ಡಾನ್ ಅನ್ಸಾರಿ ಉತ್ತರ ಪ್ರದೇಶ ಆಡಳಿತಕ್ಕೆ ಹಸ್ತಾಂತರಿಸಲು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ನವ ದೆಹಲಿ: ಪಂಜಾಬ್‌ ರೂಪನಗರ ಜೈಲಿನಲ್ಲಿರುವ ಸುಲಿಗೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಕಸ್ಟಡಿಯನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್. ಎಸ್. ರೆಡ್ಡಿ ಅವರಿದ್ದ ನ್ಯಾಯಪೀಠವು ಮೌ ಕ್ಷೇತ್ರದ ಶಾಸಕರಾದ ಅನ್ಸಾರಿ ಕಸ್ಟಡಿಯನ್ನು ಎರಡು ವಾರಗಳಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೆ … Continued

ಮಹತ್ವದ ತೀರ್ಪು: ಟಾಟಾ ಸನ್ಸ್‌ನಿಂದ ಸೈರಸ್ ಮಿಸ್ತ್ರಿ ಉಚ್ಚಾಟನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವ ದೆಹಲಿ: ನ್ಯಾಷನಲ್ ಕಂಪನಿ ಲಾ ಅಪೀಲೆಟ್ ಟ್ರಿಬ್ಯೂನಲ್ (ಎನ್‌ಸಿಎಲ್‌ಎಟಿ) ಆದೇಶದ ವಿರುದ್ಧ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈರಸ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿದೆ. ರತನ್ ಟಾಟಾ ಅವರ ನಂತರ ಸೈರಸ್‌ ಮಿಸ್ತ್ರಿ 2012 ರಲ್ಲಿ 100 ಶತಕೋಟಿಗಿಂತಲೂ … Continued

ಶಾಶ್ವತ ಆಯೋಗಕ್ಕೆ ಸೇನಾ ಮಹಿಳಾ ಅಧಿಕಾರಿಗಳ ಪರಿಗಣಿಸಿ: ಸುಪ್ರೀಂಕೋರ್ಟ್‌ ಮಹತ್ವದ ಆದೇಶ

ನವ ದೆಹಲಿ: ಶಿಸ್ತು ಮತ್ತು ವಿಜಿಲೆನ್ಸ್ ಕ್ಲಿಯರೆನ್ಸ್‌ಗೆ ಒಳಪಟ್ಟ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗಕ್ಕೆ (ಪರ್ಮನೆಂಟ್‌ ಕಮಿಶನ್‌) ಪರಿಗಣಿಸಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.  ಇದನ್ನು ಜಾರಿಗೊಳಿಸದಿರುವ ಬಗ್ಗೆ ಮಹಿಳಾ ಸೇನಾಧಿಕಾರಿಗಳ ಮನವಿ ಆಲಿಸಿ ನ್ಯಾಯಾಲಯ ಈ ಆದೇಶ ಜಾರಿಗೊಳಿಸಿದೆ. ನಾವು ಈ ಅರ್ಜಿಗಳನ್ನು ಹಲವಾರು ನಿರ್ದೇಶನಗಳೊಂದಿಗೆ ಅನುಮತಿಸುತ್ತೇವೆ. ಶಿಸ್ತು ಮತ್ತು … Continued

ಪರಮ್‌ ಬೀರ್‌ ಮನವಿಗೆ ಪುರಸ್ಕರಿಸದ ಸುಪ್ರೀಂ ಕೋರ್ಟ್‌:ಹೈಕೋರ್ಟಿಗೆ ಹೋಗಿ ಎಂದ ನ್ಯಾಯಪೀಠ

ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಭ್ರಷ್ಟಾಚಾರದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬಿರ್ ಸಿಂಗ್ ಅವರ ಮನವಿ ಪುರಸ್ಕರಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಈ ವಿಷಯದಲ್ಲಿ ಮುಂಬೈ ಹೈಕೋರ್ಟ್‌ ಸಂಪರ್ಕಿಸುವಂತೆ ಉನ್ನತ ನ್ಯಾಯಾಲಯ ಕೇಳಿದೆ. ಪೊಲೀಸ್ ಇಲಾಖೆಯ ಮೂಲಕ ‘ಹಣ … Continued

ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಎನ್‌.ವಿ. ರಮಣ ಹೆಸರು ಶಿಫಾರಸು ಮಾಡಿದ ಸಿಜೆಐ ಎಸ್‌.ಎ. ಬೊಬ್ಡೆ

ನವ ದೆಹಲಿ: ಹಿರಿತನದ ಮಾನದಂಡಗಳಿಗೆ ಅನುಗುಣವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅವರು ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ತಮ್ಮ ಉತ್ತರಾಧಿಕಾರಿ ಮತ್ತು ಭಾರತದ 48 ನೇ ಮುಖ್ಯ ನ್ಯಾಯಮೂರ್ತಿ ಎಂದು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 23 ರಂದು ನಿವೃತ್ತಿಯಾಗಲಿರುವ ಸಿಜೆಐ ಬೊಬ್ಡೆ ಅವರು ಶಿಫಾರಸುಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಮತ್ತು … Continued

ಸುಪ್ರೀಂಕೋರ್ಟಿನಲ್ಲಿ ನಾಳೆ ಪರಮ್‌ಬೀರ್‌ ಸಿಂಗ್‌ ಅರ್ಜಿ ವಿಚಾರಣೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸಲಿದೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ … Continued

ಮದ್ಯ ಸೇವಿಸಿ ಮೃತಪಟ್ಟರೆ ವಿಮಾ ಪರಿಹಾರ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವ ದೆಹಲಿ: ವಿಪರೀತ ಮದ್ಯಪಾನದಿಂದಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರ ಪಡೆಯಲು ಅರ್ಹತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಎಂ. ಶಾಂತನಗೌಡರ್ ಮತ್ತು ವಿನೀತ್ ಸರನ್ ಅವರಿದ್ದ ನ್ಯಾಯಪೀಠವು ರಾಜ್ಯ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಗ್ರಾಹಕ ವೇದಿಕೆಯ ಏಕಕಾಲದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಿಮಾಚಲ ಪ್ರದೇಶದ ಕುಟುಂಬವೊಂದರ … Continued

ಸುಪ್ರೀಂ  ಕೋರ್ಟ್‌ ಮಹತ್ವದ ತೀರ್ಪು: ಲೋನ್ ಮೊರಾಟೋರಿಯಂ ಅವಧಿ ವಿಸ್ತರಿಸಲು ‌ನಕಾರ

ನವ ದೆಹಲಿ: ಕೊವಿಡ್‌-೧೯ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸಾಲ ನಿಷೇಧ ಮತ್ತು ಇತರ ಪರಿಹಾರಗಳನ್ನು ವಿಸ್ತರಿಸುವಂತೆ ಕೋರಿ ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಕ್ಷೇತ್ರಗಳು ಸೇರಿದಂತೆ ವಿವಿಧ ವ್ಯಾಪಾರ ಸಂಘಗಳು ಸಲ್ಲಿಸಿದ ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಲೋನ್ ಮೊರಾಟೋರಿಯಂ ಅವಧಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸರ್ಕಾರದ ಸಾಲ ಮನ್ನಾ … Continued

ಉದ್ಯೋಗ-ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರಿಯುತ್ತದೆ: ಸುಪ್ರೀಂ ಕೋರ್ಟ್‌

ನವ ದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಶುಕ್ರವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸಬಹುದಾದ ಅಸಮಾನತೆಯ ಬಗ್ಗೆಯೂ ತನ್ನ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ … Continued

ಸುಪ್ರೀಂ ಕೋರ್ಟಿನಲ್ಲಿ ಮಾ .24ರಂದು ಹೊಸ ಚುನಾವಣಾ ಬಾಂಡ್‌ ಮಾರಾಟ ಅರ್ಜಿ ವಿಚಾರಣೆ

ನವ ದೆಹಲಿ: ಏಪ್ರಿಲ್ 1 ರಿಂದ ಹೊಸದಾಗಿ ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ಮಧ್ಯಂತರ ತಡೆ ಕೋರಿ ಎನ್ ಜಿಒ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 24 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಎಡಿಆರ್ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ತುರ್ತು ವಿಚಾರಣೆಗೆ … Continued