ಕರ್ನಾಟಕದಲ್ಲಿ ಇಂದು, ನಾಳೆ ಭಾರಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

posted in: ರಾಜ್ಯ | 0

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ನವೆಂಬರ್ 9ರ ವರೆಗೆ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇದು ಇನ್ನೂ ಎರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ … Continued

ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಭದ್ರತಾ ಸಿಬ್ಬಂದಿಗೆ ತನ್ನ ತಾಪಮಾನ ಪರೀಕ್ಷಿಸಲು ನೆನಪಿಸುವ ಪುಟಾಣಿ ಕರ್ತವ್ಯ ಪ್ರಜ್ಞೆಗೆ ಎಲ್ಲರಿಂದ ಶಹಬ್ಬಾಸ್‌.. ವೀಕ್ಷಿಸಿ

ಕೋವಿಡ್‌-19 ಸಾಂಕ್ರಾಮಿಕವು ಜನರ ಜೀವನ ವಿಧಾನವನ್ನು ಬದಲಾಯಿಸಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು. ನಿಯಮಿತ ತಾಪಮಾನ ತಪಾಸಣೆ, ಪ್ರತಿ ಗಂಟೆಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮತ್ತು ಹೊರಗೆ ಕಾಲಿಟ್ಟಾಗಲೆಲ್ಲಾ ಫೇಸ್ ಮಾಸ್ಕ್ ಧರಿಸುವುದು ಈಗ ಸಾಮಾನ್ಯ ಅಭ್ಯಾಸವಾಗಿದೆ. ಇದು ಹೇಗೆ ನಮ್ಮ ಜೀವನ ಕ್ರಮದಲ್ಲಿ ಅಭ್ಯಾಸವಾಗಿದೆ ಎಂಬುದಕ್ಕೆ ಅಂತರ್ಜಾಲದಲ್ಲಿ ವೈರಲ್ ಆಗಿರುವ … Continued

ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ

posted in: ರಾಜ್ಯ | 0

ಮಂಗಳೂರು: ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ರಾಮಯ್ಯ ಎಂಬುವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿದೆ. ಆಹಾರ ಹುಡುಕುಕೊಂಡು ಬಂದಿದ್ದ ಚಿರತೆ ಕೋಳಿ ಹಿಡಿಯಲು ಹೊಂಚು ಹಾಕಿತ್ತು. ಕೊಳಿ ಹಿಡಿಯಲು ಹಾರಿದ ಚಿರತೆಗೆ ಕೋಳಿ ಸಿಗಲಿಲ್ಲ, ಬದಲಾಗಿ … Continued

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ಸಿನಿಂದ ಡಿಸೆಂಬರಿನಲ್ಲಿ ಪಾದಯಾತ್ರೆ: ಸಿದ್ದರಾಮಯ್ಯ

posted in: ರಾಜ್ಯ | 0

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರ ಮೇಕೆದಾಟುವಿನಿಂದ ಬೆಂಗಳೂರು ವರೆಗೆ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ, ಯೋಜನೆ ಜಾರಿಗೆ ಬೇರೆ ಯಾವ ತಕರಾರು ಇಲ್ಲದ ಕಾರಣ … Continued

2015ರ ನಂತರ ಅತಿ ಹೆಚ್ಚು ಮಳೆ ದಾಖಲಿಸಿದ ಚೆನ್ನೈ ನಗರ, ಅನೇಕ ಪ್ರದೇಶಗಳು ಮುಳುಗಡೆ

ಚೆನ್ನೈ: ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನ ರಾಜಧಾನಿ ಚೆನ್ನೈ ನಗರವು 2015ರ ನಂತರದಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಲೋಕೋಪಯೋಗಿ ಇಲಾಖೆ ಚೆನ್ನೈನ ಚೆಂಬರಂಬಾಕ್ಕಂ ಜಲಾಶಯದ ಶೆಟರ್‌ಗಳನ್ನು ತೆರೆದಿದ್ದು, 500 ಕ್ಯೂಸೆಕ್‌ನಂತೆ ನೀರು ಬಿಡಲಾಗುತ್ತಿದೆ. ಚೆಂಬರಂಬಾಕ್ಕಂನ ಜಲಾನಯನ ಪ್ರದೇಶದಲ್ಲಿ 52 ಮಿಮೀ ಮಳೆಯಾಗಿದ್ದು, ಜಲಾಶಯಕ್ಕೆ 600 ಕ್ಯೂಸೆಕ್‌ನಷ್ಟು ನೀರು ಬರುತ್ತಿದೆ … Continued

ಡ್ರಗ್ಸ್ ಪ್ರಕರಣ: ಎನ್‌ಸಿಬಿ ಎಸ್‌ಐಟಿ ತಂಡದಿಂದ ಆರ್ಯನ್ ಖಾನ್‌ಗೆ ಸಮನ್ಸ್, ಆರೋಗ್ಯ ಕಾರಣ ನೀಡಿ ಗೈರು

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ (ಎನ್‌ಸಿಬಿ) ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಿದೆ ಎಂದು ಕೇಂದ್ರ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆ ಹೇಳಿದೆ. ವರದಿಗಳ ಪ್ರಕಾರ, ಆರ್ಯನ್ ಖಾನ್ ಅವರನ್ನು ಸಂಜೆ 6 ರಿಂದ ರಾತ್ರಿ 8 … Continued

ನ.12ರ ವರೆಗೆ ಅನಿಲ್ ದೇಶ್ಮುಖ್ ಇಡಿ ವಶಕ್ಕೆ ನೀಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಅಕ್ರಮ ಹಣ ವರ್ಗಾವಣೆಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರನ್ನು ನವೆಂಬರ್ ‌12ರ ತನಕ ‌ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಬಾಂಬೆ ಹೈಕೋರ್ಟ್ ನೀಡಿದೆ. ಭಾನುವಾರದ ದಿನವೂ ವಿಚಾರಣೆ ನಡೆಸಿದ ರಜಾಕಾಲದ ಪೀಠ ಅನಿಲ್ ದೇಶ್ ಮುಖ್ ಅವರನ್ನು ಇಡಿ ವಶಕ್ಕೆ ನೀಡಿದೆ. ಗೃಹ‌ಸಚಿವರಾಗಿದ್ದ ಅವಧಿಯಲ್ಲಿ ಅನಿಲ್ ದೇಶ್ … Continued

ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 239 ಜನರಿಗೆ ಕೊರೊನಾ ಸೋಂಕು; ಐವರ ಸಾವು

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಭಾನುವಾರ) ಹೊಸದಾಗಿ 239 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದೇ ವೇಳೆ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ ಹಾಗೂ 322 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 29,89,952 ಕ್ಕೆ ಏರಿಕೆಯಾಗಿದೆ. ಒಟ್ಟು 29,43,809 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿರೆ. ಹಾಗೂ ಒಟ್ಟು 38,112 … Continued

೨೦ ತಿಂಗಳ ನಂತರ ನಾಳೆ ಎಲ್‌ಕೆಜಿ-ಯುಕೆಜಿಗಳಿಗೆ ಪುಟಾಣಿಗಳ ಹೆಜ್ಜೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ (ನವೆಂಬರ್‌ ೮)ಯಿಂದ ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳ ಭೌತಿಕ ತರಗತಿಗಳು ಆರಂಭವಾಗಲಿವೆ. ಸತತ ೨೦ ತಿಂಗಳಿಂದ ಶಾಲೆಯತ್ತ ಮುಖ ಮಾಡದ ಪುಟಾಣಿಗಳು ನಾಳೆಯಿಂದ ಬ್ಯಾಗುಗಳನ್ನು ಹೇರಿಕೊಂಡು ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಎಲ್ಲ ಮಾದರಿಯ ಶಾಲೆಗಳು ಆರಂಭವಾಗುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ … Continued

ಕಲಬುರಗಿ ಪಾಲಿಕೆಯಲ್ಲಿ ಮೇಯರ್- ಉಪಮೇಯರ್ ಚುನಾವಣೆ ನವೆಂಬರ್‌ 20ಕ್ಕೆ ನಿಗದಿ : ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್‌ ಕಿಂಗ್‌ ಆಗುತ್ತದೆಯೋ ಕಿಂಗ್‌ ಮೇಕರೋ..?

posted in: ರಾಜ್ಯ | 0

ಕಲಬುರಗಿ: ಅತಂತ್ರ ಫಲಿತಾಂಶದಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ನವೆಂಬರ್ 20 ಕ್ಕೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 20 ರಂದು ಮಧ್ಯಾಹ್ನ 12.30 ಕ್ಕೆ ಟೌನ್ ಹಾಲ್ ಸಭಾಂಗಣದಲ್ಲಿ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ ಪ್ರಸಾದ … Continued