ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ(37) ಎಂಬವರು ಕೊಲೆಯಾದ ಅಧಿಕಾರಿ. ಇವರು ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ … Continued

ಕೆನಡಾದ ಉನ್ನತ ಮಟ್ಟದ ಅಧಿಕಾರಿಯಿಂದ ಹಾನಿಗೊಳಗಾದ ನಿಜ್ಜರ್ ಹತ್ಯೆಯ ತನಿಖೆ: ಭಾರತದ ರಾಜತಾಂತ್ರಿಕರು

ನವದೆಹಲಿ : ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ ಹತ್ಯೆಯಲ್ಲಿ ಭಾರತದ ಏಜೆಂಟರು ಕೊಂದಿದ್ದಾರೆ ಎಂದು ಭಾರತದ ವಿರುದ್ಧ ಕೆನಡಾವು ಆರೋಪ ಮಾಡಿದ್ದು, ಅದನ್ನು ಸಾಬೀತುಪಡಿಸಲು ಕೆನಡಾದ ಉನ್ನತ ಭಾರತೀಯ ರಾಜತಾಂತ್ರಿಕರು ಒಟ್ಟಾವಾಗೆ ಪುರಾವೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಭಾರತೀಯ ಹೈಕಮಿಷನರ್ ಸಂಜಯಕುಮಾರ ವರ್ಮಾ ಅವರು ದಿ ಗ್ಲೋಬ್ ಮತ್ತು ಮೇಲ್‌ಗೆ ತಿಳಿಸಿದ್ದು, ಜೂನ್‌ನಲ್ಲಿ … Continued

ಚುನಾವಣೆಗೆ ಮೂರು ದಿನಗಳ ಮೊದಲು ಬಿಜೆಪಿ ನಾಯಕನ ಹತ್ಯೆ

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನಕ್ಕೆ ಮೂರು ದಿನಗಳ ಮೊದಲು ಮಾವೋವಾದಿಗಳು ಚುನಾವಣಾ ಪ್ರಚಾರದಲ್ಲಿದ್ದ ಬಿಜೆಪಿ ನಾಯಕನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಿಜೆಪಿ ನಾಯಕ ರತನ್ ದುಬೆ ಅವರು ಬಿಜೆಪಿಯ ನಾರಾಯಣಪುರ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದರು. ಜಿಲ್ಲೆಯ ಕೌಶಲನರ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ರತನ್‌ ದುಬೆ ಅವರು ಜಿಲ್ಲಾ … Continued

ಕೋಲಾರ: ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶಕುಮಾರ ಆಪ್ತ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಶ್ರೀನಿವಾಸಪುರ ತಾಲೂಕು ಹೊಗಳಗೆರೆ ಬಳಿ ಕಾಂಗ್ರೆಸ್‌ ಮುಖಂಡ ಎಂ.ಶ್ರೀನಿವಾಸ ಅವರ ಮೇಲೆ ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಐಗೊಂಡಿದ್ದ ಅವರನ್ನು ತಕ್ಷಣವೇ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. … Continued

15 ವರ್ಷಗಳ ಹಿಂದಿನ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ: ಎಲ್ಲಾ 5 ಆರೋಪಿಗಳು ದೋಷಿ ಎಂದ ಕೋರ್ಟ್

ನವದೆಹಲಿ: ಇಂಡಿಯಾ ಟುಡೇ ಮಹಿಳಾ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದ ಎಲ್ಲಾ ಐವರು ಆರೋಪಿಗಳನ್ನು ದೆಹಲಿಯ ಸಾಕೇತ್ ಕೋರ್ಟ್ ದೋಷಿ ಎಂದು ಘೋಷಿಸಿದೆ. ಎಲ್ಲಾ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಕೋರ್ಟ್‌ ಅಕ್ಟೋಬರ್ 26ರಂದು ಪ್ರಕಟಿಸಲಿದೆ. 2008ರ ಸೆಪ್ಟೆಂಬರ್ 30ರಂದು ಸೌಮ್ಯ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಚಲಿಸುತ್ತಿದ್ದ ಕಾರಿನಲ್ಲಿ ಅವರ ಮೇಲೆ ಗುಂಡು ಹಾರಿಸಲಾಯಿತು. … Continued

ಭಟ್ಕಳ : ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ

ಕಾರವಾರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳಯ ತಾಲೂಕಿನ ಮುರುಡೇಶ್ವರದ ಬಳಿ ನಡೆದಿದೆ ಎಂದು ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು ನಂದಿನಿ(30) ಎಂದು ಗುರುತಿಸಲಾಗಿದೆ. ನಂದಿನಿ ಹಾಗೂ ಲೋಕೇಶ ನಾಯ್ಕ ದಂಪತಿ ನಗ ಹಾಗೂ ಮಗಳೊಂದಿಗೆ ಮೂರು ದಿನಗಳಿಂದ  ಮುರುಡೇಶ್ವರದ … Continued

ಉತ್ತರ ಪ್ರದೇಶ ದಲಿತ ಸಹೋದರಿಯರ ಅತ್ಯಾಚಾರ-ಹತ್ಯೆ ಪ್ರಕರಣ: ಒಟ್ಟು 6 ಜನರ ಬಂಧನ, ಎನ್‌ಕೌಂಟರ್‌ನಲ್ಲಿ ಓರ್ವ ಆರೋಪಿ ಬಂಧಿಸಿದ ಪೊಲೀಸರು

ಲಖಿಂಪುರ ಖೇರಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖಿಂಪುರದಲ್ಲಿ 17 ಮತ್ತು 15 ವರ್ಷದ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗಂಟೆಗಳ ನಂತರ, ಆರು ಯುವಕರನ್ನು ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಬಾಲಕಿಯರ ಕತ್ತು ಹಿಸುಕಿ ನಾಲ್ವರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಹೇಲ್, ಜುನೈದ್, ಹಫೀಜುಲ್ … Continued

ಕರಾವಳಿ ಘಟನೆ ನೋವು ತಂದಿದೆ, ಇಸ್ರೇಲ್ ನಲ್ಲಿ ಬೆಳಗ್ಗೆ ಇಂಥ ಘಟನೆಯಾದರೆ ಸಂಜೆಗೇ ಗಲ್ಲಿಗೆ ಹಾಕ್ತಾರೆ: ಹೊರಟ್ಟಿ

ಹಾವೇರಿ: ರಾಜ್ಯದ ಕರಾವಳಿ ಭಾಗದಲ್ಲಿ ನಡೆದ ಹತ್ಯೆ ಘಟನೆ ಬಹಳ ನೋವು ತಂದಿದೆ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿರುವುದು ಇವತ್ತಿನವರೆಗೂ ಗೊತ್ತಾಗಿಲ್ಲ. ಶಿಕ್ಷೆಯಾದರೆ ಮಾತ್ರ ಇಂತಹ ಘಟನೆಗಳು ಕಡಿಮೆಯಾಗುತ್ತವೆ. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಹಾವೇರಿಯಲ್ಲಿ … Continued

ಬಾಗಲಕೋಟೆ: ತಲೆಗೂದಲಿಗೆ ಬಣ್ಣ ಹಾಕುವ ದರದ ವಿಚಾರದಲ್ಲಿ ಜಗಳ, ಗ್ರಾಹಕನ ಎದೆಗೆ ಇರಿದು ಕೊಲೆ ಮಾಡಿದ ಕ್ಷೌರಿಕ

ಬಾಗಲಕೋಟೆ: ಸಲೂನ್​​​ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಗುರುವಾರ (ಮೇ 26) ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಸಾಗರ ಅವಟಿ (22) ಕೊಲೆಯಾದ ಯುವಕ ಎಂದು ಗರುತಿಸಲಾಗಿದೆ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ ಎಂದು ಹೇಳಲಾಗಿದೆ. ಈ ಘಟನೆ … Continued

ಮಹಿಳೆ ಶವ ಬೈಕ್‌ನಲ್ಲಿ ಸಾಗಿಸುತ್ತಿದ್ದಾಗ ಅಪಘಾತ: ಕೊಲೆಯ ರಹಸ್ಯ ಬಯಲು

ಬೆಂಗಳೂರು: ಹಣದ ವಿಷಯಕ್ಕೆ ಮಹಿಳೆಯನ್ನು ಕೊಲೆ ಮಾಡಿ, ಮೃತ ದೇಹವನ್ನು ಬೈಕ್‌ನಲ್ಲಿ ರಾಮನಗರದ ಕಡೆಗೆ ಸಾಗಿಸುತ್ತಿದ್ದಾಗ ನಾಲ್ವರು ಮಂಗಳವಾರ ರಾತ್ರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಘಟನೆಯಲ್ಲಿ ನಾಗರಾಜು, ವಿನೋದ ಎಂಬವರು ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಸ್ನೇಹಿತರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ದುರ್ಗಾ ಆಕೆಯ ಪತಿ ರಘು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಭಿ ಎಂಬಾತನಿಗಾಗಿ … Continued