ಓಮಿಕ್ರಾನ್ ಡೆಲ್ಟಾಕ್ಕಿಂತ ಎರಡು ಪಟ್ಟು ಕೆಟ್ಟ ಸ್ಪೈಕ್ ರೂಪಾಂತರ ಹೊಂದಿದೆ: ಕೇಂದ್ರ

ನವದೆಹಲಿ: ಹೊಸ ಓಮಿಕ್ರಾನ್ ರೂಪಾಂತರವು ಬಹುಶಃ 500 ಪ್ರತಿಶತ ಹೆಚ್ಚು ಸ್ಪರ್ಧಾತ್ಮಕವಾಗಿ ಸಾಂಕ್ರಾಮಿಕವಾಗಿದೆ ಮತ್ತು ಡೆಲ್ಟಾ ರೂಪಾಂತರಕ್ಕಿಂತ 2 ಪಟ್ಟು ಹೆಚ್ಚು ಕೆಟ್ಟ ಸ್ಪೈಕ್ ರೂಪಾಂತರಗಳನ್ನು ಹೊಂದಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಗುರುವಾರ ಕೋವಿಡ್ -19 ಕುರಿತು ದಿನನಿತ್ಯದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಂಟಿ ಕಾರ್ಯದರ್ಶಿ (MoHFW) ಲವ ಅಗರ್ವಾಲ್, ಇಲ್ಲಿಯವರೆಗೆ, 29 ರಾಷ್ಟ್ರಗಳಲ್ಲಿ … Continued

ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ಇಂದು,ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 15 ಜನ ಐಟಿ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ಆಗಮಿಸಿ ಎಲ್ಲ ಸಿಬ್ಬಂದಿ ಮೊಬೈಲ್‌ ವಶಕ್ಕೆ ಪಡೆದು ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಕಚೇರಿಯಲ್ಲಿರುವ ಕಡತಗಳು ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಎಚ್‍ಎಸ್‍ಆರ್ … Continued

ಕರ್ನಾಟಕಕ್ಕೆ ಬಂತು ಓಮಿಕ್ರಾನ್‌ ಸೋಂಕು..! ಇಬ್ಬರಿಗೆ ದೃಢ, ದೇಶದಲ್ಲಿ ಮೊದಲ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಇದೇ   ಮೊದಲ ಓಮಿಕ್ರಾನ್‌ ನ್‌ ಪ್ರಕರಣ ಕರ್ನಾಟಕದಿಂದ ವರದಿಯಾಗಿದೆ..! ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ಹೊಸ ರೂಪಾಂತರ ಓಮಿಕ್ರಾನ್‌ ಈಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಆತಂಕ ಮೂಡಿಸಿದೆ. ಎರಡು ಓಮಿಕ್ರಾನ್‌ ಕೋವಿಡ್‌ ರೂಪಾಂತರಿ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇಬ್ಬರಲ್ಲಿ ಒಬ್ಬರು — … Continued

ಮೆಹಬೂಬ್‌ ಮಠದ ಅವರ ಕವನ ಸಂಕಲನ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ

ಬೆಳಗಾವಿ : ಇಲ್ಲಿನ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಮೆಹಬೂಬ್‌ ಮಠದ ಅವರ ಚೊಚ್ಚಲ‌ ಕವನ ಸಂಕಲನ ಬಿಸಿಲು ಕಾಡುವ ಪರಿ ಆಯ್ಕೆಯಾಗಿದೆ. ಮಾನವೀಯ ಕಾಳಜಿಯ ಆತ್ಯಂತಿಕ ನೆಲೆಯು ಅವರ ಕಾವ್ಯದ ಜೀವಾಳವಾಗಿದ್ದು ಹೊಸ ತಲೆಮಾರಿನ ಭರವಸೆಯ ಕವಿ ಎಂದು ವಿಮರ್ಶಕರು … Continued

ಡಿ.13 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಸಮರ್ಪಕ ಸಿದ್ಧತೆಗೆ ಸಭಾಧ್ಯಕ್ಷ ಕಾಗೇರಿ ಸೂಚನೆ

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಇದೇ ಡಿ.13 ರಿಂದ 24ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ ,ಆಹಾರ , ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು.ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ … Continued

ಕರ್ನಾಟಕದಲ್ಲಿ ಒಟ್ಟು 7.5 ಕೋಟಿ ಕೋವಿಡ್‌ ಲಸಿಕೆ ನೀಡಿಕೆ: ಸಚಿವ ಸುಧಾಕರ

ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ ೭.೫೦ ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ನಿನ್ನೆ ಒಂದೇ ದಿನ ೯ ಲಕ್ಷ ಡೋಸ್ ಲಸಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. ೯೨ ಜನರು ಮೊದಲ ಡೋಸ್ ಪಡೆದಿದ್ದರೆ, ಶೇ. ೬೨ ರಷ್ಟು ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ. ದೇಶದಲ್ಲೇ ನಮ್ಮ … Continued

ಸರ್ಕಾರಿ ಕೋಟಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ..

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರ ಶುಲ್ಕ ಹೆಚ್ಚಳ ಮಾಡಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ದಿಢೀರ್ ಆಗಿ 10 ಸಾವಿರ ರೂಪಾಯಿ ಹೆಚ್ಚಿಸಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಸರಕಾರಿ ಕೋಟಾದ ಸೀಟುಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಈ ಹಿಂದೆ ಸರ್ಕಾರಿ ಕಾಲೇಜುಗಳಲ್ಲಿ 23,810 ರೂಪಾಯಿ ಪಾವತಿ ಮಾಡಬೇಕಿತ್ತು. ಈಗ 33,810 ರೂಪಾಯಿ … Continued

ಕನ್ನಡದ ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟ ಶಿವರಾಂ ಮನೆಯಲ್ಲಿ ಪೂಜೆ ಮಾಡುವ ವೇಳೆ ಕುಸಿದು ಬಿದ್ದಿದ್ದು, ಅವರನ್ನು ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ಈ ಕುರಿತು ಮಾಹಿತಿ ನೀಡಿದ್ದು, 84 ವರ್ಷ ವಯಸ್ಸಿನ ನಟ ಶಿವರಾಮ್ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಿಗೆ … Continued

ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ ಕುಳಿತ ಮಮತಾ ಬ್ಯಾನರ್ಜಿ: ವಿಡಿಯೊ ಶೇರ್‌ ಮಾಡಿ ರಾಷ್ಟ್ರಗೀತೆಗೆ ಅವಮಾನ ಎಂದ ಬಿಜೆಪಿ, ದೂರು ದಾಖಲು

ಮುಂಬೈ: ಮುಂಬೈ ಘಟಕದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ “ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ ತೋರಿಸಿದ್ದಾರೆ” ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಬುಧವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರು ಅದನ್ನು ಕುಳಿತಿರುವಾಗಲೇ ಹಾಡಿದರು ಮತ್ತು ನಂತರ “ಥಟ್ಟನೆ ಅರ್ಧಕ್ಕೇ ನಿಲ್ಲಿಸಿದರು” ಎಂದು ದೂರು … Continued

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಪ್ಲಾಸ್ಟಿಕ್​…! ಶಸ್ತ್ರಚಿಕಿತ್ಸೆ ಮಾಡಿದಾಗ ಸಿಕ್ಕಿದ್ದೆಲ್ಲ ಬರೀ ಐಸ್​ಕ್ರೀಂ ಕಪ್​ಗಳು, ಪ್ಲಾಸ್ಟಿಕ್‌ ಸ್ಪೂನ್​ಗಳು..!!

ಗುಜರಾತ್​​ನ ಆನಂದ್​ ಜಿಲ್ಲೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದ ಒಂದು ಬೀಡಾಡಿ ಹಸುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ, ಅದರ ಹೊಟ್ಟೆಯಲ್ಲಿ ಐಸ್​ಕ್ರೀಂ ಕಪ್​ಗಳು, ಪ್ಲಾಸ್ಟಿಕ್​ ಕಪ್​ಗಳು, ಸ್ಪೂನ್​ಗಳು ಪತ್ತೆಯಾಗಿವೆ…! ಆನಂದ್ ಪಶುವೈದ್ಯಕೀಯ ಇಲಾಖೆ ಇತ್ತೀಚೆಗೆ ಚರೋಟಾರ್ ಪ್ರದೇಶದಲ್ಲಿ ಬಿಡಾಡಿ ಹಸುವಿನ ಹೊಟ್ಟೆಯಿಂದ 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹಸುವನ್ನು ರಕ್ಷಿಸಿದ್ದಾರೆ. … Continued