ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಂತಿಮ ಹಂತದ ಚಂದ್ರನ ಕ್ಷಕೆ ಕಡಿಮೆ ಮಾಡುವ ಪ್ರಯತ್ನ ಯಶಸ್ವಿ : ಮುಂದೇನು…?

ಬೆಂಗಳೂರು: ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಹತ್ತಿರ ತರುವ ತನ್ನ ಅಂತಿಮ ಪ್ರಕ್ರಿಯೆಯನ್ನು ಇಸ್ರೊ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರದಂದು ಬಾಹ್ಯಾಕಾಶ ನೌಕೆಯು ಐದನೇ ಮತ್ತು ಅಂತಿಮ ಕಕ್ಷೆ ಕಡಿಮೆಗೊಳಿಸುವ ಕೌಶಲ್ಯವನ್ನು ನಡೆಸಿದೆ ಎಂದು ಪ್ರಕಟಿಸಿತು ಹಗೂ ಇದು ಕಾರ್ಯಾಚರಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಅದು ಗುರುತಿಸಿದೆ. … Continued

ವಿರೋಧದ ನಡುವೆ ವಿಧಾನ ಪರಿಷತ್‌ ನಾಮನಿರ್ದೇಶನಕ್ಕೆ ನಟಿ ಉಮಾಶ್ರೀ ಸೇರಿ ಮೂವರ ಹೆಸರು ಅಂತಿಮ

ಬೆಂಗಳೂರು : ವಿಧಾನಪರಿಷತ್​ಗೆ ಮೂವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು, ಇದಕ್ಕೆ ಹೈಕಮಾಂಡ್‌ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ರಾಜ್ಯಪಾಲರಿಗೆ ನಾಮನಿರ್ದೇಶನ ಹೆಸರುಗಳ ಪಟ್ಟಿಯನ್ನು ಶೀಘ್ರವೇ ರಾಜ್ಯಪಾಲರಿಗೆ ಪಟ್ಟಿ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಟಿ ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ಕಾಂಗ್ರೆಸ್​ ಪಕ್ಷದ ಕೆಲವು ನಾಯಕರ ವಿರೋಧದ ನಡುವೆಯೂ ಎಂ.ಆರ್. ಸೀತಾರಾಮ ಹಾಗೂ ನಿವೃತ್ತ ಇಡಿ … Continued

ರಸ್ತೆ ಮಧ್ಯದಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಚಿರತೆ ಮೇಲೆಯೇ ಪ್ರತಿದಾಳಿ ಮಾಡಿದ ಬಬೂನ್‌(ಮಂಗ)ಗಳು : ಕಂಗಾಲಾಗಿ ಕಾಲ್ಕಿತ್ತ ಚಿರತೆ | ವೀಕ್ಷಿಸಿ

ವನ್ಯಜೀವಿಗಳ ಬೆರಗುಗೊಳಿಸುವ ವೈವಿಧ್ಯತೆಯು ಸಾಮಾನ್ಯವಾಗಿ ನಮ್ಮ ಆಲೋಚನೆಗಳು ಹಾಗೂ ಕಲ್ಪನೆಗಳನ್ನೂ ಮೀರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ಬಬೂನ್‌ಗಳು (ಮಂಗನ ಒಂದು ಪ್ರಭೇದ) ಚಿರತೆಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಈ ವಿದ್ಯಮಾನಕ್ಕೆ ಪುರಾವೆಯನ್ನು ಒದಗಿಸಿದೆ. ರಸ್ತೆಯ ಮಧ್ಯದಲ್ಲಿ ಸಂಭವಿಸಿದ ಚಿರತೆ-ಬಬೂನ್‌ಗಳ ಸಂಂಘರ್ಷದ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ … Continued

“ಇಲ್ಲಿ ಪ್ರಧಾನಿಯಾಗಿ ಅಲ್ಲ, ಹಿಂದೂವಾಗಿ ಬಂದಿದ್ದೇನೆ”: ಕೇಂಬ್ರಿಡ್ಜಿನಲ್ಲಿ ಮೊರಾರಿ ಬಾಪು ರಾಮಕಥಾದಲ್ಲಿ ಪಾಲ್ಗೊಂಡ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ನಾನು ಇಂದು ಇಲ್ಲಿ ಪ್ರಧಾನಿಯಾಗಿ ಬಂದಿಲ್ಲ, ಹಿಂದೂ ಆಗಿ ಬಂದಿದ್ದೇನೆ ಎಂದು ಮಂಗಳವಾರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರಚಾರಕ ಮೊರಾರಿ ಬಾಪು ಅವರ ‘ರಾಮ ಕಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. “ಭಾರತೀಯ ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮೊರಾರಿ ಬಾಪು ಅವರ ರಾಮ ಕಥಾದಲ್ಲಿ ಪಾಲ್ಗೊಂಡಿದ್ದ ಅವರು, … Continued

ಹಿಮಾಚಲದಲ್ಲಿ ಮನೆಗಳು ಕುಸಿಯುವ ಭಯಾನಕ ವೀಡಿಯೊ: ಶಿಮ್ಲಾದಲ್ಲಿ ಭೂಕುಸಿತದ ನಂತರ ಕುಸಿದುಬಿದ್ದ ಹಲವಾರು ಮನೆಗಳು | ವೀಕ್ಷಿಸಿ

ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಂಗಳವಾರ ನಿರಂತರ ಮಳೆಯಿಂದಾಗಿ ಭೂಕುಸಿತದಿಂದ ಮನೆಗಳು ಮತ್ತು ಕಸಾಯಿಖಾನೆ ಸೇರಿದಂತೆ ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ. ಭೂಕುಸಿತ ಸಂಭವಿಸಿದ ಸ್ಥಳದ ಪಕ್ಕದಲ್ಲಿರುವ ಮನೆಗಳು ಕುಸಿಯುವ ಭೀತಿಯಿಂದ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. “ಸುಮಾರು 5-6 ಮನೆಗಳು ಕುಸಿದಿವೆ … Continued

ನೂಹ್ ಹಿಂಸಾಚಾರ: ಫರಿದಾಬಾದಿನಲ್ಲಿ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ

ನವದೆಹಲಿ: ಕಳೆದ ತಿಂಗಳು ನುಹ್, ಗುರುಗ್ರಾಮ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹರಿಯಾಣದ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ. ಬಿಟ್ಟು ಬಜರಂಗಿ ಮತ್ತು ಬಜರಂಗದಳದ ಸಹ ಕಾರ್ಯಕರ್ತ ಮೋನು ಮಾನೇಸರ್ ಅವರ ಪ್ರಚೋದನಕಾರಿ ಹೇಳಿಕೆಗಳು ಹಿಂಸಾಚಾರಕ್ಕೆ ಕಾರಣವಾಗಿವೆ ಎಂಬ ಆರೋಪಗಳಿವೆ. ಇತರ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಟ್ಟು ಬಜರಂಗಿಯನ್ನು ಹಿಂಸಾಚಾರ … Continued

ತಿರುಪತಿ ಭಕ್ತರ ಸುರಕ್ಷತೆಗೆ ಕ್ರಮ: ಪಾದಚಾರಿ ಮಾರ್ಗದಲ್ಲಿ ತೆರಳುವ ಭಕ್ತರ ಕೈಗೆ ಇನ್ಮುಂದೆ ಕೊಡ್ತಾರೆ ದೊಣ್ಣೆ …

ತಿರುಪತಿ: ಭಕ್ತಾದಿಗಳ ಸುರಕ್ಷತೆ ಮತ್ತು ಭದ್ರತೆಯು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಮುಖ ಆದ್ಯತೆಯಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ ಕರುಣಾಕರ ರೆಡ್ಡಿ ಹೇಳಿದ್ದಾರೆ. ತಿರುಪತಿಯ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹದಲ್ಲಿ ಟಿಟಿಡಿ, ಜಿಲ್ಲೆಯ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರೊಂದಿಗೆ … Continued

ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಬಹುದು: ಸಚಿವ ಪರಮೇಶ್ವರ

ತುಮಕೂರು : ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜಲವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ನಾವು ವಿದ್ಯುತ್ ಬೇಡಿಕೆ ನಿರ್ವಹಿಸಬೇಕಾಗಿದೆ ಎಂದು ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಸದ್ಯದ … Continued

ಹೊಲಗೇರಿ ಪದ ಬಳಕೆ: ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಿರುದ್ಧ ದೂರು

ಬೆಂಗಳೂರು: ಹೊಲಗೇರಿ ಪದ ಬಳಸುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ತೋಟಗಾರಿಗೆ ಹಾಗೂ ಗಣಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ವಿರುದ್ಧ ಪೊಲೀಸ್‌ ದೂರು ನೀಡಲಾಗಿದೆ ಎಂದು ವರದಿಯಾಗಿದೆ. ಎಸ್ ಸಿ /ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ … Continued

ದಕ್ಷಿಣ ರಷ್ಯಾದ ಪೆಟ್ರೋಲ್ ಬಂಕ್‌ನಲ್ಲಿ ಭಾರೀ ಸ್ಫೋಟ: ಕನಿಷ್ಠ 35 ಮಂದಿ ಸಾವು, 80 ಮಂದಿಗೆ ಗಾಯ

ದಾಗೆಸ್ತಾನ್‌ (ರಷ್ಯಾ) :  ಮಂಗಳವಾರ ರಷ್ಯಾದ ಕಾಕಸಸ್ ಗಣರಾಜ್ಯವಾದ ದಾಗೆಸ್ತಾನ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ನಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 35 ಜನರು ಸಾವಿಗೀಡಾಗಿದ್ದಾರೆ ಹಾಗೂ 80 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತುರ್ತು ಸಚಿವಾಲಯವು ವಿತರಿಸಿದ ಚಿತ್ರಗಳು ಭಾರೀ ಪ್ರಮಾಣದ ಬೆಂಕಿಯಿಂದ ಸುಟ್ಟುಹೋದ ಕಾರುಗಳು ಮತ್ತು ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು … Continued