ಫೋಟಾನ್‌ಗಳ ಮೇಲಿನ ಪ್ರಯೋಗಗಳಿಗಾಗಿ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್, ಆಂಟನ್ ಝೈಲಿಂಗರ್‌ಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನವದೆಹಲಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರು 2022 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೋಟಾನ್‌ಗಳ ಮೇಲಿನ ಪ್ರಯೋಗಗಳಿಗಾಗಿ ಅವರನ್ನು 2022 ರ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂವರು ಪುರಸ್ಕೃತರು ಕ್ವಾಂಟಮ್ ಸ್ಥಿತಿಗಳನ್ನು ಬಳಸಿಕೊಂಡು ಅದ್ಭುತ ಪ್ರಯೋಗಗಳನ್ನು ನಡೆಸಿದರು, ಅಲ್ಲಿ ಎರಡು ಕಣಗಳು ಪ್ರತ್ಯೇಕಗೊಂಡಾಗಲೂ ಒಂದೇ … Continued

ಉತ್ತರಾಖಂಡದ ದಂಡ-2 ಶಿಖರದಲ್ಲಿ ಭಾರೀ ಹಿಮಕುಸಿತ : 10 ಮಂದಿ ಸಾವು, 18 ಮಂದಿ ನಾಪತ್ತೆ

ಡೆಹ್ರಾಡೂನ್: ಉತ್ತರಾಖಂಡದ ದ್ರೌಪದಿಯ ದಂಡ-2 ಪರ್ವತದ ಶಿಖರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಅನೇಕರು ಜನರು ಸಿಲುಕಿದ್ದು, ಒಟ್ಟು 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅವರೆಲ್ಲರೂ ಉತ್ತರಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ 40 ಜನರ ಟ್ರೆಕ್ಕಿಂಗ್ ಗುಂಪಿನ ಭಾಗವಾಗಿದ್ದರು, ಇದರಲ್ಲಿ 33 ಪ್ರಶಿಕ್ಷಣಾರ್ಥಿಗಳು ಮತ್ತು ಏಳು ಬೋಧಕರು ಸೇರಿದ್ದರು. ಒಟ್ಟು 18 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 16,000 ಅಡಿ … Continued

ಭಾರತದ ಎಲ್ಲ ರಾಜ್ಯಗಳು, ಅನೇಕ ದೇಶಗಳನ್ನು ಹೆಸರನ್ನು ಭೂಪಟ-ಧ್ವಜ ನೋಡಿಯೇ ಹೇಳುವ 18 ತಿಂಗಳ ಪುಟ್ಟಪೋರ ಅನಿಕೇತ ಭಟ್‌…!

ಕಾರವಾರ: ಈತನ ವಯಸ್ಸು ಕೇವಲ 18 ತಿಂಗಳು ಅಂದರೆ ಒಂದೂವರೆ ವರ್ಷ ಮಾತ್ರ, ಇನ್ನೂ ಸರಿಯಾಗಿ ಹಲ್ಲು ಬಂದಿಲ್ಲವೇನೋ. ಆದರೆ ಈ ಪುಟ್ಟ ಹುಡುಗನಿಗೆ ಇರುವ ಜ್ಞಾನ ಮಾತ್ರ ಆತನ ವಯಸ್ಸಿಗೆ ಮೀರಿದ್ದು. ಈತ ತನ್ನ ಬುದ್ಧಿಶಕ್ತಿ ಕಾರಣಕ್ಕೇ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಒಂದೂವರೆ ವರ್ಷದ ಅನಿಕೇತನಿಗೆ ಭಾರತದ ಭೂಪಟ ತೋರಿಸಿದರೆ ದೇಶದ ಎಲ್ಲ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶಮುಖಗೆ ಜಾಮೀನು

ಮುಂಬೈ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ಎನ್‌ಸಿಪಿ ನಾಯಕ ಅನಿಲ ದೇಶಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಜಾಮೀನು ಅಕ್ಟೋಬರ್ 13 ರಂದು ಜಾರಿಗೆ ಬರಲಿದೆ ಎಂದು ಹೈಕೋರ್ಟ್ ಹೇಳಿದೆ. ದೇಶಮುಖ ಅವರಿಗೆ 1 ಲಕ್ಷ ರೂಪಾಯಿಗಳನ್ನು ಶ್ಯೂರಿಟಿಯಾಗಿ ಠೇವಣಿ ಇಡುವಂತೆ ಮತ್ತು … Continued

ಕಾರ್ತಿಕ ಮಾಸದಲ್ಲಿ ಕರ್ನಾಟಕಕ್ಕೆ ತೊಂದರೆ, ಮಳೆ ಮುಂದುವರಿಕೆ, ಮುಂದಿನ ಯುಗಾದಿ ವರೆಗೂ ವಿಷ ಜಂತುಗಳು ತಾಂಡವ: ಕೋಡಿಮಠ ಶ್ರೀಗಳ ಭವಿಷ್ಯ

ಧಾರವಾಡ: ಧಾರವಾಡ: ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣವಿದೆ,ಇನ್ನೂ ಒಂದು ವರ್ಷ ಕೊರೊನಾ ಇರುತ್ತದೆ, ಮಳೆ ಮುಂದುವರಿಯಲಿದೆ ಎಂದು ಕೋಡಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತದೆ ಎಂದು ಈ ಸಂವತ್ಸರ ಪ್ರಾರಂಭದಲ್ಲಿಯೇ … Continued

ಹಸುಗಳಲ್ಲಿ ಕಾಣಿಸಿಕೊಂಡ ಲಂಪಿ ವೈರಸ್‌ಗೆ ನೈಜೀರಿಯಾ ಚಿರತೆಗಳನ್ನು ಭಾರತಕ್ಕೆ ತಂದಿದ್ದು ಕಾರಣವಂತೆ…! ಹೇಳಿಕೆ ಮೂಲಕ ಅಪಹಾಸ್ಯಕ್ಕೀಡಾದ ಕಾಂಗ್ರೆಸ್‌ ನಾಯಕ

ಮುಂಬೈ: ಹಸುಗಳಿಗೆ ಕಾಣಿಸಿಕೊಂಡಿರುವ ಲಂಪಿ ವೈರಸ್ ರೋಗವನ್ನು ಕಾಂಗ್ರೆಸ್ ಈಗ ನೈಜೀರಿಯಾ’ದಿಂದ ತರಲಾಗುತ್ತಿರುವ ಚಿರತೆಗಳಿಗೆ ಜೋಡಿಸಿದೆ. ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಜಾನುವಾರುಗಳನ್ನು ಕಾಡುತ್ತಿರುವ ಲಂಪಿ ವೈರಸ್ ಕಾಯಿಲೆಯ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು ಹಾಗೂ ಭಾರತಕ್ಕೆ ಕರೆತಂದ ‘ನೈಜೀರಿಯನ್ ಚಿರತೆಗಳು’ ಈ ರೋಗ ಹರಡಿವೆ ಎಂದು ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್ 17 … Continued

ದೆಹಲಿಯ ಇಂಡಿಯಾ ಗೇಟ್‌ ಮೇಲೆ ರಾತ್ರಿಯ ಬಾನಂಗಳದಲ್ಲಿ ಡ್ರೋಣ್‌ಗಳ ಮೂಲಕ ಮಹಾತ್ಮಾ ಗಾಂಧೀಜಿ ಅನಾವರಣ | ವೀಕ್ಷಿಸಿ

ನವದೆಹಲಿ: ದೇಶವು ಮಹಾತ್ಮ ಗಾಂಧಿಯವರ 153ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಂತೆ ಭಾನುವಾರ ದೆಹಲಿಯ ಐಕಾನಿಕ್ ಇಂಡಿಯಾ ಗೇಟ್ ಮೇಲೆ ಡ್ರೋನ್‌ಗಳ ಸಮೂಹದ ಬೆಳಕಿನ ಮೂಲಕ ರಾತ್ರಿಯ ಬಾನಂಗಳದಲ್ಲಿ ಮಹಾತ್ಮ ಗಾಂಧೀಜಿ ಅನಾವರಣಗೊಂಡರು. ಸುಮಾರು ಎರಡು ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ, ಡ್ರೋನ್‌ಗಳು ಮೂರು ವಿಭಿನ್ನ ರಚನೆಗಳನ್ನು ಮಾಡುವುದನ್ನು ಕಾಣಬಹುದು. ಮಹಾತ್ಮಾ ಗಾಂಧಿಯವರ ಚಿತ್ರ, ರೈಲು ಮತ್ತು ‘ಚರಕʼವನ್ನು … Continued

ಪರೇಶ ಮೇಸ್ತ ಸಾವಿನ ಪ್ರಕರಣದಲ್ಲಿ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ : ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು: ಹೊನ್ನಾವರದ ಪರೇಶ ಮೇಸ್ತ ಪ್ರಕರಣದಲ್ಲಿ ನಮ್ಮ ಮೇಲೆ ಮಾಡಿದ ಸುಳ್ಳು ಆರೋಪಕ್ಕಾಗಿ ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕ್ಷಮೆ ಕೇಳಬೇಕು ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಉತ್ತರ ಕನ್ನಡದ ಹೊನ್ನಾವರದಲ್ಲಿ 2017ರಲ್ಲಿ ಯುವಕ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ನ್ಯಾಯಾಲಯಕ್ಕೆ ಇದು ಕೊಲೆಯಲ್ಲ, ಆಕಸ್ಮಿಕ ಸಾವು … Continued

ಜಮ್ಮು-ಕಾಶ್ಮೀರ ಕಾರಾಗೃಹಗಳ ಡಿಜಿಪಿ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ: ಹತ್ಯೆ ಹೊಣೆ ಹೊತ್ತುಕೊಂಡ ಭಯೋತ್ಪಾದಕ ಸಂಘಟನೆ ಪಿಎಎಫ್‌ಇ

ಜಮ್ಮು: 57 ವರ್ಷದ ಲೋಹಿಯಾ ಅವರು ಸೋಮವಾರ ಅಕ್ಟೋಬರ್ 3 ರಂದು ಜಮ್ಮುವಿನ ಹೊರವಲಯದಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಗಂಟಲು ಸೀಳಲಾಗಿದೆ ಮತ್ತು ಅವರ ದೇಹದ ಮೇಲೆ ಸುಟ್ಟ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್-ಎ-ತೊಯ್ಬಾದ ಭಾರತೀಯ ಶಾಖೆ, ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫೋರ್ಸ್ (ಪಿಎಎಫ್ಎಫ್), ಜಮ್ಮು ಮತ್ತು ಕಾಶ್ಮೀರ ಡಿಜಿಪಿ (ಜೈಲು ಇಲಾಖೆ) … Continued

ಅನೇಕ ಗ್ರಾಪಂಗಳಿಗೆ ಚುನಾವಣೆ ಘೋಷಣೆ: ಅಕ್ಟೋಬರ್‌ 28ರಂದು ಮತದಾನ

ಹಾಗೂ ಅಕ್ಟೋಬರ್ 31ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಪ್ರಕಟಣೆ ನೀಡಿರುವ ರಾಜ್ಯ ಚುನಾವಣಾ ಆಯೋಗವು, 2022ರ ಆಗಸ್ಟ್ ನಿಂದ 2022ರ ನವೆಂಬರ್ ವರೆಗೆ ಮುಕ್ತಾಯವಾಗಲಿರುವಂತೆ 203 ಗ್ರಾಮ ಪಂಚಾಯತಗಳಿಗೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ ಅಥವಾ ತೆರವಾಗಿರುವ 49 ಗ್ರಾಮ ಪಂಚಾಯತಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ.ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ … Continued