ಹಂಪಿಯಲ್ಲಿ ಹೆಲಿ ಟೂರಿಸಂಗೆ ಅವಕಾಶ: ಸಿಎಂ ಬೊಮ್ಮಾಯಿ

ಹೊಸಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಜಯನಗರ ಜಿಲ್ಲೆಯಲ್ಲಿ ಮಹತ್ವದ ಪಾರಂಪರಿಕ ಪ್ರವಾಸೀ ಸ್ಥಳಗಳ ಅಭಿವೃದ್ಧಿಗಾಗಿ 643 ಕೋಟಿ ರೂ.ಗಳ ವಿಶೇಷ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಅವರು ಅಕ್ಟೋಬರ್‌ 2ರಂದು ಹೊಸಪೇಟೆ ಕೇಂದ್ರ ಸ್ಥಾನವಾಗಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯ ಉದ್ಘಾಟನೆ ನೆರವೇರಿಸಿ … Continued

ಲಡಾಕಿನ ಲೇಹದಲ್ಲಿ ಜಗತ್ತಿನ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜದ ಅನಾವರಣ

ನವದೆಹಲಿ: ಖಾದಿ ಬಟ್ಟೆಯಲ್ಲಿ ರಚಿಸಲಾದ ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನವಾದ ಅಕ್ಟೋಬರ್‌ 2ರಂದು ಲಡಾಕಿನ ಲೇಹದಲ್ಲಿ ಅನಾವರಣಗೊಳಿಸಲಾಯಿತು. ಲಡಾಕ್ ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ನೂತನ ರಾಷ್ಟಧ್ವಜವನ್ನು ಅರಳಿಸಿದರು. 225 ಅಡಿ ಉದ್ದ ಹಾಗೂ 150 ಅಡಿ ಅಗಲದ ಈ ತ್ರಿವರ್ಣ ಧ್ವಜವು 1 ಸಾವಿರ ಕೆ.ಜಿ. ಭಾರವಿದೆ. … Continued

ವಿಜಯಪುರ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಮೂರು ಬಾರಿ ಕಂಪಿಸಿದ ಭೂಮಿ..!

ವಿಜಯಪುರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ಸಂಭಿಸಿರುವುದು ದಾಖಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆಲಮಟ್ಟಿ ಹಾಗೂ ಕಲಬುರಗಿಯಲ್ಲಿರುವ ರಿಕ್ಟರ್ ಮಾಪಕದಲ್ಲಿ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದ ಬಗ್ಗೆ ದಾಖಲಾಗಿದೆ. ಅಲ್ಲದೇ ಸದರಿ ಸಂಭವಿಸಿದ ಭೂಕಂಪನ ಅಪಾಯಕಾರಿ ಅಲ್ಲದ ಕಾರಣ ಜಿಲ್ಲೆಯ ಜನರು … Continued

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಐಪಿ ಲಾಂಜ್‌ನಲ್ಲಿ ಜ್ಯೂಸ್ ಕುಡಿದು ಆಹಾರ ತಿಂದು ಎಂಜಾಯ್‌ ಮಾಡಿದ ಮಂಗಣ್ಣ..ವೀಕ್ಷಿಸಿ

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್ ನಲ್ಲಿ ಮಂಗವೊಂದರ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡಿದೆ. ವಿಮಾನ ನಿಲ್ದಾಣದಲ್ಲಿ ಜ್ಯೂಸ್ ಮಂಗ ಹೊರಡುವ ಮುನ್ನ ಕೌಂಟರ್ ನಿಂದ ಆಹಾರ ಸಹ ಸೇವನೆ ಮಾಡಿದೆ. ವಿಡಿಯೊದಲ್ಲಿ, ಕೋತಿಯು ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿರುವ ಬಾರ್ ಕೌಂಟರ್‌ನಲ್ಲಿ ಹಣ್ಣಿನ ರಸವನ್ನು ಕುಡಿಯುತ್ತಿರುವುದು ಕಂಡುಬಂದಿದೆ. ಸ್ವಲ್ಪ ಆಹಾರ … Continued

ಕರ್ನಾಟಕದಲ್ಲಿ ಶನಿವಾರ 636 ಹೊಸ ಕೋವಿಡ್‌ ಸೋಂಕು ದೃಢ, 4 ಸಾವು

ಬೆಂಗಳೂರು:ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 636 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 4 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 745 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,77,225ಕ್ಕೆ ಏರಿಕೆಯಾಗಿದೆ ಹಾಗೂ ಚೇತರಿಸಿಕೊಂಡವರ ಸಂಖ್ಯೆ 29,27,029 ಕ್ಕೆ ಹೆಚ್ಚಳವಾಗಿದೆ. 12,356 ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,811ಕ್ಕೆ ಏರಿಕೆಯಾಗಿದೆ. ಎಂದು … Continued

ಹೊಸಪೇಟೆಯಲ್ಲಿ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದ್ಘಾಟನೆ

ಹೊಸಪೇಟೆ: ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆರು ತಾಲೂಕುಗಳನ್ನೊಳಗೊಂಡ ನೂತನ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಈ ಮೊದಲು ಬಳ್ಳಾರಿಗೆ ಸೇರಿದ್ದ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ವಿಜಯನಗರ ನೂತನ ಜಿಲ್ಲೆಯಲ್ಲಿ … Continued

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ: ಅಕ್ಟೋಬರ್‌ 3ರಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ನವದೆಹಲಿ : ಪಂಜಾಬ್​, ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ನಾಳೆಯಿಂದಲೇ ಭತ್ತ (Paddy) ಖರೀದಿಗೆ ಗ್ರೀನ್​ ಸಿಗ್ನಲ್ ನೀಡಿದೆ. ಭತ್ತ ಹಾಗೂ ರಾಗಿ ಖರೀದಿಗೆ ಅಕ್ಟೋಬರ್​ 11ರಿಂದ ಚಾಲನೆ ನೀಡಲಾಗುತ್ತದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ, ಪಂಜಾಬ್​ ಹಾಗೂ ಹರಿಯಾಣದಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆಗೆ … Continued

ಆಗಸ್ಟ್‌ ತಿಂಗಳಲ್ಲೇ ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ನಿಷೇಧಿಸಿದ ವಾಟ್ಸಾಪ್‌..!

ನವದೆಹಲಿ: ‌ಹೊಸ ಐಟಿ ನಿಯಮ ಜಾರಿಯಾದ ಬೆನ್ನಲ್ಲೇ ಭಾರತೀಯರ 20 ಲಕ್ಷ ಫೋನ್ ನಂಬರ್ ಗಳನ್ನು ವಾಟ್ಸಾಪ್‌ ನಿಷೇಧಿಸಿದೆ. ಸುಳ್ಳು ಸುದ್ದಿ, ನಕಲಿ ವಿಡಿಯೋ ಗಳನ್ನು ಹರಿಬಿಟ್ಟಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಗೊಳಿಸಲಾಗಿದೆ. ಆ ಬಳಿಕ ದೇಶದಲ್ಲಿರುವ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು … Continued

ಸಂಬಂಧ ಸಾಬೀತಿಗೆ ಇತರೆ ಸಾಕ್ಷ್ಯಗಳಿದ್ದರೆ ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಆದೇಶಿಸುವಂತಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ನ್ಯಾಯಾಲಯಗಳು ಯಾವುದೇ ವ್ಯಕ್ತಿಯನ್ನು ಡಿಎನ್‌ಎ ಪರೀಕ್ಷೆಗೆ ಯಾಂತ್ರಿಕವಾಗಿ ಆದೇಶಿಸಬಾರದು. ಮಹತ್ವವಿರುವ ಅರ್ಹ ಪ್ರಕರಣಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ಉಭಯ ಪಕ್ಷಕಾರರ ಹಿತಾಸಕ್ತಿಯಲ್ಲಿ ಸಮತೋಲನ ಸಾಧಿಸಿದ ನಂತರವಷ್ಟೇ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯನ್ನು ಬಳಸಬೇಕು ಹಾಗೂ ನ್ಯಾಯಯುತ ನಿರ್ಧಾರಕ್ಕಾಗಿ ಡಿಎನ್‌ಎ ಪರೀಕ್ಷೆಯ ಅಗತ್ಯವಿದೆಯೇ ಎಂದು … Continued

ಉಪಚುನಾವಣೆಗೆ ಮೊದಲು ಲೋಕ ಜನಶಕ್ತಿ ಪಕ್ಷದ ಚಿಹ್ನೆ ಸ್ಥಗಿತಗೊಳಿಸಿದ ಚುನಾವಣಾ ಆಯೋಗ

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಲೋಕಜನ ಶಕ್ತಿ ಪಕ್ಷದ ಸಂಸ್ಥಾಪಕ ರಾಮವಿಲಾಸ ಪಾಸ್ವಾನ್‌ ಪುತ್ರ ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿ ಪರಾಸ್ ನಡುವಿನ ರಾಜಕೀಯ ದ್ವೇಷದಿಂದಾಗಿ ಈ ತಿಂಗಳ ಕೊನೆಯಲ್ಲಿ ಬಿಹಾರದ ಎರಡು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮೊದಲು ಚುನಾವಣಾ ಆಯೋಗವು ಲೋಕ ಜನಶಕ್ತಿ ಪಕ್ಷದ ಹೆಸರು ಮತ್ತು … Continued