ಲೈಂಗಿಕ ದೌರ್ಜನ್ಯದ ಆರೋಪ; ಮಂಗಳೂರಿನ ಖ್ಯಾತ ವಕೀಲರ ವಿರುದ್ಧ ಎಫ್​ಐಆರ್ ದಾಖಲು

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ಕೆ.ಎಸ್‌.ಎನ್‌.ರಾಜೇಶ್ ಭಟ್ ವಿರುದ್ಧ ಇಂಟರ್ನ್‌ಶಿಪ್‌ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ ದಾಖಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ಎಲ್‌ಬಿ ವಿದ್ಯಾರ್ಥಿನಿ ದೂರು ಅಧರಿಸಿ ನಿನ್ನೆ ರಾತ್ರಿ (ಸೋಮವಾರ ರಾತ್ರಿ) ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿನಿಯು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ವಕೀಲರ ವಿರುದ್ಧ ದೂರು ನೀಡಿದ್ದಾರೆ. … Continued

ಭಾರತದಲ್ಲಿ 13,058 ಹೊಸ ಕೋವಿಡ್ ಪ್ರಕರಣಗಳು ದಾಖಲು, 164 ಸೋಂಕಿತರ ಸಾವು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,058 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ಸೋಮವಾರಕ್ಕಿಂತ 4 ಪ್ರತಿಶತ ಕಡಿಮೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಡೇಟಾ ತೋರಿಸಿದೆ. ಈಗ ದೇಶದ ಒಟ್ಟಾರೆ ಕೇಸ್ ಲೋಡ್ 3,40,94,373 ಕ್ಕೆ ಏರಿದೆ.ಕಳೆದ 24 ಗಂಟೆಗಳಲ್ಲಿ ಒಟ್ಟು 19,470 ರೋಗಿಗಳು … Continued

ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಸಬ್ಸಿಡಿ ಏರಿಕೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸಿದೆ. ರೈತರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಿದರೆ ಪರಿಹಾರವಾಗಿ ರಸಗೊಬ್ಬರ ಕಂಪನಿಗಳಿಗೆ ಹೆಚ್ಚುವರಿ ₹ 28,655 ಕೋಟಿ ($ 3.8 ಶತಕೋಟಿ) ಹಣವನ್ನು ಒದಗಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ … Continued

ಆನ್‌ಲೈನ್‌ನಲ್ಲಿ ಬೈಕಾಟ್‌ ಫ್ಯಾಬ್‌ ಟ್ರೆಂಡ್‌ಗಳ ನಂತರ ಜಶ್ನ್-ಇ-ರಿವಾಜ್ ಹೆಸರಿನ ದೀಪಾವಳಿ ಜಾಹೀರಾತು ತೆಗೆದುಹಾಕಿದ ಫ್ಯಾಬಿಂಡಿಯಾ

ನವದೆಹಲಿ: ಬಟ್ಟೆ ಬ್ರಾಂಡ್ ಫ್ಯಾಬಿಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಮಾಡಿದ ನಂತರ ದೀಪಾವಳಿಗೆ ತಮ್ಮ ಹೊಸ ಸಂಗ್ರಹವನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ತೆಗೆದುಹಾಕಿದೆ. ಈ ಬ್ರಾಂಡ್ ಹಿಂದೂ ಹಬ್ಬದ ದೀಪಾವಳಿಯನ್ನು “ಹಾಳುಮಾಡಿದೆ” ಮತ್ತು ಜಶ್ನ್-ಇ-ರಿವಾಜ್ ಎಂದು ಮಾಡಲು ಹೊರಟಿದೆ. ಹಿಂದು ಹಬ್ಬದಲ್ಲಿ ಜಾತ್ಯತೀತತೆ ಮತ್ತು ಮುಸ್ಲಿಂ ಸಿದ್ಧಾಂತಗಳನ್ನು ಅನಗತ್ಯವಾಗಿ ಎತ್ತಿಹಿಡಿದಿರುವುದಕ್ಕೆ ಅನೇಕರು ಬ್ರಾಂಡ್‌ … Continued

ಲಂಡನ್‌: ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ಭಾರತದ ಸೇನೆಗೆ ಚಿನ್ನದ ಪದಕ

ಲಂಡನ್‌: ಲಂಡನ್‌ ಭಾರತದ ಸೈನಿಕರು ಲಂಡನ್‌ನಲ್ಲಿ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ವಿಶ್ವದ ನಾನಾ ಕಡೆಗಳಿಂದ ಬಂದ 96 ತಂಡಗಳ ವಿರುದ್ಧ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ. ವಿವಿಧ ದೇಶಗಳಿಂದ ವಿಶೇಷ ಪಡೆಗಳು ಮತ್ತು ರೆಜಿಮೆಂಟ್‌ಗಳನ್ನು ಪ್ರತಿನಿಧಿಸುವ 96 ತಂಡಗಳು ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ಭಾಗವಹಿಸಲು ಬಂದಿದ್ದವು. ‌ಭಾರತದ 4/5 ಗೂರ್ಖಾ ರೈಫಲ್ಸ್ (frontier force) ಅಕ್ಟೋಬರ್ 13-15ರ … Continued

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದ ಆರ್​ಬಿಐ

ಮುಂಬೈ: ಕೆಲವು ನಿರ್ದೇಶನಗಳನ್ನು ಪಾಲನೆ ಮಾಡದಿದ್ದಕ್ಕಾಗಿ ಅಕ್ಟೋಬರ್ 18ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಒಂದು ಕೋಟಿ ರೂ.ಗಳ ದಂಡ ವಿಧಿಸಿದೆ. ವಾಣಿಜ್ಯ ಬ್ಯಾಂಕ್​ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳ ವಂಚನೆಗಳ ವರ್ಗೀಕರಣ ಮತ್ತು ವರದಿ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರ್‌ಬಿಐ ಹೇಳಿದೆ. ನಿಯಂತ್ರಕ … Continued

ಸ್ನೇಹಿತನ ಕಾಪಾಡಲು ಹೋಗಿ ಇಬ್ಬರು ಯುವಕರು ನೀರು ಪಾಲು

ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ರಾಜೇಶಕುಮಾರ್(26) ಮತ್ತು ಮಧುಕಿರಣ್ (25) ಎಂದು ಗುರುತಿಸಲಾಗಿದೆ. ಇವರು ಹೈದರಾಬಾದ್‌ ಮೂಲದವರಾಗಿದ್ದಾರೆ. ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆಯ ನಂತರ ಮೃತ ದೇಹ ಸಿಕ್ಕಿದೆ. ಪ್ರವಾಸಕ್ಕೆ ಬಂದಿರುವ ನಾಲ್ವರು … Continued

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ: 3 ವರ್ಷಗಳಲ್ಲಿ 3500 ಕೋಟಿ ರೂ. ‌ಬಂಡವಾಳ ಹೂಡಿಕೆ

ದುಬೈ: ಭಾರತ ಹಾಗೂ ‌ ಯುನೈಟೆಡ್ ‌ಅರಬ್ ಯಮಿರೆಟ್ಸ್ ( ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ( GII) ತನ್ನ ಕಚೇರಿಯನ್ನು ರಾಜಧಾನಿ ‌ಬೆಂಗಳೂರಿನಲ್ಲಿ ತೆರೆಯಲು ಮುಂದೆ ‌ಬಂದಿದೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,ಹಾಗೂ ಐಟಿ ಮತ್ತು ಬಿಟಿ ಸಚಿವ … Continued