ವಿಚಿತ್ರವಾದರೂ ಸತ್ಯ: ಕೋವಿಡ್‌ ಲಸಿಕೆ ನೀಡಲು ಮನೆಗೆ ಬಂದ ಆರೋಗ್ಯ ಸಿಬ್ಬಂದಿಗೆ ನಾಗರ ಹಾವು ತೋರಿಸಿ ಹೆದರಿಸಿದ ಮಹಿಳೆ..! ವೀಕ್ಷಿಸಿ

ಅಜ್ಮೇರ್‌: ದೇಶದಲ್ಲಿ ಕೊವಿಡ್​ 19 ಲಸಿಕೆ ಅಭಿಯಾನ (Covid 19 Vaccination) ಅತ್ಯಂತ ವೇಗವಾಗಿ, ಯಶಸ್ವಿಯಾಗಿ ನಡೆಯುತ್ತಿದೆ. ಆದರೂ ಕೆಲವು ಪ್ರದೇಶಗಳ ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅವರ ಮನವೊಲಿಸಿ ಕೊರೊನಾ ಲಸಿಕೆ ಹಾಕುವುದು ಆರೋಗ್ಯ ಸಿಬ್ಬಂದಿ, ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವೊಮ್ಮೆ ಆರೋಗ್ಯ ಸಿಬ್ಬಂದಿಗೆ ಬೆದರಿಕೆ ಹಾಕಿದ , ಹಲ್ಲೆ … Continued

ಸಮುದ್ರದ ಆಳದಲ್ಲಿ ಸ್ಕೂಬಾ ಡೈವರ್‌ನ ಮುದ್ದಾಡಿದ ಸೀಲ್‌: ಮನ ತಟ್ಟುತ್ತದೆ ಈ ವಿಡಿಯೊ

ಮಾನವನಷ್ಟೇ ಅಲ್ಲ, ಪ್ರಾಣಿಗಳಳು ಸಹ ತಮ್ಮ ಪ್ರೀತಿಯನ್ನು ಅಪ್ಪುಗೆಯ ಮೂಲಕ ತೋರಿಸುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸ್ಕೂಬಾ ಡೈವಿಂಗ್‌ ಮಾಡುವ ವೇಳೆಯಲ್ಲಿ ಕಡಲ ಚಿರತೆ( Seal )ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ ಹಿಡಿದು ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದು ಸ್ಕೂಬಾ ಡೈವರ್‌ ಮೇಲೆ ಸೀಲ್‌ನ ಪ್ರೀತಿಗೆ ಸಾಕ್ಷಿಯಂತಿದೆ ಹಾಗೂ ಮನ … Continued

ವಿದ್ಯಾರ್ಥಿಗಳಿಗೆ ಭಾನುವಾರವೂ ತರಗತಿ, 1-5ನೇ ತರಗತಿ ಆರಂಭ:ಎರಡು ದಿನಗಳಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ 1 ರಿಂದ 5ನೇ ತರಗತಿ ಆರಂಭಿಸುವ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೊರೊನಾ ಕಾರಣದಿಂದಾಗಿ ಶಾಲೆ ತಡವಾಗಿ ಆರಂಭವಾಗುತ್ತಿರುವುದರಿಂದ ಶೈಕ್ಷಣಿಕ ಪಠ್ಯಕ್ರಮ ಪೂರ್ತಿಗೊಳಿಸಲು ಶನಿವಾರ, ಭಾನುವಾರವೂ ತರಗತಿ ನಡೆಸಲು ಚಿಂತನೆ ನಡೆದಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ … Continued

ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನೀ ಸಂಗೀತದ ಖ್ಯಾತ ಗಾಯಕ ರಶೀದ್‌ ಖಾನ್‌ಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

ಕೋಲ್ಕತ್ತಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್ ರಶೀದ್ ಖಾನ್ ಗೆ ಕೊಲೆ ಬೆದರಿಕೆ ಮತ್ತು ಸುಲಿಗೆ ಕರೆ ಮಾಡಿದ ಇಬ್ಬರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ಹೊಸದಾಗಿ ಅವರ ಬಳಿ ಸೇರಿಕೊಂಡ ಉದ್ಯೋಗಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆ ಬೆದರಿಕೆ ಹಾಗೂ ಹಣ ಸುಲಿಗೆ … Continued

ತಮಿಳುನಾಡಿನಲ್ಲಿ ನಾಲ್ವರನ್ನು ಕೊಂದಿದ್ದ ಹುಲಿ ಸೆರೆ; ಮೈಸೂರಿಗೆ ಸ್ಥಳಾಂತರ

ಮೈಸೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮದುಮಲೈ ವನ್ಯಧಾಮದಲ್ಲಿ ನಾಲ್ಕು ಜನರನ್ನು ಕೊಂದು ಹಾಕಿದ್ದ 13 ವರ್ಷದ ಗಂಡು ಹುಲಿ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದ್ದು, ಈಗ ಅದನ್ನು ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ತರಲಾಗಿದೆ. 21ನೇ ದಿನ ನಡೆದ ದೀರ್ಘ ಕಾರ್ಯಾಚರಣೆಯಲ್ಲಿ ಹುಲಿಯನ್ನು ಮೊಯಾರ್ ರಸ್ತೆಯ ಬಳಿ ಸೆರೆ ಹಿಡಿಯಲಾಯಿತು. ಶುಕ್ರವಾರ ಮಧ್ಯರಾತ್ರಿ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ … Continued

ಗಡಿಕೇಶ್ವಾರದ ಗ್ರಾಮದಲ್ಲಿ ಮತ್ತೆ ಕಂಪಿಸಿದ ಭೂಮಿ..!

ಕಲಬುರಗಿ: ಕಳೆದ ಕೆಲ ವಾರಗಳಿಂದ ಭೂಕಂಪನದಿಂದಾಗಿಯೇ ಸುದ್ದಿಯಾಗುತ್ತಿರುವ ಗಡಿಕೇಶ್ವಾರದಲ್ಲಿ ಇಂದು (ಶನಿವಾರ( ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮಸ್ಥರ ಪ್ರಕಾರ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ‌ ಇಂದು (ಶನಿವಾರ) ಬೆಳಿಗ್ಗೆ 11.20ರ ಸುಮಾರಿನಲ್ಲಿ ಭೂಮಿಯಿಂದ ಜೋರು ಸದ್ದು ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಕಲಬುರಗಿಯಿಂದ … Continued

ನಾನು ಕಬಡ್ಡಿ ಆಡಿದ್ದು ವಿಡಿಯೊ ಮಾಡಿದವರು ರಾವಣರು: ಸಾದ್ವಿ ಪ್ರಜ್ಞಾ

ಭೋಪಾಲ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿರುವ ಭೋಪಾಲ ಸಂಸದೆ, ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊ ಚಿತ್ರೀಕರಿಸಿ, ಹರಿಬಿಟ್ಟವರನ್ನು ರಾವಣರು ಎಂದು ಹೇಳಿರುವ ಸಂಸದೆ ಪ್ರಜ್ಞಾ, ಹಾಗೆ ಮಾಡಿದವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು … Continued

ಕಾಂಗ್ರೆಸ್‌ಗೆ ನಾನೇ ಪೂರ್ಣಾವಧಿ ಸಕ್ರಿಯ ಅಧ್ಯಕ್ಷೆ,: ಜಿ- 23 ಗುಂಪಿಗೆ ಕಠಿಣ ಸಂದೇಶ ರವಾನಿಸಿದ ಸೋನಿಯಾ ಗಾಂಧಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಹಾಗೂ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಕುತೂಲಹ ಕೆರಳಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇಂದು (ಶನಿವಾರ) ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಆರಂಭವಾಗಿದೆ. ಕೊರೊನಾದಿಂದ ಒಂದೂವರೆ ವರ್ಷದಿಂದ ನಡೆಯದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) … Continued

ಹಾನಗಲ್‌, ಸಿಂಧಗಿ ಉಪಚುನಾವಣೆ: ಪ್ರಚಾರಕ್ಕೆ ಘಟಾನುಘಟಿ ನಾಯಕರ ಎಂಟ್ರಿ…ರಂಗೇರುತ್ತಿದೆ ಕಣ

ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಕಾವೇರುತ್ತಿದ್ದು, ಪ್ರಚಾರದ ಕಣಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಘಟಾನುಘಟಿ ನಾಯಕರು ಧುಮುಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉಪಚುನಾವಣೆ ಪ್ರತಿಷ್ಠೆಯಾಗಿದ್ದರೆ ಕಾಂಗ್ರೆಸ್ಸಿಗೆ ಇದು ಮುಂದಿನ ಚುನಾವಣೆಗೆ ಸವಾಲಾಗಿದೆ. ಹಾಗೂ ಜೆಡಿಎಸ್‍ಗೆ ಉತ್ತರ ಕರ್ನಾಟಕದಲ್ಲಿ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿಯೇ ಮೂರೂ ಪಕ್ಷಗಳು ಘಟನಾನುಘಟಿ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. … Continued

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯದ ಮೇಲೆ ದಾಳಿ;ದೇಗುಲದ ಸದಸ್ಯನ ಹತ್ಯೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆದ ಇನ್ನೊಂದು ದಾಳಿಯಲ್ಲಿ, 200 ಕ್ಕೂ ಹೆಚ್ಚು ಜನರ ಗುಂಪು ಶುಕ್ರವಾರ ನೋಖಾಲಿ ಪ್ರದೇಶದಲ್ಲಿ ದಸರಾ ಸಂದರ್ಭದಲ್ಲಿ ಇಸ್ಕಾನ್ ದೇವಸ್ಥಾನ ಮತ್ತು ಭಕ್ತರ ಮೇಲೆ ದಾಳಿ ನಡೆಸಿದೆ. ಹಿಂಸಾತ್ಮಕ ದಾಳಿಯಲ್ಲಿ ದೇಗುಲದ ಸದಸ್ಯ ಮೃತಪಟ್ಟಿದ್ದಾನೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೌಮುಹನಿ ಪ್ರದೇಶದಲ್ಲಿ ಶುಕ್ರವಾರ … Continued