ಈ ಮೋಡಿ ಮಾಡುವ ತಂತ್ರದೊಂದಿಗೆ ಮರವನ್ನು ಏರುವ ಬೃಹತ್ ಹೆಬ್ಬಾವು….ವೀಕ್ಷಿಸಿ

ಕಾಡಿನಲ್ಲಿ ಹೆಬ್ಬಾವು ಮರ ಹತ್ತಿದ ಹಳೆ ವಿಡಿಯೋವೊಂದು ಅಂತರ್ಜಾಲದಲ್ಲಿ ಮರುಕಳಿಸಿದ್ದು, ಇದೀಗ ವೈರಲ್ ಆಗಿದೆ. ಭಾರೀ ಉದ್ದ ಹಾವು ತನ್ನ ಭಾರೀ ತೂಕದ ಹೊರತಾಗಿಯೂ ಮರದ ಮೇಲೆ ಏರಲು ಆಕರ್ಷಕ ತಂತ್ರವನ್ನು ಬಳಸುವುದನ್ನು ಇದರಲ್ಲಿ ನೋಡಬಹುದು ವೀಡಿಯೊದಲ್ಲಿ ಕಂಡುಬರುವ ಹಾವು ರೆಟಿಕ್ಯುಲೇಟೆಡ್ ಹೆಬ್ಬಾವು ಆಗಿದ್ದು, ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು ಎಂದು ಹೇಳಲಾಗಿದೆ. … Continued

ಐಡಿಬಿಐ ಬ್ಯಾಂಕ್‌ನ 60.72% ಷೇರು ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ-ಎಲ್‌ಐಸಿ

ಮುಂಬೈ: ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನ (IDBI Bank) ಶೇಕಡ 60.72ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆಸಕ್ತರಿಂದ ಬಿಡ್‌ ಸಲ್ಲಿಕೆಗೆ ಆಹ್ವಾನಿಸಿರುವುದಾಗಿ ಶುಕ್ರವಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಹ ತನ್ನ ಪಾಲಿನ ಷೇರುಗಳನ್ನು ವಿಕ್ರಯಗೊಳಿಸಲಿದೆ ಸರ್ಕಾರ ಮತ್ತು ಜೀವ ವಿಮಾ ನಿಗಮ (ಎಲ್‌ಐಸಿ) … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳ ವರೆಗೆ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಇನ್ನೂ ನಿಂತಿಲ್ಲ. ರಾಜ್ಯದ ಮಲೆನಾಡು, ಕರಾವಳಿಯ ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಸಮುದ್ರದ ಭಾಗದ ಆಂಧ್ರ ಪ್ರದೇಶದ ಉತ್ತರ ಕರಾವಳಿಯಲ್ಲಿ ಎದ್ದಿದ್ದ ಮೇಲ್ಮೈ ಸುಳಿಗಾಳಿಯು ದಕ್ಷಿಣ ಕರಾವಳಿಯತ್ತ ಸಾಗಿದೆ. ಅದು ಸಮುದ್ರ ಮಟ್ಟದಿಂದ ಸುಮಾರು 3.5ಕಿಲೋ ಮೀಟರ್ ಎತ್ತರದಲ್ಲಿದೆ. … Continued

ನಾಸಿಕ್ ಬಳಿ ಹೊತ್ತಿ ಉರಿದ ಬಸ್: 11 ಪ್ರಯಾಣಿಕರು ಸಜೀವ ದಹನ, 38 ಮಂದಿಗೆ ಗಾಯ

ನಾಸಿಕ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇಂದು, ಶನಿವಾರ ಮುಂಜಾನೆ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹನ್ನೊಂದು ಮಂದಿ ಮೃತಪಟ್ಟಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಸಿಕ್-ಔರಂಗಾಬಾದ್ ಹೆದ್ದಾರಿಯಲ್ಲಿ ಡೀಸೆಲ್ ಸಾಗಿಸುತ್ತಿದ್ದ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಸ್ಲೀಪರ್ ಕೋಚ್ ಬಸ್‌ನ ಪ್ರಯಾಣಿಕರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ … Continued

ಕೊಚ್ಚಿ ಬಳಿ ₹ 1,200 ಕೋಟಿ ಮೌಲ್ಯದ 200 ಕೆಜಿ ಹೆರಾಯಿನ್ ವಶ, 6 ಇರಾನಿ ಪ್ರಜೆಗಳ ಬಂಧನ

ಕೊಚ್ಚಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ₹ 1,200 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 200 ಕೆಜಿ ಹೆರಾಯಿನ್ ಹೊಂದಿರುವ ಇರಾನ್ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಶುಕ್ರವಾರ ತಿಳಿಸಿದೆ. ಸುದ್ದಿಗಾರರನ್ನು ಭೇಟಿ ಮಾಡಿದ ಎನ್‌ಸಿಬಿಯ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್, ಏಜೆನ್ಸಿ ಆರು … Continued

ಸುಧಾರಿತ ಮೇಲ್ವಿಚಾರಣಾ ಮಾನಿಟರಿಂಗ್ ಸಿಸ್ಟಮ್ ದಕ್ಷ್ ಆರಂಭಿಸಿದ ಆರ್‌ಬಿಐ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಗುರುವಾರ ಅಡ್ವಾನ್ಸ್ ಮೇಲುಸ್ತುವಾರಿ ಮಾನಿಟರಿಂಗ್ ಸಿಸ್ಟಮ್ ‘ದಕ್ಷ’ಕ್ಕೆ ಚಾಲನೆ ನೀಡಿದ್ದಾರೆ. DAKSH – ಬ್ಯಾಂಕಿನ ಮೇಲ್ವಿಚಾರಣಾ ಪ್ರಕ್ರಿಯೆಗಳನ್ನು ಹೆಚ್ಚು ಬಲಪಡಿಸುವ ನಿರೀಕ್ಷೆಯಿದೆ. ಮೇಲ್ವಿಚಾರಣೆಯನ್ನು ಬಲಪಡಿಸುವಲ್ಲಿ ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಇತರ ಉಪಕ್ರಮಗಳಲ್ಲಿ ಇತ್ತೀಚಿನ ಡೇಟಾ ಮತ್ತು ವಿಶ್ಲೇಷಣಾತ್ಮಕ ಸಾಧನಗಳನ್ನು … Continued

ಜ್ಞಾನವಾಪಿ ಪ್ರಕರಣ: ಶಿವಲಿಂಗದ ಕಾಲಮಾನದ ವೈಜ್ಞಾನಿಕ ಪರಿಶೀಲನೆ ಮನವಿ ಕುರಿತ ಆದೇಶ ಮುಂದೂಡಿದ ವಾರಾಣಸಿ ನ್ಯಾಯಾಲಯ

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಕೈಗೊಂಡ ವೇಳೆ ಪತ್ತೆಯಾದ ವಸ್ತುವು ಶಿವಲಿಂಗವೋ ಅಥವಾ ಕಾರಂಜಿಯೋ ಎನ್ನುವುದನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವೈಜ್ಞಾನಿಕ ಪರಿಶೀಲನೆ ಕೈಗೊಳ್ಳುವಂತೆ ನಿರ್ದೇಶಿಸಲು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯ ಕುರಿತಾದ ಆದೇಶವನ್ನು ವಾರಾಣಸಿ ನ್ಯಾಯಾಲಯವು ಅಕ್ಟೋಬರ್‌ 11ಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ಜಿಲ್ಲಾ … Continued

ಅಪರಾಧ ಕೃತ್ಯ, ಭಯೋತ್ಪಾದನೆ-ಭಾರತಕ್ಕೆ ಪ್ರಯಾಣಿಸುವಾಗ ‘ಹೆಚ್ಚಿನ ಎಚ್ಚರಿಕೆ’ ವಹಿಸಲು ತನ್ನ ನಾಗರಿಕರಿಗೆ ಸೂಚಿಸಿದ ಅಮೆರಿಕ

ವಾಷಿಂಗ್ಟನ್‌: ‘ಅಪರಾಧ ಪ್ರಕರಣಗಳು ಮತ್ತು ಭಯೋತ್ಪಾದನೆ’ಯಿಂದಾಗಿ ಭಾರತಕ್ಕೆ ಪ್ರಯಾಣಿಸುವಾಗ ‘ಹೆಚ್ಚಿನ ಎಚ್ಚರಿಕೆ’ ವಹಿಸುವಂತೆ ಶುಕ್ರವಾರ ಅಮೆರಿಕ ತನ್ನ ನಾಗರಿಕರಿಗೆ ಸೂಚಿಸಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಸೂಚಿಸಿದೆ. ಶುಕ್ರವಾರ ಹೊರಡಿಸಲಾದ ಹೊಸ ಪ್ರಯಾಣ ಸಲಹೆಯಲ್ಲಿ, ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಭಾರತ ಪ್ರಯಾಣ ಸಲಹಾ ಮಟ್ಟವನ್ನು ಪ್ರಮಾಣದಲ್ಲಿ 2 ಕ್ಕೆ ಇಳಿಸಿತು ಮತ್ತು ಒಂದರಿಂದ … Continued

ರೈಲ್ವೇ ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಯಾದವ್, ಕುಟುಂಬದ ಸದಸ್ಯರ ವಿರುದ್ಧ ನ್ಯಾಯಾಲಯಕ್ಕೆ ಸಿಬಿಐ ಆರೋಪಟ್ಟಿ ಸಲ್ಲಿಕೆ

ನವದೆಹಲಿ: 10 ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಲಾಲು ಪ್ರಸಾದ ಯಾದವ್ ರೈಲ್ವೆ ಸಚಿವರಾಗಿದ್ದಾಗ ನಡೆದ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಿಬಿಐ ಇಂದು, ಶುಕ್ರವಾರ ಅವರು ಮತ್ತು ಅವರ ಪತ್ನಿ ರಾಬ್ರಿ ದೇವಿ ಸೇರಿದಂತೆ 16 ಜನರ ವಿರುದ್ಧ ಇಲ್ಲಿನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಂಸ್ಥೆಯು ಮೇ 18 ರಂದು ಪತಿ-ಪತ್ನಿ … Continued

ವಿಶ್ವಸಂಸ್ಥೆಯಲ್ಲಿ ಚೀನಾ ವಿರುದ್ಧದ ಮತದಾನಕ್ಕೆ ಗೈರಾದ ಒಂದು ದಿನದ ನಂತರ, ಉಯಿಘರ್ ಮುಸ್ಲಿಮರ ಮಾನವ ಹಕ್ಕುಗಳ ಪರ ಬ್ಯಾಟಿಂಗ್ ಮಾಡಿದ ಭಾರತ

ನವದೆಹಲಿ: ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿ ಚೀನಾ ಉಯ್ಘರ್ ಮುಸ್ಲಿಮರನ್ನು ನಡೆಸಿಕೊಳ್ಳುವುದರ ವಿರುದ್ಧದ ಮತದಾನಕ್ಕೆ ಗೈರುಹಾಜರಾದ ಒಂದು ದಿನದ ನಂತರ, ಭಾರತವು ಶುಕ್ರವಾರ ಕ್ಸಿನ್‌ಜಿಯಾಂಗ್ ಜನರ ಮಾನವ ಹಕ್ಕುಗಳನ್ನು ಚೀನಾ ಗೌರವಿಸಬೇಕು ಎಂದು ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಎಲ್ಲಾ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಭಾರತ ಬದ್ಧವಾಗಿದೆ. ದೇಶದ … Continued