ಹುಲಿ ದಾಳಿಗೆ ಕಟ್ಟಿಗೆ ತರಲು ಹೋಗಿದ್ದ ಯುವಕ ಸಾವು

posted in: ರಾಜ್ಯ | 0

ಮೈಸೂರು : ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಕಾಡಿನಲ್ಲಿ ಕಟ್ಟಿಗೆ ತರಲು ಹೋಗಿದ್ದ ಯುವಕನ ಮೇಲೆ ಹುಲಿಯೊಂದು ದಾಳಿ ಮಾಡಿದ್ದು, ಯುವಕ ಮೃತಪಟ್ಟಿದ್ದಾನೆ. ಈ ದುರ್ಘಟನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯ ಬಳ್ಳೆ ಅರಣ್ಯ ಸಮೀಪದ ನಡೆದಿದೆ. ಹುಲಿ ದಾಳಿಗೆ ಸಿಲುಕಿದ ಮೃತನನ್ನು ಮಂಜು (18 ) ಎಂದು ಗುರುತಿಸಲಾಗಿದೆ. ಸೌದೆ (ಕಟ್ಟಿಗೆ)ಯನ್ನು … Continued

ಪಾಕಿಸ್ತಾನದಲ್ಲಿ ಮತಾಂತರಕ್ಕೆ ಒಪ್ಪದ ವಿವಾಹಿತ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ

ಇಸ್ಲಾಮಾಬಾದ್‌: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಿಂದ ಅಪಹರಣಕ್ಕೊಳಗಾದ ವಿವಾಹಿತ ಹಿಂದೂ ಮಹಿಳೆಯೊಬ್ಬಳು ತನ್ನ ಅಪಹರಣಕಾರರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ ಬಳಿಕ ತನ್ನ ಧರ್ಮ ಬದಲಾಯಿಸಲು ನಿರಾಕರಿಸಿದ ನಂತರ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಮಾಡಿದ ದೌರ್ಜನ್ಯದ ಸರಣಿಯಲ್ಲಿ ಇತ್ತೀಚಿನದು. ಉಮರ್‌ಕೋಟ್ ಜಿಲ್ಲೆಯ ಸಮರೋ ಪಟ್ಟಣದಲ್ಲಿ … Continued

ಬೇಡಿಕೆ ಈಡೇರಿಕೆಗಾಗಿ ಜನವರಿ 24ರಂದು ಸಾರಿಗೆ ಸಿಬ್ಬಂದಿ ಧರಣಿ : ಬಸ್‌ ಸಂಚಾರದಲ್ಲಿ ವ್ಯತ್ಯಯದ ಸಾಧ್ಯತೆ

posted in: ರಾಜ್ಯ | 0

ಬೆಂಗಳೂರು : ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸರ್ಕಾರದ ವಿರುದ್ಧ ಜನವರಿ ೨೪ರಂದು ಸಾರಿಗೆ ನೌಕರರು ನಗರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯ ಆಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ೬ ವರ್ಷಗಳು ಕಳೆದರೂ ವೇತನ ಹೆಚ್ಚಳ ಮಾಡದಿರುವುದರಿಂದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ … Continued

ಅಮೆರಿಕದ ಲಾಸ್ ಏಂಜಲೀಸ್ ಬಳಿ ಚೀನೀ ಹೊಸ ವರ್ಷದ ಸಮಾರಂಭದಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು

ಲಾಸ್ ಏಂಜಲೀಸ್‌ನಲ್ಲಿ ಚೀನಾದ ಮೂಲದ ಜನರು ಚಂದ್ರಮಾನದ ಹೊಸ ವರ್ಷದ ಆಚರಣೆ ಮಾಡಿದ ನಂತರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಹತ್ತು ಜನರು ಮೃತಪಟ್ಟಿದ್ದಾರೆ. ಮಾಂಟೆರಿ ಪಾರ್ಕ್‌ನ ಗಾರ್ವೆ ಏವ್‌ನಲ್ಲಿರುವ ಮಾಂಟೆರಿ ಪಾರ್ಕ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ಅಧಿಕಾರಿ ದೃಢಪಡಿಸಿದ್ದಾರೆ. ಶೂಟರ್ ಒಬ್ಬ ಪುರುಷ ಎಂದು … Continued

ಬೆಂಗಳೂರು: ಗರ್ಭಿಣಿ ಪತ್ನಿ ಕೊಂದು ವಿಮಾನದಲ್ಲಿ ಪರಾರಿಯಾಗಿದ್ದ ಖತರ್ನಾಕ್ ಗಂಡನ ಸೆರೆ

posted in: ರಾಜ್ಯ | 0

ಬೆಂಗಳೂರು: `ಬಾನಲ್ಲೆ ಮಧುಚಂದ್ರಕೆ’ ಸಿನಿಮಾದಂತೆಯೇ ಬೆಂಗಳೂರಿನಲ್ಲೊಬ್ಬ ತನ್ನ ಹೆಂಡತಿಯನ್ನ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪತ್ನಿಯನ್ನು ಕೊಂದು ವಿಮಾನದಲ್ಲಿ ದೆಹಲಿಗೆ ಪರಾರಿಯಾದವನನ್ನು ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ನಾಝ್‍ ಎಂಬವರನ್ನು ಪ್ರೀತಿಸಿ ವಿವಾಹದ ನಂತರ ಕೊಲೆ ಮಾಡಿ ಪರಾರಿಯಾಗಿದ್ದ ನಾಸಿರ್ ಹುಸೇನ್‍ನನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ … Continued

ನಕಲಿ ವೀಡಿಯೊಗಳ ಬಗ್ಗೆ ಜನರನ್ನು ಎಚ್ಚರಿಸಲು ಡೀಪ್‌ ಫೇಕ್‌ ವೀಡಿಯೊ ಕ್ಲಿಪ್‌ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ | ವೀಕ್ಷಿಸಿ

ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ನಮಗೆ ವಿಷಯಗಳನ್ನು ಸುಲಭಗೊಳಿಸುತ್ತದೆ. ವೈದ್ಯಕೀಯ, ಖಗೋಳ, ಭೌತಶಾಸ್ತ್ರ, ಸಂವಹನ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ಈಗ ನಾವು ನಮ್ಮ ದೈನಂದಿನ ಜೀವನದಲ್ಲಿ ನಮಗೆ ಸಹಾಯ ಮಾಡಲು ಉತ್ತಮ ಸಾಧನ ಮತ್ತು ಯಂತ್ರೋಪಕರಣಗಳನ್ನು ಹೊಂದಿದ್ದೇವೆ. ಆದರೆ ಪ್ರತಿಯೊಂದಕ್ಕೂ ಯಾವಾಗಲೂ ಫ್ಲಿಪ್ ಸೈಡ್‌ಗಳಿವೆ ಮತ್ತು ತಂತ್ರಜ್ಞಾನವೂ ಇದಕ್ಕೆ ಹೊರತಾಗಿಲ್ಲ. … Continued

 ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತುಕಡಿ ಮುನ್ನಡೆಸಲಿರುವ ಮಂಗಳೂರಿನ ಹುಡುಗಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್

posted in: ರಾಜ್ಯ | 0

ಮಂಗಳೂರು: ಮಂಗಳೂರಿನವರಾದ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಅವರು ಗಣರಾಜ್ಯೋತ್ಸವದ ದಿನದಿಂದ ನಡೆಯುವ ಪರೇಡ್‌ನಲ್ಲಿ ಭಾರತೀಯ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ ತುಕಡಿಯು 144 ಯುವ ನಾವಿಕರು “ನಾರಿ ಶಕ್ತಿ” ಒಳಗೊಂಡ ಟ್ಯಾಬ್ಲೋವನ್ನು ಹೊಂದಿರುತ್ತದೆ. 29 ವರ್ಷದ ದಿಶಾ ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತಕುಮಾರ್ ಮತ್ತು ಲೀಲಾ ಅಮೃತಕುಮಾರ ದಂಪತಿಯ … Continued

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23 ಲಕ್ಷ ರೂ. ವಂಚನೆ: ಮಂಗಳೂರಿನಲ್ಲಿ ಆರೋಪಿ ಬಂಧನ

posted in: ರಾಜ್ಯ | 0

ನವದೆಹಲಿ: ದೆಹಲಿಯ ಹೋಟೆಲ್‌ನಿಂದ ಬಿಲ್ ಪಾವತಿಸದೆ ಚೆಕ್ ಔಟ್ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ವಂಚನೆ ಘಟನೆಯ ಎರಡು ತಿಂಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದ್ದು, ಯುಎಇ ರಾಜಮನೆತನದ ಸದಸ್ಯನಂತೆ ಸೋಗು ಹಾಕಿಕೊಂಡು ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಿಂದ 23.46 ಲಕ್ಷ … Continued

ಆಘಾತಕಾರಿ : ಕಾರು ಡಿಕ್ಕಿ ಹೊಡೆದ ನಂತರ ಬಾನೆಟ್‌ ಮೇಲೆ ಬಿದ್ದ 70ರ ವೃದ್ಧನ 8 ಕಿಮೀ ವರೆಗೆ ಎಳೆದೊಯ್ದು ಸಾಯಿಸಿದ ಚಾಲಕ..

ಪಾಟ್ನಾ: ಬಿಹಾರದಲ್ಲಿ ಕಾರೊಂದು ವಯೋವೃದ್ಧರಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಕಾರಿನ ಬಾನೆಟ್‌ಗೆ ಸಿಕ್ಕಿಹಾಕಿಕೊಂಡ ವೃದ್ಧನನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ದಿರುವ ಘಟನೆ ನಡೆದಿದೆ. ವೃದ್ಧ ಮೃತಪಟ್ಟಿದ್ದಾರೆ. ಬಿಹಾರದಿಂದ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಕಾರೊಂದು ವಯೋವೃದ್ಧರಿಗೆ ಡಿಕ್ಕಿ ಹೊಡೆದು, ವೃದ್ಧಿ ಕಾರಿನ ಬಾನೆಟ್‌ಗೆ ಸಿಕ್ಕಿಹಾಕಿಕೊಂಡ ನಂತರ ಕಾರು ವೃದ್ಧನನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ದಿದೆ. ನಂತರ ಚಾಲಕ ಹಠಾತ್ … Continued

ಇದು ವಿಶ್ವದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ; ಬರೋಬ್ಬರಿ 132 ಕೋಟಿ ರೂ. ಕೊಟ್ಟು ಖರೀದಿ…!! ಈ ನಂಬರಿಗೆ ಯಾಕಿಷ್ಟು ಕ್ರೇಜ್‌..ಇಲ್ಲಿದೆ ಮಾಹಿತಿ

ವಾಹನದ ನೋಂದಣಿ ಸಂಖ್ಯೆಯು ವಾಹನವನ್ನು ನೋಂದಾಯಿಸುವಾಗ ಬಹುತೇಕರು ಹೆಚ್ಚು ಕಾಳಜಿ ವಹಿಸುವುದಿಲ್ಲ. ಸಾಮಾನ್ಯವಾಗಿ ತಮಗೆ ನೀಡಿರುವ ಸಂಖ್ಯೆಯನ್ನೇ ತೆಗೆದುಕೊಳ್ಳುತ್ತಾರೆ, ಆದರೆ ಕಾರ್ ಖರೀದಿದಾರರ ಒಂದು ವಿಭಾಗವು ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ತಮ್ಮ ವಾಹನಗಳಿಗಾಗಿ ಫ್ಯಾನ್ಸಿ ಸಂಖ್ಯೆಗಳನ್ನು ಹುಡುಕುತ್ತದೆ ಅಥವಾ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಕೆಲವರು ಅದಕ್ಕೆ ಎಷ್ಟೇ ಬೆಲೆ ತೆತ್ತಾದರೂ … Continued