ತಮಿಳುನಾಡು: ಬಿಜೆಪಿ ಸೇರಿದ ನಟ ರಜನಿಕಾಂತ ಅಭಿಮಾನಿಗಳು

ಚೆನ್ನೈ: ಲೋಕಸಭಾ ಚುನಾವಣಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಮಿಳುನಾಡಲ್ಲಿ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ ಅಭಿಮಾನಿ ಸಂಘದ ಸದಸ್ಯರು ಬಿಜೆಪಿ(BJP)ಗೆ ಸೇರ್ಪಡೆಯಾಗಿದ್ದಾರೆ. ಚೆನ್ನೈನಲ್ಲಿ ಸೋಮವಾರ ಅಣ್ಣಾಮಲೈ ನೇತೃತ್ವದಲ್ಲಿ ರಜನಿ ಅಭಿಮಾನಿ ಸಂಘದ (Rajini fans club) ಸದಸ್ಯರು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಸಮ್ಮುಖದಲ್ಲಿ … Continued

ತಮಿಳುನಾಡಿನಲ್ಲಿ 2019ರ ಸೂತ್ರದಂತೆ ಸ್ಥಾನ ಹಂಚಿಕೆ ಮಾಡಿದ ಡಿಎಂಕೆ : ಕಾಂಗ್ರೆಸ್ಸಿಗೆ 9 ಸ್ಥಾನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ತನ್ನ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಡಿಎಂಕೆ ಪಕ್ಷವು ತನ್ನ ಇಂಡಿಯಾ ಬ್ಲಾಕ್ ಮಿತ್ರವಾದ ಕಾಂಗ್ರೆಸ್ಸಿಗೆ ತಮಿಳುನಾಡಿನಲ್ಲಿ ಒಂಬತ್ತು ಸ್ಥಾನಗಳನ್ನು ಮತ್ತು ಪುದುಚೇರಿಯಲ್ಲಿ ಒಂದು ಸ್ಥಾನವನ್ನು ನೀಡಿದೆ. ಡಿಎಂಕೆಯ 2019 ರ ಸೀಟು ಹಂಚಿಕೆಯ ಸೂತ್ರದಂತೆ ಈ ಬಾರಿಯೂ … Continued

₹ 2,000 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಆರೋಪ: ಚಲನಚಿತ್ರ ನಿರ್ಮಾಪಕನ ಬಂಧನ

ನವದೆಹಲಿ: ₹ 2,000 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನು ದೇಶದಿಂದ ಹೊರಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಸಿನಿಮಾ ನಿರ್ಮಾಪಕನನ್ನು ಬಂಧಿಸಲಾಗಿದೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಡಿಎಂಕೆ ಮಾಜಿ ಪದಾಧಿಕಾರಿ ಜಾಫರ್ ಸಾದಿಕ್ ಎಂಬವನನ್ನು ನಾಲ್ಕು ತಿಂಗಳ ಶೋಧದ ನಂತರ ಬಂಧಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶನಿವಾರ ತಿಳಿಸಿದೆ. ಎನ್‌ಸಿಬಿ (NCB) … Continued

ಲೋಕಸಭೆ ಚುನಾವಣೆ : ತಮಿಳುನಾಡಿನಲ್ಲಿ ನಟ ಶರತ್ ಕುಮಾರ ನೇತೃತ್ವದ ಎಐಎಸ್‌ಎಂಕೆ-ಬಿಜೆಪಿ ಮೈತ್ರಿ

ಚೆನ್ನೈ : ಖ್ಯಾತ ನಟ ಆರ್ ಶರತ್ ಕುಮಾರ ನೇತೃತ್ವದ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲಾಗಿದೆ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ‘ಜಂಟಿಯಾಗಿ’ ಕೆಲಸ … Continued

ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆ: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಶಾಕ್‌ ನೀಡಲಿದೆಯೇ ಬಿಜೆಪಿ..?! ಪುತಿಯಾತಲೈಮುರೈ ಸಮೀಕ್ಷೆ ಹೇಳುವುದೇನು..?

ಯಾವಾಗಲೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಹಣಾಹಣಿ ಏರ್ಪಡುವ ತಮಿಳುನಾಡಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದ್ದು, ರಾಜ್ಯ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಎಂದು ಫೆಡರಲ್-ಪುತಿಯಾತಲೈಮುರೈ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಫೆಡರಲ್-ಪುತಿಯಾತಲೈಮುರೈ ನಡೆಸಿದ 2024 ರ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, … Continued

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ತಮಿಳುನಾಡಿನ ಶಾಸಕಿ…!

ಚೆನ್ನೈ: ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ತಮಿಳುನಾಡಿನ ಎಸ್. ವಿಜಯಧರಣಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಸ್. ವಿಜಯಧರಣಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ತಮಿಳುನಾಡು ಚುನಾವಣಾ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ ಮೆನನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮ್ಮ ಈ ಕ್ರಮವು ದಕ್ಷಿಣ ರಾಜ್ಯದಲ್ಲಿ ಪ್ರಧಾನಿ … Continued

‘ದೇವಾಲಯಗಳು ಪಿಕ್ನಿಕ್ ಸ್ಪಾಟ್ ಅಲ್ಲ’: ಪಳನಿ ದೇವಸ್ಥಾನಕ್ಕೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವಂತೆ ಮದ್ರಾಸ್‌ ಹೈಕೋರ್ಟ್ ಸೂಚನೆ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಗೆ ನಿರ್ದೇಶನ ನೀಡಿರುವ ಮದ್ರಾಸ್ ಹೈಕೋರ್ಟ್ ಪಳನಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವಂತೆ ಸೂಚನೆ ನೀಡಿದೆ. ಈ ಸ್ಥಳಗಳು “ಪಿಕ್ನಿಕ್ ಅಥವಾ ಪ್ರವಾಸಿ ತಾಣವಲ್ಲ” ಎಂದು ಒತ್ತಿಹೇಳಿರುವ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರ ನೇತೃತ್ವದ ಪೀಠವು … Continued

ವೀಡಿಯೊ…| ಭೀಕರ ಸರಣಿ ಅಪಘಾತದಲ್ಲಿ ಒಂದಕ್ಕೊಂದು ಗುದ್ದಿಕೊಂಡ ನಾಲ್ಕು ವಾಹನಗಳು ; ನಾಲ್ವರು ಸಾವು, 8 ಮಂದಿಗೆ ಗಾಯ

ಧರ್ಮಪುರಿ : ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತೊಪ್ಪೂರ್ ಘಾಟ್ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ. ಸಿಸಿಟಿವಿ ವೀಡಿಯೊದಲ್ಲಿ ಟ್ರಕ್‌ ಸೇರಿದಂತೆ ನಾಲ್ಕು ವಾಹನಗಳು ಒಂದಕ್ಕೊಂದು ಗುದ್ದಿಕೊಂಡ ನಂತರ ಈ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿರುವುದನ್ನು … Continued

ತಮಿಳುನಾಡಿನಲ್ಲಿ ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಚೆನ್ನೈ: ತಮಿಳುನಾಡಿನ ಹಲವು ಭಾಗಗಳಲ್ಲಿ, ಮುಖ್ಯವಾಗಿ ಚೆನ್ನೈನಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಪುದುಚೇರಿ, ನಾಗಪಟ್ಟಿಣಂ, ಕಿಲ್ವೇಲೂರು ತಾಲೂಕು, ವಿಲುಪುರಂ ಮತ್ತು ಕಡಲೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಕಲ್ಲಕುರಿಚಿ, ರಾಣಿಪೇಟ್, ವೆಲ್ಲೂರು ಮತ್ತು ತಿರುವಣ್ಣಾಮಲೈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುದುಚೇರಿಯಲ್ಲಿ ಕಳೆದ 24 … Continued

‘ಹಿಂದಿ ಮಾತ್ರ ಕಲಿತ ಬಿಹಾರ, ಉತ್ತರ ಪ್ರದೇಶದವರು ಚೆನ್ನೈನಲ್ಲಿ ಟಾಯ್ಲೆಟ್ ತೊಳಿತಿದ್ದಾರೆ’: ಡಿಎಂಕೆಯ ದಯಾನಿಧಿ ಮಾರನ್ ವಿವಾದಾತ್ಮಕ ಹೇಳಿಕೆ

ಚೆನ್ನೈ: ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಡಿಎಂಕೆ ನಾಯಕನ ಹೇಳಿಕೆಯ ಕ್ಲಿಪ್ ವೈರಲ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಡಿಎಂಕೆ ಸಂಸದರ ವಿರುದ್ಧ ಮಾತನಾಡದ … Continued