ರಾಷ್ಟ್ರಪತಿ ಚುನಾವಣೆ :  ಕರ್ನಾಟಕಕ್ಕೆ ಬಂದ ಅಭ್ಯರ್ಥಿ ಯಶವಂತ ಸಿನ್ಹಾ 

ಬೆಂಗಳೂರು: ಎನ್‌ಡಿಎ ಹೊರತಾದ ಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಕರ್ನಾಟಕದ ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಲು ಶನಿವಾರ ಸಂಜೆ ಬೆಂಗಳೂರಿಗೆ ಬಂದಿದ್ದಾರೆ. ಶನಿವಾರ ಬೆಳಗ್ಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದ ಯಶವಂತ ಸಿನ್ಹಾ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅಬರು ಬರಮಾಡಿಕೊಂಡರು. ಅಲ್ಲಿ ಪ್ರಚಾರ ಕಾರ್ಯ ಕೈಗೊಂಡ ಬಳಿಕ … Continued

ಚಾಮರಾಜನಗರ : 14 ಅಡಿ ಉದ್ದದ ದೈತ್ಯ ಹೆಬ್ಬಾವು ಸೆರೆ | ವೀಕ್ಷಿಸಿ

ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ 14 ಅಡಿ ಉದ್ದದ ಸುಮಾರು ಒಂದು ಕ್ವಿಂಟಲ್​ ತೂಕದ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರಿಗೆ ಈ ಹೆಬ್ಬಾವು ಕಂಡಿದೆ. ಈ ದೈತ್ಯ ಗಾತ್ರದ ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅವರು ತಕ್ಷಣವೇ ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅವರು ಸ್ನೇಕ್ ಚಾಂಪ್ ಅವರಿಗೆ ಈ … Continued

ಶಿರಸಿ: ಜುಲೈ 13ರಿಂದ ಸ್ವರ್ಣವಲ್ಲಿ ಶ್ರೀಗಳ ಚಾತುರ್ಮಾಸ್ಯ ಆರಂಭ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ‌ ಸ್ವರ್ಣವಲ್ಲೀ‌ ಮಠದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ 32ನೇ ಚಾತುರ್ಮಾಸ್ಯ ಜುಲೈ 13ರ ಆಷಾಢ ಪೂರ್ಣಿಮೆಯಿಂದ ಆರಂಭವಾಗಿ ಸೆಪ್ಟೆಂಬರ್‌ 10ರ ವರೆಗೆ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ. ಅಂದು ಶ್ರೀಗಳು ವ್ಯಾಸ ಪೂಜೆ‌ ಸಲ್ಲಿಸಿ ವ್ರತ ಸಂಕಲ್ಪ ಮಾಡಿದ ಬಳಿಕ ಶಿಷ್ಯರು ಶ್ರೀಗಳಿಗೆ ಪಾದಪೂಜೆ‌ ನಡೆಸಲಿದ್ದಾರೆ. ಮಧ್ಯಾಹ್ನ … Continued

ಆಲ್ಟ್‌ ನ್ಯೂಸ್‌ನ ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್‌: 14 ದಿನ ನ್ಯಾಯಾಂಗ ಬಂಧನ

ನವದೆಹಲಿ : ಹಿಂದೂ ದೇವತೆ ಕುರಿತ ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧತನಾಗಿರುವ ಆಲ್ಟ್‌ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ ಹಾಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಶನಿವಾರ ಹಾಜರುಪಡಿಸಲಾಯಿತು. ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ದೆಹಲಿ ಪೊಲೀಸರು … Continued

ಕೊಡಗಿನ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ, ಈವರೆಗೆ 7 ಬಾರಿ ಭೂಕಂಪನ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಏಳನೇ ಬಾರಿ ಕೊಡಗಿನ ಕೆಲಭಾಗದಲ್ಲಿ ಜನರಿಗೆ ಭೂಮಿ ಕಂಪನದ ಅನುಭವವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇಂದು, ಶನಿವಾರ ಮಧ್ಯಾಹ್ನ 1:15ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3-4 ಸೆಕೆಂಡ್‌ಗಳ ಕಾಲ ಜಿಲ್ಲೆಯ ಚೆಂಬು, ಪೆರಾಜೆ ಹಾಗೂ ಕರಿಕೆ ಸೇರಿದಂತೆ ಕೆಲವಡೆ ಭೂಮಿ ಕಂಪಿಸಿರುವ ಅನುಭವಾಗಿದೆ. ಈ ಮಧ್ಯೆ ಕೊಡಗಿನ ಹಾರಂಗಿ … Continued

ಕೋರ್ಟ್‌ ಹೊರಗೆ ಉದಯಪುರ ಟೈಲರ್‌ ಹತ್ಯೆ ಆರೋಪಿಗಳ ಮೇಲೆ ಕೋಪೋದ್ರಿಕ್ತ ಗುಂಪಿನಿಂದ ಥಳಿತ | ವೀಕ್ಷಿಸಿ

ನವದೆಹಲಿ:ನವದೆಹಲಿ: ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಇಬ್ಬರು ಹಂತಕರನ್ನು ಜೈಪುರ ನ್ಯಾಯಾಲಯದ ಹೊರಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಾಗ ಅವರ ಮೇಲೆ ಹೊರಗೆ ದೊಡ್ಡ ಗುಂಪೊಂದು ಇಂದು, ಶನಿವಾರ ದಾಳಿ ಮಾಡಿದೆ. ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿತು. ಆದರೆ ಪೊಲೀಸರು ಕೂಡಲೇ ಅವರನ್ನು ಕಾಯುವ … Continued

ಉದಯ್‌ಪುರದ ಶಿರಚ್ಛೇದ ಘಟನೆ ನಂತರ ಈಗ 2018ರಲ್ಲಿ ಪ್ರವಾದಿ ಹೇಳಿಕೆಗೆ ಕೊಲೆಯಾದ ಕಮಲೇಶ್ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಲಕ್ನೋ: ರಾಜಸ್ಥಾನದ ಉದಯ್‌ಪುರದಲ್ಲಿ ಹಾಡಹಗಲೇ ಟೈಲರ್‌ನ ಹತ್ಯೆಯ ನಂತರ, ಈ ಮೊದಲು ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಪತ್ನಿ ತನಗೆ ಕೊಲೆ ಬೆದರಿಕೆಯ ಅನಾಮಧೇಯ ಪತ್ರ ಬಂದಿದೆ ಎಂದು ಆರೋಪಿಸಿದ್ದಾರೆ. ಕಿರಣ್ ತಿವಾರಿ ಅವರು ಜೂನ್ 22 ರಂದು ತಮ್ಮ ಲಕ್ನೋ ಮನೆಯೊಳಗೆ ಬಿಳಿ ಲಕೋಟೆಯಲ್ಲಿರುವ ಬೆದರಿಕೆ ಪತ್ರವನ್ನು ಪತ್ತೆ … Continued

ಬ್ಯಾಟ್‌ನಲ್ಲಿ ಬುಂ..ಬುಂ.. ಬುಮ್ರಾ…: ENG vs IND ಟೆಸ್ಟ್- ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ಲಾರಾ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ | ವೀಕ್ಷಿಸಿ

ಎಡ್ಜ್‌ಬಸ್ಟನ್ (ಇಂಗ್ಲಂಡ್‌): ಶನಿವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಟೆಸ್ಟ್‌ನ 2ನೇ ದಿನದಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಅವರು ಹಲವು ವರ್ಷಗಳ ಹಿಂದಿನ ಬ್ರಿಯಾನ್ ಲಾರಾ ಅವರ ಟೆಸ್ಟ್ ದಾಖಲೆಯನ್ನು ಮುರಿದಿದ್ದಾರೆ. ಬ್ರಾಡ್ ಅವರ ಒಂದು ಓವರ್‌ನಲ್ಲಿ ಬುಮ್ರಾ 35 ರನ್ ಚಚ್ಚಿದ್ದಾರೆ. … Continued

ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಮಾಡಿದ್ದಕ್ಕೆ ಮತ್ತೊಂದು ಶಂಕಿತ ಹತ್ಯೆ ಪ್ರಕರಣ ಬೆಳಕಿಗೆ: ಪ್ರಕರಣದ ತನಿಖೆ ಎನ್‌ಐಎಗೆ

ಮುಂಬೈ: ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ತೇಲಿಯನ್ನು ಕೊಲ್ಲುವ ಒಂದು ವಾರದ ಮೊದಲು, ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ಕೆಮಿಸ್ಟ್‌ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಕೊಲೆಯಾಗಿದ್ದು, ಟಿವಿ ಚರ್ಚೆಯಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತೀಕಾರವಾಗಿ ಕೊಲ್ಹೆಯನ್ನು ಕೊಲ್ಲಲಾಗಿದೆ … Continued

ಮನೆಯೊಳಗೆ ಮಲಗಿಕೊಂಡಿರುವ ರೀತಿಯಲ್ಲಿ ವ್ಯಕ್ತಿಯ ಅಸ್ಥಿ ಪಂಜರ ಪತ್ತೆ: 8-9 ತಿಂಗಳ ಹಿಂದೆ ಮೃತಪಟ್ಟಿರುವ ಶಂಕೆ

ಬೆಳಗಾವಿ: ಮನೆಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಮೃತಪಟ್ಟ ಮನುಷ್ಯನ ಅಸ್ಥಿಪಂಜರ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ಶಿವಾಪುರ ಗ್ರಾಮದ ಮನೆಯೊಂದರಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿದ್ದು, ಮೃತನನ್ನು ಅದೇ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂದು ಶಂಕಿಸಲಾಗಿದೆ. ಮನೆಯಲ್ಲಿಯೇಮೃತಪಟ್ಟ ವ್ಯಕ್ತಿಯ ಅಸ್ಥಿಪಂಜರ ಸುಮಾರಿ 8 ರಿಂದ 9 ತಿಂಗಳ ಹಿಂದಿನದಾಗಿರಬಹುದು ಎಂದು … Continued