ತೃಣಮೂಲ ಸಂಸದೆ ಮಿಮಿ ಚಕ್ರವರ್ತಿ ರಾಜೀನಾಮೆ ಘೋಷಣೆ : ಮಮತಾ ಬ್ಯಾನರ್ಜಿಗೆ ಸಲ್ಲಿಕೆ

ಕೋಲ್ಕತ್ತಾ: ನಟಿಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಕ್ಷೇತ್ರದ ಸ್ಥಳೀಯ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮಿಮಿ ಚಕ್ರವರ್ತಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ, ಆದರೆ ಅದನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಆದಾಗ್ಯೂ, ಅವರು … Continued

ಕೋಲ್ಕತ್ತಾಗೆ ತೆರಳುತ್ತಿದ್ದಾಗ ಕಾರು ಅಪಘಾತದಲ್ಲಿ ಗಾಯಗೊಂಡ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾರು ಬುಧವಾರ ಅಪಘಾತಕ್ಕೀಡಾಗಿದೆ. ಪೂರ್ವ ಬುರ್ದ್ವಾನ್‌ನಲ್ಲಿ ನಡೆದ ಅಧಿಕೃತ ಕಾರ್ಯಕ್ರಮ ಮುಗಿಸಿ ಅವರು ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು. ಅಪಘಾತದಲ್ಲಿ ಅವರ ತಲೆಗೆ ಸಣ್ಣಪುಟ್ಟ ಗಾಯವಾಗಿದೆ. ವರದಿಗಳ ಪ್ರಕಾರ, ಮತ್ತೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮಮತಾ ಬ್ಯಾನರ್ಜಿ ಕಾರು ಚಾಲಕ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ್ದಾನೆ. ಹಠಾತ್ … Continued

ಆನ್‌ಲೈನ್ ಗೇಮ್‌ ಪಾಸ್‌ವರ್ಡ್ ಕೊಟ್ಟಿಲ್ಲವೆಂದು 10ನೇ ತರಗತಿ ವಿದ್ಯಾರ್ಥಿಯನ್ನು ಕೊಂದು ಆತನ ದೇಹ ಸುಟ್ಟುಹಾಕಿದ ಸ್ನೇಹಿತರು…!

ಕೋಲ್ಕತ್ತಾ: ಆನ್‌ಲೈನ್ ಮೊಬೈಲ್ ಗೇಮ್‌ನ ಪಾಸ್‌ವರ್ಡ್ ಹಂಚಿಕೊಳ್ಳುವ ವಿವಾದವು ಹದಿಹರೆಯದ ಹುಡುಗನನ್ನು ಆತನ ನಾಲ್ವರು ಸ್ನೇಹಿತರೇ ಕೊಲೆ ಮಾಡುವುದಕ್ಕೆ ಕಾರಣವಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 8 ರಿಂದ ನಾಪತ್ತೆಯಾಗಿದ್ದ 18 ವರ್ಷದ ಹುಡುಗ ಪಾಪೈ ದಾಸ್ ಶವ ಫರಕ್ಕಾದ ಫೀಡರ್ ಕಾಲುವೆಯ ನಿಶೀಂದ್ರ ಘಾಟ್ … Continued

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ತೃಣಮೂಲ ಕಾಂಗ್ರೆಸ್ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸತ್ಯನ್ ಚೌಧರಿ ಅವರನ್ನು ಭಾನುವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಈ ಘಟನೆ ನಡೆದಿದೆ. ಮುರ್ಷಿದಾಬಾದ್‌ನ ಟಿಎಂಸಿ) ಪ್ರಧಾನ ಕಾರ್ಯದರ್ಶಿ ಸತ್ಯನ್ ಚೌಧರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು. ಸ್ಥಳೀಯ ಟಿಎಂಸಿ … Continued

ಇ.ಡಿ. ಅಧಿಕಾರಿಗಳ ಮೇಲೆ ದಾಳಿ ನಡೆಸಿದ ನಂತರ ತೃಣಮೂಲ ನಾಯಕನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್‌ಗಾಗಿ ಜಾರಿ ನಿರ್ದೇಶನಾಲಯ (ಇಡಿ) ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಶಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ಮಾಡಲು ಹೊರಟಿದ್ದ ಇ.ಡಿ. ತಂಡದ ಮೇಲೆ ನೂರಾರು ಜನ … Continued

ಪಡಿತರ ಹಗರಣದ ಶೋಧ ಕಾರ್ಯಕ್ಕೆ ತೆರಳಿದ್ದ ಇ.ಡಿ. ಅಧಿಕಾರಿಗಳು, ವಾಹನಗಳ ಮೇಲೆ ದಾಳಿ

ಕೋಲ್ಕತ್ತಾ: ಪಡಿತರ ಹಗರಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಮನೆ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆ ಬಂಗಾಳದ ಉತ್ತರ 24 ಪರಗಣದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ಹಲವಾರು ಮಾಧ್ಯಮ ವಾಹನಗಳನ್ನು ಸಹ ಧ್ವಂಸಗೊಳಿಸಲಾಯಿತು ಎಂದು … Continued

ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೂರು ಆನೆಗಳು ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸೋಮವಾರ (ನವೆಂಬರ್‌ 27) ಪಾರ್ಸೆಲ್ ರೈಲು ಡಿಕ್ಕೆ ಹೊಡೆದ ಪರಿಣಾಮ ಮೂರು ಆನೆಗಳು ಮೃತಪಟ್ಟಿವೆ. ರಾಜಭಟ್ಖಾವಾ ಮತ್ತು ಕಲ್ಚಿನಿ ರೈಲು ನಿಲ್ದಾಣಗಳ ನಡುವಿನ ಶಿಖಾರಿ ಗೇಟ್ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಮರಿ ಮತ್ತು ಎರಡು ವಯಸ್ಕ ಆನೆಗಳಿಗೆ … Continued

ʼ ಪಾಪಿಗಳು ಹೋಗಿದ್ರು, ಅದಕ್ಕೆ ಸೋತರುʼ : ಭಾರತ ವಿಶ್ವಕಪ್ ಸೋಲಿಗೆ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಪರೋಕ್ಷ ವಾಗ್ದಾಳಿ

ಕೋಲ್ಕತ್ತಾ: ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಬಿಜೆಪಿ ವಿರುದ್ಧ ಹೊಸ ತಗಾದೆ ತೆಗೆದಿದ್ದು, ಫೈನಲ್ ಹೊರತುಪಡಿಸಿ ವಿಶ್ವಕಪ್‌ ನಲ್ಲಿ ಭಾರತ ಕ್ರಿಕೆಟ್ … Continued

ಪಡಿತರ ಹಗರಣ: ಕೋರ್ಟ್​​ನೊಳಗೆ ಮೂರ್ಛೆ ಹೋದ ಬಂಧಿತ ಪಶ್ಚಿಮ ಬಂಗಾಳದ ಸಚಿವ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶುಕ್ರವಾರ (ಅ.27) ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಕೋರ್ಟ್​ಗೆ ಹಾಜರುಪಡಿಸಿದ ವೇಳೆ ಆದೇಶ ಕೇಳಿದ ನಂತರ ಸಚಿವರು ನ್ಯಾಯಾಲಯದೊಳಗೆ ದಿಢೀರ್​ ಮೂರ್ಛೆ ಹೋದ ಘಟನೆ ನಡೆದಿದೆ. ನ್ಯಾಯಾಲಯದ ಒಳಗೆ … Continued

ಪಶ್ಚಿಮ ಬಂಗಾಳ : ತನ್ನ ಕೆಂಪು ಟೀ ಶರ್ಟ್ ಬೀಸುತ್ತ ಎಚ್ಚರಿಕೆ ಸಂದೇಶ ರವಾನಿಸಿ ಸಂಭಾವ್ಯ ರೈಲು ಅಪಘಾತ ತಡೆದ 12 ವರ್ಷದ ಬಾಲಕ…!

ಗಮನಾರ್ಹವಾದ ಧೈರ್ಯ ಹಾಗೂ ಸಮಯಪ್ರಜ್ಞೆಯ ಪ್ರದರ್ಶನದಲ್ಲಿ, ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಬಾಲಕನೊಬ್ಬ ಸಂಭಾವ್ಯ ರೈಲು ಅಪಘಾತವನ್ನು ತಡೆದಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದ್ದು, ಬಾಲ ಹೀರೋ ಮುರ್ಸಲೀನ್ ಶೇಖ್ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಮುರ್ಸಲೀನ್ ರೈಲ್ವೇ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ವಲಸೆ … Continued