ಟಾಟಾ ಪವರ್ – ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್

ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್​ಲೆಟ್​ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಟಾಟಾ ಪವರ್ ಕಂಪೆನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್​ಪಿಸಿಎಲ್​) ಜೊತೆಗೆ ಸಹಯೋಗ ನೀಡಲಿದೆ. ಎಲೆಕ್ಟ್ರಿಕ್ ಯುಟಿಲಿಟಿ ಕಂಪೆನಿಗಳ “ಇ ಝೆಡ್ ಚಾರ್ಜ್ ಮೊಬೈಲ್” ಪ್ಲಾಟ್​ಫಾರ್ಮ್​ ಮೂಲಕ ಚಾರ್ಜಿಂಗ್ ಮಾಡಲಾಗುತ್ತದೆ. … Continued

ದೆಹಲಿಯಲ್ಲಿ ಪಕ್ಷದ ವರಿಷ್ಠರ ಭೇಟಿ ಬೆನ್ನಲ್ಲೇ ಜುಲೈ 26 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಬಿಎಸ್‌ವೈ..!

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜುಲೈ 26ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಜುಲೈ 26 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ, ಅವರು ಎರಡು ವರ್ಷಗಳನ್ನು ಪೂರೈಸಿದ ದಿನವೇ ಕರೆದಿರುವುದು ವಿಶೇಷ. ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ … Continued

ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 1,869 ಜನರಿಗೆ ಕೊರೊನಾ ದೃಢ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶನಿವಾರ ಹೊಸದಾಗಿ 1,869 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,82,239ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ಸೋಂಕಿನಿಂದ 42 ಜನ ಮೃತಪಟ್ಟಿದ್ದಾರೆ ಹಾಗೂ 3144 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 28,16,013 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ತನ್ಮೂಲಕ ರಾಜ್ಯದಲ್ಲಿ ಈವರೆಗೆ … Continued

ಒಕ್ಕಲಿಗ ಅಭಿವೃದ್ಧಿ ನಿಗಮ’ ಸ್ಥಾಪಿಸಿದ ರಾಜ್ಯ ಸರ್ಕಾರ, ನಿಗಮಕ್ಕೆ 500 ಕೋಟಿ ರೂ.

ಬೆಂಗಳೂರು : ರಾಜ್ಯ ಸರ್ಕಾರವು, ಒಕ್ಕಲಿಗರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆದೇಶಿಸಿದೆ. ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ. ಅಕ್ಕಮಹಾದೇವಿ ನಡವಳಿಗಳನ್ನು ಹೊರಡಿಸಿದ್ದು, 2021-22ನೇ ಸಾಲಿನ ಆಯವ್ಯಯ ಕಂಡಿಕೆ-148ರಲ್ಲಿ ಒಕ್ಕಲಿಗ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಹಾಗೂ ನಿಗಮದ ಚಟುವಟಿಕೆಗಳಿಗೆ 500 ಕೋಟಿ … Continued

ರೈತ ಹೋರಾಟಗಾರ, ಮಾಜಿ ಸಚಿವ ಜಿ. ಮಾದೇಗೌಡ ನಿಧನ

ಮಂಡ್ಯ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವರಾಗಿದ್ದ ಜಿ ಮಾದೇಗೌಡ ಅವರು ಶನಿವಾರ ಕೊನೆಯುಸಿರು ಎಳೆದಿದ್ದಾರೆ. 92 ವರ್ಷ ವಯಸ್ಸಿನ ಮಾದೇಗೌಡ ಅವರು ಕಳೆದ ಹಲವು ದಿನಗಳಿಂದ ಮದ್ದೂರಿನ ಕೆಎಂ ದೊಡ್ಡಿ ಜಿ ಮಾದೇಗೌ ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಹಲೋಕ ತ್ಯಜಿಸಿದ್ದಾರೆ. ಮಾದೇಗೌಡರ ಆರೋಗ್ಯ … Continued

ಕುಮಟಾದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ: ರಾತ್ರಿಯೇ ಬಂದು ಕ್ಯೂ ನಿಂತರೂ ಜನರಿಗೆ ಸಿಗುತ್ತಿಲ್ಲ ಲಸಿಕೆ..!

ಕುಮಟಾ;ತಾಲೂಕಿನಲ್ಲಿ ಕೊರೊನಾ ಲಸಿಕೆ ಕೊರತೆಯು ಜನರನ್ನು ಹೈರಾಣ ಮಾಡಿದೆ. ಮೊದಲ ಡೋಸ್‌ ಮುಗಿದು ೮೫ ರಿಂದ ೯೦ ದಿನವಾದರೂ ಎರಡನೆ ಡೋಸ್ ಸಿಗದೆ ಜನರು ಪರದಾಡುತ್ತಿದ್ದಾರೆ. ಮಧ್ಯರಾತ್ರಿ ೨ ಘಂಟೆಯಿಂದ ಸರಕಾರಿ ಆಸ್ಪತ್ರೆಯ ಹೊರಗೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕೆಲವು ವೃದ್ಧರು ಕ್ಯೂನಲ್ಲಿ ನಿಲ್ಲಲು ಆಗದೆ ಕುಳಿತುಕೊಳ್ಳಲು ಸಾಧ್ಯವಾಗದೆ ತೊಳಲಾಡುತ್ತಿರುವ ಪರಿಸ್ಥಿತಿ ಕನಿಕರ ತರುತ್ತಿದೆ. ಸರ್ಕಾರದಿಂದ ಕುಮಟಾಕ್ಕೆ … Continued

ಹೋಟೆಲಿನಲ್ಲಿ ಹಲ್ಲೆ ಮಾಡಿಲ್ಲ ಎಂದಾದ್ರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ :ನಟ ದರ್ಶನಗೆ ಇಂದ್ರಜೀತ್‌ ಲಂಕೇಶ ಪ್ರತಿಸವಾಲು

ಬೆಂಗಳೂರು: ಮೈಸೂರಿನ ಸಂದೇಶ್​ ದಿ ಪ್ರಿನ್ಸ್​​ ಹೋಟೆಲ್​ ವೇಟರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಂಬಂಧ ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವೆ ವಾಕ್ಸಮರ ಶನಿವಾರ ತಾರಕಕ್ಕೇರಿದೆ. ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್​​ ಅವರು, ಗಂಡಸ್ತನ ಇದ್ದರೆ ನಾನು ಹಲ್ಲೆ ಮಾಡಿರುವ ವಿಡಿಯೋವನ್ನು ಇಂದ್ರಜಿತ್​ ರಿಲೀಸ್​ ಮಾಡಲಿ ಎಂದು ಸವಾಲು … Continued

ತಾಕತ್ತಿದ್ದರೆ ಆಡಿಯೋ ರಿಲೀಸ್ ಮಾಡಿ : ನಿರ್ದೇಶಕ ಇಂದ್ರಜೀತ್‌ ಲಂಕೇಶಗೆ ನಟ ದರ್ಶನ ಸವಾಲು

ಮೈಸೂರು : ನೀವು ಗಂಡಸೇ ಆಗಿದ್ರೆ, ನಿಮ್ಮ ಬಳಿಯಲ್ಲಿರುವ ನನ್ನ ಆಡಿಯೋವನ್ನು ಇಂದು ಬಿಡುಗಡೆ ಮಾಡಿ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶಗೆ ನಟ ದರ್ಶನ ತೂಗುದೀಪ್‌ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ ಹೌಸ್‌ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದೇಶ ಹಾಗೂ ಇಂದ್ರಜಿತ್‌ ಅವರು ಮಾಡಿರುವ ಆಡಿಯೋ ನನ್ನದಲ್ಲ ಎಂದು ಸಂದೇಶ ಹೇಳಿದ್ದಾರೆ. … Continued

ಇಮ್ರಾನ್ ಖಾನ್ ನಯಾ ಪಾಕಿಸ್ತಾನದಲ್ಲಿ ಅಫಘಾನ್ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಪುತ್ರಿ ಅಪಹರಿಸಿ ಚಿತ್ರಹಿಂಸೆ

ನವದೆಹಲಿ: ಪಾಕಿಸ್ತಾನದ ಅಫಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಅವರ ಪುತ್ರಿ ಅಪರಿಚಿತ ಅಪಹರಣಕಾರರಿಂದ ಬಿಡುಗಡೆಯಾಗುವ ಮೊದಲು ಅಪಹರಿಸಿ ಹಿಂಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಈ ಅಮಾನವೀಯ ಕೃತ್ಯ ಖಂಡಿಸಿ, ಅಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನದ ರಾಜತಾಂತ್ರಿಕ ಕಾರ್ಯಾಚರಣೆಯನ್ನು ರಕ್ಷಿಸಲು ಪಾಕಿಸ್ತಾನ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.ಸಿಲ್ಸಿಲಾ ಅಲಿಖಿಲ್ ಮನೆಗೆ ಹೋಗುವಾಗ ಇಸ್ಲಾಮಾಬಾದ್‌ನಲ್ಲಿ ಅವರನ್ನು ಅಪಹರಿಸಲಾಗಿತ್ತು. … Continued

ಮೊಬೈಲ್ ಬ್ಲಾಸ್ಟ್: ಬಾಲಕನ ಬೆರಳುಗಳು ಕಟ್, ಕಣ್ಣಿಗೆ ಗಂಭೀರ ಗಾಯ..!

ಹಾವೇರಿ: ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚಿಗೆ ಬಿದ್ದ ಬಾಲಕನೊಬ್ಬ ಮೂರು ಬೆರಳನ್ನೇ ಕಳೆದುಕೊಂಡಿದ್ದಾನೆ. ಮೊಬೈಲ್ ಬ್ಲಾಸ್ಟ್ ಆಗಿ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳೇ ಕಟ್ ಆಗಿವೆ. ಬ್ಲಾಸ್ಟ್ ಆಗಿದ್ದ ಹೊಡೆತಕ್ಕೆ ಬಾಲಕನ ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಮನೆಯಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. … Continued