ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 25 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 10 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಏಕಸ್, ಯಫ್ಲೆಕ್ಸ್, ರಾಜೇಶ್ ಎಕ್ಸೋ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ. ಇದರಿಂದ ಸ್ಥಳೀಯವಾಗಿ 10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗ ಅರಸಿ ಬೆಂಗಳೂರು, ಪೂಣೆ, ಮುಂಬೈಗಳಿಗೆ ವಲಸೆ ಹೋಗುವುದು ತಪ್ಪಲಿದೆ. ಸ್ಥಳೀಯವಾಗಿ ವಿಪುಲ ಉದ್ಯೋಗ ಅವಕಾಶಗಳು … Continued

ಬೆಂಗಳೂರು: ಜು.1ರಿಂದ ನಮ್ಮ ಮೆಟ್ರೋ ರೈಲು ಸಮಯ ವಿಸ್ತರಣೆ

ಬೆಂಗಳೂರು: ಬೆಂಗಳೂರು ಮೆಟ್ರೋ ನಿಗಮ ಜುಲೈ 1ರಿಂದ ರೈಲುಗಳ ಕಾರ್ಯಾಚರಣೆ ಸಮಯವನ್ನ ವಿಸ್ತರಿಸಲಿದೆ. ಜುಲೈ 1ರಿಂದ ನಮ್ಮ ಮೆಟ್ರೋ ರೈಲು ಸೇವೆ ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಸಂಚರಿಸಲಿದೆ. ಬಿಎಂಆರ್ ಸಿಎಲ್ ಪ್ರಕಾರ, ಸೋಮವಾರದಿಂದ ಶುಕ್ರವಾರದ ವರೆಗೆ ಗರಿಷ್ಠ ವಲ್ಲದ ಗಂಟೆಗಳಲ್ಲಿ 5 ನಿಮಿಷಗಳು ಮತ್ತು ಗರಿಷ್ಠ ವಲ್ಲದ ಅವಧಿಯಲ್ಲಿ 15 ನಿಮಿಷಗಳ ಆವರ್ತನದೊಂದಿಗೆ … Continued

ಜುಲೈ 1ರಿಂದ ಎಸ್‌ಬಿಐ ಎಟಿಎಂನಿಂದ ಹಣ ವಿಥ್‌ಡ್ರಾ, ಚೆಕ್‌ ಪುಸ್ತಕಕ್ಕೆ ಹೊಸ ಸೇವಾ ಶುಲ್ಕ

ಭಾರತದ ದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2021ರ ಜುಲೈ 1 ರಿಂದ ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣವನ್ನು ಹಿಂಪಡೆಯಲು ಹೊಸ ನಿಯಮಗಳು ಮತ್ತು ಪರಿಷ್ಕೃತ ಶುಲ್ಕಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆ ಹೊಂದಿರುವವರಿಗೆ ಅನ್ವಯವಾಗುತ್ತವೆ. ಖಾತೆದಾರರು. ಎಟಿಎಂ ಹಿಂಪಡೆಯುವಿಕೆ, ಚೆಕ್‌ಬುಕ್‌ಗಳು, … Continued

ಆರೋಪಿ ಕಪಾಳಕ್ಕೆ ಐದು ಸಲ ಬೂಟಿನಿಂದ ಹೊಡೆಯಿರಿ.. 50,000 ರೂ.ತೆಗೆದುಕೊಳ್ಳಿ:ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ ಅಪ್ರಾಪ್ತೆಗೆ ಪಂಚಾಯತ ಸೂಚನೆ..!

ಗೋರಖ್‌ಪುರ: ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪಂಚಾಯತವು ತನ್ನ ಗ್ರಾಮದ ಬಾಲಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಆತನಿಂದ 50,000 ರೂ.ಗಳನ್ನು ತೆಗೆದುಕೊಂಡು ಐದು ಬಾರಿ ಆತನಿಗೆ ಬೂಟಿನಿಂದ ಹೊಡೆಯುವ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಸೂಚಿಸಿದೆ. ಪಂಚಾಯತದ ನಿರ್ಧಾರದಿಂದ ತೃಪ್ತರಾಗದ ಬಾಲಕಿಯ ಕುಟುಂಬ ಪೊಲೀಸ್ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋತಿಭರ್ ಪೊಲೀಸ್ ಠಾಣೆ … Continued

ಕೋವಿಡ್-19ರಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ: ಮಾರ್ಗಸೂಚಿ ರಚಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

ನವದೆಹಲಿ: ಕೋವಿಡ್-19 ಮೃತಪಟ್ಟ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಕೊಡಲು ಮಾರ್ಗಸೂಚಿ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ರಚಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರು ವಾರಗಳ ಕಾಲಾವಧಿಯನ್ನು ಕೋರ್ಟ್ ನೀಡಿದೆ. ಕೋವಿಡ್​ನಿಂದ ಮೃತಪಟ್ಟ ಪ್ರತೀ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ಒದಗಿಲು ಕೇಂದ್ರಕ್ಕೆ … Continued

ರಮೇಶ್ ಜಾರಕಿಹೊಳಿ ಅವರ ಜತೆ ನಾವಿದ್ದೇವೆ : ಸಚಿವ ಬೈರತಿ

ಹುಬ್ಬಳ್ಳಿ: ರಮೇಶ್ ಜಾರಕಿಹೊಳಿ ಅವರ ಜತೆ ನಾವಿದ್ದೇವೆ ಎಂದು ಸಚಿವ ಬೈರತಿ ಬಸವರಾಜ ಹೇಳಿದರು. ಬುಧವಾರ ಹುಬ್ಬಳ್ಳಿ ಧಾರವಾಡ ನಗರ ಪ್ರದಕ್ಷಿಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಯಾವ ಉದ್ದೇಶದಿಂದ ರಾಜೀನಾಮೆ ವಿಚಾರ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಜತೆ ನಾವಿದ್ದೇವೆ. ಸಣ್ಣಪುಟ್ಟ ತೊಂದರೆಗಳಾಗಿವೆ. ಅವು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅವರು. ಎಲ್ಲ ಸಮಸ್ಯೆಗಳೂ ಸದ್ಯದಲ್ಲೇ … Continued

ನ್ಯುಮೋನಿಯಾ: ಹಿರಿಯ ನಟ ನಸೀರುದ್ದೀನ್ ಷಾ ಆಸ್ಪತ್ರೆಗೆ ದಾಖಲು

ಮುಂಬೈ:ಹಿರಿಯ ಬಾಲಿವುಡ್‌ ನಟ ನಸೀರುದ್ದೀನ್ ಷಾ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಟನ ಪತ್ನಿ ರತ್ನ ಪಾಠಕ್ ಷಾ ಬುಧವಾರ ಹೇಳಿದ್ದಾರೆ. 70 ವರ್ಷದ ನಸೀರುದ್ದೀನ್ ಷಾ ಅವರನ್ನು ಖಾರ್ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಸೀರುದ್ದೀನ್ ಷಾ ತನ್ನ ಶ್ವಾಸಕೋಶದಲ್ಲಿ ನ್ಯುಮೋನಿಯಾದ “ಸಣ್ಣ ಪ್ಯಾಚ್” ಹೊಂದಿದ್ದು, ಪ್ರಸ್ತುತ ಚಿಕಿತ್ಸೆ … Continued

ಉಸಿರಾಟದ ಸಮಸ್ಯೆ ನಂತರ ಮತ್ತೆ ಆಸ್ಪತ್ರೆಗೆ ದಾಖಲಾದ ಖ್ಯಾತ ಬಾಲಿವುಡ್‌ ನಟ ದಿಲೀಪ್‌ ಕುಮಾರ

ನವದೆಹಲಿ: ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ದಿಲೀಪ್ ಕುಮಾರ್ ಅವರನ್ನು ಪುನಃ ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಮತ್ತೆ ಹಿಂದೂಜಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. 98 ವರ್ಷದ ನಟ ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು “ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. … Continued

ಹಾಲಿನ ಪುಡಿ, ತುಪ್ಪ, ಬೆಣ್ಣೆ ದರ ಕಡಿತ ಮಾಡಿದ ಕೆಎಂಎಫ್‌

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್‌) ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಕೋವಿಡ್ ಕಾಲದಲ್ಲಿ ತುಪ್ಪ, ಬೆಣ್ಣೆ ಮತ್ತು ಹಾಲಿನ ಪುಡಿಗಳ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಮಂಗಳವಾರ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಆದೇಶ ಹೊರಡಿಸಿದ್ದು, ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ದರವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 1 … Continued

ಕೃಷ್ಣಾ ನದಿಯಲ್ಲಿ ಮುಳುಗಿದ್ದ ನಾಲ್ವರು ಸಹೋದರರ ಮೃತದೇಹ ಪತ್ತೆ

ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸಹೋದರರ ಶವಗಳನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಸ್ಥಳೀಯರು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳು ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರು ಪಾಲಾಗಿದ್ದರು. ಈಗ ನಾಲ್ವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ನಿನ್ನೆ) … Continued