ಕುಮಟಾ: ಬೆಟ್ಕುಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವು | ವೀಕ್ಷಿಸಿ

ಕುಮಟಾ : ಅಪರಿಚಿತ ವಾಹನ ಬಡಿದು ಚಿರತೆಯೊಂದು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೀರೆಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಬೆಟ್ಕುಳಿ ಬಳಿ ಸಂಭವಿಸಿದೆ. ಶುಕ್ರವಾರ ಬೆಳಿಗ್ಗಿನ ಜಾವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಚಿರತೆಯ ಮೃತ ದೇಹ ಕಂಡು ಬಂದಿದ್ದು ಅದನ್ನು ನೋಡಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ … Continued

ಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ… ಎರಡು ಕಡೆ ಸ್ಪರ್ಧಿಸಬೇಕು : ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ್ದರೂ ಇನ್ನೂ ಯಾವುದೂ ಫೈನಲ್‌ ಆಗಿಲ್ಲ. ತವರು ಕ್ಷೇತ್ರ ವರುಣಾ ಅಥವಾ ಕೋಲಾರ (Kolara) ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಎಂಬುದರ ಬಗ್ಗೆ ಸಿದ್ದರಾಮಯ್ಯರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಮನೆ ದೇವರು ಅವರ ರಾಜಕೀಯ ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಅವರ ಮನೆ … Continued

ಇಡೀ ಜೋಶಿಮಠ ಮುಳುಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಇಸ್ರೋ : ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಭೂ ಕುಸಿತ

ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.’ಮುಳುಗುತ್ತಿರುವ’ ಜೋಶಿಮಠದ ಉಪಗ್ರಹ ಚಿತ್ರಗಳು ಭೂಮಿ ಕುಸಿತದಿಂದ ಪಟ್ಟಣವು ಹೇಗೆ ಕ್ರಮೇಣ ಕುಸಿಯುತ್ತಿದೆ ಎಂಬುದನ್ನು … Continued

ಬಸ್-ಟ್ರಕ್ ಡಿಕ್ಕಿ: 10 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ನಾಸಿಕ್‌: ಮಹಾರಾಷ್ಟ್ರದ ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಶುಕ್ರವಾರ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಮತ್ತು 34 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಪತ್ತಾರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಖಾಸಗಿ ಐಷಾರಾಮಿ ಬಸ್ ಥಾಣೆ ಜಿಲ್ಲೆಯ ಅಂಬರನಾಥದಿಂದ ಹೊರಟಿತ್ತು. ನಾಸಿಕ್-ಶಿರಡಿ ಹೆದ್ದಾರಿಯ ಪಥರೆ ಶಿವಾರ್ … Continued

ಟಿಎಂಸಿ ಶಾಸಕನ ಆಸ್ತಿಗಳ ಮೇಲೆ ಐಟಿ ದಾಳಿ : 11 ಕೋಟಿ ರೂಪಾಯಿ ನಗದು ವಶ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ಜಾಕಿರ್ ಹುಸೇನ್ ಅವರ ಮುರ್ಷಿದಾಬಾದ್, ಕೋಲ್ಕತ್ತಾ ಮತ್ತು ನವದೆಹಲಿಯಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 11 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ಆರಂಭವಾದ ಶೋಧ ಕಾರ್ಯವು ಗುರುವಾರ ರಾತ್ರಿಯ ವರೆಗೆ ಹುಸೇನ್‌ ಅವರಿಗೆ ಸಂಬಂಧಿಸಿದ … Continued

ʼವಿಶ್ವದ ಅತಿ ಉದ್ದದ ನದಿ ವಿಹಾರʼಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ: ಅದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು…

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಲಿಂಕ್ ಮೂಲಕ ವಾರಾಣಸಿ(ಕಾಶಿ)ಯಲ್ಲಿ ವಿಶ್ವದ ಅತಿ ಉದ್ದದ ಕ್ರೂಸ್ ಎಂ.ವಿ. ಗಂಗಾ ವಿಲಾಸಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ಹಲವಾರು ಇತರ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. … Continued

ಕೊನೆಗೂ ಮುಹೂರ್ತ ಫಿಕ್ಸ್ : ಜನವರಿ 29ರಂದು ವಿಷ್ಣು ಸ್ಮಾರಕ ಉದ್ಘಾಟನೆ

ಬೆಂಗಳೂರು: ಮೈಸೂರಿನಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29 ರಂದು ಲೋಕಾರ್ಪಣೆಗೊಳ್ಳಲಿದೆ. ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ ಸರಿ ಸುಮಾರು 14 ವರ್ಷದ ನಂತರ ಸ್ಮಾರಕ ಉದ್ಘಾಟನೆಯಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿನಾಂಕ ನಿಗದಿ ಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ಹಾಗು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು, ಇದೇ 29 … Continued

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಇನ್ನಿಲ್ಲ

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಸಮಾಜವಾದಿ ನಾಯಕ ಶರದ ಯಾದವ್ ಅವರು ಗುರುವಾರ (ಜನವರಿ 12) ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್‌ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿತ್ತು, ಅವರನ್ನು ಗುರುಗ್ರಾಮದ … Continued