ಕರ್ನಾಟಕದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್​ ರಾಜ​ಕುಮಾರ್​ಗೆ ಶ್ರದ್ಧಾಂಜಲಿ

ಬೆಂಗಳೂರು: ಇತ್ತೀಚಿಗೆ ನಿಧನರಾದ ಪುನೀತ್​ ರಾಜ್​ಕುಮಾರ್‌ ಸ್ಮರಣಾರ್ಥ ರಾಜ್ಯದ ಎಲ್ಲಾ 650 ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಸಂಜೆ 6 ಗಂಟೆಗೆ ಪುನೀತ್ ರಾಜ್​​ಕುಮಾರ್​​ಗೆ ವಿಶೇಷ ಹಾಡನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಲ್ಲ ಥಿಯೆಟರ್‌ಗಳಲ್ಲಿ ಪ್ರದರ್ಶಕರ ವಲಯ ಮತ್ತು ಥಿಯೇಟರ್ ಸಿಬ್ಬಂದಿ ಪುನೀತ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. … Continued

ಈ ಅಕ್ಟೋಬರ್‌ನಲ್ಲಿ 120 ವರ್ಷಗಳಲ್ಲೇ ಕೇರಳದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ ವರದಿ..!

ತಿರುವನಂತಪುರಂ: 120 ವರ್ಷಗಳ ಇತಿಹಾಸದಲ್ಲೇ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ..! ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕೇರಳವು ಈ ವರ್ಷ ಅಕ್ಟೋಬರ್‌ನಲ್ಲಿ 589.9 ಮಿಮೀ ಮಳೆಯನ್ನು ಪಡೆದಿದೆ, ಇದು 1901 ರ ವರ್ಷದಿಂದ ಅತಿ ಹೆಚ್ಚು ಮತ್ತು ಕಳೆದ ವರ್ಷ ಇದೇ ತಿಂಗಳಿಗೆ … Continued

ನಾಳೆಯಿಂದ ರಾಜ್ಯದ ಹೊಟೇಲುಗಳಲ್ಲಿ ಊಟ-ತಿನಿಸುಗಳ ದರ ಏರಿಕೆ…!

ಬೆಂಗಳೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ನಿರ್ಧರಿಸಿದೆ. ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 10%ರಷ್ಟು ಹೆಚ್ಚಳ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಎಲ್ಲ ತಿಂಡಿ, ತಿನಿಸು, ಊಟದ ಮೇಲೆ ಶೇ.10 ರಿಂದ 20ರಷ್ಟು ದರ ಏರಿಕೆಗೆ … Continued

ಒಂದು ಕೋಟಿ ಝೈಕೊವ್​-ಡಿ ಲಸಿಕೆ ಖರೀದಿಗೆ ಆದೇಶ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ವೈರಸ್​ ವಿರುದ್ಧ ಭಾರತವು ದೇಶೀಯವಾಗಿ ರೂಪಿಸಿರುವ 2ನೇ ಲಸಿಕೆ ಝೈಕೊವ್​-2ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಒಂದು ಕೋಟಿ ಲಸಿಕೆಗಳನ್ನು ಪೂರೈಸುವಂತೆ ಕಂಪನಿಗೆ ಬೇಡಿಕೆಯಿಟ್ಟಿದೆ. ಅಲ್ಲದೆ, ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿಯೂ ಇದನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಸೂಜಿಯಿಲ್ಲದೆ ಔಷಧವನ್ನು ದೇಹಕ್ಕೆ ಸೇರುವ ಈ ಲಸಿಕೆಗೆ ಕಳೆದ ಆಗಸ್ಟ್​ 20ರಂದು ಭಾರತದ ಔಷಧ … Continued

ದಶಕಗಳಿಂದ ಭಾರತದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್ಸ್‌ ಮುನ್ನಡೆಸಿದ ರತನ್ ಟಾಟಾ ಶ್ರೀಮಂತರ ಪಟ್ಟಿಯಲ್ಲಿ ಏಕೆ ಅಷ್ಟೊಂದು ಕೆಳಗಿದ್ದಾರೆ..?!

ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಅತ್ಯಂತ ಗೌರವಾನ್ವಿತ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ರತನ್‌ ಟಾಟಾ 1990 ರಿಂದ 2012ರ ವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅವರು ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರ ವರೆಗೆ ಮಧ್ಯಂತರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್ … Continued

ಪಾಕಿಸ್ತಾನ ನೌಕಾಪಡೆಯಿಂದ ಗುಂಡಿನ ದಾಳಿ: ಗುಜರಾತ್ ಕರಾವಳಿಯಲ್ಲಿ ಓರ್ವ ಭಾರತೀಯ ಮೀನುಗಾರ ಸಾವು

ಅಹಮದಾಬಾದ್: ಪಾಕಿಸ್ತಾನಿ ನೌಕಾಪಡೆ ನೀಚ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಭಾರತೀಯ ಮೀನುಗಾರ ಸಾವಿಗೀಡಾಗಿದ್ದಾನೆ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ. ಗುಜರಾತಿನ ದ್ವಾರಕಾ ಸಮುದ್ರ ಪ್ರದೇಶದಲ್ಲಿ ಪಾಕ್ ನೌಕಾಪಡೆ ಈ ದುಸ್ಸಾಹಸಕ್ಕೆ ಕೈ ಹಾಕಿದೆ. ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದ ಭಾರತೀಯ ದೋಣಿಯ … Continued

ಮಾರಾಟದಲ್ಲಿ ಹೊಸ ದಾಖಲೆ ಬರೆದ ‘ಟಗರು’ : ಈ ಟಗರಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಮಂಡ್ಯ: ಎತ್ತುಗಳು ದಾಖಲೆಯ ಬೆಲೆಯಲ್ಲಿ ಮಾರಾಟವಾಗಿದ್ದನ್ನು ಕೇಳಿದ್ದೇವೆ. ಇಲ್ಲೊಂದು ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಮಾರಾಟದಲ್ಲಿ ಅದು ಹೊಸ ದಾಖಲೆಯನ್ನೇ ಬರೆದಿದೆ…! ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದಲ್ಲಿ 1.91 ಲಕ್ಷ ರೂ.ಗಳಿಗೆ ಬಂಡೂರು ಟಗರು ಮಾರಾಟವಾಗಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಸಣ್ಣಪ್ಪ ಎಂಬುವರು 2 ವರ್ಷದ ಹಿಂದೆ ಬಂಡೂರು ಟಗರೊಂದನ್ನು 1 ಲಕ್ಷದ … Continued

ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್​ ಖಾನ್​ ಅಪಹರಿಸಿ, ನಂತರ ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್ ಆರೋಪ

ಮುಂಬೈ: ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ಡ್ರಗ್ಸ್​ ಪ್ರಕರಣದಲ್ಲಿ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರ ಮೇಲೆ ಆರೋಪಗಳು ಮೇಲೆ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌. ಆರೋಪಗಳ ನಂತರ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಈಗ ಸಚಿವ ನವಾಬ್​ ಮಲಿಕ್​ … Continued

ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ..!

ರಾಂಪುರ: ಅಕ್ಟೋಬರ್ 24 ರಂದು ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪದ ಮೇಲೆ ರಾಂಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ಕ್ರಿಕೆಟ್ ತಂಡವನ್ನು … Continued

ಬೆಳ್ತಂಗಡಿ: ಇಳಂತಿಲ ಗ್ರಾಮದ ಬಳಿ 5 ಗ್ರೆನೇಡ್‌ಗಳು ಪತ್ತೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ. ನಿವೃತ್ತ ಸೈನಿಕರೊಬ್ಬರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ. ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್‌ನಲ್ಲಿ ಎಸ್‌ಸಿಒ (SCO) ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ … Continued