ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ʼದೀಪಾವಳಿ ಹಬ್ಬʼ ಸೇರ್ಪಡೆ ; ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ

ನವದೆಹಲಿ: ಭಾರತದ ಅತ್ಯಂತ ಪ್ರಮುಖ ಮತ್ತು ಆಕರ್ಷಕ ಹಬ್ಬವಾದ ದೀಪಾವಳಿಯನ್ನು (Deepavali), ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಗೆ (Representative List of Intangible Cultural Heritage of Humanity) ಸೇರಿಸಲಾಗಿದೆ. 2025ರ ಪಟ್ಟಿಯಲ್ಲಿ ಸೇರ್ಪಡೆಗೊಂಡ 19 ಇತರ ಸಾಂಸ್ಕೃತಿಕ ಪರಂಪರೆಗಳ ಜೊತೆಗೆ ದೀಪಾವಳಿಯು … Continued

ಭಗವದ್ಗೀತೆ, ಭರತನ ನಾಟ್ಯಶಾಸ್ತ್ರ ಯುನೆಸ್ಕೋದ ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ನಲ್ಲಿ ಸೇರ್ಪಡೆ ; ಭಾರತಕ್ಕೆ ಹೆಮ್ಮೆಯ ಕ್ಷಣ ಎಂದ ಮೋದಿ

ನವದೆಹಲಿ : ಹಿಂದೂ ಧರ್ಮಗ್ರಂಥವಾದ ಶ್ರೀಮದ್ ಭಗವದ್ಗೀತೆ ಮತ್ತು ಪ್ರದರ್ಶನ ಕಲೆಗಳ ಕುರಿತಾದ ಭಾರತೀಯ ಗ್ರಂಥವಾದ ನಾಟ್ಯಶಾಸ್ತ್ರ ಯುನೆಸ್ಕೋದ ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ನಲ್ಲಿ ಸೇರ್ಪಡೆಯಾಗಿದೆ. ಈ ಸುದ್ದಿಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಂಚಿಕೊಂಡಿದ್ದಾರೆ. ಅವರು ಎಕ್ಸ್‌ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, “ಶ್ರೀಮದ್ ಭಗವದ್ಗೀತೆ … Continued

ಯಕ್ಷಗಾನಕ್ಕೆ ವಿಶ್ವಸಂಸ್ಥೆ ಗೌರವ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ಯುನೆಸ್ಕೊ (UNESCO) ಮಾನ್ಯತೆ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ದೊರೆತಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ಅವರು, ಯುನೆಸ್ಕೊದಿಂದ ಮಾನ್ಯತೆ ಪಡೆದ ಮೊದಲ ಯಕ್ಷಗಾನ ಸಂಸ್ಥೆಯಾಗಿದೆ. ಜೂನ್ 11 ಹಾಗೂ … Continued

ವೀಡಿಯೊ..| ಅಸ್ಸಾಂನ ಅಹೋಂ ರಾಜವಂಶದ ಸಮಾಧಿ ದಿಬ್ಬ ʼಮೊಯ್ದಮ್‌ʼ ಈಗ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ

ನವದೆಹಲಿ: ದೆಹಲಿಯಲ್ಲಿ ಶುಕ್ರವಾರ ನಡೆದ ಯುನೆಸ್ಕೋದ 46ನೇ ವಿಶ್ವ ಪರಂಪರೆ ಸಮಿತಿ ಅಧಿವೇಶನದಲ್ಲಿ ಅಸ್ಸಾಂನ ಅಹೋಮ್ ರಾಜವಂಶದ ಮೊಯ್ದಮ್‌ (Moidam)ಗಳನ್ನು ಭಾರತದ 43ನೇ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. 2023-24ರ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಭಾರತದಿಂದ ಮೊಯಿದಮ್‌ಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಇದು ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡುವ ವಿಶ್ವಸಂಸ್ಥೆಯ … Continued