ಕೇರಳ: ತನೂರ್ ಒಟ್ಟುಪುರಂ ತೂವಲ್ ಕಡಲತೀರದಲ್ಲಿ ಪ್ರವಾಸಿಗರ ದೋಣಿ ನದಿಯಲ್ಲಿ ಮುಳುಗಿ 18 ಮಂದಿ ಸಾವು

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿ ಒಟ್ಟುಪುರಂ ತೂವಲ್ ಬೀಚ್‌ನ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 18 ಮಂದಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಂಜೆ 7:30 ರ ಸುಮಾರಿಗೆ ಜಾಯ್‌ರೈಡ್‌ನಲ್ಲಿ ಪಲ್ಟಿಯಾಗಿದೆ. ಸುಮಾರು 20 ಜನರನ್ನು ರಕ್ಷಿಸಲಾಗಿದ್ದು, 15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ … Continued

ಕಣ್ಮರೆಯಾಗುತ್ತಿರುವ ಶನಿಗ್ರಹದ ವಿಶಿಷ್ಟ ‘ಉಂಗುರ’….!

ಬಾಹ್ಯಾಕಾಶದಲ್ಲಿ ನಡೆಯುವ ಕುತೂಹಲಕಾರಿ ಸಂಗತಿ, ಅಪಾಯದ ಮುನ್ಸೂಚನೆಗಳನ್ನು ನೀಡುತ್ತಾರೆ. ಇದೀಗ ವಿಜ್ಞಾನಿಗಳು ಶನಿಗ್ರಹದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಶನಿ ಗ್ರಹ ತನ್ನ ವಿಶಿಷ್ಟವಾದ ಉಂಗುರಗಳಿಂದಲೇ ಹೆಸರುವಾಸಿಯಾಗಿದೆ. ಆದರೆ ಈಗ ಶನಿ ಗ್ರಹದ ಉಂಗುರ ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಸವೆಯುತ್ತಿದೆ. ಆ ಉಂಗುರಗಳು ಎಷ್ಟು … Continued

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ (67) ಆನೆ ಮೃತಪಟ್ಟಿದೆ. ಬಲರಾಮ ಅನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಬಲರಾಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಇತ್ತೀಚೆಗೆ ತೀವ್ರ … Continued

ಫುಡ್‌ ಡೆಲಿವರಿ ಬಾಯ್ಸ್‌ ಜೊತೆ ಬೈಕ್‌ ಸವಾರಿ ಮಾಡಿ ಟಿಫಿನ್‌ ಸವಿದ ರಾಹುಲ್‌ ಗಾಂಧಿ | ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಫುಡ್‌ ಡೆಲಿವರಿ ಬಾಯ್‌ನ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸಿ ಗಮನ ಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ತಮ್ಮ ಎರಡನೇ ದಿನದ ಮೆಗಾ ರೋಡ್‌ ಶೋ ಅನ್ನು ಟ್ರಿನಿಟಿ ಸರ್ಕಲ್‌ನಲ್ಲಿ ಮುಗಿಸಿದರು. ಬಳಿಕ ಇಂದು ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ ರಾಹುಲ್‌ … Continued

ಪುಲ್ವಾಮಾದಲ್ಲಿ 5 ಕೆಜಿ ಐಇಡಿ ಸ್ಫೋಟಕ ಹೊಂದಿದ್ದ ಉಗ್ರನ ಬಂಧನ: ತಪ್ಪಿದ ದೊಡ್ಡ ದುರಂತ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (IED) ಉಗ್ರಗಾಮಿ ಸಹಚರನನ್ನು ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಸಂಭವನೀಯ ದೊಡ್ಡ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಉಗ್ರಗಾಮಿ ಸಹಚರನನ್ನು ಬುದ್ಗಾಮ್‌ನ ಅರಿಗಮ್ ನಿವಾಸಿ ಇಶ್ಫಾಕ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ. ಕಾಶ್ಮೀರ ವಲಯ ಪೊಲೀಸರ … Continued

ಮುಂದಿನ ಗಣರಾಜ್ಯೋತ್ಸವ ಪರೇಡ್‌ಗೆ ಕೇವಲ ಮಹಿಳಾ ತುಕಡಿಗಳ ಪ್ರದರ್ಶನ : ಸಶಸ್ತ್ರ ಪಡೆಗಳಿಗೆ ಕೇಂದ್ರದ ಮೆಮೊ…!

ನವದೆಹಲಿ: ಗಣರಾಜ್ಯೋತ್ಸವ 2024 ರ ರಾಷ್ಟ್ರೀಯ ರಾಜಧಾನಿಯ ಕರ್ತವ್ಯ ಪಥ್‌ನಲ್ಲಿ ಮೆರವಣಿಗೆಯ ಸಮಯದಲ್ಲಿ ಮೆರವಣಿಗೆ ಮತ್ತು ಬ್ಯಾಂಡ್ ತಂಡ, ಹಾಗೆಯೇ ಟ್ಯಾಬ್ಲಾಕ್ಸ್ ಮತ್ತು ಇತರ ಪ್ರದರ್ಶನಗಳಲ್ಲಿ “ಕೇವಲ ಮಹಿಳೆಯರು ಮಾತ್ರ ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಮುಂಬರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರಕ್ಷಣಾ ಸಚಿವಾಲಯವು ಯೋಜಿಸುತ್ತಿದೆ ಎಂದು ಮಾರ್ಚ್‌ನಲ್ಲಿ ನೀಡಲಾದ … Continued

ಛತ್ತೀಸ್‌ಗಢದಲ್ಲಿ 2000 ಕೋಟಿ ರೂ.ಗಳ ಮದ್ಯದ ‘ಹಗರಣ’ ಭೇದಿಸಿದ ಇ.ಡಿ.; ರಾಯ್ಪುರ ಮೇಯರ್ ಸಹೋದರನ ಬಂಧನ

ರಾಯ್ಪುರ: ದೆಹಲಿಯ ಮದ್ಯ ನೀತಿ ಹಗರಣವು ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವನ್ನು ಅಲುಗಾಡಿಸಿದೆ. ಇದೀಗ, ಛತ್ತೀಸ್‌ಗಢದಲ್ಲಿ 2,000 ಕೋಟಿ ರೂಪಾಯಿ ಮದ್ಯದ ಹಗರಣವನ್ನು ಭೇದಿಸಿರುವುದಾಗಿ ಜಾರಿ ನಿರ್ದೇಶನಾಲಯ (ED) ಹೇಳಿಕೊಂಡಿದೆ. ಕಾಂಗ್ರೆಸ್ ನಾಯಕ ಮತ್ತು ರಾಯ್‌ಪುರ ಮೇಯರ್ ಐಜಾಜ್ ಧೇಬರ್ ಅವರ ಸಹೋದರ ಅನ್ವರ್ ಧೇಬರ್ ಅವರು … Continued

ಅಮೆರಿಕದ ಟೆಕ್ಸಾಸ್ ಮಾಲ್‌ನಲ್ಲಿ ಗುಂಡಿನ ದಾಳಿ; 8 ಮಂದಿ ಸಾವು, ಹಲವರಿಗೆ ಗಾಯ

ಡಲ್ಲಾಸ್‌ : ಅಮೆರಿಕ ದೇಶದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಅಮೆರಿಕದ ಟೆಕ್ಸಾಸ್ ನಗರದ ಹೊರವಲಯದ ಮಾಲ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಒಳನುಗ್ಗಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ ನಂತರ ಎಂಟು ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಶನಿವಾರ (ಮೇ 6) ಸುಮಾರು ಮಧ್ಯಾಹ್ನ 3:30ರ (ಸ್ಥಳೀಯ ಕಾಲಮಾನ) ಸುಮಾರಿಗೆ ಈ ಘಟನೆ ನಡೆದಿದೆ. ಡಲ್ಲಾಸ್‌ನ ಉತ್ತರಕ್ಕೆ 25 … Continued

ಅಮೃತಸರ ಸುವರ್ಣ ಮಂದಿರದ ಬಳಿ ಸ್ಫೋಟ ; ಹಲವರಿಗೆ ಗಾಯ

ಅಮೃತಸರ : ಪಂಜಾಬ್‌ನ ಅಮೃತಸರ ನಗರದ ಸುವರ್ಣ ಮಂದಿರದ ಬಳಿ ಶನಿವಾರ (ಮೇ 6) ತಡರಾತ್ರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೆರಿಟೇಜ್‌ ಸ್ಟ್ರೀಟ್‌ನಲ್ಲಿ ಮಧ್ಯರಾತ್ರಿ ವೇಳೆ ಪ್ರವಾಸಿಗರು ಮತ್ತು ಭಕ್ತರು ಸಂಚರಿಸುತ್ತಿದ್ದಾಗ ಸಾರಗಾರ್ಹಿ ಸಾರಾಯ್‌ ಪ್ರದೇಶದ ವಾಹನ ತಂಗುದಾಣ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಅಮೃತಸರ ಹೆರಿಟೇಜ್‌ ಸ್ಟ್ರೀಟ್‌ನ ರೆಸ್ಟೋರೆಂಟ್‌ವೊಂದರ … Continued

ಇಂದು ಬೆಳಿಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ : ನಿಮ್ಮ ಫಲಿತಾಂಶ ಹೀಗೆ ಚೆಕ್ ಮಾಡಬಹುದು…

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮೇ8ರಂದು ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 08-05-2023ರಂದು ಬೆಳಿಗ್ಗೆ 10 ಗಂಟೆಗೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಕಟಿಸಲಾಗುತ್ತದೆ … Continued