ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ; ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ

ಬರೇಲಿ : ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದನ್ನು ಸ್ವಾಗತಿಸಿದ್ದಾರೆ. ಇದು ಬಡ ಹಾಗೂ ಹಿಂದುಳಿದ ಮುಸ್ಲಿಮರಿಗೆ ಗಮನಾರ್ಹ ಆರ್ಥಿಕ ಲಾಭ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮಸೂದೆಯ ಪರವಾಗಿ ಮತ ಚಲಾಯಿಸಿದ ಎಲ್ಲಾ ಲೋಕಸಭಾ ಸದಸ್ಯರಿಗೆ ನಾನು … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2024 ಮಂಡನೆ ; ಮಸೂದೆಯ ಪ್ರಮುಖ ಬದಲಾವಣೆ ಸೆಕ್ಷನ್ 40ರ ರದ್ದತಿ ; ಇತರ ಪ್ರಮುಖ ಅಂಶಗಳೆಂದರೆ…

ನವದೆಹಲಿ : ವಿಪಕ್ಷಗಳ ಆಕ್ಷೇಪ ಹಾಗೂ ಭಾರೀ ಗದ್ದಲದ ನಡುವೆ ವಕ್ಫ್ (ತಿದ್ದುಪಡಿ) ಮಸೂದೆ-2024 ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್‌ ರಿಜಿಜು ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡಿಸಿದರು. ವಕ್ಫ್ ಆಸ್ತಿಗಳ ನಿಯಂತ್ರಣಕ್ಕಾಗಿ 1995ರ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮೊದಲ ಬಾರಿಗೆ ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ … Continued

ವಕ್ಫ್ (ತಿದ್ದುಪಡಿ) ಮಸೂದೆ-2024 ; ಇಂದು ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ-2024 ಬುಧವಾರ (ಏಪ್ರಿಲ್ 2)ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಬುಧವಾರ ಮಂಡಿಸಲಾಗುತ್ತದೆ ಮಂಗಳವಾರ ಪ್ರಕಟಿಸಿದರು. ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪ್ರಶ್ನೋತ್ತರ ಅವಧಿಯ ನಂತರ ಮಸೂದೆಯನ್ನು ಮಂಡಿಸಲಾಗುವುದು, ನಂತರ 8 ಗಂಟೆಗಳ ಚರ್ಚೆಯ ನಂತರ ಅದನ್ನು … Continued

ಲೋಕಸಭೆಯಲ್ಲಿ ವಲಸೆ ಮಸೂದೆ-2025 ಅಂಗೀಕಾರ : ಭಾರತ ಧರ್ಮಛತ್ರವಲ್ಲ ಎಂದ ಅಮಿತ್ ಶಾ

ನವದೆಹಲಿ: ಲೋಕಸಭೆಯು ಇಂದು, ಗುರುವಾರ ವಲಸೆ ಮತ್ತು ವಿದೇಶಿಯರ ಮಸೂದೆ, 2025 (Immigration and Foreigners Bill, 2025) ಅನ್ನು ಅಂಗೀಕರಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಕಿರಿಯ ಗೃಹ ಸಚಿವ ನಿತ್ಯಾನಂದ ರೈ ಅವರು ಮಸೂದೆಯನ್ನು ಮಂಡಿಸಿದರು. ಮಸೂದೆಯ ಮೇಲಿನ ಮೂರು ಗಂಟೆಗಳ ಸುದೀರ್ಘ ಚರ್ಚೆಯ ಕೊನೆಯಲ್ಲಿ, ಅಭಿವೃದ್ಧಿಗೆ ಸಹಾಯ ಮಾಡಲು … Continued

ಸಂಸದರಿಗೆ ಸಂಬಳ, ಪಿಂಚಣಿ-ಭತ್ಯೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೋಮವಾರ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಸಂಸದರ (ಲೋಕಸಭೆ ಮತ್ತು ರಾಜ್ಯಸಭೆ) ಸಂಬಳವನ್ನು 24% ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಅಧಿಸೂಚನೆಯು ಹಾಲಿ ಸದಸ್ಯರಿಗೆ ದೈನಂದಿನ ಭತ್ಯೆಗಳನ್ನು ಮತ್ತು ವೆಚ್ಚದ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಮಾಜಿ ಸದಸ್ಯರಿಗೆ ಐದು … Continued

ವಕ್ಫ್ ತಿದ್ದುಪಡಿ ಮಸೂದೆ | 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚನೆ : ಅವರಲ್ಲಿ 21 ಲೋಕಸಭಾ ಸದಸ್ಯರು; ಪಟ್ಟಿ ಇಲ್ಲಿದೆ..

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ 2024ಕ್ಕೆ ಹಲವು ವಿರೋಧ ಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದ ನಂತರ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಗಿದ್ದು, ಅದರ ಒಂದು ದಿನದ ನಂತರ, ಲೋಕಸಭೆಯು ಶುಕ್ರವಾರ ಪ್ರಸ್ತಾವಿತ ಶಾಸನವನ್ನು ಪರಿಶೀಲಿಸಲು ಸಮಿತಿಗೆ 31 ಸದಸ್ಯರನ್ನು ನೇಮಕ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಿತು. ಸ್ಪೀಕರ್ ಓಂ ಬಿರ್ಲಾ(Om Birla) ಅವರು ಶುಕ್ರವಾರ 31 ಸದಸ್ಯರ … Continued

ವಕ್ಫ್ ಕಾಯ್ದೆ | 1500 ವರ್ಷ ಹಳೆಯ ದೇಗುಲ ಇರುವ ಹಳ್ಳಿ, ಮುನ್ಸಿಪಲ್ ಕಾರ್ಪೋರೇಶನ್ ಪ್ರಧಾನ ಕಚೇರಿ ವಕ್ಫ್ ಆಸ್ತಿ ; ಇದು ಸಂಭವಿಸಿದ್ದು ಹೇಗೆ ? ವಿಪಕ್ಷಗಳಿಗೆ ರಿಜಿಜು ತಿರುಗೇಟು

ನವದೆಹಲಿ: ದೇಶದಲ್ಲಿ ಬೆರಳೆಣಿಕೆಯಷ್ಟು ಜನರು ವಕ್ಫ್ ಮಂಡಳಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಮತ್ತು ಸಾಮಾನ್ಯ ಮುಸ್ಲಿಮರಿಗೆ ನ್ಯಾಯ ಸಿಕ್ಕಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ ರಿಜಿಜು ಲೋಕಸಭೆಯಲ್ಲಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಂಡಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆಯ ಮೇಲಿನ ಪ್ರತಿಪಕ್ಷಗಳ ಆರೋಪಕ್ಕೆ ಅವರು ಉತ್ತರ ನೀಡಿದರು. ಪ್ರಸ್ತಾವಿತ ಕಾನೂನಿನಲ್ಲಿನ ನಿಬಂಧನೆಗಳು ಅನೇಕ ವರ್ಷಗಳಲ್ಲಿ ಬಹು … Continued

ವೀಡಿಯೊ..| ಸದನದಲ್ಲಿ ‘ಹಲ್ವಾ ಕಾರ್ಯಕ್ರಮ’ದ ಫೋಟೋ ತೋರಿಸಿ ರಾಹುಲ್ ಗಾಂಧಿ ಮಾತು : ಮುಖ ಮುಚ್ಚಿ ನಕ್ಕ ನಿರ್ಮಲಾ ಸೀತಾರಾಮನ್

ನವದೆಹಲಿ : ಲೋಕಸಭಾ ಕಲಾಪದಲ್ಲಿ ಸೋಮವಾರ ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ʼಹಲ್ವಾ ಕಾರ್ಯಕ್ರಮʼದ ಫೋಟೋ ಪ್ರದರ್ಶನ ಮಾಡಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಗುತ್ತಾ ಮುಖ ಮುಚ್ಚಿಕೊಂಡಿದ್ದಾರೆ. ಈ ಕಾರ್ಯಕ್ರಮದ ಫೋಟೋವನ್ನು ಲೋಕಸಭಾ ಕಲಾಪದಲ್ಲಿ ಪ್ರದರ್ಶನ ಮಾಡಿದ ರಾಹುಲ್ ಗಾಂಧಿ, ಈ ಫೋಟೋವನ್ನು ಗಮನಿಸಿ. ಇದರಲ್ಲಿ ಇರುವ … Continued

ಸಂಸತ್ತಿನಲ್ಲಿ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷ ನಾಯಕರಿಗೆ ನೀರು ಕೊಟ್ಟ ಪ್ರಧಾನಿ ಮೋದಿ ; ವೀಡಿಯೊ ವೈರಲ್‌

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡುತ್ತಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಅಡ್ಡಿಪಡಿಸುತ್ತಿದ್ದ ವಿಪಕ್ಷದ ನಾಯಕರಿಗೆ ಮೋದಿ ನೀರು ಕೊಟ್ಟಿರುವ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ಸುಮಾರು 135 ನಿಮಿಷಗಳ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ … Continued