ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ ಬ್ಯಾಂಡ್ ಸೇವೆ ನೀಡಲು ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ ಗೆ ಅನುಮೋದನೆ

ನವದೆಹಲಿ: ಭಾರತದಲ್ಲಿ ಕೈಗೆಟುಕುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯ ಭವಿಷ್ಯವನ್ನು ಬದಲಾಯಿಸಬಹುದಾದ ಅಂಶಗಳಲ್ಲಿ, ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಬುಧವಾರ ದೇಶದ ಬಾಹ್ಯಾಕಾಶ ನಿಯಂತ್ರಕ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (IN-SPACe)ದಿಂದ ಅನುಮೋದನೆ ಪಡೆದಿದೆ. ಭಾರತದ ಡಿಜಿಟಲ್ ಸಂಪರ್ಕ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ … Continued

ವೀಡಿಯೊ | ರಾಮಾಯಣ ಕಥೆಯ ʼದಿ ರಾಮಾಯಣ ಟ್ರಯಲ್ʼ ವೀಡಿಯೊ ಜಾಹೀರಾತು ಮೂಲಕ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸುವ ಶ್ರೀಲಂಕಾ ಏರ್‌ಲೈನ್ಸ್…!

ಶ್ರೀಲಂಕಾವು ಪುರಾತನ ಹಿಂದೂ ಮಹಾಕಾವ್ಯವಾದ ರಾಮಾಯಣಕ್ಕೆ ಸಂಬಂಧಿಸಿದಂತೆ ಐಕಾನಿಕ್ ಸ್ಥಳಗಳಿಗೆ ವೀಕ್ಷಕರನ್ನು ಕರೆದೊಯ್ಯುವ ‘ದಿ ರಾಮಾಯಣ ಟ್ರಯಲ್’ ಅನ್ನು ಪ್ರಚಾರ ಮಾಡಲು ಶ್ರೀಲಂಕಾ ಏರ್‌ಲೈನ್ಸ್ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ. ಜಾಹೀರಾತು ಶ್ರೀಲಂಕಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಿರೂಪಣೆಯನ್ನು ಒಳಗೊಂಡಿದೆ, ರಾಮಾಯಣಕ್ಕೆ ಸಂಬಂಧಿಸಿದ ಪೌರಾಣಿಕ ಸ್ಥಳಗಳಿಗೆ ಪ್ರವಾಸಿಗರನ್ನು ಆಹ್ವಾನಿಸುತ್ತದೆ. “ದಿ ರಾಮಾಯಣ ಟ್ರಯಲ್‌ʼನಲ್ಲಿ ರಾಮಾಯಣ ಮಹಾಕಾವ್ಯದ … Continued

ಮೈನವಿರೇಳಿಸುವ ವೀಡಿಯೊ…: ಈ ವ್ಯಕ್ತಿ ಯಾವುದೇ ಭಯವಿಲ್ಲದೆ ಬೃಹತ್‌ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸ್ತಾನೆ | ವೀಕ್ಷಿಸಿ

ಬೃಹತ್ ಕಾಳಿಂಗ ಸರ್ಪಕ್ಕೆ ವ್ಯಕ್ತಿಯೊಬ್ಬ ನಿರ್ಭಯವಾಗಿ ಸ್ನಾನ ಮಾಡುತ್ತಿರುವ ವಿಲಕ್ಷಣ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಿನಾಂಕವಿಲ್ಲದ ಕ್ಲಿಪ್ ನಲ್ಲಿ ವ್ಯಕ್ತಿಯು ತನ್ನ ಸ್ನಾನದ ಕೋನೆಯಲ್ಲಿ ಕಾಳಿಂಗ ಸರ್ಪಕ್ಕೆ ಯಾವುದೇ ಭಯ ಅಥವಾ ಅಂಜಿಕೆ ಪ್ರದರ್ಶಿಸದೆ ಸ್ನಾನ ಮಾಡಿಸುವುದನ್ನು ತೋರಿಸುತ್ತದೆ. ಮೈನವಿರೇಳಿಸುವ ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಾಂತ ನಂದಾ ಅವರು ಎಕ್ಸ್‌ನಲ್ಲಿ … Continued

ಜಮ್ಮು-ಕಾಶ್ಮೀರದಲ್ಲಿ ೪ಜಿ ಇಂಟರ್‌ನೆಟ್‌ ಸೇವೆ

ನವ ದೆಹಲಿ; 18 ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃ ಸ್ಥಾಪಿಸಲಾಗುತ್ತದೆ ಎಂದು ಯುಟಿಯ ವಿದ್ಯುತ್ ಮತ್ತು ಮಾಹಿತಿ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.೨೦೧೯ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿತ್ತು.