ಗೃಹಜ್ಯೋತಿ ಯೋಜನೆ ಜಾರಿಗೆ ವಾರ್ಷಿಕ 13,910 ಕೋಟಿ- ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ.ವೆಚ್ಚ

ಬೆಂಗಳೂರು: ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಜಾರಿಗೆ ಐದು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ನಿಗದಿಪಡಿಸಲಾಗಿದೆ. ಉಚಿತ ವಿದ್ಯುತ್ ‘ಗೃಹಜ್ಯೋತಿ’ ಯೋಜನೆಗಾಗಿ ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಗಾಗಿ ಆಹಾರ ಇಲಾಖೆಗೆ 10,460 ಕೋಟಿ ನಿಗದಿಪಡಿಸಲಾಗಿದೆ. … Continued

ಕರ್ನಾಟಕ ಬಜೆಟ್‌ 2023-24 : ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್‌, ರಾಷ್ಟ್ರೀಯ ಶಿಕ್ಷಣ ನೀತಿ ರದ್ದು, 10ನೇ ತರಗತಿ ವರೆಗೆ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ/ಬಾಳೆಹಣ್ಣು/ಶೇಂಗಾಚಿಕ್ಕಿ ವಿತರಣೆ

ಬೆಂಗಳೂರು: ರಾಜ್ಯದ ಅಸ್ಮಿತೆ ಎತ್ತಿಹಿಡಿಯುವ ಹೊಸ ಶಿಕ್ಷಣ ನೀತಿ ರೂಪಿಸುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಒಟ್ಟು 37,587 ಕೋಟಿ ರೂ. ಹಣವನ್ನು ಮೀಸಲು ಇರಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಂತಹ ಎಂದು ರಾಜ್ಯ ಬಜೆಟ್​ನಲ್ಲಿ ಉಲ್ಲೇಖಿಸಲಾಗಿದ್ದು ಅದನ್ನು ರದ್ದುಗೊಳಿಸುವುದಾಗಿ ಹೇಳಲಾಗಿದೆ. ಬಜೆಟ್​ನಲ್ಲಿ “ಬಹುಧರ್ಮ, … Continued

ಕರ್ನಾಟಕ ಬಜೆಟ್ 2023-24: ಗಾತ್ರ 3.27 ಲಕ್ಷ ಕೋಟಿ ರೂ; 5 ಗ್ಯಾರಂಟಿಗಳ ಜಾರಿಗೆ 52,000 ಕೋಟಿ ರೂ. ಮೀಸಲು, ಬೆಂಗಳೂರಿಗೆ ಬಂಪರ್‌, ಮದ್ಯಪ್ರಿಯರಿಗೆ ಶಾಕ್‌, ರೈತರಿಗೆ ಶೂನ್ಯ ಬಡ್ಡಿದರದ ಸಾಲದ ಮಿತಿ ಹೆಚ್ಚಳ…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬಜೆಟ್‌ ಅನ್ನು ಮಂಡಿಸಿದ್ದಾರೆ. ಕರ್ನಾಟಕ ಬಜೆಟ್ 2023-24ರ ಒಟ್ಟು ಗಾತ್ರ 3.27 ಲಕ್ಷ ಕೋಟಿ ರೂ.ಗಳಾಗಿದೆ. ಅದರಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಬೆಂಗಳೂರಿಗೆ ಒಟ್ಟು 45,000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ … Continued

5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು ಹಾಗೂ ಮುಂದಿನ ಸಚಿವ ಸಂಪುಟ ಸಭೆ ವೇಳೆ ಈ ಬಗ್ಗೆ … Continued

ಕಾಂಗ್ರೆಸ್ಸಿನಲ್ಲಿ ಮುಗಿಯದ ಸಿಎಂ ಆಯ್ಕೆ ಕಗ್ಗಂಟು : ನಾಳೆ ಬೆಳಿಗ್ಗೆ ಹೈಕಮಾಂಡ್ ಮತ್ತೊಂದು ಸಭೆ, ನಂತರ ಸಿಎಂ ಹೆಸರು ಘೋಷಣೆ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ದೆಹಲಿಯಲ್ಲಿ ನಿನ್ನೆಯಿಂದ ಸಾಲು ಸಾಲು ಸಭೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಇನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ನಾಳೆ, ಬುಧವಾರ ದೆಹಲಿಯಲ್ಲಿ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಂತಿಮ ಸಭೆ ನಡೆಯಲಿದ್ದು, ಬಳಿಕ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಆಯ್ಕೆ … Continued

ಸಿಎಂ ಹುದ್ದೆಗೆ ಶಿವಕುಮಾರ ಬಿಗಿಪಟ್ಟು : ಆಯ್ಕೆಯೇ ಈಗ ಕಾಂಗ್ರೆಸ್ಸಿಗೆ ಕಗ್ಗಂಟು…!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದರೂ ಕಾಂಗ್ರೆಸ್ಸಿಗೆ ಈಗ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ನಾಡುವುದೇ ಭಾರೀ ಸವಾಲಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಪಟ್ಟು ಹಿಡಿದಿದ್ದರಿಂದ ಹೈಕಮಾಂಡ್ ಅಡಕತ್ತರಿಯಲ್ಲಿ ಸಿಲುಕಿದೆ. ರೆ. ಮುಖ್ಯಮಂತ್ರಿ ಸ್ಥಾನ ತನಗೆ ನೀಡಲೇಬೇಕು ಎಂದು ಶಿವಕುಮಾರ ಪಟ್ಟು … Continued

500 ರೂ. ಕೊಟ್ಟು ಪ್ರಚಾರಕ್ಕೆ ಕರೆತನ್ನಿಎಂದು ಸಿದ್ಧರಾಮಯ್ಯ ಹೇಳಿರುವ ವೀಡಿಯೊ ಟ್ವೀಟ್ ಮಾಡಿದ ಬಿಜೆಪಿ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಮತದಾರರನ್ನು ಸೆಳೆಯಲು ಬೇರೆಬೇರೆ ಹೆಸರನ್ನಿಟ್ಟು ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ನಡೆಸುತ್ತಿವೆ, ಪಕ್ಷಾಂತರಗಳು ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆನ್ನಲಾದ ವೀಡಿಯೊವೊಂದು ವೈರಲ್ … Continued

ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆಯಬೇಕು ಎಂದ ಸಚಿವ ಅಶ್ವತ್ಥ ನಾರಾಯಣ: ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ ಎಂದ ಸಿದ್ದರಾಮಯ್ಯ

ಮಂಡ್ಯ/ಬೆಂಗಳೂರು: ಬಿಜೆಪಿ ನಾಯಕ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿ ಈಗ ಟೀಕೆಗೆ ಒಳಗಾಗಿದ್ದಾರೆ. ಮಂಡ್ಯದಲ್ಲಿ ಮತ ಬೇಟೆ ಆರಂಭಿಸಿರುವ ಬಿಜೆಪಿ ಸಚಿವ ಅಶ್ವತ್ಥ ನಾರಾಯಣ ‘ಟಿಪ್ಪುವನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು’ ಎಂದು ಹೇಳಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮಂಡ್ಯದಲ್ಲಿ … Continued

ಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ… ಎರಡು ಕಡೆ ಸ್ಪರ್ಧಿಸಬೇಕು : ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ್ದರೂ ಇನ್ನೂ ಯಾವುದೂ ಫೈನಲ್‌ ಆಗಿಲ್ಲ. ತವರು ಕ್ಷೇತ್ರ ವರುಣಾ ಅಥವಾ ಕೋಲಾರ (Kolara) ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಎಂಬುದರ ಬಗ್ಗೆ ಸಿದ್ದರಾಮಯ್ಯರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಮನೆ ದೇವರು ಅವರ ರಾಜಕೀಯ ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಅವರ ಮನೆ … Continued

ಈ ತಿಂಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ‌ ಮೊದಲ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯ

ಹೊಸಪೇಟೆ : ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಈ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮಂಗಳವಾರ ಶಾಸಕ ಭೀಮ ನಾಯ್ಕ ಏರ್ಪಡಿಸಿರುವ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಗರಿಬೊಮ್ಮನಹಳ್ಳಿ ಹೊರವಲಯದ ಹೆಲಿಪ್ಯಾಡ್ ಗೆ ಬಂದಿಳಿದ ಅವರು ಮಾಧ್ಯಮದವರೊಂದಿಗೆ … Continued