ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿ..!

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಹಬದಿಗೆ ತರಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ಬಿಬಿಎಂಪಿ ಇಂದಿನಿಂದ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿದೆ. ಇಲ್ಲಿಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಯಾರೂ ಪಾಲನೆ ಮಾಡುತ್ತಿರಲಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಸಹ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಗರದಲ್ಲೂ ಕಳೆದ ಕೆಲವು … Continued

ನಮ್ಮ ಅನುಮತಿಯಿಲ್ಲದೆ ಮೇಕೆದಾಟು ಜಾರಿ ಸಾಧ್ಯವಿಲ್ಲ: ಕರ್ನಾಟಕಕ್ಕೆ ಅಣ್ಣಾಮಲೈ ಸ್ಪಷ್ಟೋಕ್ತಿ

ಚೆನ್ನೈ: ತಮಿಳುನಾಡಿನ ಸಮ್ಮತಿ ಇಲ್ಲದೇ ಮೇಕೆದಾಟು ಯೋಜನೆ ಜಾರಿಗೆ ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡನ್ನು ಬಿಟ್ಟು ಕೊಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಮಾಧ್ಯಮ ಸಂದರ್ಶನವೊಂದರಲ್ಲಿ‌ ಮಾತನಾಡಿದ್ದು, ಮೇಕದಾಟು ವಿಚಾರದಲ್ಲಿ ತಮಿಳುನಾಡು ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿರುವ ಮಾಜಿ … Continued

ಟೋಕಿಯೋ ಒಲಿಂಪಿಕ್ಸ್ :ಹಾಕಿಯಲ್ಲಿ ಭಾರತದ ಕನಸು ಭಗ್ನ, ಸೆಮಿಫೈನಲ್‍ನಲ್ಲಿ ಬೆಲ್ಜಿಯಂ ವಿರುದ್ಧ ಸೋಲು

ಟೋಕಿಯೋ : ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದೆ. ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ 5-2ರ ಅಂತರದಲ್ಲಿ ಸೋಲನುಭವಿಸುವ ಮೂಲಕ ಟೀಂ ಇಂಡಿಯಾದ ಫೈನಲ್‌ಗೆ ಹೋಗುವ ಆಸೆ ಭಗ್ನಗೊಂಡಿದೆ. ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅದ್ಭುತ ಆಟದ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ … Continued

ಇಂದು ಮಧ್ಯಾಹ್ನ 12 ಗಂಟೆಗೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಿದೆ. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2021 ಆಗಸ್ಟ್ 3 ರಂದು (ಇಂದು) ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಘೋಷಿಸಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ. ಪ್ರಾಯೋಗಿಕ … Continued

ಭಾರತದಲ್ಲಿ 30,549 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) ಭಾರತವು 30,549 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 422 ಸಾವುಗಳನ್ನು ವರದಿ ಮಾಡಿದೆ. ದೇಶದ ಚೇತರಿಕೆಯ ದರವು ಈಗ 97.38%ರಷ್ಟಿದೆ. ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿರುವ ಅಗ್ರ ಐದು ರಾಜ್ಯಗಳಲ್ಲಿ ಕೇರಳ 13,984 ಪ್ರಕರಣಗಳು, ಮಹಾರಾಷ್ಟ್ರ 4,869 ಪ್ರಕರಣಗಳು, ತಮಿಳುನಾಡು 1,957 ಪ್ರಕರಣಗಳು, ಆಂಧ್ರ … Continued

ಉತ್ತರ ಪ್ರದೇಶದ ಮಾಜಿ ಸಚಿವರಿಂದ ಆರನೇ ಮದುವೆಗೆ ಪ್ರಯತ್ನ: ಮೂರನೇ ಪತ್ನಿಯಿಂದ ದೂರು ದಾಖಲು..!

ಆಗ್ರಾ: ಉತ್ತರಪ್ರದೇಶದ ಮಾಜಿ ಸಚಿವ ಚೌಧರಿ ಬಶೀರ್ ಆರನೇ ಮದುವೆಯಾಗುವಾಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಅವರ ಮೂರನೇ ಪತ್ನಿ ನಗ್ಮಾ ಎಂಬವರು ದಾಖಲಿಸಿದ್ದಾರೆ. ಆಗ್ರಾದ ಮಂಟೋಲಾ ಪೊಲೀಸ್ ಠಾಣೆಯಲ್ಲಿ ನಗ್ಮಾ ಅವರು ಮುಸ್ಲಿಂ ಮಹಿಳೆಯರ ಸೆಕ್ಷನ್ 3 (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ … Continued

ಕರ್ನಾಟಕದಲ್ಲಿ ಬಹುದೊಡ್ಡ ರಾಜಕೀಯ ವ್ಯಾಕ್ಯೂಮ್‌ ಇದೆ… ಆಮ್‌ ಆದ್ಮಿ ಪಾರ್ಟಿ ಆ ವ್ಯಾಕ್ಯೂಮ್‌ ತುಂಬುತ್ತದೆ

ಸಂದರ್ಶನ: ರಘುಪತಿ ಯಾಜಿ ಹುಬ್ಬಳ್ಳಿ : ಕರ್ನಾಟಕದಲ್ಲಿ ರಾಜಕೀಯ ವಾಕ್ಯೂಮ್‌ ಇದೆ.ಇಲ್ಲಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆಯೇ ಹೊರತು ಆಡಳಿತಕ್ಕಾಗಿ ರಾಜಕಾರಣ ನಡೆಯುತ್ತಿಲ್ಲ. ಇದು ಜನರಿಗೂ ಗೊತ್ತಿದೆ. ಆದರೆ ಅವರ ಮುಂದೆ ಪರ್ಯಾಯ ಆಯ್ಕೆಗಳಿಲ್ಲ. ಈ ವ್ಯಾಕ್ಯೂಮ್‌ (ಜಾಗ) ತುಂಬಲೇ ಬೇಕಿದೆ. ಇಲ್ಲದಿದ್ದರೆ ಇಲ್ಲಿ ಕೇವಲ ಅಧಿಕಾರ (ಪವರ್‌) ನಡೆಯುತ್ತದೆಯೇ ಹೊರತು ಆಡಳಿತ (ಅಡ್ಮಿನಿಸ್ಟ್ರೇಶನ್‌) ನಡೆಯುವುದಿಲ್ಲ. … Continued

ಸಂಸದನಾಗಿ ಉಳಿಯುತ್ತೇನೆ: ನಡ್ಡಾ ಭೇಟಿ ನಂತರ ನಿರ್ಧಾರ ಬದಲಿಸಿದ ಬಾಬುಲ್ ಸುಪ್ರಿಯೊ

ದೆಹಲಿ: ರಾಜಕೀಯ ಮತ್ತು ಸಂಸದ ಸ್ಥಾನವನ್ನು ತೊರೆಯುವ ನಿರ್ಧಾರವನ್ನು ಘೋಷಿಸಿದ ಒಂದು ದಿನದ ನಂತರ ಕೇಂದ್ರ ಮಾಜಿ ಸಚಿವ ಬಾಬುಲ್ ಸುಪ್ರಿಯೊ ಈಗ ಮರುಚಿಂತನೆ ನಡೆಸಿದ್ದಾರೆ. ಬಾಲಿವುಡ್-ಗಾಯಕ-ರಾಜಕಾರಣಿಯಾಗಿರುವ ಬಾಬುಲ್ ಸುಪ್ರಿಯೊ ರಾಜಕೀಯವಾಗಿ ಸಕ್ರಿಯರಾಗದೆ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಮುಂದುವರಿಸುವುದಾಗಿ ಸೋಮವಾರ ಹೇಳಿದ್ದಾರೆ. ಸೋಮವಾರ ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ನಂತರ ಸುಪ್ರಿಯೋ … Continued

ಸಚಿವರು, ಡಿಸಿಎಂ ಬಗ್ಗೆ ಇಂದು ಸಂಜೆ ಗೊತ್ತಾಗಲಿದೆ, ವರಿಷ್ಠರ ತೀರ್ಮಾನ ಅಂತಿಮ: ಬೊಮ್ಮಾಯಿ

ನವದೆಹಲಿ: ರಾಜ್ಯ ಸಚಿವ ಸಂಪುಟ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಚರ್ಚೆ ನಡೆಸಿದ್ದೇನೆ. ಬಿಜೆಪಿ ಅಧ್ಯಕ್ಷರು ಕೆಲವಷ್ಟು ಸಲಹೆ ನೀಡಿದ್ದಾರೆ. ಹೈಕಮಾಂಡ್‌ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ. ಮಂಗಳವಾರ (ಆಗಸ್ಟ್ 3) ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿ ಜೆಪಿ ನಡ್ಡಾ ನಿವಾಸದ … Continued

ಉತ್ತರ ಕನ್ನಡ ಜಿಲ್ಲೆ ಅತಿವೃಷ್ಟಿ-ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ದೇಶಪಾಂಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ,ಬೆಳೆಗಳು, ಮನೆಗಳು ಮತ್ತು ಜೀವ ಹಾನಿಯಾಗಿದ್ದರೂ ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅತಿವೃಷ್ಠಿಯಲ್ಲಿ ಹಾನಿಗೊಳಗಾದ ತಾಲೂಕಿನ ಹಲವು ಭಾಗಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ದಿನಗಳಿಂದ ಹಾನಿಗೊಳಗಾದ … Continued