ಕುಮಟಾ; ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ವಚ್ಛತೆ -ಕರ್ತವ್ಯ ಮಾಸಾಚರಣೆಗೆ ಚಾಲನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಚ್ಛತಾ ಮಾಸಾಚರಣೆಗೆ ಪ್ರಾಚಾರ್ಯ ಡಾ. ಎಸ್.ವಿ.ಶೇಣ್ವಿ ಚಾಲನೆ ಶನಿವಾರ ನೀಡಿದರು ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. .ಮಹಾತ್ಮ ಗಾಂಧೀಜಿ ಮತ್ತು ಲಾಲಬಹುದ್ದೂರ ಶಾಸ್ತ್ರಿಗಳ ಜನ್ಮ ದಿನಾಚರಣೆ ನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಸ್ವಚ್ಚತೆ ಮತ್ತು ಕರ್ತವ್ಯ ಮಾಸಾಚರಣೆಯನ್ನು ವೈಶಿಷ್ಟ್ಯವಾಗಿ ಆಚರಿಸಲು ನಿರ್ದರಿಸಿದ್ದೇವೆ. ಸ್ವತಂತ್ರ ಭಾರತದ ೭೬ ನೇ … Continued

ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡುವವರಿಂದ ಭಾರತಕ್ಕೆ ಅವಮಾನ : ಬಿಜೆಪಿ ಸಂಸದ ವರುಣ್ ಗಾಂಧಿ

ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥವರು ಬೇಜವಾಬ್ದಾರಿಯಿಂದ ಇಡೀ ದೇಶ ನಾಚಿಕೆಪಡುವಂತೆ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆದರೆ ಮಹಾತ್ಮ ಗಾಂಧಿ ತಮ್ಮ ಅಸ್ತಿತ್ವದ ಮೂಲಕ … Continued

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು: ಎರಡು ಗೊರಿಲ್ಲಾ, ನಾಲ್ಕು ಒರಾಂಗುಟಾನ್ ಆಗಮನ..!

ಮೈಸೂರು: ವನ್ಯಜೀವಿ ಸಪ್ತಾಹದ ವಿಶೇಷ ದಿನದಂದೇ ಜರ್ಮನಿ, ಸಿಂಗಪುರ ಹಾಗೂ ಮಲೇಶಿಯಾದಿಂದ ಒಟ್ಟು ಆರು ಗೋರಿಲ್ಲಾಗಳು ಮೈಸೂರು ಮೃಗಾಲಯಕ್ಕೆ ಬಂದಿಳಿದಿವೆ. ಜರ್ಮನಿಯಿಂದ ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಕೊಡುಗೆಯಾಗಿ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವ ಬಿಡಾರದ ವ್ಯವಸ್ಥೆಯನ್ನು ಇನ್ಫೋಸಿಸ್‌ ಮಾಡಿಕೊಟ್ಟಿದೆ. ಮಲೇಶಿಯಾ ಹಾಗೂ ಸಿಂಗಪುರದಿಂದ ತಲಾ 2 ಒರಾಂಗುಟಾನ್ … Continued

ಮದುವೆಯಾದ 4 ವರ್ಷಗಳ ವಿಚ್ಛೇದನ ಘೋಷಿಸಿದ ಟಾಲಿವುಡ್ ಸ್ಟಾರ್​ ಜೋಡಿ ಸಮಂತಾ-ನಾಗ ಚೈತನ್ಯ ಅಕ್ಕಿನೇನಿ…!

ಸಾಕಷ್ಟು ಊಹಾಪೋಹಗಳ ನಂತರ ಟಾಲಿವುಡ್​ನ ಸ್ಟಾರ್​ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ವಿಚ್ಛೇದನ ಪಡೆದು ಬೇರೆಯಾಗಲು ನಿರ್ಧರಿಸಿದ್ದಾರೆ. ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬವದಂತಿಗಳು ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ … Continued

ಗಾಂಧಿ ಜಯಂತಿಯಂದು ಜಲ ಜೀವನ ಮಿಷನ್ ಆಪ್ ಬಿಡುಗಡೆ, ಈ ಮಿಷನ್ ಜಾರಿಯಿಂದ 5 ಕೋಟಿ ಮನೆಗಳಿಗೆ ನೀರು-ಮೋದಿ

ನವದೆಹಲಿ: ಮಹಾತ್ಮ ಗಾಂಧಿಯವರ 152 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಜಲ ಜೀವನ ಮಿಷನ್ ಆಪ್ ಬಿಡುಗಡೆ ಮಾಡಿದರು. ಹಾಗೂ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ (ವಿಡಬ್ಲ್ಯೂಎಸ್ಸಿ) ಸಂವಾದ ನಡೆಸಿದರು. ಜನರಲ್ಲಿ ಅರಿವು ಹೆಚ್ಚಿಸಲು ಮತ್ತು ಹೆಚ್ಚಿನ ಪಾರದರ್ಶಕತೆ ಮತ್ತು ಮಿಷನ್ … Continued

ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸಿದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಪಂಜಾಬ್ ಸಿಎಂ ಆದೇಶ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ರೈಲ್ವೇ ಹಳಿಗಳ ಮೇಲೆ ಧರಣಿ ಕುಳಿತಿದ್ದ ರೈತರ ಸಂಘಟನೆಗಳ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಸೂಚಿಸಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌ಗೆ) ಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಚನ್ನಿ ಆರ್‌ಪಿಎಫ್ ಅಧ್ಯಕ್ಷರಿಗೆ ಆದೇಶವನ್ನು ತಕ್ಷಣ ಪಾಲಿಸುವಂತೆ ಮತ್ತು ಪ್ರತಿಭಟನಾ ನಿರತ ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು … Continued

ಶಂಕಿತ ರೇಬಿಸ್​ಗೆ ಪಿಯುಸಿ ವಿದ್ಯಾರ್ಥಿನಿ ಸಾವು

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಶಂಕಿತ ರೇಬಿಸ್​ಗೆ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಡಬದ ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿನಿ ವಿನ್ಸಿ ಸಾರಮ್ಮ(17) ಮೃತ ವಿದ್ಯಾರ್ಥಿನಿ. ಆಲಂಕಾರು ಗ್ರಾಮದ ಕೆದಿಲ ನಿವಾಸಿ ವಿನ್ಸಿ ಸಾರಮ್ಮ, ವಿಪರೀತ ತಲೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ … Continued

ವಿಚಿತ್ರ ವದಂತಿಯಿಂದ ಬಿಹಾರದಲ್ಲಿ ದಿಢೀರ್‌ ಭಾರೀ ಹೆಚ್ಚಳ ಕಂಡ ಪಾರ್ಲೆ-ಜಿ ಬಿಸ್ಕತ್ ಮಾರಾಟ:ಅಂಗಡಿಗಳ ಮುಂದೆ ಕ್ಯೂ, ಕಾಳಸಂತೆಯಲ್ಲೂ ಮಾರಾಟ..!

ಪಾಟ್ನಾ: ಬಿಹಾರದಲ್ಲಿ ವದಂತಿಗಳು ಯಾವಾಗಲೂ ಕಾಳ್ಗಿಚ್ಚಿನಂತೆ ಹರಡುತ್ತವೆ. ಇತ್ತೀಚಿನ ವದಂತಿಯು ಜ್ಯೂತಿಯಾ ಹಬ್ಬಕ್ಕೆ (Jeutiya festival) ಸಂಬಂಧಿಸಿದೆ. ಇದರಲ್ಲಿ ಮಕ್ಕಳು (ಪುರುಷರು) ಜ್ಯೂತಿಯಾದ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನದಿದ್ದರೆ, ಭವಿಷ್ಯದಲ್ಲಿ ಅವರು ಅಹಿತಕರ ಘಟನೆಗಳನ್ನು ಎದುರಿಸಬೇಕಾಗಬಹುದು ಎಂಬ ವದಂತಿ ಹರಡಿದೆ. ಬಾಯಿಂದ ಬಾಯಿಗೆ ಹಬ್ಬಿದ ಈ ವದಂತಿ ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್‌ ಎಷ್ಟು ಹೆಚ್ಚಿಸಿದೆಯೆಂದರೆ ಈಗ ಈ … Continued

ಕುಮಟಾ: ಸ್ಟೇರಿಂಗ್‌ ಲಾಕ್‌ ಆಗಿ ಉರುಳಿದ ಟಿಪ್ಪರ್‌, ಪವಾಡ ಸದೃಶ ಪಾರಾದ ಮೂವರು

ಕುಮಟಾ; ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಗಿಬ್‌ ಹೈಸ್ಕೂಲ್ ಸಮೀಪ ಚಲಿಸುತ್ತಿದ್ದ ಟಿಪ್ಪರೊಂದು ಸ್ಟೇರಿಂಗ್ ಲಾಕಾಗಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸೈಕಲ್ ನಿಲ್ಲಿಸಿ ಮಾತಾಡುತ್ತಿದ್ದ ಇಬ್ಬರು ಉರುಳಿ ಬೀಳುತ್ತಿರುವ ಟಿಪ್ಪರ್ ಅಡಿಯಲ್ಲಿ ಸಿಲುಕಿದ್ದರು. ಆದರೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಉರುಳುತ್ತಿರುವಾಗ ತಕ್ಷಣ ಇಬ್ಬರೂ ಮಲಗಿ ಟಿಪ್ಪರ್ ಉರುಳುತ್ತಿರುವಂತೆ ಅದರ ಚಕ್ರ … Continued

ಲಸಿಕೆ ಪ್ರಮಾಣೀಕರಣದಲ್ಲಿ ಭಾರತದೊಂದಿಗೆ ತೊಡಗಿಸಿಕೊಳ್ಳುತ್ತೇವೆ: ಭಾರತದ ತಿರುಗೇಟಿನ ಕ್ರಮಕ್ಕೆ ಬ್ರಿಟನ್‌ ಪ್ರತಿಕ್ರಿಯೆ

ನವದೆಹಲಿ: ಬ್ರಿಟನ್ನಿನ “ತಾರತಮ್ಯ” ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಕ್ರಮಗಳನ್ನು ಹೇರಿದ ನಂತರ, ಬ್ರಿಟಿಷ್ ಹೈ ಕಮಿಷನ್ ಕೋವಿಡ್ -19 ಲಸಿಕೆ ಪ್ರಮಾಣೀಕರಣದ ಮಾನ್ಯತೆಯನ್ನು ವಿಸ್ತರಿಸಲು ದೇಶವು ನವದೆಹಲಿಯೊಂದಿಗೆ “ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದೆ. ಭಾರತದಲ್ಲಿ ಸಂಬಂಧಿತ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಲಸಿಕೆ ಪಡೆದ ಜನರಿಗೆ ಲಸಿಕೆ ಪ್ರಮಾಣೀಕರಣದ ಬ್ರಿಟನ್ನಿನ ಮಾನ್ಯತೆ ವಿಸ್ತರಿಸಲು ನಾವು … Continued