸ್ಸಿನಲ್ಲಿ ಭಾರತದವರೇ ಆದ ಕೊನೇರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸುವ ಮೂಲಕ (FIDE) ಮಹಿಳಾ ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ, ಗ್ರ್ಯಾಂಡ್‌ ಮಾಸ್ಟರ್ ಕೂಡ ಆಗಿದ್ದು, ಗ್ರ್ಯಾಂಡ್‌ಮಾಸ್ಟರ್ ಆದ … Continued

ಕ್ರಿಕೆಟ್‌..| ಏಷ್ಯಾ ಕಪ್ 2025ರ ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್ 14ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ನವದೆಹಲಿ : ಸೆಪ್ಟೆಂಬರ್ 9 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 28ರ ವರೆಗೆ ನಡೆಯಲಿರುವ ಏಷ್ಯಾ ಕಪ್‌-2025ರ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಈ ಎರಡು ರಾಷ್ಟ್ರಗಳ ನಡುವಿನ ಮೊದಲ ಪಂದ್ಯ ಇದಾಗಿದೆ. ಭಾರತ ಮತ್ತು … Continued

ಭಾರತ-ಪಾಕ್ ಕದನ ವಿರಾಮಕ್ಕೆ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ: ಸಂಸತ್ತಿಗೆ ತಿಳಿಸಿದ ಸರ್ಕಾರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಪ್ರವೇಶ ಕಾರಣ ಎಂಬ ಹೇಳಿಕೆಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಲೋಕಸಭೆಯಲ್ಲಿನ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ, ವಿದೇಶಾಂಗ ಸಚಿವಾಲಯವು ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಸಂಪರ್ಕದ ಫಲಿತಾಂಶವಾಗಿದೆ ಎಂದು ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರ … Continued

ಇಂದಿರಾ ಗಾಂಧಿ ದಾಖಲೆ ಮುರಿದ ನರೇಂದ್ರ ಮೋದಿ ; ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಪ್ರಧಾನಿಗಳ ಪಟ್ಟಿಯಲ್ಲಿ ಈಗ 2ನೇ ಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಶುಕ್ರವಾರ(ಜುಲೈ 25)ಕ್ಕೆ ನಿರಂತರವಾಗಿ 4,078 ದಿನಗಳನ್ನು ಪೂರೈಸುವ ಮೂಲಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಸತತ 4,077 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ದಿವಂಗತ ಇಂದಿರಾ ಗಾಂಧಿ ಅವರು ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಸತತ … Continued

ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಕೊಲ್ಲಾಪುರಿ ಚಪ್ಪಲಿಯಿಂದ ಬನಾರಸಿ ಸೀರೆ ವರೆಗೆ…ಆಭರಣಗಳಿಂದ ಐಟಿ ವರೆಗೆ ಜಾಗತಿಕ ನಕ್ಷೆಗೆ ʼಬ್ರಾಂಡ್ ಇಂಡಿಯಾʼ

ನವದೆಹಲಿ: ಕೊಲ್ಲಾಪುರಿ ಚಪ್ಪಲ್‌ಗಳಿಂದ ಹಿಡಿದು ಬನಾರಸಿ ಮತ್ತು ಚಂದೇರಿ ಸೀರೆಗಳ ವರೆಗೆ “ಬ್ರಾಂಡ್ ಇಂಡಿಯಾ” ರಕ್ಷಿಸುವುದು ಮತ್ತು ಉತ್ತೇಜಿಸುವುದು ಭಾರತ-ಯುನೈಟೆಡ್‌ ಕಿಂಗ್ಡಂ ಗುರುವಾರ ಲಂಡನ್‌ನಲ್ಲಿ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಒಂದು ಪ್ರಮುಖ ಆದ್ಯತೆಯಾಗಿದೆ. ಈ ಒಪ್ಪಂದವು ಚರ್ಮ, ಪಾದರಕ್ಷೆಗಳು ಮತ್ತು ಬಟ್ಟೆಗಳಂತಹ ಹೆಚ್ಚಾಗಿ ಮಹಿಳೆಯರು ತಯಾರಿಸುವ ಭಾರತೀಯ ಉತ್ಪನ್ನಗಳನ್ನು – ಬ್ರಿಟಿಷ್ ಮಾರುಕಟ್ಟೆಗಳಿಗೆ … Continued

ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಆಹ್ವಾನಿಸಿದ ಮಾಲ್ಡೀವ್ಸ್ ಅಧ್ಯಕ್ಷ…: ಚೀನಾ ಪರವಿದ್ದ ಮುಯಿಝು ಏಕಾಏಕಿ ಬದಲಾಗಿದ್ದು ಏಕೆ..?

ನವದೆಹಲಿ: ಜುಲೈ 25 ಮತ್ತು 26 ರಂದು ನಡೆಯಲಿರುವ ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಇದು ಪ್ರಧಾನಿಯವರ ದ್ವೀಪಕ್ಕೆ ಮೂರನೇ ಭೇಟಿಯಾಗಿದೆ. ಆದರೆ ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಭೇಟಿಯಾಗಿದೆ. ಜುಲೈ 23 ಮತ್ತು 24 … Continued

ಪಾಕ್‌ಗೆ ಮುಖಭಂಗ : ಪಹಾಲ್ಗಾಮ್ ದಾಳಿ ನಡೆಸಿದ್ದ ʼಟಿಆರ್‌ಎಫ್‌ʼ ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕ

ನವದೆಹಲಿ: ಪಹಾಲ್ಗಾಂ ದಾಳಿಯ ಹೊಣೆ ಹೊತ್ತುಕೊಂಡಿದ್ದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ ಮಾಡಿದೆ. ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗವಾಗಿದೆ. ಲಷ್ಕರ್ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಉಗ್ರರ ಪಟ್ಟಿಗೆ ಸೇರಿಸಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಘೋಷಣೆ ಮಾಡಿದೆ. ಏಪ್ರಿಲ್ 22 … Continued

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇದ್ದ ಬಾಹ್ಯಾಕಾಶ ನೌಕೆ ಭೂಮಿಯತ್ತ ಬರುತ್ತಿರುವ ಅದ್ಭುತ ದೃಶ್ಯದ ವೀಡಿಯೊ ವೈರಲ್‌-ವೀಕ್ಷಿಸಿ

ನವದೆಹಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಡ್ರ್ಯಾಗನ್ ಕ್ಯಾಪ್ಸುಲ್ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭೂಮಿಗೆ ಬಂದು ಇಳಿಯುವ ಮೊದಲಿನ ಅದ್ಭುತ ವೀಡಿಯೊವನ್ನು ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕ್ಯಾಲಿಫೋರ್ನಿಯಾದ ಮರಿನ್ ಕೌಂಟಿಯಿಂದ ಚಿತ್ರೀಕರಿಸಲಾದ ಈ ಕ್ಲಿಪ್, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಪೆಸಿಫಿಕ್ ಮಹಾಸಾಗರಕ್ಕೆ ಚಿಮ್ಮುವ ಮೊದಲು ಹೊಳೆಯುವ ಧೂಮಕೇತುವಿನಂತೆ ಮುಸ್ಸಂಜೆಯ ಆಕಾಶದಲ್ಲಿ ಹೊಳೆಯುತ್ತ … Continued

ರಾಜ್ಯ-ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರಿಗೆ ತೊಂದರೆಯಾಗ್ಬಹುದು, ಭಾರತಕ್ಕೆ ಆಘಾತವಾಗ್ಬಹುದು ; ಕೋಡಿಮಠ ಶ್ರೀಗಳ ಭವಿಷ್ಯ

ಮೈಸೂರು: ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವವರಿಗೆ ತೊಂದರೆಯಾಗಬಹುದು ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಭುವಿಷ್ಯ ಹೇಳಿದ್ದಾರೆ. ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಹೇಳಿರುವ ಸ್ವಾಮೀಜಿ ರಾಜ್ಯ ಸರ್ಕಾರವೂ ಆಗಿರಬಹುದು, ಕೇಂದ್ರ ಸರ್ಕಾರವೂ ಆಗಬಹುದು. ಅಧಿಕಾರದ ಸ್ಥಾನದಲ್ಲಿರುವವರಿಗೆ ಆಪತ್ತು ಬರಬಹುದು ಎಂಬರ್ಥದಲ್ಲಿ ಹೇಳಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಅರಸನ ಅರಮನೆಗೆ … Continued