ಕನಿಷ್ಠ ಬೆಂಬಲ ಬೆಲೆ ಶಾಸನ ಬದ್ಧ ಬೆಲೆಯಾಗಿಸಲು ಶಿಫಾರಸು:ಕೃಷಿ ಬೆಲೆ ಆಯೋಗದ ಅಧ್ಯಕ್ಷ

ಹುಬ್ಬಳ್ಳಿ: ಕೃಷಿ ಉತ್ಪನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದ ಬೆಲೆಯಾಗಿಸುವಂತೆ ರೈತರು ಒತ್ತಾಯಿಸಯತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಕೃಷಿ ಬೆಲೆ ಆಯೋಗದ ವಾರ್ಷಿಕ ವರದಿಯಲ್ಲಿ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಲಗುರ್ಕಿ ಹೇಳಿದ್ದಾರೆ. ಸೋಮವಾರ ಹುಬ್ಬಳ್ಳಿಯ ಎಪಿಎಂಸಿ ಕಾರ್ಯಾಲಯದಲ್ಲಿ ಎಪಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ … Continued

18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಖತರನಾಕ್‌ ಕಳ್ಳರ ಬಂಧನ, ಬಂಗಾರ ಸೇರಿದಂತೆ 19 ಲಕ್ಷಕ್ಕೂಅಧಿಕ ಮೌಲ್ಯದ ಸ್ವತ್ತು ವಶ

ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಮನೆಗಳ್ಳತನ ಮತ್ತಿತರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 19 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜನವಸತಿ ಇರದ ಮನೆಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಜಿಲ್ಲೆಯ ವಿವಿಧೆಡೆ ಕಳ್ಳತನ ನಡೆಸುತ್ತಿದ್ದ ತಂಡವನ್ನು ಬಂಧಿಸಿರುವ ಪೊಲೀಸರು ಒಂಟಿ ಮನೆಗಳ … Continued

ಶೇ.5ರ ರಿಯಾಯ್ತಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ

ಹುಬ್ಬಳ್ಳಿ:ಸರ್ಕಾರದ ಸುತ್ತೋಲೆ ಅನ್ವಯ ಪ್ರಸಕ್ತ ಸಾಲಿನಲ್ಲಿ ಏಪ್ರೀಲ್ 1 ರಿಂದ ಜೂನ್ 30 ರವರೆಗೆ ಶೇ.5 ರಷ್ಟು ರಿಯಾಯ್ತಿಯೊಂದಿಗೆ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಿದ್ದ ಕಾಲಮಿತಿಯನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಕೋವಿಡ್ -19 ಹರಡುತ್ತಿರುವುದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ತೆರಿಗೆ ಪಾವತಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಆಗಸ್ಟ್ … Continued

ಕರ್ನಾಟಕದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆಗೆ ಬಂದ ಕೊರೊನಾ ಸಕ್ರಿಯ ಪ್ರಕರಣಗಳು..

ಬೆಂಗಳೂರು: ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆಯತ್ತ ಸಾಗುತ್ತಿದೆ.ಕಳೆದ 24 ಗಂಟೆಯಲ್ಲಿ (ಸೋಮವಾರ) ಹೊಸದಾಗಿ ರಾಜ್ಯಾದ್ಯಂತ ಹೊಸದಾಗಿ 2,576 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 93 ಜನರು ಮೃತಪಟ್ಟಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 28,37,206ಕ್ಕೆ ಏರಿಕೆಯಾಗಿದೆ. ಹಾಗೂ … Continued

ಟ್ವಟ್ಟರ್‌ನಿಂದ ಮತ್ತೆ ಐಟಿ ನಿಯಮ ಉಲ್ಲಂಘನೆ: ಹೊಸ ದೂರು ಸ್ಪಂದನೆ ಅಧಿಕಾರಿಯಾಗಿ ಅಮೆರಿಕ ಉದ್ಯೋಗಿ ನೇಮಕ

ನವದೆಹಲಿ: ಟ್ವಿಟರ್ ಗ್ರಾಹಕರ ದೂರುಗಳನ್ನು ಆಲಿಸುವುದಕ್ಕೆ ನೇಮಕ ಮಾಡಲಾಗಿದ್ದ ಅಧಿಕಾರಿ ಧರ್ಮೇಂದ್ರ ಚತುರ್ ನಿರ್ಗಮನದ ಬೆನ್ನಲ್ಲೆ ಅಮೆರಿಕಾದ ಸಂಸ್ಥೆ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯೋರ್ವನನ್ನು ಆ ಹುದ್ದೆಗೆ ನೂತನವಾಗಿ ನೇಮಕ ಮಾಡಿದೆ. ಟ್ವಿಟರ್ ಗ್ಲೋಬಲ್ ಕಾನೂನು ನೀತಿ ನಿರ್ದೇಶಕ ಜೆರೆಮಿ ಕೆಸೆಲ್ ಟ್ವಿಟರ್ ಇಂಡಿಯಾದಲ್ಲಿ ದೂರು ಆಲಿಸುವ ಅಧಿಕಾರಿಯಾಗಿ ಮುಂದುವರೆಯಲಿದ್ದಾರೆ. ಆದರೆ ಭಾರತದ ಹೊಸ ಐಟಿ ನಿಯಮದಲ್ಲಿ … Continued

ಕಾಸರಗೋಡು ಜಿಲ್ಲೆ ಗ್ರಾಮಗಳ ಮರುನಾಮಕರಣ: ಕೇರಳ ಸಿಎಂ ಜೊತೆ ಮಾತನಾಡಲಿರುವ ಸಿಎಂ ಬಿಎಸ್‌ವೈ

ಬೆಂಗಳೂರು: ಕನ್ನಡ ಮಾತನಾಡುವ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಗ್ರಾಮಗಳ ಮರುನಾಮಕರಣವನ್ನು ತಡೆಯಲು ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪ ಸೋಮವಾರ ತಮ್ಮ ಕೇರಳದ ಮುಖ್ಯಮಂತ್ರಿ ಪಿಭರಾಯಿ ವಿಜಯನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕೆಬಿಎಡಿಎ) ಅಧ್ಯಕ್ಷ ಸಿ. ಸೋಮಶೇಖರ ಅವರು ಯಡಿಯೂರಪ್ಪ ಅವರನ್ನು … Continued

ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ಪ್ರವೇಶವಿಲ್ಲ..!

ನವದೆಹಲಿ: ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಯುರೋಪಿಯನ್ ಯೂನಿಯನ್ ‘ಗ್ರೀನ್ ಪಾಸ್’ ಗೆ ಅರ್ಹರಲ್ಲ. ಜುಲೈ 1 ರಿಂದ ಎಸ್‌ಐಐ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಬ್ರಿಟನ್ನಿನಲ್ಲಿ ಉತ್ಪಾದನೆಯಾಗುವ ಆಕ್ಸ್‌ಫರ್ಡ್ ವಿವಿಯ ಅಸ್ಟ್ರಾ ಜೆನಿಕಾ ಲಸಿಕೆಗೆ ಯೂರೋಪಿಯನ್ … Continued

ಘೋರ ದುರಂತ.. ಒಂದೇ ಕುಟುಂಬದ ಆರು ಜನ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದ್ದು, ಕುಟುಂಬದ 6 ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಭಾದೆ ತಾಳದೆ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಶಂಕಿಸಲಾಗಿದ್ದು, ದಂಪತಿ ತಮ್ಮ 4 ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪತಿ ಭೀಮರಾಯ ಸುರಪುರ (45), … Continued

ಕೋವಿಡ್ ಪೀಡಿತ ಕ್ಷೇತ್ರಗಳ ಆರ್ಥಿಕತೆ ಹೆಚ್ಚಳಕ್ಕೆ 8 ಪ್ರಮುಖ ಪರಿಹಾರ ಕ್ರಮ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ತತ್ತರಿಸಿರುವ ಆರ್ಥಿಕತೆಯನ್ನು ಹೆಚ್ಚಿಸಲು ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕ್ಷೇತ್ರಗಳಿಗೆ ಎಂಟು ಪ್ರಮುಖ ಆರ್ಥಿಕ ಪರಿಹಾರ ಕ್ರಮಗಳು ಮತ್ತು 1.1 ಲಕ್ಷ ಕೋಟಿ ರೂ. ಘೋಷಿಸಿದ್ದಾರೆ.. ಅಲ್ಲದೆ, ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ … Continued

ಜುಲೈ ಎರಡನೇ ವಾರ ದ್ವಿತೀಯ ಪಿಯುಸಿ ಫಲಿತಾಂಶ

ಬೆಂಗಳೂರು: ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, “ಜುಲೈ ಎರಡನೇ ವಾರದಲ್ಲಿ ಪ್ರಕಟವಾಗುವ ಫಲಿತಾಂಶದಿಂದ ಸಮಾಧಾನ ಇಲ್ಲದೇ ಇದ್ದರೆ, ಅಂಥ ವಿದ್ಯಾರ್ಥಿಗಳಿಗೆ ಹೆಚ್ಚು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು” ಎಂದು … Continued