ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ 4 ದಿನಗಳ ಪೊಲೀಸ್ ಕಸ್ಟಡಿ

ನವದೆಹಲಿ: ಆಲ್ಟ್ ನ್ಯೂಸ್‌ನ ಫ್ಯಾಕ್ಟ್ ಚೆಕಿಂಗ್ ಸೈಟ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ 2018 ರ ಟ್ವಿಟ್ಟರ್ ಪೋಸ್ಟ್‌ಗಾಗಿ ದೆಹಲಿ ಪೊಲೀಸರು ನಿನ್ನೆ, ಸೋಮವಾರ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಯಾವುದೇ ನೋಟಿಸ್ … Continued

ಇಬ್ಬರು ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಮೈಸೂರು : ಗೃಹಿಣಿಯೊಬ್ಬರು ತಮ್ಮಿಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಟಿತಾಲ್ಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರೋಜ(32) ತನ್ನ ಮಕ್ಕಳಾದ ಗೀತ(6), ಕುಸುಮ(4) ಅವರ ಜೊತೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಲಿಂಗರಾಜು ಎಂಬುವರನ್ನು ಸರೋಜ ವಿವಾಹವಾಗಿದ್ದರು. ಕೌಟುಂಬಿಕ ಕಲಹದಿಂದಕೆಲ ದಿನಗಳ ಹಿಂದೆ ಗಂಡನ … Continued

ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ, ಅಧ್ಯಕ್ಷರಾಗಿ ಮಗ ಆಕಾಶ್ ನೇಮಕ

ಮುಂಬೈ: ಮುಖೇಶ ಅಂಬಾನಿ ಅವರು ಜೂನ್ 27 ರಿಂದ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಜಿಯೋ ಮಂಗಳವಾರ ತನ್ನ ಮಂಡಳಿಯು ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಪ್ರಕಟಿಸಿದೆ. ಅವರನ್ನು ರಿಲಯನ್ಸ್ ಜಿಯೋದ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿಯೂ ನೇಮಿಸಲಾಗಿದೆ. … Continued

ಕುಮಟಾ: ಮೂರು ದಿನಗಳ ಕಾರ್ಯಾಚರಣೆ ನಂತರ ಸಮುದ್ರ ಪಾಲಾದ ಮತ್ತಿಬ್ಬರ ಶವ ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬಾಡದಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರವಾಸಿಗರ ಶವ ಮೂರನೇ ದಿನ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ನಾಲ್ವರಲ್ಲಿ ಇಬ್ಬರ ಶವ ಮೂರು ದಿನಗಳ ಹಿಂದೆಯೇ ಪತ್ತೆಯಾಗಿತ್ತು. ಈಗ ಮತ್ತಿಬ್ಬರ ಶವವೂ ಸಮುದ್ರದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಸಿಎ ವಿದ್ಯಾರ್ಥಿ ಬೆಂಗಳೂರಿನ ರಾಜಾಜಿನಗರದ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ … Continued

2028ರ ವೇಳೆಗೆ ಬಾಹ್ಯಾಕಾಶದಲ್ಲೇ ಸೌರ ವಿದ್ಯುತ್ ಸ್ಥಾವರ ನಿರ್ಮಾಣ, ಅಲ್ಲಿಂದಲೇ ಭೂಮಿಗೆ ವಿದ್ಯುತ್ ರವಾನೆ : ಚೀನಾ ಯೋಜನೆ…!

ನವದೆಹಲಿ : ಅಂತರಿಕ್ಷದಲ್ಲಿ ಒಂದಾದ ಮೇಲೊಂದು ವಿಕ್ರಮಗಳನ್ನು ಸಾಧಿಸುತ್ತಿರುವ ಚೀನಾ ಇದೀಗ ಬಾಹ್ಯಾಕಾಶದಲ್ಲಿ ಸೌರವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇದರ ಕೆಲಸ ಈಗಾಗಲೇ ಆರಂಭವಾಗಿದ್ದು, 2028ರಲ್ಲಿ ಘಟಕ ಕಾರ್ಯಾಚರಣೆ ಆರಂಭಿಸಲಿದೆ. ಕ್ಸಿಡಿಯನ್ ವಿಶ್ವವಿದ್ಯಾನಿಲಯದ ಡುವಾನ್ ಬಯೋಯಾನ್ ನೇತೃತ್ವದ “ಡೈಲಿ ಪ್ರಾಜೆಕ್ಟ್” ಸಂಶೋಧನಾ ತಂಡವು ಈ ಸಂಶೋಧನೆಯನ್ನು ನಡೆಸಿದೆ ಎಂದು ಅಧಿಕೃತ ಹೇಳಿಕೆಯನ್ನು ವರದಿ ಮಾಡಿದೆ. … Continued

ಯುಎನ್, ಟರ್ಕಿ, ಇರಾನ್, ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಅಧಿಕೃತ ಖಾತೆಗಳನ್ನು Twitter ಇಂಡಿಯಾ ನಿಷೇಧಿಸಿದೆ. ಇದಕ್ಕೂ ಮೊದಲು, ಟ್ವಿಟರ್ ಪಾಕಿಸ್ತಾನದ ರಾಷ್ಟ್ರೀಯ ಪ್ರಸಾರಕ – ರೇಡಿಯೋ ಪಾಕಿಸ್ತಾನದ ಖಾತೆಯನ್ನು ಸಹ ತಡೆಹಿಡಿದಿದೆ. ಭಾರತದಲ್ಲಿ ಈ ಅಧಿಕೃತ ಖಾತೆಗಳನ್ನು ತಡೆಹಿಡಿಯಲಾದ ನಂತರ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಕ್ಷಣವೇ ಖಾತೆಗಳನ್ನು ಮರುಸ್ಥಾಪಿಸುವಂತೆ ಟ್ವಿಟರ್‌ಗೆ … Continued

ಪಠ್ಯದಲ್ಲಿ ಕನಕದಾಸರ ಜೀವನ ಚರಿತ್ರೆ ಈ ಹಿಂದಿನಂತೆಯೇ ಪ್ರಕಟಿಸಲು ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಈ ಹಿಂದೆ ಇದ್ದಂತ್ತೆಯೇ ಮುಂದುವರೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಕಾಗಿನೆಲೆಯ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನಿನ್ನೆ, ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು, ಮಂಗಳವಾರ ಪಠ್ಯ ಪುಸ್ತಕದಲ್ಲಿ … Continued

40% ಕಮಿಷನ್ ಆರೋಪ: ಗುತ್ತಿಗೆದಾರರ ಸಂಘದಿಂದ ಮಾಹಿತಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಬೆಂಗಳೂರು: ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ 40% ಟೆಂಡರ್ ಕಮಿಷನ್ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘಕ್ಕೆ ದೂರವಾಣಿ ಕರೆ ಮಾಡಿದ ಕೇಂದ್ರ ಗೃಹ ಇಲಾಖೆ ಕಾರ್ಯಾಲಯ ಮಾಹಿತಿ ಕೇಳಿದೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ … Continued

“ಟೆಕ್ಸಾಸ್‌ನಲ್ಲಿ ದುರಂತ”: ಟ್ರಕ್‌ನೊಳಗೇ 46 ವಲಸಿಗರ ಸಾವು, ಅನೇಕರು ಆಸ್ಪತ್ರೆಗೆ ದಾಖಲು

ಟೆಕ್ಸಾಸ್‌(ಅಮೆರಿಕ): ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರಾಕ್ಟರ್-ಟ್ರೇಲರ್‌ನಲ್ಲಿ 46 ವಲಸಿಗರ ಶವಗಳು ಪತ್ತೆಯಾಗಿವೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ, ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಮಾನವ ಕಳ್ಳಸಾಗಣೆಯ ಇತ್ತೀಚಿನ ಘಟನೆಗಳಲ್ಲಿ ಇದು ಒಂದಾಗಿದೆ. ಸ್ಯಾನ್ ಆಂಟೋನಿಯೊ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಟ್ರಕ್‌ನಲ್ಲಿ “ದೇಹಗಳ ರಾಶಿಗಳು” ಕಂಡುಬಂದಿವೆ ಮತ್ತು ಟ್ರಕ್‌ನಲ್ಲಿ ನೀರು ಇರಲಿಲ್ಲ, ಇದು ನಗರದ ದಕ್ಷಿಣ ಹೊರವಲಯದಲ್ಲಿರುವ ದೂರದ … Continued

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕಂಪಿಸಿದ ಭೂಮಿ

ಮಡಿಕೇರಿ/ಮಂಗಳೂರು: ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಭೂಕಂಪನದ ಅನುಭವವಾಗಿದ್ದು, ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿಯೂ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗಿದೆ. ಈ ಭೂಕಂಪನದಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಹಲವು ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ. ಸುಮಾರು 50 ಕಿ.ಮೀ ಪ್ರದೇಶದವರೆಗೂ … Continued