ವೀಡಿಯೊ..| ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಲು ಮುಂದಾದ ಬಿಹಾರ ಸಿಎಂ ನಿತೀಶಕುಮಾರ : ಮೋದಿ ಏನು ಮಾಡಿದ್ರು ನೋಡಿ

ದರ್ಭಾಂಗ : ಬಿಹಾರದ ದರ್ಭಾಂಗದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗಿರುವುದು ಕಂಡುಬಂದಿದೆ. ಬಿಹಾರ ಮುಖ್ಯಮಂತ್ರಿ ಪ್ರಧಾನಿ ಬಳಿಗೆ ಬರುತ್ತಿದ್ದಂತೆ ಅವರ ಪಾದ ಮುಟ್ಟಿ ಮುಂದಾಗುತ್ತಾರೆ. ಆದಾಗ್ಯೂ, ಪ್ರಧಾನಿ ಮೋದಿ ಅವರನ್ನು ನಡುವೆ ತಡೆಯುತ್ತಾರೆ, ನಂತರ ಅವರು ಅವರೊಂದಿಗೆ ಹಸ್ತಲಾಘವ ಮಾಡುತ್ತಾರೆ.ಈ ಕ್ಷಣದ … Continued

ʼಅಗ್ನಿವೀರʼ ಯೋಜನೆ ಮರುಪರಿಶೀಲಿಸುವಂತೆ ಎನ್‌ಡಿಎ ಸರ್ಕಾರ ರಚನೆಗೆ ಮೊದಲೇ ಜೆಡಿಯು ಒತ್ತಾಯ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯು ಮೊದಲ ಎರಡಕ್ಕಿಂತ ಭಿನ್ನವಾಗಿರಬಹುದು ಎಂಬ ಮೊದಲ ಸಂಕೇತವಾಗಿ, ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರದ ಅಗ್ನಿಪಥ ಯೋಜನೆಯನ್ನು ಮರುಪರಿಶೀಲಿಸಲು ಪಕ್ಷವು ಬಯಸುತ್ತದೆ ಎಂದು ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ. ಬಿಜೆಪಿ ಮಿತ್ರ ಪಕ್ಷ ಜೆಡಿಯುನ ಮುಖ್ಯ ವಕ್ತಾರ ಕೆ.ಸಿ. ತ್ಯಾಗಿ, ಹಲವಾರು ರಾಜ್ಯಗಳಲ್ಲಿ ಯೋಜನೆಯ ವಿರುದ್ಧ ಅಸಮಾಧಾನವಿದೆ ಎಂದು ಹೇಳಿದ್ದಾರೆ. … Continued

ಎನ್​ ಡಿ ಎ ನಾಯಕರಾಗಿ ಪ್ರಧಾನಿ ಮೋದಿ ಸರ್ವಾನುಮತದಿಂದ ಆಯ್ಕೆ : ನಾಯ್ಡು, ನಿತೀಶ ಸೇರಿ ಎನ್‌ಡಿಎ ಪಕ್ಷಗಳ ನಾಯಕರಿಂದ ಲಿಖಿತ ಬೆಂಬಲ ಪತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು ಸೇರಿದಂತೆ ಮಿತ್ರಪಕ್ಷಗಳು ಅವರ ನಾಯಕತ್ವಕ್ಕೆ ತಮ್ಮ ಲಿಖಿತ ಬೆಂಬಲದ ಪತ್ರ ನೀಡಿವೆ. ಹೊಸ ಸರ್ಕಾರ ರಚನೆಗೆ ಜೂನ್​ 7ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದೆ. ಶನಿವಾರ (ಜೂನ್​ 8ರಂದು) ಹೊಸ ಸರ್ಕಾರ ರಚನೆಯಾಗಿ ನರೇಂದ್ರ … Continued

ಲೋಕಸಭೆ ಚುನಾವಣೆ : ಬಿಹಾರದಲ್ಲಿ ಎನ್‌ ಡಿ ಎ ಸೀಟು ಹಂಚಿಕೆ ಅಂತಿಮ ; ಈ ಬಾರಿ ಬಿಜೆಪಿಯೇ ದೊಡ್ಡಣ್ಣ…ಆ ಸ್ಥಾನ ಬಿಟ್ಟುಕೊಟ್ಟ ಜೆಡಿಯು…!

ನವದೆಹಲಿ: ಎನ್‌ಡಿಎ ಸೋಮವಾರ ಸಂಜೆ ಬಿಹಾರದಲ್ಲಿ ತನ್ನ ಸೀಟು ಹಂಚಿಕೆ ಸೂತ್ರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದು, ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅದನ್ನು ‘ದೊಡ್ಡಣ್ಣ’ನ ಸ್ಥಾನದಲ್ಲಿ ಇರಿಸಿದೆ. ಬಿಹಾರದಲ್ಲಿ ಈ ಹಿಂದೆ ಮೈತ್ರಿಕೂಟದಲ್ಲಿ ದೊಡ್ಡಣ್ಣನ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶಕುಮಾರ ಅವರ ಜೆಡಿಯು ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ ಪಾಸ್ವಾನ್ ಅವರ ಲೋಕ ಜನಶಕ್ತಿ … Continued

ನೂತನ ಮೈತ್ರಿಕೂಟ ಸರ್ಕಾರದ ಬಿಹಾರ ಸಿಎಂ ಆಗಿ 9 ನೇ ಬಾರಿಗೆ ನಿತೀಶಕುಮಾರ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಬಿಹಾರದ ನೂತನ ಮೈತ್ರಿಕೂಟದ ಸರ್ಕಾರದ ಮುಖ್ಯಮಂತ್ರಿಯಾಗಿ ಭಾನುವಾರ 9ನೇ ಬಾರಿಗೆ ನಿತೀಶಕುಮಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿತೀಶ ಜೊತೆಗೆ ಜನತಾ ದಳ (ಯುನೈಟೆಡ್) ನಾಯಕರಾದ ವಿಜಯಕುಮಾರ ಚೌಧರಿ, ಬಿಜೇಂದ್ರ ಪ್ರಸಾದ ಯಾದವ್ ಮತ್ತು ಶ್ರವೋನಕುಮಾರ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ನಾಯಕರಾದ ಸಾಮ್ರಾಟ ಚೌಧರಿ, ಡಾ ಪ್ರೇಮಕುಮಾರ ಮತ್ತು … Continued

ನಿತೀಶ ಸಂಪುಟದಲ್ಲಿ ಬಿಜೆಪಿಯ ಸಾಮ್ರಾಟ ಚೌಧರಿ, ವಿಜಯ ಸಿನ್ಹಾ ಬಿಹಾರದ ನೂತನ ಉಪಮುಖ್ಯಮಂತ್ರಿಗಳು…!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಭಾನುವಾರ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗೆ ಸೇರಿಕೊಂಡು ನೂತನ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಸಚಿವ ಸಂಪುಟವು ಈಗ ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದ್ದು, ಬಿಹಾರ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ … Continued

ಬಿಹಾರದಲ್ಲಿ ರಾಜಕೀಯ ಬೆಳವಣಿಗೆ :ಸಿಎಂ ಸ್ಥಾನಕ್ಕೆ ನಿತೀಶಕುಮಾರ ರಾಜೀನಾಮೆ, ಇಂದು ಸಂಜೆ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ..!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶಕುಮಾರ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ಎರಡ್ಮೂರು ದಿನಗಳಿಂದ ಬಿಹಾರ ರಾಜಕಾರಣದಲ್ಲಿನ ಎಲ್ಲಾ ವದಂತಿಗಳಿಗೆ ತೆರೆಬಿದ್ದಿದೆ. ಅವರು ಇಂದು, ಭಾನುವಾರ ಸಂಜೆ ಅಥವಾ ನಾಳೆ ಎನ್ ಡಿಎ ಜೊತೆಗೆ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ. ಇಂದು, ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರ ಸಭೆ … Continued

ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಈಗ ಒಡೆದ ಮನೆ..? ಎಎಪಿ, ಟಿಎಂಸಿ ನಂತ್ರ ಈಗ ಪ್ಲಗ್‌ ಎಳೆಯಲು ನಿತೀಶಕುಮಾರ ತಯಾರಿ..?!

ನವದೆಹಲಿ /ಪಾಟ್ನಾ: ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿಮಾಡಿಕೊಳ್ಳಲು ಒಪ್ಪದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣದಲ್ಲಿ ಚುನಾವಣೆ ಮೊದಲೇ ಅಲುಗಾಟ ಶುರುವಾಗಿದೆ. ಇಂದು, ಗುರುವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಮಾರ್ಚ್ 30 ರಂದು ಭಾರತ ಜೋಡಿ … Continued

ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಲಲ್ಲನ್ ಸಿಂಗ್ ರಾಜೀನಾಮೆ : ನಿತೀಶಕುಮಾರ ನೂತನ ಸಾರಥಿ

ನವದೆಹಲಿ: ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶಕುಮಾರ ಅವರನ್ನು ಬಿಹಾರದ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನದಿಂದ ಲಲ್ಲನ್ ಸಿಂಗ್ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರನ್ನು ಮರು-ನೇಮಕಗೊಳಿಸಲಾಯಿತು. ಹಾಗೂ ವಾರಗಳ ಊಹಾಪೋಹಗಳಿಗೆ ತೆರೆಬಿತ್ತು. ಸಭೆಯ ನಂತರ ತಕ್ಷಣವೇ ಸುದ್ದಿಗಾರರೊಂದಿಗೆ … Continued