ವಯನಾಡು ಭೂ ಕುಸಿತದ ಬಗ್ಗೆ ತುರ್ತು ಸೇವೆಗಳಿಗೆ ಮೊದಲು ಕರೆ ಮಾಡಿದ್ದ ನೀತು ಜೊಜೊ ಅದೇ ದುರಂತದಲ್ಲಿ ಸಾವು

ವಯನಾಡು: ಜುಲೈ 30 ರಂದು ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ಬಗ್ಗೆ ತುರ್ತು ಸೇವೆಗಳಿಗೆ ಎಚ್ಚರಿಕೆ ನೀಡಿದವರಲ್ಲಿ ವಯನಾಡಿನ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ನೀತು ಜೊಜೊ ಮೊದಲಿಗರು, ಆದರೆ ರಕ್ಷಣಾ ತಂಡಗಳು ತಲುಪುವ ಮೊದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಚೂರಲ್ಮಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂ ಕುಸಿತದ ಸರಣಿಯ ಮೊದಲ ಭೂಕುಸಿತದ ನಂತರ … Continued

ಪ್ರೀತಿಯ ಭಾರತೀಯ ಸೇನೆ…: ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತ ಯೋಧರಿಗೆ ಹೃದಯಸ್ಪರ್ಶಿ ಪತ್ರ ಬರೆದ 3ನೇ ತರಗತಿ ಬಾಲಕ

ತಿರುವನಂತಪುರಂ : ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ಅವಶೇಷಗಳಡಿ ಸಿಲುಕಿದವರು ಹಾಗೂ ಸಂತ್ರಸ್ತರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಭಾರತೀಯ ಯೋಧರಿಗೆ 3ನೇ ತರಗತಿ ಬಾಲಕನೊಬ್ಬ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ ಹಾಗೂ ಮುಂದೊಂದು ದಿನ ತಾನೂ ಭಾರತೀಯ ಸೇನೆ ಸೇರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ. ಮಂಗಳವಾರ ಬೆಳಗಾಗುವ ಮುನ್ನ ವಯನಾಡು ಜಿಲ್ಲೆಯಲ್ಲಿ ಅವಳಿ ಭೂಕುಸಿತಗಳು ಸಂಭವಿಸಿ … Continued

ವಯನಾಡು ಭೂಕುಸಿತ| ಸಾವಿನ ಸಂಖ್ಯೆ 344ಕ್ಕೆ ಏರಿಕೆ ; ಬದುಕುಳಿದವರನ್ನು ಹುಡುಕಲು ಆಳದ ವರೆಗೆ ಶೋಧ ಮಾಡುವ ರಾಡಾರ್‌ ಬಳಕೆ

ವಯನಾಡು: ಕೇರಳದ ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 344 ಕ್ಕೆ ಏರಿದೆ. ರಕ್ಷಣಾ ತಂಡಗಳು ಸಮಯಕ್ಕೆ ವಿರುದ್ಧವಾಗಿ ಓಡುತ್ತಿದ್ದು, ರಾಜ್ಯ ಸರ್ಕಾರದ ಇತ್ತೀಚಿನ ನವೀಕರಣದ ಪ್ರಕಾರ ಅವಶೇಷಗಳ ಅಡಿಯಲ್ಲಿ ಮತ್ತು ಕುಸಿದ ಮನೆಗಳಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕುವ ಪ್ರಯತ್ನದಲ್ಲಿ ರಾಡಾರ್‌ಗಳನ್ನು ಬಳಸುತ್ತಿದ್ದಾರೆ. . ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೀಪ್ ಸರ್ಚ್ ರಾಡಾರ್‌ಗಳನ್ನು ಕಳುಹಿಸುವಂತೆ ಕೇರಳ ಸರ್ಕಾರ … Continued

ಪಶ್ಚಿಮ ಘಟ್ಟದ 56,826 ಚದರ ಕಿಮೀ ʼಪರಿಸರ ಸೂಕ್ಷ್ಮʼ ಪ್ರದೇಶ ; ಕೇಂದ್ರದಿಂದ ಕರಡು ಅಧಿಸೂಚನೆ : ಯಾವ ರಾಜ್ಯದಲ್ಲಿ ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ಕೇರಳದ ವಯನಾಡು ದುರಂತದ ನಂತರ, ಪಶ್ಚಿಮ ಘಟ್ಟಗಳ ಸುಮಾರು 57,000 ಚದರ ಕಿಲೋಮೀಟರ್ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಕೇಂದ್ರ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಪಶ್ಚಿಮ ಘಟ್ಟ ಪ್ರದೇಶದ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ … Continued

ವಯನಾಡು ಭೂಕುಸಿತದಲ್ಲಿ ಮನಕಲಕುವ ಕತೆ ; ಕುಸಿದ ಮನೆಯಿಂದ ತಪ್ಪಿಸಿಕೊಂಡು ಕಗ್ಗತ್ತಲಲ್ಲಿ ಬೆಟ್ಟ ಏರಿದ್ದ ಅಜ್ಜಿ-ಮೊಮ್ಮಗಳ ಕಾವಲಿಗೆ ನಿಂತ ಕಾಡಾನೆಗಳು !

ವಯನಾಡು: ಭೂಕುಸಿತದಿಂದ ಧ್ವಂಸಗೊಂಡ  ಕೇರಳದ ವಯನಾಡಿನಿಂದ ಸಾವು ಮತ್ತು ಹತಾಶೆಯ ಕಥೆಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಒಬ್ಬ ಮಹಿಳೆ ತನ್ನ ಚಿಕ್ಕ ಮೊಮ್ಮಗಳ ಜೊತೆಗೆ ದುರಂತದಿಂದ ಪಾರಾಗಿರುವುದು ಹಾಗೂ ಅದರ ನಂತರ ಅವರಿಬ್ಬರು ಮಳೆ ಮತ್ತು ವಿಪತ್ತಿನ ಆ ರಾತ್ರಿಯಲ್ಲಿ ಕಾಡಿನಲ್ಲಿ ಕಾಡಾನೆ ಪಕ್ಕದಲ್ಲೇ ಕಳೆದಿದ್ದನ್ನು ವಿವರಿಸಿದ್ದಾಳೆ ಹಾಗೂ ಅವರನ್ನು ಕಾಪಾಡಿದ್ದಕ್ಕಾಗಿ ಆಕೆ ಆನೆಗೆ ಕೃತಜ್ಞತೆ … Continued

ವಯನಾಡು ವಿನಾಶಕಾರಿ ಭೂಕುಸಿತ | ಸಾವಿನ ಸಂಖ್ಯೆ 282ಕ್ಕೆ ಏರಿಕೆ; 240ಕ್ಕೂ ಹೆಚ್ಚು ಜನ ನಾಪತ್ತೆ

ವಯನಾಡು : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ ಸಾವಿನ ಸಂಖ್ಯೆ 282ಕ್ಕೆ ಏರಿದೆ ಹಾಗೂ ಗುರುವಾರ ಬೆಳಿಗ್ಗೆ 240 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ವಿವಿಧ ರಕ್ಷಣಾ ತಂಡಗಳು ಮತ್ತು ಸಶಸ್ತ್ರ … Continued

ವಯನಾಡ್ ಭೂಕುಸಿತ ದುರಂತ : ಸಾವಿನ ಸಂಖ್ಯೆ 239ಕ್ಕೆ ಏರಿಕೆ, ಇನ್ನೂ ಹಲವಾರು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಜೀವ ಉಳಿಸಲು ರಕ್ಷಣಾ ತಂಡಗಳು ಸಮಯದ ವಿರುದ್ಧ ಓಡುತ್ತಿರುವಾಗ, ಬದುಕುಳಿದವರನ್ನು ಹುಡುಕುವ ಸಾಧ್ಯತೆಗಳು ಕ್ಷೀಣಿಸುತ್ತಿವೆ. ಮಂಗಳವಾರ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಾವಿನ ಸಂಖ್ಯೆ 239 ಕ್ಕೆ ಏರಿದೆ, 150 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ, ಚೂರಲ್ಮಲಾ ಮತ್ತು ಅಟ್ಟಮಾಲದ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಅವಿರತವಾಗಿ … Continued

ಕೇರಳ | ವಯನಾಡ್ ಭೂ ಕುಸಿತ ದುರಂತ : ಸಾವಿನ ಸಂಖ್ಯೆ 93ಕ್ಕೆ ಏರಿಕೆ, ನೂರಾರು ಮಂದಿ ಸಿಲುಕಿರುವ ಶಂಕೆ ; ಎಂಟು ಜಿಲ್ಲೆಗಳಿಗೆ ರೆಡ್ ಅಲರ್ಟ್

ವಯನಾಡು : ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 93ಕ್ಕೆ ಏರಿದೆ. 116 ಮಂದಿ ಗಾಯಗೊಂಡಿದ್ದಾರೆ ಮತ್ತು ಇನ್ನೂ ನೂರಾರು ಜನರು ಸಿಲುಕಿಕೊಂಡಿದ್ದಾರೆ ಎಂಬ ಆತಂಕವಿದೆ. ಜುಲೈ 30 ಮತ್ತು 31 ರಂದು ರಾಜ್ಯಾದ್ಯಂತ  ಎರಡು ದಿನಗಳ ಶೋಕಾಚರಣೆಯನ್ನು … Continued

ವಯನಾಡು ಭೂಕುಸಿತದಲ್ಲಿ 24 ಮಂದಿ ಸಾವು; ನಾಲ್ಕು ಗ್ರಾಮಗಳಲ್ಲಿ ನೂರಾರು ಮಂದಿ ಸಿಲುಕಿರುವ ಶಂಕೆ

ವಯನಾಡು : ಭಾರೀ ಮಳೆಯ ನಡುವೆ ಮಂಗಳವಾರ ಬೆಳಿಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿ ಕನಿಷ್ಠ 24 ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಸಿಲುಕಿರುವ ಆತಂಕವಿದೆ ಎಂದು ವರದಿಯಾಗಿದೆ. ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ … Continued