ಜೂ.30ರಿಂದ ಬಂಡೀಪುರ ಸಫಾರಿ ಪುನರಾರಂಭ

ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಹುಲಿಯೋಜನೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸೇರಿ ಸಫಾರಿ ಜೂ.30ರಿಂದ ಪುನರಾರಂಭಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್‌-19 ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಪ್ರವರ್ಗ-1 ರ ಅಡಿಯಲ್ಲಿ ಘೋಷ‌ಣೆ ಮಾಡಿ ಲಾಕ್‌ಡೌನ್‌ ತೆರವುಗೊಳಿಸುವ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ತಕ್ಷಣಕ್ಕೆ ಸಫಾರಿಗೆ ಹೋಗುವ ವ್ಯವಸ್ಥೆ ಆಗಲಿದೆ. ಜು.15 ರಿಂದ ಎಲ್ಲಾ ರೀತಿಯ … Continued

ಹಂಸಭಾವಿ: ತೆಂಗಿನ ಮರದಿಂದ ಕಾಯಿ ಬಿದ್ದು 11 ತಿಂಗಳ ಮಗು ಸಾವು

ಹಾವೇರಿ: ಮನೆಯ ಮುಂದಿನ ತೆಂಗಿನ ಮರದಿಂದ ಕಾಯಿ ಬಿದ್ದು ಪುಟ್ಟ ಕಂದಮ್ಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಂಸಭಾವಿ ಗ್ರಾಮದಲ್ಲಿ ನಡೆದಿದೆ. ಮೃತ ಹಸಗೂಸನ್ನ 11 ತಿಂಗಳಿನ ತನ್ವೀತ್ ಮಲ್ಲಿಕಾರ್ಜುನ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಯ ಮಗು. ಸೋಮವಾರ ಬೆಳಗ್ಗೆ ಮನೆಯ ಮುಂದಿನ ತೆಂಗಿನ ಮರದಿಂದ … Continued

ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 3,222 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4,000ಕ್ಕಿಂತ ಇಳಿಮುಖವಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3222 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 93 ಮಂದಿ ಮೃತಪಟ್ಟಿದ್ದು, 14724 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.54ರಷ್ಟಿದ್ದು, ಸಾವಿನ ಪ್ರಮಾಣ ಶೇ.2.88ರಷ್ಟಿದೆ. ಮಂಗಳವಾರದ … Continued

ಮಾಡರ್ನಾ ಕೋವಿಡ್‌ ಲಸಿಕೆಗೆ ಡಿಸಿಜಿಐನಿಂದ ಭಾರತದಲ್ಲಿ ತುರ್ತು ಬಳಕೆ ಅನುಮತಿ: ಡಾ.ಪಾಲ್‌

ನವದೆಹಲಿ: ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ. ವಿ.ಕೆ.ಪಾಲ್ ಮಂಗಳವಾರ ಅಮೆರಿಕ ಲಸಿಕೆ ಉತ್ಪಾದನಾ ದೈತ್ಯ ಮೊರ್ಡಾನಾಗೆ ಭಾರತದಲ್ಲಿ ತನ್ನ ಕೋವಿಡ್ -19 ಲಸಿಕೆಗಾಗಿ ನಿರ್ಬಂಧಿತ ತುರ್ತು ಬಳಕೆಯ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಮಾಡರ್ನಾ ಈಗ ಭಾರತದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಬಳಸಲಾಗುವ ನಾಲ್ಕನೇ ಕೋವಿಡ್ -19 ಲಸಿಕೆಯಾಗಿದೆ. ಫಿಜರ್ ಮೇಲಿನ ಒಪ್ಪಂದದ ಸರ್ಕಾರ ಶೀಘ್ರದಲ್ಲೇ … Continued

ಆನ್‌ಲೈನ್ ತರಗತಿ ಫೋನ್ ಗಾಗಿ ಪುಟ್ಟ ಹುಡುಗಿಯಿಂದ ಬೀದಿಯಲ್ಲಿ ಮಾವಿನಹಣ್ಣು ಮಾರಾಟ.. 12 ಮಾವಿನಹಣ್ಣಿಗೆ ಬಂತು 1.2 ಲಕ್ಷ ರೂ.

ಜಮ್ಶೆಡ್ಪುರ: ಜಮ್‌ಶೆಡ್‌ಪುರದ 11 ವರ್ಷದ ಬಾಲಕಿಯೊಬ್ಬಳು ಫೋನ್ ಖರೀದಿಸಲು ಹಣವಿಲ್ಲದ ಕಾರಣ ತನ್ನ ಆನ್‌ಲೈನ್‌ ಕಲಿಕೆಗೆ ಬೇಕಾದ ಸ್ಮಾರ್ಟ್‌ ಫೋನ್‌ ಖರೀದಿಸಲು ಬೇಕಾದ ಹಣ ಸಂಪಾದಿಸಲು ಬೀದಿಯಲ್ಲಿ ಮಾವಿನಹಣ್ಣು ಮಾರುತ್ತಿರುವ ವಿಡಿಯೋ ವೈರಲ್ ಆದ ನಂತರ ಆಕೆಯ ಕಲಿಯುವ ಇಚ್ಛಾಶಕ್ತಿಗೆ ಅದರ ಹತ್ತುಪಟ್ಟು ಹಣ ಅವಳ ಬಳಿಯೇ ಬಂದಿದೆ. ಹತ್ತು ಮಾವಿನ ಹಣ್ಣುಗಳಿಗೆ 1.2 ಲಕ್ಷ … Continued

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗಲು ಅನಿಲ ದೇಶ್ಮುಖ್‌ ವಿಫಲ:ವರ್ಚುವಲ್ ಸಂವಹನಕ್ಕೆ ಮನವಿ

ಕೋವಿಡ್‌-19 ಮತ್ತು ಅವರ ವೃದ್ಧಾಪ್ಯವನ್ನು ಉಲ್ಲೇಖಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಂಗಳವಾರ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿಲ್ಲ ಮತ್ತು ಕೇಂದ್ರ ಏಜೆನ್ಸಿಗೆ ಸೂಕ್ತವಾದ ದಿನ ಸಮಯ ಕೋರಿದ್ದಾರೆ. 71 ವರ್ಷದ ಎನ್‌ಸಿಪಿ ಮುಖಂಡರನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) … Continued

ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್ -ರಮೇಶ ಜಾರಕಿಹೊಳಿ ಭೇಟಿ ಮರ್ಮವೇನು..?

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಅವರು ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಲು ಏನನ್ನೂ ಹೇಳಲು ರಮೇಶ್​ ಜಾರಕಿಹೊಳಿ ನಿರಾಕರಿಸಿದ್ದಾರೆ. ರಮೇಶ ಜಾರಕಿಹೊಳಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ … Continued

ಜುಲೈ 1ರಿಂದ ಬೆಂಗಳೂರು ಬನ್ನೇರುಘಟ್ಟ ಮೃಗಾಲಯ ಮತ್ತೆ ಓಪನ್‌

ಬೆಂಗಳೂರು: ಕೋವಿಡ್‌-19 ರ ಎರಡನೇ ಅಲೆಯಿಂದ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಸುಮಾರು 90 ದಿನಗಳ ಕಾಲ ಸ್ಥಗಿತಗೊಂಡ ನಂತರ, ಮೃಗಾಲಯ ಮತ್ತು ಪ್ರಾಣಿ ಸಫಾರಿ ಸೇರಿದಂತೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ (ಬಿಬಿಪಿ) ಜುಲೈ 1 ರಿಂದ ಸಂದರ್ಶಕರಿಗೆ ಮತ್ತೆ ತೆರೆಯಲು ಸಿದ್ಧವಾಗಿದೆ. ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಬಿಬಿಪಿ ತನ್ನ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) … Continued

ದನದ ಮಾಂಸ ಸಾಗಾಟ: ಒಬ್ಬನ ಬಂಧನ

ಕುಮಟಾ; ಅನಧಿಕೃತವಾಗಿ ದನದ ಮಾಂಸ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯೊಬ್ಬನನ್ನು ಕುಮಟಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಆಧಾರದಲ್ಲಿ ತಾಲೂಕಿನ ಹೊಳೆಗದ್ದೆಯ ರಾಷ್ಟ್ರೀಯ ಹೆದ್ದಾರಿ ೬೬ ರ ಟೋಲ್ ನಾಕಾ ಹತ್ತಿರ ಅಪರಾಧ ವಿಭಾಗದ ಪಿಎಸ್‌ಐ ಗಿರಿರಡ್ಡಿ ನೇತೃತ್ವದ ತಂಡವು ಲಾರಿಯೊಂದನ್ನು ತಡೆದು ತನಿಖೆ ನಡೆಸಿದಾಗ ಮಾಂಸ ಸಗಾಟದ ಜಾಲ ಪತ್ತೆಯಾಗಿದೆ. ಲಾರಿಯಲ್ಲಿ … Continued

ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂ ನಕಾರ: ಮೇಲ್ಮನವಿ ಅರ್ಜಿ ವಜಾ

ನವದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಕ್ಕೆ ತಡೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮೂಗು ತೂರಿಸಲು ಸಾಧ್ಯವಿಲ್ಲ ಎಂದು ಆಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್, ದಿನೇಶ್ ಮಹೇಶ್ವರಿ ಹಾಗೂ … Continued