ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಮೊತ್ತದ ಮೇಲಿನ ಬೋನಸ್ ಘೋಷಣೆ ಮಾಡಿದ ರಾಜ್ಯ ಸರ್ಕಾರ

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಬೋನಸ್ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಸಿಹಿಸುದ್ದಿ ನೀಡಿದೆ. ವರ್ಷಕ್ಕೆ ಪ್ರತಿ ಸಾವಿರ ರೂಪಾಯಿಗಳಿಗೆ 85 ರೂ.ಗಳಂತೆ ಲಾಭಾಂಶ ನೀಡಿ ಆದೇಶಿಸಿದೆ. ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ನಡಾವಳಿಗಳನ್ನು ಹೊರಡಿಸಿದ್ದಾರೆ. … Continued

ಪಕ್ಕಾ ದೇಸೀ ತಂತ್ರದೊಂದಿಗೆ ಜಲಾವೃತ ರಸ್ತೆ ದಾಟಲು ಸಹಾಯ ಮಾಡುವ ವ್ಯಕ್ತಿ | ವೀಕ್ಷಿಸಿ

ಮಳೆಗಾಲವು ಅನೇಕರಿಗೆ ಸಂತೋಷವನ್ನು ತರಬಹುದು, ಆದರೆ ಇದು ನಗರ ಪ್ರದೇಶಗಳಲ್ಲಿ ಕೆಸರು ಮತ್ತು ಜಲಾವೃತವಾದ ಬೀದಿಗಳಂತಹ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುವ ಸನ್ನಿವೇಶಗಳನ್ನೂ ಸೃಷ್ಟಿಸುತ್ತವೆ. ನಿರಂತರ ಮಳೆಯಿಂದಾಗಿ ಬೀದಿಗಳು ನಿಯಮಿತವಾಗಿ ಜಲಾವೃತವಾಗುವ ವರದಿಗಳೊಂದಿಗೆ, ಅನೇಕರು ನೀರು ತುಂಬಿ ನದಿಗಳಂತಾದ ಬೀದಿಗಳಲ್ಲಿ ಭಯಾನಕತೆಯನ್ನೂ ಎದುರಿಸಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ಪಾದಾಚಾರಿಗಳಿಗೆ ನೀರು ತುಂಬಿದ ರಸ್ತೆ ದಾಟಲು ಸಹಾಯ ಮಾಡಲು ಉಪಯೋಗಿಸಿದ … Continued

ವಕ್ಫ್ ಬೋರ್ಡ್ ಪ್ರಕರಣ: ಎಎಪಿ ಶಾಸಕ ಅಮಾನತುಲ್ಲಾ ಖಾನ್‌ 4 ದಿನ ಎಸಿಬಿ ಕಸ್ಟಡಿಗೆ

ನವದೆಹಲಿ: ವಕ್ಫ್ ಬೋರ್ಡ್ ನಿಧಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಎಸಿಬಿಗೆ ನಾಲ್ಕು ದಿನಗಳ ಕಸ್ಟಡಿ ನೀಡಿದೆ. ಓಖ್ಲಾ ಶಾಸಕರನ್ನು ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳದವರು ಸೆಪ್ಟೆಂಬರ್ 16, ಶುಕ್ರವಾರ ಬಂಧಿಸಿದ್ದಾರೆ. ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪದ … Continued

ಮುರುಘಾ ಶರಣರ ಪೀಠ ತ್ಯಾಗಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಶಾಸಕ ಯತ್ನಾಳ ಮನವಿ

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಶನಿವಾರ ಪತ್ರ ಬರೆದಿದ್ದಾರೆ. ಮುರುಘಾ ಮಠದ ಆಡಳಿತ ಮತ್ತು … Continued

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಶುಕ್ರವಾರ, ಮುಂಬೈನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್ ಶುಕ್ರವಾರ ಈ ಹೇಳಿಕೆ ನೀಡಿದ್ದಾರೆ. ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಮಾತನಾಡುವ ರೀತಿಯಲ್ಲಿ “ಒಳಗೊಳ್ಳುವಿಕೆಯನ್ನು ತೋರಿಸಬೇಕು. ನೀವು ಪ್ರಾದೇಶಿಕ ಭಾಷೆ ಮಾತನಾಡದ … Continued

ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ತಂದ ಬೋಯಿಂಗ್ ಜೆಟ್ ಒಳಗೆ ಹೇಗಿತ್ತು ವ್ಯವಸ್ಥೆ ..?…ಇಲ್ಲಿದೆ ನೋಡಿ

ನವದೆಹಲಿ: ಶನಿವಾರ ಮಧ್ಯಪ್ರದೇಶದ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಎಂಟು ಚಿರತೆಗಳನ್ನು ಭಾರತೀಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು “ಐತಿಹಾಸಿಕ ದಿನ” ಎಂದು ಕರೆದಿದ್ದಾರೆ. ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷವಾಗಿ ಕಸ್ಟಮೈಸ್ ಮಾಡಲಾದ ಬೋಯಿಂಗ್ 747 ನಲ್ಲಿ ಚಿರತೆಗಳು ಭಾರತಕ್ಕೆ ಬಂದವು. ಈ ದೊಡ್ಡ … Continued

38 ಕೋಟಿ ವರ್ಷಗಳಷ್ಟು ಪುರಾತನ ಮೀನಿನ ಹೃದಯದ ಪಳೆಯುಳಿಕೆ ಪತ್ತೆ….! ಜೀವ ವಿಕಾಸದ ಮೇಲೆ ಚೆಲ್ಲಲಿದೆ ಹೊಸ ಬೆಳಕು

ಆಸ್ಟ್ರೇಲಿಯಾದ ವಿಜ್ಞಾನಿಗಳು 38 ಕೋಟಿ ವರ್ಷಗಳಷ್ಟು ಪುರಾತನವಾದ ಪಳೆಯುಳಿಕೆಯಲ್ಲಿ ಮೀನಿನ ಹೃದಯವನ್ನು ಪತ್ತೆ ಹಚ್ಚಿದ್ದಾರೆ. ಕರ್ಟಿನ್ ವಿಶ್ವವಿದ್ಯಾನಿಲಯದ ರೇಸಿಂಗ್‌ನ ಸಂಶೋಧಕರು ಈ ಆವಿಷ್ಕಾರ ಮಾಡಿದ್ದಾರೆ. ಇದು ಮಾನವರು ಸೇರಿದಂತೆ ದವಡೆಯ ಕಶೇರುಕಗಳ (“beautifully reserved”) ವಿಕಾಸದ ಬಗ್ಗೆ ಸುಳಿವುಗಳನ್ನು ನೀಡುತ್ತದೆ ಎಂದು ಸಿಎನ್‌ಇಟಿಯ ವರದಿ ತಿಳಿಸಿದೆ. ಪಳೆಯುಳಿಕೆಯು ಹೊಟ್ಟೆ, ಕರುಳು ಮತ್ತು ಯಕೃತ್ತನ್ನು ಸಹ ಒಳಗೊಂಡಿದೆ, … Continued

ನಬಾರ್ಡ್​ನಲ್ಲಿ 177 ಹುದ್ದೆಗೆ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ, ಪದವಿಯಾದವರು ಸಲ್ಲಿಸಬಹುದು

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD) 177 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ವ್ಯವಸ್ಥಾಪಕ ಹುದ್ದೆ ಭರ್ತಿಗೆ ನಬಾರ್ಡ್​ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​​ ​10. 177 ಹುದ್ದೆಗಳಲ್ಲಿ ಕರ್ನಾಟಕ ವೃಂದಕ್ಕೆ 4 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಬ್ಯಾಂಕ್ ಹೆಸರು: … Continued

ಬಿಡಿಎ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣ: ಯಡಿಯೂರಪ್ಪ, ಇತರರ ವಿರುದ್ಧ ಎಫ್‌ಐಆರ್‌ ದಾಖಲು ದಾಖಲು

posted in: ರಾಜ್ಯ | 0

ಬೆಂಗಳೂರು: ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡುವ ಸಲುವಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಸಂಬಂಧ ವಿಶೇಷ ನ್ಯಾಯಾಲಯದ ಆದೇಶದ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯರಪ್ಪ ಅವರ ಮೇಲೆ ಎಫ್‍ಐಆರ್ ದಾಖಲಾಗಿದೆ. ವಿಶೇಷ ನ್ಯಾಯಾಲಯವು ದೂರಿನ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಲೋಕಾಯುಕ್ತ ಪೊಲೀಸರು ಬಿ.ಎಸ್.ಯಡಿಯೂರಪ್ಪ, … Continued

ಯಲ್ಲಾಪುರ: ಲಾರಿ ಕಂದಕಕ್ಕೆ ಉರುಳಿ ಸ್ಥಳದಲ್ಲೇ ಇಬ್ಬರ ಸಾವು

posted in: ರಾಜ್ಯ | 0

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಾಟ್’ನ ಯು ಟರ್ನ್ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದ್ದು ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದು ಆಂಧ್ರಪ್ರದೇಶದ ಲಾರಿಯಾಗಿದ್ದು ಗ್ರಾನೈಟ್ ತುಂಬಿಕೊಂಡು ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ. ಈ … Continued