ಗೀಸರ್ ಅನಿಲ ಸೋರಿಕೆ: ತಾಯಿ-ಮಗಳು ಸಾವು

ಬೆಂಗಳೂರು: ಸ್ನಾನಕ್ಕೆಂದು ಹೋಗಿದ್ದ ವೇಳೆ ಗ್ಯಾಸ್ ಗೀಸರಿನಿಂದ ಅನಿಲ ಸೋರಿಕೆಯಾಗಿ ತಾಯಿ ಹಾಗೂ ಮಗಳು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಈ ದುರಂತ ಸಂಭವಿಸಿದ್ದು, 35 ವರ್ಷದ ತಾಯಿ ಮಂಗಳಾ ಮತ್ತು 7 ವರ್ಷದ ಮಗಳು ಗೌತಮಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ತಾಯಿ ಮಗಳು ಸ್ನಾನಕ್ಕೆಂದು ಬಾತ್ ರೂಂಮಿಗೆ ಹೋಗಿದ್ದಾಗ … Continued

ಕೊರೊನಾ ವೈರಸ್ಸಿಗೆ ಶೀಘ್ರವೇ ಅಂತ್ಯ ಬರಲಿದೆ: ವೈರಾಲಜಿಸ್ಟ್‌ ಡಾ.ಕುತುಬ್ ಮಹಮೂದ್

ನವದೆಹಲಿ: : ಲಸಿಕೆಯು ಕೊರೊನಾ ವಿರುದ್ಧ ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು  ವಾಷಿಂಗ್ಟನ್​ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ತಿಳಿಸಿದ್ದಾರೆ. ಸುದ್ದಿಸಂಸ್ಥೆ ಸುದ್ದಿಸಂಸ್ಥೆ ಜೊತೆ ಅವರು ಮಾತನಾಡಿ, ಕೊರೊನಾದ ಅಂತ್ಯ ಬಹಳ ಹತ್ತಿರದಲ್ಲಿದೆ ಎಂದು ಅವರು ಹೇಳಿದ್ದಾರೆ. ಭಾರತವು ಲಸಿಕಾ ಅಭಿಯಾನ … Continued

ಅಫ್ಘಾನಿಸ್ತಾನದಲ್ಲಿ ಬದುಕುಳಿಯಲು ಕುಟುಂಬಗಳಿಂದ ಮಕ್ಕಳು, ಅಂಗಾಂಗಳ ಮಾರಾಟ: ಒಂದು ಮಗುವಿನ ಬೆಲೆ 70 ಸಾವಿರ ರೂ.ಗಳಿಂದ ಆರಂಭ..!

ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಫ್ಘಾನಿಸ್ತಾನದ ಜನರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಹೇಗೋ ಜೀವನ ಸಾಗಿಸುತ್ತಿದ್ದ ಅಲ್ಲಿನ ನಾಗರಿಕರು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಈಗ ತಮ್ಮ ಮಕ್ಕಳನ್ನು ಮಾರಲು ಮತ್ತು ಅಂಗಾಂಗಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ…! ತಾಲಿಬಾನ್ ಅಧಿಕಾರ ಹಿಡಿಯುವುದಕ್ಕಾಗಿ ಆಫ್ಘನ್ ಪ್ರಜಾಪ್ರಭುತ್ವ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಾಗ, ಬದುಕುಳಿಯಲು … Continued

ಕಾಲರ್‌ವಾಲಿ ಖ್ಯಾತಿಯ 29 ಮರಿಗಳಿಗೆ ಜನ್ಮ ನೀಡಿದ್ದ ಮಧ್ಯಪ್ರದೇಶದ ಹುಲಿ 17ನೇ ವಯಸ್ಸಿನಲ್ಲಿ ನಿಧನ

ಸಿಯೋನಿ: 29 ಮರಿಗಳಿಗೆ ಜನ್ಮ ನೀಡಿ ಸೂಪರ್‌ ಮಾಮ್ ಎಂಬ ಟ್ಯಾಗ್ ಗಳಿಸಿದ್ದ ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ್‌ನ (ಪಿಟಿಆರ್) ಪ್ರಸಿದ್ಧ ಹುಲಿ ‘ಕಾಲರ್‌ ವಾಲಿ’ ಮೃತಪಪ್ಪಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 17 ವರ್ಷದ ಹುಲಿ ಶನಿವಾರ ಸಂಜೆ ಮೃತಪಟ್ಟಿದೆ. 2008 ಮತ್ತು 2018 ರ ನಡುವೆ 11 ವರ್ಷಗಳ ಅವಧಿಯಲ್ಲಿ ಇದು … Continued

ಮಲೆಯಾಳಂ ಸಿನೆಮಾ ಸೂಪರ್‌ ಸ್ಟಾರ್‌ ಮಮ್ಮುಟ್ಟಿಗೆ ಕೊರೊನಾ ಸೋಂಕು

ಜನವರಿ 15 ರಂದು ಕೇರಳದಲ್ಲಿ ಮಮ್ಮುಟ್ಟಿ ಅವರಿಗೆ ಕೊರೊನಾ ವೈರಸ್‌ಗೆ ಸೋಂಕು ದೃಢಪಟ್ಟಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ತಮ್ಮ ಟಿಪ್ಪಣಿಯಲ್ಲಿ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ, ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ವೈರಸ್‌ನಿಂದ ಸೋಂಕಿಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಜ್ವರವಿದೆ ಮತ್ತು ಕೇರಳದ ಅವರ ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ವಿನಂತಿಸಿದರು … Continued

ಆಸ್ಪತ್ರೆಗೆ ದಾಖಲಾಗಿರುವ ಕವಿ ಚೆನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ ; ಸಿಎಂ ಬೊಮ್ಮಾಯಿ ಹಾರೈಕೆ

ಆಸ್ಪತ್ರೆಗೆ ದಾಖಲಾಗಿರುವ ಕವಿ ಚೆನ್ನವೀರ ಕಣವಿ ಶೀಘ್ರವೇ ಗುಣಮುಖರಾಗಲಿ ; ಸಿಎಂ ಬೊಮ್ಮಾಯಿ ಹಾರೈಕೆ ಧಾರವಾಡ: ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಆರೋಗ್ಯ ಸ್ಥಿರವಾಗಿದೆ. ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರು ಉಸಿರಾಟದ ತೊಂದರೆಯಿಂದ ಧಾರವಾಡದ … Continued

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರು ಮಕ್ಕಳ ನಿಗೂಢ ಸಾವು

ಬೆಳಗಾವಿ : ನಗರದ ಜಿಲ್ಲಾ ಆಸ್ಪತ್ರೆ ಬಿಮ್ಸ್‌ಗೆ ದಾಖಲಾಗಿದ್ದ ಮೂವರು ಮಕ್ಕಳ ನಿಗೂಢ ಸಾವು ಈಗ ತೀವ್ರ ಚರ್ಚೆಗೆ ಗುರಿಯಾಗಿದೆ. ಮಕ್ಕಳ ಏಕಾಏಕಿ ಸಾವಿಗೆ ಕಾರಣವಾದರೂ ಏನು ಎನ್ನುವುದು ಗೊತ್ತಾಗಬೇಕಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳ ಪವಿತ್ರಾ , 14 ತಿಂಗಳ ಮಧು ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ … Continued

ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ: ಲಕ್ನೋ ಪಕ್ಷದ ಕಚೇರಿಯ ಹೊರಗೆ ಆತ್ಮಾಹುತಿಗೆ ಯತ್ನಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತ..!

ಲಕ್ನೋ: ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಭಾನುವಾರ ಲಕ್ನೋದಲ್ಲಿ ಪಕ್ಷದ ಕಚೇರಿಯ ಹೊರಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅಲಿಗಢದ ಸಮಾಜವಾದಿ ಪಾರ್ಟಿ ಕಾರ್ಯಕರ್ತ ಆದಿತ್ಯ ಠಾಕೂರ್ ಅವರು ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. … Continued

ಮಂಕಿ: ಸಮುದ್ರಕ್ಕೆ ಈಜಲು ಹೋಗಿದ್ದ ಇಬ್ಬರು ಮಕ್ಕಳು ಮುಳುಗಿ ಸಾವು

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಸಮುದ್ರಕ್ಕೆ ಈಜಲು ಹೋದ ಇಬ್ಬರು ಮಕ್ಕಳು ನೀರಿನ ತೆರೆಗೆ ಸಿಕ್ಕಿ ಮೃತ ಪಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ಒಂಬತ್ತನೇ ತರಗತಿ ವಿದ್ಯಾರ್ಥಿ ದೊಡ್ಡಗುಂದದ ಮನೋಜ ಬಾಬು ನಾಯ್ಕ(15) ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ತಾಳಮಕ್ಕಿಯ ದರ್ಶನ ಉದಯ ನಾಯ್ಕ (16) … Continued

ಈ ರೋಬೋಟ್ ಮಾನವನ ಭಾವನೆಗಳು-ಮುಖದ ಅಭಿವ್ಯಕ್ತಿಗಳನ್ನು ಅನುಕರಿಸಬಲ್ಲದು..!-ವೀಕ್ಷಿಸಿ

ನವದೆಹಲಿ: ಆಂಡ್ರಾಯ್ಡ್‌ಗಳು ಮತ್ತು ಹುಮನಾಯ್ಡ್‌ಗಳನ್ನು ತೋರಿಸಿದ ಟೋಟಲ್ ರೀಕಾಲ್ ಮತ್ತು ಏಲಿಯನ್ಸ್‌ನಂತಹ ವೈಜ್ಞಾನಿಕ ಫಿಲ್ಮ್‌ಗಳಿಂದ ನೀವು ಆಶ್ಚರ್ಯಚಕಿತರಾಗಿದ್ದರೆ, ಈಗ ಈ ಸುದ್ದಿಯೂ ಕುತೂಹಲವನ್ನುಂಟು ಮಾಡುತ್ತದೆ. ಮಾನವನ ಭಾವನೆಗಳು ಮತ್ತು ಮುಖಭಾವಗಳನ್ನು ಪುನರಾವರ್ತಿಸಿ ತೊರಿಸಲು ಪ್ರಯತ್ನಿಸುತ್ತಿರುವ ರೋಬೋಟ್ ಅನ್ನು ತೋರಿಸುವ ಕ್ಲಿಪ್ ವೈರಲ್ ಆಗಿದೆ. ಈ ರೋಬೋಟ್‌ಗೆ ಮಾನವನಂತಿರುವ ಕಣ್ಣುಗಳು, ಕೂದಲು, ಹುಬ್ಬುಗಳು, ಮೂಗು ಮತ್ತು ತುಟಿಗಳನ್ನು … Continued