ಹೊನ್ನಾವರ : ಮನೆಯ ಬಾಗಿಲ ಮುಂದೆಯೇ ಪ್ರತ್ಯಕ್ಷವಾದ ಚಿರತೆ..!

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಮನೆಯೊಂದರ ಅಂಗಳಕ್ಕೆ ಶನಿವಾರ ನಸುಕಿನ ಜಾವ ಚಿರತೆಯೊಂದು ಮನೆಯ ಅಂಗಳಕ್ಕೇ ಬಂದಿದೆ. ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಹಿಡಿಯಲು ಹೊಂಚು ಹಾಕಿದ್ದ ಚಿರತೆ ದಾಳಿ ಮಾಡಿದ್ದು ಆದರೆ ಅದು ವಿಫಲವಾಗಿದೆ. ಗಣಪು ಪಿ. ಹೆಗಡೆ ಎಂಬವರ ಮನೆಯ ಅಂಗಳಕ್ಕೆ … Continued

ಬೆಳಗಾವಿ : ಸೆರೆಯಾಗದ ಚಿರತೆ, ನಾಳೆಯೂ 21 ಶಾಲೆಗಳಿಗೆ ರಜೆ

ಬೆಳಗಾವಿ: ಬೆಳಗಾವಿಯ ಗಾಲ್ಫ್ ಮೈದಾನ ಪ್ರದೇಶದಲ್ಲಿ ಅವಿತುಕೊಂಡಿರುವ ಚಿರತೆಯ ಶೋಧ ಹಾಗೂ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದರೂ ಸೆರೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಬುಧವಾರ  ರಜೆ ಘೋಷಣೆ ಮಾಡಲಾಗಿದೆ. ನಗರ ಶಿಕ್ಷಣ ವಲಯದ 12 ಹಾಗೂ ಗ್ರಾಮೀಣ ಶಿಕ್ಷಣ ವಲಯದ‌ 9 ಶಾಲೆಗಳಿಗೆ ಬುಧವಾರ(ಆಗಸ್ಟ್‌ 10) ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ … Continued

ಮಾಲೀಕನ ಮೇಲೆ ಚಿರತೆ ದಾಳಿ: ಚಿರತೆ ಮೇಲೆ ಪ್ರತಿದಾಳಿ ಮಾಲೀಕನ ರಕ್ಷಿಸಿದ ಶ್ವಾನಗಳು…!

ಶಿವಮೊಗ್ಗ: ನಾಯಿಗಳೆಂದರೆ ನಂಬಿಗೆ ಹಾಗೂ ನಿಯತ್ತು. ಎಂಥದ್ದೇ ಸಂದರ್ಭದಲ್ಲಿಯೂ ಅದು ತನ್ನ ಒಡೆಯನನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಇಂಥದ್ದೊಂದು ನಿದರ್ಶನಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಬಿಟ್ಟುಕೊಡುವುದಿಲ್ಲ. ಸೊರಬ ತಾಲೂಕಿನ ಆನವಟ್ಟಿ ಸಮೀಪದ ಎಣ್ಣೆಕೊಪ್ಪದಲ್ಲಿ ಮಾಲೀಕನನ್ನು ಶ್ವಾನಗಳು ಚಿರತೆಯಿಂದ ಕಾಪಾಡಿದ ಘಟನೆ ವರದಿಯಾಗಿದೆ. ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ಎಣ್ಣೆಕೊಪ್ಪ ಗೊಲ್ಲರ ತಾಂಡಾದ ಬಂಗಾರಪ್ಪ ಅವರ … Continued

ಶಿರಸಿ: ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಚಿರತೆ ರಕ್ಷಣೆ..!

ಶಿರಸಿ: ಆಹಾರ ಅರಸಿ ಬಂದಿದ್ದ ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ವರದಿಯಾಗಿದೆ. ಚಿರತೆ ಚೀರಾಟ ಕೇಳಿದ ಸ್ಥಳೀಯರು ತಕ್ಷಣವೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ … Continued

ಧಾರವಾಡ: ಮತ್ತೆ ಕಾಡು ಸೇರಿದ ಚಿರತೆ, ಛಂಗನೆ ಜಿಗಿದು ಮಾಯ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸತತ ಪ್ರುತ್ನದ ನಂತರ ಭಾನುವಾರ ಸೆರೆ ಸಿಕ್ಕ ಚಿರತೆಯನ್ನು ಮರಳಿ ಕಾಡಿಗೆ ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಧಾರವಾಡ ಕವಲಗೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೆರೆ ಹಿಡಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು ಹಾಗೂ ಆರು ಕಡೆ ಬೋನುಗಳನ್ನು ಇಡಲಾಗಿತ್ತು. ಆದರೆ ಬೋನಿಗೆ ಬೀಳದೆ ತಪ್ಪಿಸಿಕೊಂಡಿದ್ದ ಚಿರತೆ … Continued

ಧಾರವಾಡ: ಕವಲಗೇರಿಯಲ್ಲಿ ತಪ್ಪಿಸಿಕೊಂಡ ಚಿರತೆ ಗೋವನಕೊಪ್ಪದ ಬಳಿ ಪ್ರತ್ಯಕ್ಷ..ಸೆರೆಗೆ ಕಾರ್ಯಾಚರಣೆ

ಧಾರವಾಡ: ನಿನ್ನೆ ರಾತ್ರಿ ಧಾರವಾಡದ ಕವಲಗೇರಿ ಗ್ರಾಮದ ಬಳಿ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದ ಚಿರತೆಯು ಇಂದು (ಶುಕ್ರವಾರ) ಬೆಳಿಗ್ಗೆ ಕವಲಗೇರಿ ಗ್ರಾಮಕ್ಕೆ ಗಡಿ ಹೊಂದಿಕೊಂಡಿರುವ ಗೋವನಕೊಪ್ಪದ ಬಳಿ ಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿರುವ ಚಿರತೆ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ … Continued

ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ವದಂತಿ: ಅರಣ್ಯಾಧಿಕಾರಿ ಇಲಾಖೆ ಸಿಬ್ಬಂದಿ ಪರಿಶೀಲನೆ

ಹುಬ್ಬಳ್ಳಿ : ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ರಾತ್ರಿ ಬೆಟ್ಟದಲ್ಲಿ ಚಿರತೆ ನೋಡಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಬಂದ ಬಗ್ಗೆ ಹೆಜ್ಜೆ ಗುರುತುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ಮುಮಜಅನೆಯಿಂದಲೇ … Continued