ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತೆ ಮಳೆ ಆರ್ಭಟದ ಮುನ್ಸೂಚನೆ: ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಎರಡು ದಿನ ಸುರಿದ ಮಳೆ ಜನರ ನಿದ್ದೆಗೆಡಿಸಿದೆ. ಈಗ ಕರಾವಳಿ ಜಿಲ್ಲೆಗಳಲ್ಲಿ ಜುಲೈ 8ರ ವರೆಗೂ ಗುಡುಗು ಸಹಿತ ಭಾರೀ ಮಳೆ ಮುಂದುವರಿಯುವ ಮುನ್ಸೂನೆ ನೀಡಿದ್ದು, ಹೀಗಾಗಿ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ರಾಜ್ಯದ ಕರಾವಳಿ ಭಾಗದಲ್ಲಿ … Continued

ರಾಹುಲ್ ಗಾಂಧಿ ಕಚೇರಿ ಧ್ವಂಸ ಘಟನೆ: ತನ್ನ ವಯನಾಡ್ ಜಿಲ್ಲಾ ಸಮಿತಿ ವಿಸರ್ಜಿಸಿದ ಎಸ್‌ಎಫ್‌ಐ

ತ್ರಿಶೂರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಚೇರಿಯನ್ನು ಕೆಲವು ಕಾರ್ಯಕರ್ತರು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಯನಾಡ್ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲು ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕೇರಳ ರಾಜ್ಯ ಸಮಿತಿ ಭಾನುವಾರ ನಿರ್ಧರಿಸಿದೆ. ತ್ರಿಶೂರ್‌ನಲ್ಲಿ ನಡೆದ ಹಗಲಿನಲ್ಲಿ ನಡೆದ ಸಭೆಯಲ್ಲಿ ವಯನಾಡ್ ಜಿಲ್ಲಾ ಸಮಿತಿಯನ್ನು ವಿಸರ್ಜಿಸಿ ಏಳು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಮಧ್ಯಂತರದ ಕ್ರಮವಾಗಿ … Continued

ಕೋವಿಡ್ ಮತ್ತೆ ಹೆಚ್ಚುತ್ತಿದೆಯೇ? : ತಮಿಳುನಾಡು, ಕೇರಳದಲ್ಲಿ ಆತಂಕದ ಲಕ್ಷಣಗಳು ಗೋಚರ

ನವದೆಹಲಿ: ದೇಶದ ದಕ್ಷಿಣ ರಾಜ್ಯಗಳಲ್ಲಿ ಕೋವಿಡ್ -19 ಮತ್ತೆ ಹೆಚ್ಚುತ್ತಿದೆ, ಏಕೆಂದರೆ ತಮಿಳುನಾಡು ಮತ್ತು ಕೇರಳವು ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಭಾನುವಾರದಂದು ಸತತ ಮೂರನೇ ದಿನ 2,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕುಗಳನ್ನು ವರದಿ ಮಾಡಿದೆ. ಭಾನುವಾರ ತಮಿಳುನಾಡು 2,672 ಪ್ರಕರಣಗಳನ್ನು ದಾಖಲಿಸಿದೆ. ಕೇರಳವು ಒಂದು ತಿಂಗಳಿನಿಂದ ದಿನಕ್ಕೆ ಸರಾಸರಿ … Continued

ಮೆಟ್ಟಿಲುಗಳಿಂದ ಬಿದ್ದು ಬಲ ಭುಜದ ಮೂಳೆ ಮುರಿದುಕೊಂಡ ಲಾಲು ಯಾದವ್‌

ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದು ಭುಜ ಮತ್ತು ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಪಾಟ್ನಾದ ಸರ್ಕ್ಯುಲರ್ ರಸ್ತೆಯ 10 ರಲ್ಲಿ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ತಂಗಿದ್ದ ಲಾಲು ಯಾದವ ಅವರು ಏಣಿಯಿಂದ … Continued

ಪಿಎಂಒ ಅಧಿಕಾರಿ ಎಂದು ಹೇಳಿ ಚಾಮರಾಜ ನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ : ದೂರು ದಾಖಲು

ಚಾಮರಾಜನಗರ: ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ತಾನು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಎಂದು ಸುಳ್ಳು ಹೇಳಿ ಬಿಳಿಗಿರಿರಂಗನ ಬೆಟ್ಟ ವೀಕ್ಷಣೆಗೆ ವ್ಯವಸ್ಥೆೆಗೆ ಮಾಡುವಂತೆ ತಿಳಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಜೂನ್‌ 27 ರಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, … Continued

ಸಾಮಾಜಿಕ-ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣಕ್ಕೆ ಕಾನೂನು ಬೇಕು: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ

ನವದೆಹಲಿ: ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆಗಾಗಿ ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿರುವ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿ ಕಟ್ಟುನಿಟ್ಟಾದ ನಿಯಮಾವಳಿಗಳಿಗೆ ಕರೆ ನೀಡಿದ್ದಾರೆ ಹಾಗೂ ಮಾಧ್ಯಮ ಪ್ರಯೋಗಗಳು ಕಾನೂನಾತ್ಮಕ ಆಡಳಿತಕ್ಕೆ ಆರೋಗ್ಯಕರವಲ್ಲ ಎಂದು ಪ್ರತಿಪಾದಿಸಿದ್ದಾರೆ. ಭಾನುವಾರದ ವರ್ಚುವಲ್ ಭಾಷಣದಲ್ಲಿ, ನ್ಯಾಯಮೂರ್ತಿ ಜೆ.ಬಿ. … Continued

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೈದರಾಬಾದನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ: ಹೆಸರು ಬದಲಾವಣೆಯ ಸಂಚಲನ

ಹೈದರಾಬಾದ್‌: ಭಾನುವಾರ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ್ದು ಹೆಸರು ಬದಲಾವಣೆಯ ಸಂಚಲನ ಮೂಡಿಸಿದೆ. ಬಿಜೆಪಿ ಸಭೆಯ ಎರಡನೇ ದಿನದಂದು, ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣದ ರಾಜಧಾನಿಯನ್ನು “ಭಾಗ್ಯನಗರ” ಎಂದು ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸರ್ದಾರ್ ಪಟೇಲ್ ಅವರು … Continued

ಗೋಕರ್ಣ: ಜುಲೈ 13ರಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುಮಾರ್ಸ್ಯ ಆರಂಭ

ಕುಮಟಾ: ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುರ್ಮಾಸ್ಯ ಜುಲೈ 13ರಿಂದ ಸೆಪ್ಟೆಂಬರ್‌ 10ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಅಶೋಕೆಯಲ್ಲಿ ನಡೆಯಲಿದ್ದು, ಇದನ್ನು ಗುರುಕುಲ ಚಾತುರ್ಮಾಸ್ಯ ಎಂದು ಸಂಕಲ್ಪಿಸಲಾಗಿದೆ ಈ ವರ್ಷದ ಚಾತುಮಾಸ್ಯ ಕುಮಟಾ ತಾಲೂಕಿನ ಗೋಕರ್ಣದ ಅಶೋಕೆಯಲ್ಲಿ ಶುಭಕೃತ ಸಂವತ್ಸರದ ಆಶಾಢ ಪೂರ್ಣಿಮೆಯಿಂದ … Continued

ಮಣಿಪುರ : ನೋನಿ ಭೂಕುಸಿತದಲ್ಲಿ ಮತ್ತೆ ಮೂರು ಮೃತದೇಹಗಳು ಪತ್ತೆ, ಸಾವಿನ ಸಂಖ್ಯೆ 37ಕ್ಕೆ ಏರಿಕೆ

ಗುವಾಹತಿ: ಮಣಿಪುರದ ನೋನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿ ಅವಶೇಷಗಳ ಅಡಿ ಸಿಲುಕಿದ್ದ ಮತ್ತೆ ಮೂವರ ಮೃತದೇಹಗಳನ್ನು ಭಾನುವಾರ ಹೊರ ತೆಗೆಯಲಾಗಿದ್ದು, ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋನಿ ಜಿಲ್ಲೆಯ ತುಪುಲ್‌ನಲ್ಲಿ ರೈಲ್ವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಗುರುವಾರ ಬೆಳಗಿನ ಜಾವ ಸಂಭವಿಸಿದ್ದ ಈ ದುರಂತ ಸ್ಥಳದಲ್ಲಿ … Continued

ಜಮ್ಮುವಿನಲ್ಲಿ ಸೆರೆ ಸಿಕ್ಕ ಇಬ್ಬರು ಲಷ್ಕರ್ ಭಯೋತ್ಪಾದಕರಲ್ಲಿ ಒಬ್ಬ ಬಿಜೆಪಿ ಐಟಿ ಸೆಲ್ ಮಾಜಿ ಮುಖ್ಯಸ್ಥ: ವರದಿ

ಜಮ್ಮು: ಭಾನುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕರಲ್ಲಿ ಒಬ್ಬನನ್ನು ತಾಲಿಬ್ ಹುಸೇನ್ ಎಂದು ಗುರುತಿಸಲಾಗಿದ್ದು, ಈತ ಬಿಜೆಪಿ ಒಳಗೆ ನುಸುಳಿದ್ದಾನೆ ಮತ್ತು ಈತನನ್ನು ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಉಸ್ತುವಾರಿಯನ್ನೂ ಸಹ ಮಾಡಲಾಗಿತ್ತು ಎಂದು … Continued