ಜಮ್ಮು-ಕಾಶ್ಮೀರದ ಗಡಿಯೊಳಗೆ ನುಸುಳಲು 200 ಭಯೋತ್ಪಾದಕರು ಸಜ್ಜು: ಸೇನೆ ಎಚ್ಚರಿಕೆ

ಉಧಂಪುರ: ಒಳನುಸುಳುವಿಕೆ ತೀವ್ರವಾಗಿ ಕಡಿಮೆಯಾಗಿದೆ, ಆದರೆ ಪ್ರಸ್ತುತ 200 ಭಯೋತ್ಪಾದಕರು ಗಡಿಯುದ್ದಕ್ಕೂ ಜಮ್ಮು ಮತ್ತು ಕಾಶ್ಮೀರದೊಳಗೆ ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಹೇಳಿದ್ದಾರೆ. ಫೆಬ್ರವರಿ 2021ರ ಒಪ್ಪಂದದ ನಂತರ ಇಂಡೋ-ಪಾಕ್ ಗಡಿಯಲ್ಲಿ ಕದನ ವಿರಾಮವು ‘ಚೆನ್ನಾಗಿ’ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಈ ವರ್ಷ ಇಲ್ಲಿಯವರೆಗೆ … Continued

ಪಾಕಿಸ್ತಾನ್‌: ನೃತ್ಯ, ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಯುವಕ

ಲಾಹೋರ್: ಪಾಕಿಸ್ತಾನದಲ್ಲಿ ಮರ್ಯಾದೆ ಹತ್ಯೆಯ ಮತ್ತೊಂದು ಶಂಕಿತ ಪ್ರಕರಣದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ 21 ವರ್ಷದ ಯುವತಿಯೊಬ್ಬಳು ನೃತ್ಯ ಮತ್ತು ಮಾಡೆಲಿಂಗ್ ವೃತ್ತಿಜೀವನ ಮುಂದುವರಿಸಿದ್ದಕ್ಕಾಗಿ ಸ್ವಂತ ಸಹೋದರನೇ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಪ್ರಾಂತೀಯ ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ರೆನಾಲಾ ಖುರ್ದ್ ಒಕಾರಾ ಮೂಲದ ಸಿದ್ರಾ ಎಂಬ ಯುವತಿ, ಸ್ಥಳೀಯ ಬಟ್ಟೆ ಬ್ರಾಂಡ್‌ಗಾಗಿ ಮಾಡೆಲಿಂಗ್ ಮಾಡುತ್ತಿದ್ದಳು … Continued

ಕವಲಂದೆ ‘ಮಿನಿ ಪಾಕಿಸ್ತಾನ’ ಘೋಷಣೆ: ಇಬ್ಬರನ್ನುವಶಕ್ಕೆ ಪಡೆದ ಪೊಲೀಸರು

posted in: ರಾಜ್ಯ | 0

ಮೈಸೂರು: ಕವಲಂದೆ ಮಿನಿ ಪಾಕಿಸ್ತಾನ ಎಂದು ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಹನಾನ್‌ ಖಾನ್ ಮತ್ತು ನಯಾಜ್ ಶರೀಫ್ ಎಂಬವರನ್ನು ವಶಕ್ಕೆ ಪಡೆದು ಕವಲಂದೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ನಂಜನಗೂಡು ರಸ್ತೆ ದೊಡ್ಡಕವಲಂದೆಯಲ್ಲಿ ರಂಜಾನ್ ಹಬ್ಬದಂದು ಮುಸ್ಲಿಂ ಬಾಂಧವರು ಸಾಮೂಹಿಕ … Continued

ವಿಮಾನದಲ್ಲಿ ಕಾದಾಟ… ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಂಡರು…! | ವೀಕ್ಷಿಸಿ

ಮ್ಯಾಂಚೆಸ್ಟರ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಕೆಎಲ್‌ಎಂ ವಿಮಾನದಲ್ಲಿದ್ದ ಆರು ಪ್ರಯಾಣಿಕರನ್ನು ಗುರುವಾರ ಪೊಲೀಸರು ಬಂಧಿಸಿ ಕರೆದೊಯ್ಯುವ ಮೊದಲು ವಿಮಾನದಲ್ಲಿ ಭಾರಿ ಜಗಳವಾಡಿದ್ದಾರೆ ಎಂದು ವರದಿಯಾಗಿದೆ. ಟ್ವಿಟರ್ ಬಳಕೆದಾರ @MayaWilkinsonx ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು ಪ್ರಯಾಣಿಕನನ್ನು ಹಿಡಿದುಕೊಂಡು ಮತ್ತೊಂದು ಗುಂಪು ಹೊಡೆಯುವುದನ್ನು ಕಾಣಬಹುದು. ವಿಮಾನದ ಕ್ಯಾಪ್ಟನ್ ಹೋರಾಟವನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಪ್ರಯತ್ನವು ವಿಫಲವಾಗಿದೆ. ವೀಡಿಯೊವನ್ನು … Continued

ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ನಕ್ಷೆ ಪೋಸ್ಟ್: ಎಂಇಎಸ್ ಮುಖಂಡನ ವಿರುದ್ಧ ಎಫ್‌ಐಆರ್

posted in: ರಾಜ್ಯ | 0

ಬೆಳಗಾವಿ: ಕರ್ನಾಟಕದ ಐದು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್ ವೀಡಿಯೋ ಮತ್ತು ಫೋಟೋಗಳನ್ನು ತನ್ನ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯಲ್ಲಿ ಈ ಗ್ರಾಫಿಕ್ಸ್ ಇದೆ. ಇದನ್ನು ಶುಭಂ ಶೆಳಕೆ ಪೋಸ್ಟ್ … Continued

ಜಾರ್ಖಂಡ್‌ನಲ್ಲಿ ಐಎಎಸ್ ಅಧಿಕಾರಿಯ ಸಹಾಯಕರಿಂದ 19 ಕೋಟಿ ರೂಪಾಯಿ ನಗದು ವಶ….!

ರಾಂಚಿ: ಜಾರಿ ನಿರ್ದೇಶನಾಲಯ(ಇಡಿ)ವು ಜಾರ್ಖಂಡ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಇಬ್ಬರು ಆಪ್ತ ಸಹಾಯಕರಿಂದ 19 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ. ಎಂಜಿಎನ್‌ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಯೋಜನೆಯ ಭ್ರಷ್ಟಾಚಾರ ಮತ್ತು ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಡೆಸಿದ ಶೋಧನೆಯಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು … Continued

ವಿದ್ಯುತ್ ಅವಘಡ: ತಾಯಿ-ಇಬ್ಬರು ಮಕ್ಕಳು ಸಾವು

posted in: ರಾಜ್ಯ | 0

ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು 28 ವರ್ಷದ ಶೈಲಾ, ಮಕ್ಕಳಾದ ಪವನ್ (2) ಮತ್ತು ಸಾನ್ವಿ (3) ಎಂದು ಗುರುತಿಸಲಾಗಿದೆ. ವಿದ್ಯುತ್ ವೈರ್‌ ಸ್ಪರ್ಷಿಸಿದ ಕಾರಣ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು … Continued

ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದು ಕರಕಲಾದ ಫೈಬರ್ ಕೇಬಲ್ ತುಂಬಿದ ಬೃಹತ್‌ ಲಾರಿ…..ವೀಕ್ಷಿಸಿ

posted in: ರಾಜ್ಯ | 0

ವಿಜಯಪುರ: ಆಕಸ್ಮಿಕವಾಗಿ ಲಾರಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೃಹತ್‌ ಲಾರಿಯೊಂದು ಧಗಧಗನೆ ಹೊತ್ತಿ ಉರಿದ ಘಟನೆ ವಿಜಯಪುರ ಜಿಲ್ಲೆಯ ಝಳಕಿ ಸಮೀಪದ ಎಚ್ ಪಿ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ. ಈ ಬೃಹತ್‌ ಲಾರಿ ಗುಜರಾತಿನಿಂದ ಫೈಬರ್ ಕೇಬಲ್ ತುಂಬಿಕೊಂಡು ಲಾರಿ ಹೊರಟಿತ್ತು ಎಂದು ಹೇಳಲಾಗಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಲಾರಿಯಿಂದ ಚಾಲಕ ಹಾಗೂ … Continued

ಉದ್ವಿಗ್ನತೆ ಮಧ್ಯೆಯೇ ಕಾಶಿ ವಿಶ್ವನಾಥ -ಜ್ಞಾನವಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋಗ್ರಾಫಿ ಸರ್ವೆ ಆರಂಭ

ನವದೆಹಲಿ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಾ ಶೃಂಗಾರ ಗೌರಿ ಸ್ಥಳದ ವಿಡಿಯೋಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆ ಶುಕ್ರವಾರ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇಷ್ಟು ಮಾತ್ರವಲ್ಲದೆ ಕಮಿಷನರ್ ಹಾಗೂ ನ್ಯಾಯಾಲಯದ ನಿಯೋಜಿತ ತಂಡ ಸ್ಥಳಕ್ಕೆ ಆಗಮಿಸಿದಾಗ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು. ಒಂದು ಕಡೆಯಿಂದ ಘೋಷಣೆ ಕೂಗಿದ ನಂತರ ಇನ್ನೊಂದು ಕಡೆಯಿಂದಲೂ ಘೋಷಣೆಗಳು … Continued

ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರಿನಲ್ಲಿ ಹಿರಿಯ ಹಿಜ್ಬುಲ್ ಭಯೋತ್ಪಾದಕ ಸೇರಿ ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಮರನಾಥ ಯಾತ್ರೆಯ ಪ್ರಧಾನ ಮಾರ್ಗವಾಗಿರುವ ಪಹಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರಿನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿವೆ. ಈ ಮಾರ್ಗದಲ್ಲಿ ಸಂಭಾವ್ಯ ಉಗ್ರರ ದಾಳಿ ತಡೆಯುವ ನಿಟ್ಟಿನಲ್ಲಿ ಇದು ಬಹಳ ಮಹತ್ವದ ಎನ್‌ಕೌಂಟರ್ ಆಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಹತ್ಯೆಯಾದ ಉಗ್ರರ … Continued