ಕ್ರಿಪ್ಟೋಕರೆನ್ಸಿ ವ್ಯಾಪಾರ ಜೂಜಾಟವಲ್ಲದೆ ಬೇರೇನೂ ಅಲ್ಲ, ಅದನ್ನು ನಿಷೇಧಿಸಬೇಕು: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಕ್ರಿಪ್ಟೋಕರೆನ್ಸಿ ವ್ಯಾಪಾರ(ಟ್ರೇಡ್‌)ವನ್ನು ಸಂಪೂರ್ಣವಾಗಿ ಊಹಾಪೋಹವನ್ನು ಆಧರಿಸಿರುವುದರಿಂದ ಮತ್ತು ಜೂಜಾಟದಂತೆಯೇ ಇರುವುದರಿಂದ ಅದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಬಿಸಿನೆಸ್ ಟುಡೆ ಬ್ಯಾಂಕಿಂಗ್ ಮತ್ತು ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, ಕ್ರಿಪ್ಟೋಕರೆನ್ಸಿಯ ಮೇಲಿನ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ದೃಷ್ಟಿಕೋನವನ್ನು ಪುನರುಚ್ಚರಿಸಿದರು … Continued

ಅವಳು ತನ್ನ ಸೀಟಿನ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ನ್ಯಾಯಾಲಯಕ್ಕೆ ಹೇಳಿಕೆ

ನವದೆಹಲಿ: ಯು-ಟರ್ನ್‌ನಲ್ಲಿ, ಏರ್ ಇಂಡಿಯಾ ವಿಮಾನದಲ್ಲಿ ಸಹ-ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್ ಮಿಶ್ರಾ, ಶುಕ್ರವಾರ ದೆಹಲಿ ನ್ಯಾಯಾಲಯಕ್ಕೆ ತಾನು ಆಕ್ಷೇಪಾರ್ಹ ಕೃತ್ಯವನ್ನು ಮಾಡಿಲ್ಲ ಎಂದು ಹೇಳಿದ್ದಾನೆ ಹಾಗೂ ಮಹಿಳೆ ಸ್ವತಃ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ … Continued

2022ರಲ್ಲಿ ತಿರುಪತಿ ದೇವಸ್ಥಾನದ ಹುಂಡಿ ಸಂಗ್ರಹ 1,450 ಕೋಟಿ ರೂ.

ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎಂದು ಪರಿಗಣಿಸಲಾಗಿರುವ ಇಲ್ಲಿನ ತಿರುಮಲ ಬೆಟ್ಟಗಳ ಮೇಲಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲವು 2022ರಲ್ಲಿ ಭಕ್ತರಿಂದ 1,450 ಕೋಟಿ ರೂ.ಗಳು ಕಾಣಿಕೆ (ಹುಂಡಿ ಸಂಗ್ರಹ) ಸಂಗ್ರಹವಾಗಿದೆ. ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಪ್ರಕಾರ, ಕಳೆದ ವರ್ಷ 2.37 ಕೋಟಿ ಭಕ್ತರು ದೇವಾಲಯಕ್ಕೆ … Continued

ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ, ದೇಶದಲ್ಲಿ ಕೋವಿಡ್‌ ಅಷ್ಟೊಂದು ತೊಂದರೆ ಕೊಡಲ್ಲ: ಕೋಡಿಮಠದ ಶ್ರೀಗಳ ಭವಿಷ್ಯ

posted in: ರಾಜ್ಯ | 0

ಹೊಸಪೇಟೆ: ಈ ಬಾರಿ ಕೋವಿಡ್ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕೆಡುಕು ಮಾಡುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದಲಗಳಿದ್ದರೂ, ಈ ಬಾರಿ ಒಂದೇ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ಮನೆಗೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ … Continued

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭ, ಏಪ್ರಿಲ್ 6ರಂದು ಮುಕ್ತಾಯ

ನವದೆಹಲಿ: ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನವು ಜನವರಿ 31 ರಿಂದ ಆರಂಭವಾಗಿ ಏಪ್ರಿಲ್ 6 ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಹೇಳಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ, 2023 ಜನವರಿ 31 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 6 ರ ವರೆಗೆ 66 ದಿನಗಳ ಕಾಲ ಸಾಮಾನ್ಯ … Continued

ವಿಶ್ವದ ಅತ್ಯಂತ ಕಷ್ಟಕರವಾದ ನೃತ್ಯ ಝೌಲಿ‌ ನೃತ್ಯದ ಅದ್ಭುತ-ಸುಲಲಿತ ಪ್ರದರ್ಶನ: ವ್ಯಕ್ತಿಯ ಕಾಲ್ಚಳಕಕ್ಕೆ ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಝೌಲಿ ‘ಅತ್ಯಂತ ಕಷ್ಟಕರವಾದ ನೃತ್ಯಗಳಲ್ಲಿ ಒಂದಾಗಿದೆ’. ಏಳು ವಿಧದ ಜೌಲಿ ಮುಖವಾಡಗಳಿವೆ, ಪ್ರತಿಯೊಂದೂ ನಿರ್ದಿಷ್ಟ ದಂತಕಥೆಯನ್ನು ಅನುವಾದಿಸುತ್ತದೆ. ಜೌಲಿ ನೃತ್ಯ ಮಾಡುವ ವ್ಯಕ್ತಿಯ ವೀಡಿಯೊವು ಅದರ ವಿಶಿಷ್ಟ ಮತ್ತು ಅತ್ಯಂತ ಕಷ್ಟಕರವಾದ ಹೆಜ್ಜೆಗಳಿಂದಾಗಿ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆಫ್ರಿಕಾದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿದೆ. ಜೌಲಿಯ ಕಷ್ಟಕರವಾದ ನೃತ್ಯದ ಹೆಜ್ಜೆಗಳು ಇದನ್ನು … Continued

ಹುಬ್ಬಳ್ಳಿ: ಬ್ಯಾರಿಕೇಡ್‌ ದಾಟಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಓಡಿ ಬಂದಿದ್ಯಾಕೆ ಎಂಬುದಕ್ಕೆ ಕಾರಣ ಹೇಳಿದ 12ರ ಬಾಲಕ

posted in: ರಾಜ್ಯ | 0

ಹುಬ್ಬಳ್ಳಿ: ನಗರದಲ್ಲಿ ಜನವರಿ 12ರಂದು ನಡೆದ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾಗ ರೋಡ್‌ ಶೋ ನಡೆಸಿದ್ದರು. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದು ದೇಶಾದ್ಯಂತ ಸುದ್ದಿಯಾಗಿದ್ದ. ಈಗ ಪೊಲೀಸರನ್ನು ದಾಟಿ ಆತ ಪ್ರಧಾನಿಗಳ … Continued

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಿಂದ ಡಾ.ರಾಮಚಂದ್ರ ಭಟ್ಟ ಕೋಟೆಮನೆಗೆ ಗೌರವ ಡಾಕ್ಟರೇಟ್ ಪ್ರದಾನ

posted in: ರಾಜ್ಯ | 0

ಯಲ್ಲಾಪುರ: ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S- VYASA ) ತನ್ನ ೨೦ ನೇ ಘಟಿಕೋತ್ಸವದಲ್ಲಿ ನಿವೃತ್ತ ಕುಲಪತಿ, ವಿದ್ವಾಂಸ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಅವರಿಗೆ ಗೌರವ ಡಾಕ್ಟರೇಟ್ ( ಡಿ,ಲಿಟ್) ಪುರಸ್ಕಾರ ನೀಡಿ ಗೌರವಿಸಿದೆ. ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರು ಗುರುವಾರ  ಬೆಂಗಳೂರಿನ ಪ್ರಶಾಂತಿ ಕುಠಿರದ ಸಂಸ್ಕೃತಿ ಭವನದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ … Continued

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನ

posted in: ರಾಜ್ಯ | 0

ಬೆಂಗಳೂರು : ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥನನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗಾಗಿಹುಡುಕಾಟ ನಡೆಸಿದ್ದರು. ರಾಜ್ಯದಿಂದ ಪರಾರಿಯಾಗಿ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸ್ವಂತ ಫೋನ್‌ ಬಳಸದೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ … Continued

ಚಿಕ್ಕಬಳ್ಳಾಪುರ : ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್‌ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ

posted in: ರಾಜ್ಯ | 0

ಬೆಂಗಳೂರು: ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದ ಬಳಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡುವ ಸಂಬಂಧ ಜನವರಿ 15ರಂದು ಆಯೋಜಿಸಿರುವ ಕಾರ್ಯಕ್ರಮ ನಡೆಸಲು ಇಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಶಾ ಯೋಗ ಕೇಂದ್ರದ … Continued