ಪಾಕಿಸ್ತಾನ ಸೇನೆಯು ಭಯೋತ್ಪಾದನೆ ಹರಡುತ್ತಿದೆ: ಲಾಹೋರ್ ಸಮ್ಮೇಳನದಲ್ಲಿ ಪಶ್ತೂನ್ ನಾಯಕರು, ವಕೀಲರ ಆರೋಪ

ಲಾಹೋರ್: ಅಕ್ಟೋಬರ್ 22-23 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನದಲ್ಲಿ ವಾರ್ಷಿಕ ಅಸ್ಮಾ ಜಹಾಂಗೀರ್ ಸಮ್ಮೇಳನದಲ್ಲಿ ಕೆಲವು ರಾಜಕಾರಣಿಗಳು ಮತ್ತು ವಕೀಲರು ಪಾಕಿಸ್ತಾನದ ಸೇನೆಯನ್ನು ಟೀಕಿಸಿದರು, ಜನರಲ್‌ಗಳು ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಹರಡಲು ಶತಕೋಟಿ ಡಾಲರ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅಕ್ಟೋಬರ್ 23 ರಂದು ಸಮ್ಮೇಳನದ ಮುಕ್ತಾಯದ ದಿನದಂದು, ಪಶ್ತೂನ್ ತಹಾಫುಜ್ ಮೂವ್ಮೆಂಟ್ (PTM) ಅಧ್ಯಕ್ಷ ಮಂಜೂರ್ ಪಶ್ತೀನ್ … Continued

ತಿರುಪತಿಯ ಎಸ್‌ವಿ ಪುರಂ ಟೋಲ್ ಪ್ಲಾಜಾದಲ್ಲಿ ವಿದ್ಯಾರ್ಥಿಗಳಿಂದ ಸಿಬ್ಬಂದಿ ಮೇಲೆ ಹಲ್ಲೆ : ಪರಿಸ್ಥಿತಿ ಉದ್ವಿಗ್ನ | ವೀಕ್ಷಿಸಿ

ಹೈದರಾಬಾದ್‌: ಆಂಧ್ರಪ್ರದೇಶದ ತಿರುಪತಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ತಮಿಳುನಾಡಿನ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಪಾವತಿ ಸಂಬಂಧಿತ ಸಮಸ್ಯೆಯಿಂದಾಗಿ ನಿಲ್ಲಿಸಿದ ನಂತರ ಘರ್ಷಣೆ ಸಂಭವಿಸಿದೆ. ವಿದ್ಯಾರ್ಥಿಗಳು ಟೋಲ್ ಬೂತ್ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ, ಅಲ್ಲಿದ್ದ ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಎದುರಿಸಿ, ಟೋಲ್ … Continued

ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಕರ್ನಾಟಕದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ (SC/ST Reservation) ಹೆಚ್ಚಳ ಮಾಡುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಭಾನುವಾರ ಅನುಮೋದನೆ ನೀಡಿದ್ದಾರೆ. ಈ ಕುರಿತು ಅಧಿಕೃತ ವಿಶೇಷ ರಾಜ್ಯಪತ್ರ (ಗೆಜೆಟ್‌) ಪ್ರಕಟಿಸಲಾಗಿದೆ. ಇನ್ನು ಮುಂದೆ ಪರಿಶಿಷ್ಟರ ಜಾತಿಯ ಮೀಸಲಾತಿ ಪ್ರಮಾಣ ಶೇ. 15 ರಿಂದ 17ಕ್ಕೆ ಏರಲಿದ್ದು, ಪರಿಶಿಷ್ಟ ಪಂಗಡದ … Continued

140 ಸಂಸದರ ಬೆಂಬಲ ಪಡೆದ ರಿಷಿ ಸುನಕ್ ಸೋಮವಾರದ ವೇಳೆಗೆ ಬ್ರಿಟನ್‌ ಪ್ರಧಾನಿಯಾಗಲೂಬಹುದು…

ಲಂಡನ್: ಬ್ರಿಟನ್‌ನ ಮಾಜಿ ವಿತ್ತ ಸಚಿವ ರಿಷಿ ಸುನಕ್ ಅವರ ಎದುರಾಳಿಗಳಾದ ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೊರ್ಡಾಂಟ್ ಸೋಮವಾರದೊಳಗೆ 100 ಸಂಸದರ ಬೆಂಬಲವನ್ನು ಗೆಲ್ಲಲು ವಿಫಲವಾದರೆ ಸುನಕ್‌ ಅವರು ದೇಶದ ಮುಂದಿನ ಪ್ರಧಾನಿಯಾಗಬಹುದು. ಸುನಕ್ ಈಗಾಗಲೇ ಸಂಸತ್ತಿನ 142 ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ. ಇಂಗ್ಲೆಂಡ್​ ಪ್ರಧಾನಿ ಹುದ್ದೆ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ … Continued

ಮೊಸರು ಉಪಯೋಗಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ…?

ಆಯುರ್ವೇದವು ಮನುಷ್ಯನ ಆರೋಗ್ಯಕರ ಜೀವನ ಶೈಲಿಯ ವಿಜ್ಞಾನ. ಆರೋಗ್ಯವು ದೋಷ , ಧಾತು, ಮಲ ಅಗ್ನಿ (ಜೈವಿಕ ಬೆಂಕಿ) ಮತ್ತು ವ್ಯಕ್ತಿಯ ಮಾನಸಿಕ ಸಾಮರ್ಥ್ಯದ ಸಮತೋಲನ ಸ್ಥಿತಿಯಾಗಿದೆ. ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವೇ ದೇಹದ ಮೂರು ಸ್ತಂಭಗಳು. ಆಹಾರದ ಪರಿಕಲ್ಪನೆಯನ್ನು ಆಯುರ್ವೇದದ ಸಾಹಿತ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವರ್ಣಿಸಲಾಗಿದೆ. ಆಹಾರವು ವಿವಿಧ ಸ್ಥಳ ಧರ್ಮ, … Continued

ಮಹಿಳೆಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆದ ನಂತರ ಕ್ಷಮೆ ಯಾಚಿಸಿದ ಸಚಿವ ಸೋಮಣ್ಣ

ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ಸಚಿವ ವಿ ಸೋಮಣ್ಣ ಭಾನುವಾರ ಕ್ಷಮೆಯಾಚಿಸಿದರು. ಜಿಲ್ಲೆಯ ಹಂಗ್ಲಾ ಗ್ರಾಮದಲ್ಲಿ ವಸತಿ ಮತ್ತು ಮೂಲಸೌಕರ್ಯ ಖಾತೆ ಸಚಿವರಾದ ಸೋಮಣ್ಣ ಆಸ್ತಿ ದಾಖಲೆ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಸತಿ ಉದ್ದೇಶಕ್ಕಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ … Continued

ಮಾನಹಾನಿ ಮಾಡಲು ಗಮನ ಬೇರೆಡೆಗೆ ಸೆಳೆಯಲು ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧ ಕ್ರಮ : ಕಾಂಗ್ರೆಸ್ ಹೇಳಿಕೆ

ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ಭಾನುವಾರ ಪ್ರತಿಕ್ರಿಯಿಸಿದೆ. ಮಾನಹಾನಿ ಮಾಡುವ ಉದ್ದೇಶದಿಂದ ಮತ್ತು ದೈನಂದಿನ ಕಾರ್ಯಗಳಿಂದ ಸಾರ್ವಜನಿಕರ ಗಮನ ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರವು ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ, “ದೀಪಾವಳಿ ವಾರಾಂತ್ಯದಲ್ಲಿ … Continued

ಏಷ್ಯಾದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 8 ನಗರಗಳು; ಆದ್ರೆ ದೆಹಲಿ ಪಟ್ಟಿಯಲ್ಲಿಲ್ಲ

ನವದೆಹಲಿ: ರಾಷ್ಟ್ರದ ರಾಜಧಾನಿ ಪ್ರದೇಶ(NCR) ಸೇರಿದಂತೆ ಏಷ್ಯಾದ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಎಂಟು ನಗರಗಳು ಸ್ಥಾನ ಪಡೆದಿವೆ. ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದ ಎಂಟು ನಗರಗಳು ಏಷ್ಯಾದ ಟಾಪ್ 10 ಕೆಟ್ಟ ಗಾಳಿಯ ಗುಣಮಟ್ಟದ ಪ್ರದೇಶಗಳ ಪಟ್ಟಿಯಲ್ಲಿವೆ. ಆದರೆ ಕೇವಲ ಒಂದು ನಗರ (ಆಂಧ್ರಪ್ರದೇಶದ … Continued

ಬೆಳಗಾವಿಯಲ್ಲಿ ದುರಂತ: ದೀಪಾವಳಿಗೆ ಬಟ್ಟೆ ಖರೀದಿಸಿ ವಾಪಸ್ಸಾಗುತ್ತಿದ್ದಾಗ ಕುತ್ತಿಗೆಗೆ ಗಾಳಿಪಟದ ದಾರ ಬಿಗಿದು ಐದು ವರ್ಷದ ಮಗು ಸಾವು

ಬೆಳಗಾವಿ : ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಮಗು ಮೃತಪಟ್ಟ ಘಟನೆ ಇಲ್ಲಿಯ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಇಲ್ಲಿಯ ಹಳೆ ಗಾಂಧಿನಗರ ಬ್ರಿಡ್ಜ್ ಮೇಲೆ ಭಾನುವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮೃತಪಟ್ಟ ಮಗುವನ್ನು ವರ್ಧನ್ ಈರಣ್ಣ ಬ್ಯಾಳಿ ಎಂದು ಗುರುತಿಸಲಾಗಿದೆ. ದೀಪಾವಳಿಗೆ ಬೆಳಗಾವಿಯ … Continued

ಕೆಜಿಎಫ್ ಬಾಬು ನಿವಾಸಕ್ಕೆ ಸಿ.ಎಂ. ಇಬ್ರಾಹಿಂ ಭೇಟಿ: ಜೆಡಿಎಸ್ ಸೇರ್ಪಡೆಯಾಗ್ತಾರೆಯೇ ಕೆಜಿಎಫ್ ಬಾಬು?

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು (KGF Babu) ನಿವಾಸಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಜಿಎಫ್ ಬಾಬುಗೆ ಜೆಡಿಎಸ್ ಸೇರ್ಪಡೆಗೊಳ್ಳುವಂತೆ ಸಿ.ಎಂ. ಇಬ್ರಾಹಿಂ ಆಹ್ವಾನ‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತಾನೇ ಖುದ್ದು ಕಾರು ಕಳುಹಿಸಿ ತನ್ನದೇ ಕಾರಿನಲ್ಲಿ ಸಿ.ಎಂ. ಇಬ್ರಾಹಿಂರನ್ನು ಕೆಜಿಎಫ್ ಬಾಬು ಮನೆಗೆ … Continued