ಸ್ಟಾರ್ಟಪ್‌ಗಳನ್ನು ವಿಶ್ವ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯನ್ನಾಗಿ ರೂಪಿಸಿ: ಪ್ರಧಾನಿ ಮೋದಿ

ಸ್ಟಾರ್ಟಪ್‌ಗಳ ಸಂಸ್ಥಾಪಕರು ಕೇವಲ ಮೌಲ್ಯಮಾಪನದ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶ್ವ ಗುಣಮಟ್ಟದ ಸೇವೆ ಒದಗಿಸುವ ಸಂಸ್ಥೆಗಳನ್ನು ಕಟ್ಟುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ನಾಸ್ಕಾಂ ಟೆಕ್ನಾಲಜಿ ಮತ್ತು ಲೀಡರ್‌ಶಿಪ್‌ ಫೋರಂನಲ್ಲಿ ಮಾತನಾಡಿ, ಸ್ಟಾರ್ಟ್ಅಪ್‌ಗಳು ತಮ್ಮನ್ನು ನಿರ್ಗಮನ ತಂತ್ರಗಳ ಮೌಲ್ಯಮಾಪನಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಶ್ರೇಷ್ಠತೆಯ ಜಾಗತಿಕ ಮಾನದಂಡವನ್ನು ನಿಗದಿಪಡಿಸುವ ವಿಶ್ವ ದರ್ಜೆಯ … Continued

ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಪುಲ್ವಾಮಾ ಘಟನೆಗೆ ೨ ವರ್ಷ: ಹುತಾತ್ಮರಿಗೆ ಪ್ರಧಾನಿ ಗೌರವ

ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯ ೨ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಯಾವುದೇ ಭಾರತೀಯನು ಈ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ, ಪುಲ್ವಾಮಾ ದಾಳಿ ಸಂಭವಿಸಿದೆ. ಆ ದಾಳಿಯಲ್ಲಿ ನಾವು ಕಳೆದುಕೊಂಡ ಎಲ್ಲ ಹುತಾತ್ಮರಿಗೆ ನಾವು ಗೌರವ ಸಲ್ಲಿಸುತ್ತೇವೆ. ನಮ್ಮ ಭದ್ರತಾ … Continued

ತಮಿಳುನಾಡು ರೈತರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಚೆನ್ನೈ: ಸಮರ್ಪಕವಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ದಾಖಲೆ ಪ್ರಮಾಣದ ಆಹಾರಧಾನ್ಯ ಉತ್ಪಾದನೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ರೈತರನ್ನು ಶ್ಲಾಘಿಸಿದ್ದಾರೆ. ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ರೈತರು ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಬೆಳೆದಿರುವುದು ಶ್ಲಾಘನೀಯ. ರೈತರು ಸಮರ್ಪಕವಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧನೆ ಮಾಡಿದ್ದಾರೆ ಎಂದರು. ಹೊಸ ಕೃಷಿ … Continued

ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ ಪ್ರಧಾನಿ: ಶಿವಸೇನೆ ಆರೋಪ

ಮುಂಬೈ: ಕೃಷಿ ಕಾನೂನುಗಳನ್ನು ಖಂಡಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಪ್ರಧಾನಿ “ಆಂದೋಲನಜೀವಿಗಳುʼ ಎಂದು ಕರೆದಿರುವುವುದು ದೇಶದ ಸ್ವಾತಂತ್ರ್ಯ ಹೋರಾಟ ಮಾಡಿದವರಿಗೂ ಮಾಡಿದ ಅವಮಾನ ಎಂದು ಶಿವಸೇನೆ ಆರೋಪ ಮಾಡಿದೆ. ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಪ್ರಧಾನಿ ಮೋದಿ ಅವರು ದೇಶದ ಆಂದೋಲನಗಳನ್ನು ಗೇಲಿ ಮಾಡಿದ್ದಾರೆ. ಬಿಜೆಪಿ ತುರ್ತು ಪರಿಸ್ಥಿತಿಯಿಂದ ಅಯೋಧ್ಯೆ ಚಳುವಳಿಯವರೆಗೆ, ಹಣದುಬ್ಬರದಿಂದ ಕಾಶ್ಮೀರದಿಂದ ಆರ್ಟಿಕಲ್-370 … Continued

ಮೋದಿ ಲೂಟಿಕೋರ; ರಾಹುಲ್‌ ಗಾಂಧಿ ಆರೋಪ

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಪ್ರಧಾನಿ ಮೋದಿ ಕಾರ್ಪೋರೇಟ್‌ಗಳತ್ತ ಗಮನ ಹರಿಸಿ ತಮ್ಮ ಇಬ್ಬರು ಸ್ನೇಹಿತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇರ ಆರೋಪ ಮಾಡಿದ್ದಾರೆ. ಕೊವಿಡ್‌-೧೯ ಸಂದರ್ಭದಲ್ಲಿ ಮೋದಿ ಸಾರ್ವಜನಿಕರ ಹಣವನ್ನು ಲೂಟಿಗೈದಿದ್ದಾರೆ ಎಂದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಆಸ್ಸಾಂ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, … Continued

ಭಾರತದ ಭೂಪ್ರದೇಶ ಚೀನಾಕ್ಕೆ ನೀಡಿದ ಹೇಡಿ: ಪ್ರಧಾನಿ ಮೋದಿಗೆ ಜರೆದ ರಾಹುಲ್‌

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು … Continued

ಮೋದಿ-ಕೆನಡಾ ಪ್ರಧಾನಿ ಮಾತುಕತೆ: ಕೊವಿಡ್‌, ರೈತರ ಪ್ರತಿಭಟನೆ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಬುಧವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎರಡೂ ಕಡೆಯ ಅಧಿಕೃತ ಹೇಳಿಕೆಗಳ ಪ್ರಕಾರ, ಲಸಿಕೆ ಉತ್ಪಾದನೆ, ಬಹುಪಕ್ಷೀಯ ಸಹಕಾರ ಮತ್ತು ಕೆನಡಾದಿಂದ ಉನ್ನತ ಮಟ್ಟದ ಬೆಂಬಲವನ್ನು ಪಡೆದ ಭಾರತದ ರೈತರ “ಇತ್ತೀಚಿನ ಪ್ರತಿಭಟನೆಗಳು”, COVID-19 ಸಾಂಕ್ರಾಮಿಕವನ್ನು ಒಳಗೊಂಡಿರುವ ದ್ವಿಪಕ್ಷೀಯ ಮತ್ತು ಈ ಬಗ್ಗೆ ಜಾಗತಿಕ … Continued

ಕೊರೊನಾ ಲಸಿಕೆ ರವಾನೆಗೆ ಮೋದಿಗೆ ಡೊಮಿನಿಕನ್‌ ಧನ್ಯವಾದ

ತಮ್ಮ ದೇಶಕ್ಕೆ ೩೫,೦೦೦ ಕೋವಿಡ್-‌೧೯ ಲಸಿಕೆ ಕಳಿಸಿದ್ದಕ್ಕೆ ಡೊಮಿನಿಕನ್‌ ಪ್ರಧಾನಿ ಸ್ಕೆರಿಟ್‌ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ತ್ವರಿತ ಗತಿಯಲ್ಲಿ ಲಸಿಕೆಗಳನ್ನು ರವಾನಿಸಿದ್ದು ಶ್ಲಾಘನೀಯ. ಇದರಿಂದ ದೇಶದ ೭೨,೦೦೦ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರನ್ನು ಮಾರಕ ಕೊರೊನಾ ಲಸಿಕೆಯಿಂದ ರಕ್ಷಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಲಸಿಕೆಗಳನ್ನು ನೆರೆಯ ಬಾರ್ಬಡೋಸ್‌ನ ಏರ್ ನ್ಯಾಷನಲ್ ಗಾರ್ಡ್‌ನ ವಿಮಾನದಲ್ಲಿರುವ ಡೊಮಿನಿಕಾದ … Continued

ನಿಮಗೆ ನಮ್ಮ ಬಾಗಿಲು ತೆರೆದಿದೆ: ಗುಲಾಂ ನಬಿಗೆ ಮೋದಿ

ನವದೆಹಲಿ: ನೀವು ರಾಜ್ಯಸಭೆಯಿಂದ ನಿವೃತ್ತಿಯಾದರೂ ನಮ್ಮ  ಬಾಗಿಲು ನಿಮಗೆ ಯಾವಾಗಲೂ ತೆರೆದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಭೆಯಿಂದ ನಿವೃತ್ತಿಗೊಂಡ ಗುಲಾಂ ನಬಿ ಆಜಾದ್‌ ಅವರಿಗೆ ಹೇಳಿದರು. ರಾಜ್ಯಸಭೆಯಲ್ಲಿ ಆಜಾದ್‌ರನ್ನು ಬೀಳ್ಕೊಡುವ ಭಾಷಣ ಮಾಡಿದ ಪ್ರಧಾನಿ ಮೋದಿ, ನೀವು ಸದನದಲ್ಲಿ ಇಲ್ಲ ಎಂದು ಭಾವಿಸಬೇಡಿ. ನೀವು ನಿವೃತ್ತಿಯಾಗಲು ನಾನು ಬಿಡುವುದಿಲ್ಲ. ನಿಮ್ಮ ಸಲಹೆ ನಮಗೆ … Continued