ವಿಪಕ್ಷಗಳ ಸಭಾತ್ಯಾಗದ ನಡುವೆ ಪರಿಷತ್ತಿನಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು: ಗ್ರಾಮ ಪಂಚಾಯತ, ತಾಲ್ಲೂಕು ಹಗೂ, ಜಿಲ್ಲಾ ಪಂಚಾಯತ ಕ್ಷೇತ್ರಗಳ ಮೀಸಲಾತಿ ನಿಗದಿ ಹಾಗೂ ಕ್ಷೇತ್ರ ವಿಂಗಡಣೆ ಅಧಿಕಾರವನ್ನು ರಾಜ್ಯ ಚುನಾವಣೆ ಆಯೋಗದಿಂದ ಹಿಂಪಡೆದು, ರಾಜ್ಯ ಸರ್ಕಾರ ತನ್ನಲ್ಲೇ ಉಳಿಸಿಕೊಳ್ಳುವ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಜೆಡಿಸ್‌ ಸದಸ್ಯರ ಸಭಾತ್ಯಾಗದ ನಡುವೆ ಅಂಗೀಕಾರ ದೊರೆಯಿತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ … Continued

ಪ್ರಧಾನಿ ಮೋದಿ 71 ನೇ ಜನ್ಮದಿನ: ಅವರ ಬಗ್ಗೆ ಕಡಿಮೆ ತಿಳಿದಿರುವ ಕೆಲವು ಸಂಗತಿಗಳು..

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 71 ನೇ ವರ್ಷಕ್ಕೆ ಕಾಲಿಟ್ಟರು. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಭವ್ಯ ಆಚರಣೆಯನ್ನು ಯೋಜಿಸಿದೆ. ಬಿಜೆಪಿಯ ಯೋಜನೆಗಳಲ್ಲಿ ದೇಶಾದ್ಯಂತ ಕೋವಿಡ್ -19 ಲಸಿಕೆ ಶಿಬಿರಗಳು, ನೈರ್ಮಲ್ಯ ಅಭಿಯಾನಗಳು ಮತ್ತು ರಕ್ತದಾನ ಶಿಬಿರಗಳು ಸೇರಿವೆ. ಗುಜರಾತ್ ಮುಖ್ಯಮಂತ್ರಿಯಾಗಿ ಅವರ 12 ವರ್ಷಗಳ ಅವಧಿಯ ಕೊನೆಯ ಭಾಗದಲ್ಲಿ, ನರೇಂದ್ರ … Continued

ಪಾಕ್ ಗೆ ಮುಖಭಂಗ..:ಭದ್ರತಾ ಕಾರಣದಿಂದ ಪಂದ್ಯ ಆರಂಭಕ್ಕೆ ಕೆಲವು ನಿಮಿಷಗಳಿರುವಾಗ ಕ್ರಿಕೆಟ್ ಸರಣಿಯನ್ನೇ ರದ್ದು ಮಾಡಿದ ಕಿವೀಸ್..!

ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್​ ಪ್ರಪಂಚದ ಮುಂದೆ ತಲೆ ಬಾಗಬೇಕಾದ ಪ್ರಸಂಗ ಎದುರಾಗಿದೆ. 18 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಪಂದ್ಯಾರಂಭಕ್ಕೂ ಮೊದಲೇ ಸರಣಿಯನ್ನೇ ರದ್ದು ಮಾಡಿದೆ. ಭದ್ರತಾ ಕಾರಣಗಳಿಗಾಗಿ ಸರಣಿ ರದ್ದಾಗಿದೆ ಎಂದು ವರದಿಗಳು ತಿಳಿಸಿವೆ. ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೆ … Continued

ಯು ಟ್ಯೂಬಿನಿಂದ ತಿಂಗಳಿಗೆ 4 ಲಕ್ಷ ಸಂಪಾದಿಸ್ತಿದ್ದಾರೆ ಸಚಿವ ಗಡ್ಕರಿ !

ನವದೆಹಲಿ: ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯು-ಟ್ಯೂಬ್ ನಿಂದ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಹಣ ಗಳಿಸುತ್ತಿದ್ದಾರೆ. ಇಂತಹದ್ದೊಂದು ಅಚ್ಚರಿ ವಿಷಯವನ್ನು ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ಕೊರೋನಾ ಸಮಯದಲ್ಲಿ ನಾನು ಎರಡು ಕೆಲಸ ಮಾಡಿದೆ. ಮನೆಯಲ್ಲೇ ಅಡುಗೆ ಮಾಡುವುದು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆನ್ ಲೈನ್‌ನಲ್ಲಿ … Continued

ಅತಿರೇಕದ ಘಟನೆ…ಚಡ್ಡಿ ಧರಿಸಿ ಬಂದ 19 ವರ್ಷದ ಹುಡುಗಿಯ ಕಾಲಿಗೆ ಕರ್ಟನ್‌ ಬಟ್ಟೆ ಸುತ್ತಿಸಿ ಪರೀಕ್ಷೆ ಬರೆಸಿದರು..!

ತೇಜ್ಪುರ(ಅಸ್ಸಾಂ): ಪ್ರವೇಶ ಪರೀಕ್ಷೆ ಬರೆಯಲು ಚಡ್ಡಿಧರಿಸಿ ಬಂದ 19 ವರ್ಷದ ವಿದ್ಯಾರ್ಥಿನಿಗೆ ಆಕೆಯ ಕಾಲುಗಳಿಗೆ ಪರದೆ (curtain) ಬಟ್ಟೆ ಸುತ್ತಿ ಪರೀಕ್ಷೆ ಬರೆಯುವಂತೆ ಮಾಡಿದ ಘಟನೆ ಅಸ್ಸಾಂನ ತೇಜ್ ಪುರ ಪಟ್ಟಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅಸ್ಸಾಂನಾದ್ಯಂತ ಜನರನ್ನು ದಿಗ್ಭ್ರಮೆಗೊಳಿಸಿದ ಒಂದು ಅತಿರೇಕದ ಘಟನೆಯಲ್ಲಿ, 19 ವರ್ಷದ ಹುಡುಗಿಗೆ ಶಾರ್ಟ್ಸ್ ಧರಿಸಿದ್ದಕ್ಕಾಗಿ ಪರೀಕ್ಷಾ ಕೇಂದ್ರದ ಅಧಿಕಾರಿಗಳು … Continued

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ‌ ಸೆಲ್, ಬಜೆಟ್ಟಿನಲ್ಲಿ ಕೆಕೆಆರಡಿಬಿಗೆ ಮೂರು ಸಾವಿರ ಕೋಟಿ ಅನುದಾನ :ಸಿಎಂ ಬೊಮ್ಮಾಯಿ ಘೋಷಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ‌ನಗರದ ಡಿ.ಎ.ಆರ್‌. ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಲ್ಯಾಣ ಕನಾ೯ಟಕ ಅಭಿವೃದ್ಧಿ ಮಂಡಳಿಗೆ ಮುಂದಿನ ಬಜೆಟ್ಟಿನಲ್ಲಿ 3 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ಅವರು ಘೋಷಿಸಿದರು. ಕೆಕೆಆರ್​ಡಿಬಿಗೆ (Kalyana Karnataka Region … Continued

ಹಸಿವು- ದೇಶದಿಂದ ಪಲಾಯನ ಮಾಡಲು ಕಾಬೂಲ್ ಬಜಾರ್‌ಗಳಲ್ಲಿ ಸಿಕ್ಕಿದ ಬೆಲೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅಫ್ಘನ್ನರು..!

ಕಾಬೂಲ್‌: ಅಫ್ಘಾನಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ನಿರುದ್ಯೋಗ ಮತ್ತು ತೀವ್ರ ಬಡತನ ಎದುರಿಸುತ್ತಿರುವ ಜನರು ಜೀವನ ನಿರ್ವಹಣೆಗಾಗಿ ಬೀದಿಗಿಳಿದು ತಮ್ಮ ಬೆಲೆಬಾಳುವ ವಸ್ತುಗಳನ್ನು ಮಾರುತ್ತಿದ್ದಾರೆ. ಮೊದಲು ಸರ್ಕಾರಿ ಉದ್ಯೋಗ ವಲಯ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಅಫ್ಘಾನಿಸ್ತಾನವನ್ನು ಒಂದು ರಾತ್ರಿಯಲ್ಲಿ ನಿರುದ್ಯೋಗಿಗಳನ್ನಾಗಿ ಮಾಡಲಾಗಿದೆ. ಟೊಲೊ ನ್ಯೂಸ್‌ನ ವರದಿಯ ಪ್ರಕಾರ, ಅಫಘಾನಿಗಳು ಈಗ ಕಾಬೂಲ್‌ನಲ್ಲಿ … Continued

56 ನಗರ ಸ್ಥಳೀಯ ಸಂಸ್ಥೆಗಳಿಗೆ 2 ತಿಂಗಳಲ್ಲಿ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿ: ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಬೆಂಗಳೂರು: ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ. ಅವಧಿ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ … Continued

2035 ಕಡಲ ಚಿಪ್ಪುಗಳೊಂದಿಗೆ ಮರಳು ಶಿಲ್ಪ ರಚಿಸಿ ಪ್ರಧಾನಿ ಮೋದಿಗೆ 71ನೇ ಜನ್ಮದಿನದ ಶುಭಾಶಯ ಹೇಳಿದ ಕಲಾವಿದ ಸುದರ್ಶನ್ ಪಟ್ನಾಯಕ್ .. ವೀಕ್ಷಿಸಿ

ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸೆಪ್ಟೆಂಬರ್ 17 ರಂದು ಪುರಿ ಕಡಲತೀರದಲ್ಲಿ ಅದ್ಭುತವಾದ ಮರಳು ಶಿಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ಮೋದಿಯವರ ಗೌರವಾರ್ಥವಾಗಿ ಮಾಡಿದ ಶಿಲ್ಪದ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕಳುಹಿಸಿದ್ದಾರೆ. ಮರಳು ಕಲೆಯಿಂದ … Continued

ಬೆಂಗಳೂರು; ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಗುಂಡು ಹಾರಿಸಿಕೊಂಡು ಮೃತಪಟ್ಟ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನ ಶವ ನಗರದಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ನಗರದ ಸಂಜಯನಗರ ಮುಖ್ಯ ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತ ವಿದ್ಯಾರ್ಥಿಯನ್ನು ರಾಹುಲ್ ಭಂಡಾರಿ (17) ಎಂದು ಗುರುತಿಸಲಾಗಿದೆ. ರಾಹುಲ್ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗಿದೆ. … Continued