ತಿರಂಗಾ ಯಾತ್ರೆ ವೇಳೆ ಹಸು ನುಗ್ಗಿ ಕಾಲು ಮುರಿತಕ್ಕೊಳಗಾದ ಗುಜರಾತಿನ ಮಾಜಿ ಡಿಸಿಎಂ ನಿತಿನ್ ಪಟೇಲ್ : ದೃಶ್ಯ ಸೆರೆ

ಅಹಮದಾಬಾದ್‌: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ಪಟ್ಟಣದಲ್ಲಿ ಇಂದು, ಶನಿವಾರ ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನೇತೃತ್ವದ “ತಿರಂಗ ಯಾತ್ರೆ” ಜನ ಸಂದಣಿಯಲ್ಲಿ ನುಗ್ಗಿದ ಘಟನೆ ನಡೆದಿದ್ದು, ಈ ವೇಳೆ ನಿತಿನ್ ಪಟೇಲ್ ಅವರ ಎಡಗಾಲಿಗೆ ಮೂಳೆ ಮುರಿತವಾಗಿದೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ. “ಕಡಿ ನಗರದಲ್ಲಿ ತಿರಂಗ ಯಾತ್ರೆಯಲ್ಲಿ ಸುಮಾರು 2,000 … Continued

ಧ್ವಜ ಬೀಸುವ ಮೂಲಕ ಅತಿದೊಡ್ಡ ಮಾನವ ಚಿತ್ರ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ ಚಂಡೀಗಡ ವಿವಿ ವಿದ್ಯಾರ್ಥಿಗಳು

ಚಂಡೀಗಡ: ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರವು ಸಜ್ಜಾಗಿದೆ. ಜನರು ಮತ್ತು ವಿವಿಧ ಸಂಘಟನೆಗಳು ಈಗಾಗಲೇ ಈ ಸಂದರ್ಭವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಪ್ರಾರಂಭಿಸಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಇನ್ನು ಕೆಲವರು ದೊಡ್ಡ ಪ್ರಮಾಣದಲ್ಲಿ ದಿನವನ್ನು ಆಚರಿಸುತ್ತಿದ್ದಾರೆ. ಚಂಡೀಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಎನ್‌ಐಡಿ (NID) … Continued

ಸೂಪರ್‌ ಅಮ್ಮ :ಮಂಡ್ಯದಲ್ಲಿ ಎದೆ ಝಲ್‌ ಎನ್ನುವ ಘಟನೆಯಲ್ಲಿ ನಾಗರ ಹಾವು ಕಡಿತದಿಂದ ಮಗನನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿದ ತಾಯಿ | ವೀಕ್ಷಿಸಿ

ಮಂಡ್ಯ: ಸಮಯಪ್ರಜ್ಞೆಯಿಂದ ಸರ್ಪನ ಕಡಿತದಿಂದ ತನ್ನ ಪುಟ್ಟ ಮಗನನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾಗಿದ್ದಾಳೆ. ಎದೆ ಝಲ್ಲೆನಿಸುವ ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ, ತಾಯಿ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ಮನೆಯಿಂದ ತಾಯಿ ಮಗ ಹೊರಬರುವ ವೇಳೆ ಈ ಘಟನೆ ನಡೆದಿದೆ. ತಾಯಿ-ಮಗ ಮನೆಯಿಂದ ಹೊರಬರುವ ವೇಳೆ ಮನೆ ಮುಂಭಾಗದ ಮೆಟ್ಟಿಲು … Continued

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕುಯ್ದು ಕೊಂದ ಗಂಡ: ಎರಡೂ ಹೆಣ್ಣು ಮಕ್ಕಳಾಗಿದ್ದಕ್ಕೆ ಈ ನೀಚ ಕೃತ್ಯ

ಹಾಸನ: ಕೋರ್ಟ್ ಆವರಣದಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಶನಿವಾರ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಪತ್ನಿ ಚೈತ್ರಾ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊಳೆನರಸೀಪುರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಹೊಳೆನರಸೀಪುರ ತಾಲೂಕಿನ … Continued

ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗ ಅಭಿಯಾನ

ಹುಬ್ಬಳ್ಳಿ: ಭಾರತೀಯ ಜೀವನ‌ ಶೈಲಿ ನಮ್ಮಲ್ಲಿ ಅಡಕವಾದಾಗ ಮಾತ್ರ ನಮ್ಮ‌ ಹಿರಿಯರು ನಮಗೆ ಕೊಟ್ಟ ಮೌಲ್ಯಗಳು ಉಳಿಯುತ್ತವೆ. ಭಾರತದ ರಕ್ಷಣೆ ಹಾಗೂ ಏಳಿಗೆಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು. ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಧ್ವಜಾರೋಹಣ … Continued

ನ್ಯೂಯಾರ್ಕ್‌ ಕಾರ್ಯಕ್ರಮದಲ್ಲಿ ವೇದಿಕೆಗೆ ನುಗ್ಗಿ ಸಲ್ಮಾನ್ ರಶ್ದಿಯನ್ನು ಇರಿದ ವ್ಯಕ್ತಿಯ ಬಗ್ಗೆ ಕೆಲ ʼಉಗ್ರʼ ಸಂಗತಿಗಳು ಬೆಳಕಿಗೆ

ನ್ಯೂಯಾರ್ಕ್‌ : ಇಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆಯೇ ದಾಳಿಕೋರನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಲೇಖಕ ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ದಾಳಿಕೋರನನ್ನು ಬಂಧಿಸಲಾಗಿದ್ದು, ಆತನನ್ನು ನ್ಯೂಜೆರ್ಸಿಯ ಹದಿ ಮತರ್ (24) ಎಂದು ಗುರುತಿಸಲಾಗಿದೆ. ಆರೋಪಿ ಹದಿ ಮತರ್‌ನ ಸಾಮಾಜಿಕ ಮಾಧ್ಯಮದ ಪ್ರಾಥಮಿಕ ತನಿಖೆಯು … Continued

ಎರಡು ತಿಂಗಳ ನಂತರ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಸೋಂಕು

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮತ್ತೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಪ್ರತ್ಯೇಕವಾಗಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು, ಶನಿವಾರ ಕೋವಿಡ್ -19 … Continued

ಕಾರವಾರ: ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸುಂದರವಾಗಿ ನಿರ್ಮಾಣವಾಯ್ತು ಭಾರತದ ಸಂಸತ್ ಭವನ…!

ಕಾರವಾರ : ಯಾವುದಕ್ಕೇ ಆಕೃತಿಯಾದರೂ ಆದರೂ ಅದಕ್ಕೆ ಕಲಾತ್ಮಕ ರೂಪ ಕೊಡುವುದು ಕಲಾವಿದನ ಚಾಣಾಕ್ಷತೆ. ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು  ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಭರತದ ಸಂಸತ್ ಭವನ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಪರೂಪದ ಕಲಾಕೃತಿಯನ್ನು ತಯಾರಿಸಿದವರು ಮಿಲಿಂದ್ ಉದಯಕಾಂತ್ ಅಣ್ವೇಕರ್ ಎಂಬವರು. ಕಾರವಾರ ನಗರದಲ್ಲಿ ಅಕ್ಕಸಾಲಿಗರಾಗಿ … Continued

ಹರ್ ಘರ್ ತಿರಂಗಾ ಅಭಿಯಾನ : ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೊಕ್ಕೆ ರಾಷ್ಟ್ರಧ್ವಜ ಹಾಕಿಕೊಂಡ ಆರ್‌ಎಸ್‌ಎಸ್‌

ನವದೆಹಲಿ: ಭಾರತವು ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು ತನ್ನ ಸಾಂಪ್ರದಾಯಿಕ ಕೇಸರಿ ಧ್ವಜದಿಂದ ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ. ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿಯವರು “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದ ಅಡಿಯಲ್ಲಿ ಭಾರತದ ಸ್ವಾತಂತ್ರ್ಯದ 75 ವರ್ಷಗಳ … Continued

ನ್ಯೂಯಾರ್ಕ್ ಕಾರ್ಯಕ್ರಮದಲ್ಲಿ ವ್ಯಕ್ತಿಯಿಂದ ಇರಿತ: ಗಾಯಗೊಂಡ ಸಾಹಿತಿ ಸಲ್ಮಾನ್ ರಶ್ದಿಗೆ ವೆಂಟಿಲೇಟರ್‌ ಅಳವಡಿಕೆ, ಒಂದು ಕಣ್ಣು ಕಳೆದುಕೊಳ್ಳುವ ಭೀತಿ : ವರದಿ

ನ್ಯೂಯಾರ್ಕ್‌: ಶುಕ್ರವಾರ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಲವು ಬಾರಿ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರ ಪುಸ್ತಕ ಏಜೆಂಟ್ ಆಂಡ್ರ್ಯೂ ವೈಲಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆಂಡ್ರ್ಯೂ ವೈಲಿ ಪ್ರಕಾರ, ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ರಶ್ದಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು ಮತ್ತು ಅವರ ತೋಳುಗಳಲ್ಲಿನ ನರಗಳನ್ನು ಕತ್ತರಿಸಲಾಯಿತು. ರಶ್ದಿಯ … Continued