ಏಪ್ರಿಲ್‌ ೨೫ರಂದು ಜಿಲ್ಲಾಮಟ್ಟದ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏಪ್ರಿಲ್‌ ೨೫ ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ೨೫೦೦೧, ದ್ವಿತೀಯ ಬಹುಮಾನ ೧೫೦೦೧, ತೃತೀಯ ೧೦೦೦೧, ಚತುರ್ಥ ಬಹುಮಾನ ೭೦೦೧ ರೂ.ಗಳ ಬಹುಮಾನವಿದೆ. … Continued

ಕಾಲುಗಳಿಲ್ಲದ ಈ ನಾಯಿಗಳು ವಿಶಿಷ್ಟ ಗಾಲಿಖುರ್ಚಿಗಳಲ್ಲಿ ಓಡಾಡ್ತವೆ….ವೀಕ್ಷಿಸಿ

ದಿನದ ಒತ್ತಡದಿಂದ ಹೊರಬರಲು ನಿಮಗೆ ಸಹಾಯ ಮಾಡಲು ನೀವು ಕೆಲವು ಮುದ್ದಾದ ವೀಡಿಯೊಗಳನ್ನು ಹುಡುಕುತ್ತಿರುವಿರಾ? ಇಂಥದ್ದೇ ಅದ್ಭುತ ಹಾಗೂ ಮಾನವೀಯ ಕಾಳಜಿಯ ವೀಡಿಯೊವೊಂದನ್ನು ಫ್ರೆಡ್ ಷುಲ್ಟ್ಜ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ವೀಡಿಯೊವು ವಿಶೇಷ ಸಾಮರ್ಥ್ಯವುಳ್ಳ (ಅಂಗವೈಕಲ್ಯದ) ನಾಯಿಮರಿಗಳ ಗುಂಪು ತಮ್ಮ ವಿಶಿಷ್ಟ ಗಾಲಿಕುರ್ಚಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ಓಡಾಡುವುದನ್ನು ತೋರಿಸುತ್ತದೆ. ಅಮೆರಿಕದ ವರ್ಮೊಂಟ್‌ನಿಂದ ಟ್ರೇಸಿ ಫೌಲರ್ ದತ್ತು … Continued

ಸಮುದ್ರದ ರಕ್ಕಸ ಅಲೆಗಳಿಗೆ ಸಿಲುಕಿದ್ದ ಜೀವ ರಕ್ಷಕನ ಪ್ರಾಣ ಉಳಿಸಿದ ಧೈರ್ಯಶಾಲಿ ಸರ್ಫರ್….ವೀಕ್ಷಿಸಿ

ಜೀವದ ಹಂಗು ತೊರೆದು ರಕ್ಕಸ ಅಲೆಗಳ ಮಧ್ಯೆ ಧುಮುಕಿ ಜೀವ ರಕ್ಷಕರ ಪ್ರಾಣವನ್ನೇ ಮತ್ತೊಬ್ಬರು ಉಳಿಸಿದ್ದಾರೆ…! ಸಮುದ್ರದ ಬೃಹತ್‌ ಅಲೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿದ್ದ ಜೀವ ರಕ್ಷಕರೊಬ್ಬರನ್ನು ಸರ್ಫರ್ ಬಚಾವ್‌ ಮಾಡಿದ್ದಾರೆ. ಪ್ರಾಣ ಉಳಿಸಿದ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. @GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವೀಡಿಯೊದಲ್ಲಿ ಬ್ರೆಜಿಲ್‌ನಲ್ಲಿ … Continued

ಮಗುವಿಗೆ ಜನ್ಮ ನೀಡಿದ 17 ವರ್ಷದ ಬಾಲಕಿ: ಅತ್ಯಾಚಾರ ಆರೋಪದ ಮೇಲೆ 12 ವರ್ಷದ ಬಾಲಕನ ಬಂಧನ…!

ಚೆನ್ನೈ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭ ಧರಿಸುವಂತೆ ಮಾಡಿದ ಆರೋಪದ ಮೇಲೆ 12 ವರ್ಷದ ಬಾಲಕನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ತಂಜಾವೂರು ಅಖಿಲ ಮಹಿಳಾ ಪೊಲೀಸ್ ಪಡೆ ಬಂಧಿಸಿದೆ. ಹುಡುಗಿ ಏಪ್ರಿಲ್ 16 ರಂದು ಹೊಟ್ಟೆ ನೋವೆಂದು ಹೇಳಿದಾಗ ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದಾಗ … Continued

ಪಿಎಸ್‌ಐ ನೇಮಕಾತಿ ಹಗರಣ: ಅಫಜಲಪುರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷನ ಬಂಧನ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಅಫಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ ಪಾಟೀಲ ಎಂಬವರನ್ನು ಶುಕ್ರವಾರ ಸಿಐಡಿ ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಇದೇ ಪ್ರಕಣದಲ್ಲಿ ಗುರುವಾರ ಬಂಧಿಸಲಾದ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರ ಗನ್‌ಮ್ಯಾನ್‌ ಹಯ್ಯಾಳಿ (ಅಣ್ಣಯ್ಯ) … Continued

ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ: ವಿಚಾರಣೆ ಮುಂದೂಡಿಕೆ ಕೋರಿದ ಆರ್‌ಎಸ್‌ ಎಸ್‌ ಕಾರ್ಯಕರ್ತನಿಗೆ 1,000 ರೂ. ದಂಡ ವಿಧಿಸಿದ ನ್ಯಾಯಾಲಯ

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ಮುಂದೂಡಿಕೆ ಕೋರಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಜೇಶ್‌ ಕುಂಟೆ ಅವರಿಗೆ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯವು 1,000 ರೂ.ಗಳ ದಂಡ ವಿಧಿಸಿದ್ದು, ಅದನ್ನು ರಾಹುಲ್‌ ಗಾಂಧಿ ಅವರಿಗೆ ಪಾವತಿಸುವಂತೆ ಆದೇಶ ಮಾಡಿದೆ. ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್‌ಎಸ್‌ಎಸ್‌ ಕಾರಣ ಎಂದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಜಾಮೀನು ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದ ಶಂಕೆಯ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಹಾರಾಷ್ಟ್ರ ಸಂಪುಟ ದರ್ಜೆ ಸಚಿವ ನವಾಬ್‌ ಮಲಿಕ್‌ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಸೂಕ್ತ ನ್ಯಾಯಾಲಯದಲ್ಲಿ ನೀವು ಜಾಮೀನು … Continued

ನಾಳೆಯೂ ಹಿಜಾಬ್‌ಗಾಗಿ ಹೈಡ್ರಾಮಾ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡ್ತೇವೆ: ಶಾಸಕ ರಘುಪತಿ ಭಟ್ ಎಚ್ಚರಿಕೆ

ಉಡುಪಿ: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್‌ ಕುರಿತು ಹೈಡ್ರಾಮಾ ಸೃಷ್ಟಿಸಿರುವುದದರ ಕುರಿತು … Continued

ಈ ವ್ಯಕ್ತಿಯ ದೇಹದಲ್ಲಿ 505 ದಿನ ಕೋವಿಡ್ -19 ವೈರಸ್‌ ಇತ್ತು…! ಇದು ಈವರೆಗೆ ವರದಿಯಾದ ದೀರ್ಘಾವಧಿ ಪ್ರಕರಣ

ಲಂಡನ್: ತೀವ್ರವಾಗಿ ದುರ್ಬಲಗೊಂಡ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಬ್ರಿಟನ್ನಿನ ರೋಗಿಯು 500 ದಿನಗಳಿಗಿಂತ ಹೆಚ್ಚು ಕಾಲ ಕೋವಿಡ್ -19 ಜೊತೆ ಹೋರಾಡಿದ್ದಾರೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಈ ಪ್ರಕರಣವು ದುರ್ಬಲ ರೋಗನಿರೋಧಕ ಶಕ್ತಿ ಇರುವ ಜನರನ್ನು ಕೊರೊನಾದಿಂದ ರಕ್ಷಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ. 505 ದಿನಗಳ ಕಾಲ ಕೊರೊನಾ ವೈರಸ್‌ ರೋಗಿಯ ದೇಹದಲ್ಲಿತ್ತು. ನಿಸ್ಸಂಶಯವಾಗಿ … Continued

ದೆಹಲಿಯ ರೋಹಿಣಿ ನ್ಯಾಯಾಲಯದ ಹೊರಗೆ ಗುಂಡಿನ ದಾಳಿ, ಇಬ್ಬರಿಗೆ ಗಾಯ

ನವದೆಹಲಿ: ಶುಕ್ರವಾರ, ಏಪ್ರಿಲ್ 22 ರಂದು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಿಗ್ಗೆ 9:40 ರ ಸುಮಾರಿಗೆ ರೋಹಿಣಿ ನ್ಯಾಯಾಲಯದ ಗೇಟ್ ಸಂಖ್ಯೆ 8 ರ ಬಳಿ ಇಬ್ಬರು ವಕೀಲರಾದ ಸಂಜೀವ್ ಚೌಧರಿ ಮತ್ತು ರಿಷಿ ಚೋಪ್ರಾ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆದಿದೆ. ಎನ್‌ಎಪಿ … Continued