ನಟ ಪುನೀತ ರಾಜಕುಮಾರ ನಿಧನದ ಸುದ್ದಿ ವರದಿ ಮಾಡಿದ ಬಿಬಿಸಿ

ಸ್ಯಾಂಡಲ್‌ವುಡ್‌ ನಟ, ಪವರ್‌ ಸ್ಟಾರ್‌ ಪುನೀತ ರಾಜಕುಮಾರ ಅವರ ನಿಧನದ ಸುದ್ದಿಯನ್ನು ವಿದೇಶಿ ಮಾಧ್ಯಮಗಳೂ ಪ್ರಸಾರ ಮಾಡಿವೆ. ಖ್ಯಾತ ಸುದ್ದಿವಾಹಿನಿ ಬಿಬಿಸಿ ಪುನೀತ ರಾಜಕುಮಾರ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ಕನ್ನಡ ಚಿತ್ರರಂಗದ ತಾರೆ 29 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮತ್ತು ಅವರ ವೃತ್ತಿಜೀವನದ ಆರಂಭದಲ್ಲಿ “ಅತ್ಯುತ್ತಮ ಬಾಲ ಕಲಾವಿದ” ರಾಷ್ಟ್ರ ಪ್ರಶಸ್ತಿ … Continued

ಕಾಶ್ಮೀರದ ಎಲ್​ಒಸಿ ಬಳಿ ಸ್ಫೋಟದಲ್ಲಿ ಇಬ್ಬರು ಸೈನಿಕರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ-ಸುಂದರ್‌ಬಾನಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗಣಿ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಡೆದ ಗಣಿ ಸ್ಫೋಟದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಮತ್ತು ಸೈನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು … Continued

ಕರ್ನಾಟಕ ಸರ್ಕಾರದಿಂದ ದೀಪಾವಳಿ ಮಾರ್ಗಸೂಚಿ ಬಿಡುಗಡೆ: ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಸರಳವಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮದೊಂದಿಗೆ ಆಚರಿಸುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದು ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಸೂಚಿಗಳನ್ನು ಪಾಲಿಸಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿದ್ದಾರೆ. ನವೆಂಬರ್ 1ರಿಂದ 10ರ ವರೆಗೆ … Continued

ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 347 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕು ಇಳಿಕೆಯಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಂದು ಹೊಸದಾಗಿ 347 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 10 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 255 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,88,041ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ … Continued

ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಜನಸಂಖ್ಯಾ ನೀತಿ ಭಾರತಕ್ಕೆ ಬೇಕು: ದತ್ತಾತ್ರೇಯ ಹೊಸಬಾಳೆ ಪ್ರತಿಪಾದನೆ

ಧಾರವಾಡ: ಪ್ರತಿಯೊಂದು ದೇಶವೂ ಜನಸಂಖ್ಯಾ ನೀತಿಯನ್ನು ಹೊಂದಬೇಕು ಮತ್ತು ಅದು ಸಮಾಜದ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದರು. ಧಾರವಾಡದ ಗರಗ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯ ಅಂತಿಮ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲಗಳ … Continued

ಸೂಪರ್‌ ಸ್ಟಾರ್‌ ರಜನೀಕಾಂತಗೆ ಕ್ಯಾರೋಟಿಡ್ ಎಂಡಾರೆಕ್ಟಮಿ ಚಿಕಿತ್ಸೆ

ಚೆನ್ನೈ : ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು ಸೂಪರ್‌ ಸ್ಟಾರ್‌ ರಜನೀಕಾಂತ ಅಕ್ಟೋಬರ್ 29, ಶುಕ್ರವಾರದಂದು ಶೀರ್ಷಧಮನಿ ರಿವಾಸ್ಕುಲಲೈಸೇಶನ್‌ (carotid artery revascularization) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆ ತಿಳಿಸಿದೆ. ಕೆಲವು ದಿನಗಳ ನಂತರ ರಜನಿಕಾಂತ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಸ್ಪತ್ರೆಯು ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ರಜನಿಕಾಂತ್ … Continued

ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದ ನದಿ; ಲಕ್ಷಾಂತರ ಮೀನುಗಳು ಸಾವು

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ನದಿಯೇ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ. ಈ ನದಿಯಲ್ಲಿ ಮೀನು ಹಿಡಿದು ತಿನ್ನಬೇಡಿ.. ನದಿ ನೀರು ಕುಡಿಯಬೇಡಿ ಎಂದು ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ನದಿ ನೀರು ಹೀಗಾಗಲು ಇದರಲ್ಲಿ ಭಾರೀ ಪ್ರಮಾಣದ ವಿಷಯುಕ್ತ ಅಂಶ ಕರಗಿದ್ದು (ಟಿಡಿಎಸ್​) ಕಾರಣ … Continued

ಅಪ್ಪನ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ; ಪುನೀತ ರಾಜಕುಮಾರ ತಲೆ ಸವರಿ ಅತ್ತ ಮಗಳು

ಬೆಂಗಳೂರು: ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪುನೀತರಾಜಕುಮಾರ ಅವರ ಹಿರಿಯ ಮಗಳು ಧೃತಿಗೆ ತಂದೆ ಪುನೀತ್‌ ಅವರ ಅಂತಿಮ ದರ್ಶನ ಪಡೆದಿದ್ದಾರೆ. ತಂದೆ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ವಿಮಾನದಲ್ಲಿ 24 ಗಂಟೆಗೂ ಅಧಿಕ ಕಾಲ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ ಅವರು ಸದಾಶಿವ ನಗರ ತಮ್ಮ ನಿವಾಸಕ್ಕೆ ತೆರಳಿ ಅಲ್ಲಿಂದ ಅವರು ಕಂಠೀರವ ಸ್ಟೇಡಿಯಂ ತಲುಪಿದರು. … Continued

ಪಾಕಿಸ್ತಾನ: ಸಿಂಧ್‌ನ ಕೊಟ್ರಿಯಲ್ಲಿ ಅಪರಿಚಿತರಿಂದ ಹಿಂದೂ ದೇವಾಲಯದ ಮೇಲೆ ದಾಳಿ, ಚಿನ್ನಾಭರಣ ದೋಚಿ ಪರಾರಿ

ಇಸ್ಲಾಮಾಬಾದ್: ನವರಾತ್ರಿ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಮಾಡುತ್ತಿದ್ದಾಗಲೇ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದದ್ದು ಚರ್ಚೆಯಾಗುತ್ತಿರುವಾಗಲೇ ಈಗ ಪಾಕಿಸ್ತಾನದಲ್ಲಿಯೂ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೋಟ್ರಿ ಬಳಿ ಇರುವ ದೇವಿಯ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು  ದೇವಾಲಯವನ್ನು ಅಪವಿತ್ರಗೊಳಿಸಿ ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ ಎಂದು … Continued

ಇಂಡೋನೇಷ್ಯಾದಲ್ಲಿ ಮೀನುಗಾರರಿಗೆ ಕಂಡ ಚಿನ್ನದ ದ್ವೀಪ..ಅಲ್ಲಿದೆ ಲಕ್ಷಾಂತರ ಕೋಟಿ ನಿಧಿ.. ಈ ದ್ವೀಪಕ್ಕೆ ಭಾರತದೊಂದಿಗೆ ನಿಕಟ ಸಂಬಂಧ..!

ಇಂಡೋನೇಷ್ಯಾದ ಮೀನುಗಾರರು ಅಂತಿಮವಾಗಿ ಸುಮಾತ್ರದಲ್ಲಿ ಚಿನ್ನದ ಸಂಪತ್ತಿಗೆ ಹೆಸರುವಾಸಿಯಾದ  ಇಂಡೋನೇಷಿಯನ್ ಸಾಮ್ರಾಜ್ಯವನ್ನು ಕೊನೆಗೂ ಕಂಡುಹಿಡಿದರು. ಇದನ್ನು ಚಿನ್ನದ ದ್ವೀಪ ಎಂದೂ ಕರೆಯುತ್ತಾರೆ. ಕಳೆದ ಐದು ವರ್ಷಗಳಿಂದ, ಮೀನುಗಾರರು ಇದನ್ನು ಹುಡುಕುತ್ತಿದ್ದರು – ರತ್ನದ ಕಲ್ಲುಗಳು, ಚಿನ್ನದ ವಿಧ್ಯುಕ್ತ ಉಂಗುರಗಳು, ನಾಣ್ಯಗಳು ಮತ್ತು ಸನ್ಯಾಸಿಗಳ ಕಂಚಿನ ಗಂಟೆಗಳು ಹೀಗೆ ಅನೇಕ ವಸ್ತುಗಳು ಇಲ್ಲಿವೆ. ಮತ್ತು ಇಂಡೋನೇಷ್ಯಾದ ಸುಮಾತ್ರಾ … Continued