ಮುರ್ಡೇಶ್ವರ : ಸಮುದ್ರಕ್ಕೆ ಇಳಿದಿದ್ದ ಯುವಕ ನಾಪತ್ತೆ, ಮತ್ತೋರ್ವನ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಈಜಲು ಹೋಗಿ ಪ್ರವಾಸಿಗನೊಬ್ಬ ನಾಪತ್ತೆಯಾಗಿದ್ದು. ಇನ್ನೋರ್ವನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ತುಮಕೂರು ಮೂಲದ 22 ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ ಇದ್ದರೂ ಸಮುದ್ರಕ್ಕಿಳಿದಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದು ಅದರಲ್ಲಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ. ತುಮಕೂರು … Continued

ಎರಡು ಬಾರಿ ನೀಟ್‌ ಪರೀಕೆಯಲ್ಲಿ ಅನುತ್ತೀರ್ಣನಾದ ನಂತರ ಆತ್ಮಹತ್ಯೆ ಮಾಡಿಕೊಂಡ ಯುವಕ : ನಂತರ ತಂದೆಯೂ ಆತ್ಮಹತ್ಯೆ

ಚೆನ್ನೈ: ಚೆನ್ನೈನಲ್ಲಿ 19 ವರ್ಷದ ವೈದ್ಯಕೀಯ ಸೀಟ್‌ ಆಕಾಂಕ್ಷಿಯೊಬ್ಬ ಎರಡು ಬಾರಿ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಆತ ಸತ್ತಿದ್ದಾನೆ ಎಂದು ಘೋಷಿಸಲಾಯಿತು. ನಗರದ ಕ್ರೋಮ್‌ಪೇಟೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಜಗದೀಶ್ವರನ್ ಎಂದು … Continued

ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಸ್ಥಾನ ಕುಸಿದು 9 ಸಾವು

ಶಿಮ್ಲಾ: ಸೋಮವಾರ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶಿವ ದೇವಾಲಯ ಕುಸಿದು ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸಿಖು ತಿಳಿಸಿದ್ದಾರೆ. ಸಮ್ಮರ್ ಹಿಲ್ ಪ್ರದೇಶದ ದೇವಸ್ಥಾನದಲ್ಲಿ ಭೂಕುಸಿತದಲ್ಲಿ ಡಜನ್‌ಗಟ್ಟಲೆ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. … Continued

ತಿರುಪತಿ ಬೆಟ್ಟದಲ್ಲಿ ಚಿರತೆ ದಾಳಿ ಪ್ರಕರಣ : ಮಕ್ಕಳನ್ನು ಪಾದಚಾರಿ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಸಮಯ ಬದಲು

ತಿರುಪತಿ: ಇತ್ತೀಚಿಗೆ ಮಕ್ಕಳ ಮೇಲೆ ಚಿರತೆ ದಾಳಿಯ ಘಟನೆಗಳ ನಂತರ ತಿರುಮಲ ತಿರುಪತಿ ದೇವಸ್ಥಾನವು ಸಮೀಪದ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಪಾದಚಾರಿ ಮಾರ್ಗದಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಭಾನುವಾರ ನಿರ್ಬಂಧ ವಿಧಿಸಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳಿಗೆ ಪಾದಚಾರಿ ಮಾರ್ಗಗಳಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ … Continued

ಇವರು ವಾರಾಣಸಿಯಿಂದ ಸ್ಪರ್ಧಿಸಿದರೆ…. ಪ್ರಧಾನಿ ಮೋದಿ ಸೋಲುವುದು ಗ್ಯಾರಂಟಿ : ಸಂಜಯ ರಾವತ್‌

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಾಣಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ ರಾವತ್ ಹೇಳಿದ್ದಾರೆ. ವಾರಾಣಸಿಯವರಿಗೆ ಪ್ರಿಯಾಂಕಾ ಗಾಂಧಿ ಬೇಕು. ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು … Continued

ಚೀನಾದ ಜೊತೆಗಿನ ಗಾಲ್ವಾನ್ ಘರ್ಷಣೆ ನಂತರ 68,000 ಸೈನಿಕರು, 90 ಟ್ಯಾಂಕ್‌ಗಳನ್ನು ಪೂರ್ವ ಲಡಾಖ್‌ಗೆ ವಿಮಾನದಲ್ಲಿ ಒಯ್ದ ಭಾರತದ ವಾಯುಪಡೆ

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿನ ಮಾರಣಾಂತಿಕ ಘರ್ಷಣೆಯ ನಂತರ 68,000ಕ್ಕೂ ಹೆಚ್ಚು ಸೇನಾ ಸೈನಿಕರು, ಸುಮಾರು 90 ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಭಾರತೀಯ ವಾಯುಪಡೆಯು ಪೂರ್ವ ಲಡಾಖ್‌ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕ್ಷಿಪ್ರ ನಿಯೋಜನೆಗಾಗಿ ವಿಮಾನದಲ್ಲಿ ಒಯ್ದಿತ್ತು ಎಂದು ಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. … Continued

ಕೆಲವು ಹಿತೈಷಿಗಳು ಬಿಜೆಪಿ ಜೊತೆ ಹೋಗುವಂತೆ ನನ್ನ ಮನವೊಲಿಸಲು ಪ್ರಯತ್ನಿಸಿದರು : ಶರದ್ ಪವಾರ್

ಮುಂಬೈ : ಕೆಲವು ಹಿತೈಷಿಗಳು ಬಿಜೆಪಿ ಸೇರುವಂತೆ ತನ್ನನ್ನು ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಾವು ಹಾಗೂ ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್‌ಸಿಪಿ ರಾಜಕೀಯ ನೀತಿಗಳಿಗೆ ಬಿಜೆಪಿಯ ಸಿದ್ಧಾಂತಗಳು ಸರಿ … Continued

ಗಂಡನ ಸಾವಿನ ದಿನವೇ ಮಗನೊಂದಿಗೆ ಕೆರೆಗೆ ಹಾರಿದ ತಾಯಿ

ಆನೇಕಲ್: ಗಂಡ ತೀರಿಕೊಂಡ ಎರಡು ವರ್ಷಗಳ ಬಳಿಕ ಅದೇ ದಿನವೇ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಕರೆಗೆ ಹಾರಿ ಸಾವಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೇರುಘಟ್ಟ ಪೋಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ಕೆರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ ಬಳಿ ತಾಯಿ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ … Continued

ಉದ್ದನೆಯ ಗಡ್ಡ ಹೊಂದಿದ ಮಹಿಳೆ : ಗಿನ್ನೆಸ್ ವಿಶ್ವ ದಾಖಲೆ

ಅಮೆರಿಕದ ಮಿಚಿಗನ್‌ನ 38 ವರ್ಷದ ಮಹಿಳೆಯೊಬ್ಬರು ಉದ್ದನೆಯ ಗಡ್ಡ ಹೊಂದಿರುವ ಜೀವಂತ ಮಹಿಳೆಯಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಗಮನಾರ್ಹವಾಗಿ, ಎರಿನ್ ಹನಿಕಟ್ ತನ್ನ 11.8-ಇಂಚಿನ (29.9 cm) ಗಡ್ಡವನ್ನು ಸುಮಾರು ಎರಡು ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ. 25.5 ಸೆಂ.ಮೀ ಉದ್ದದ ಗಡ್ಡದ ಹಿಂದಿನ ದಾಖಲೆಯು ಅಮೆರಿಕದ 75 ವರ್ಷದ … Continued

ಪಿಎಫ್‌ಐ ಪಿತೂರಿ ಪ್ರಕರಣದಲ್ಲಿ 5 ರಾಜ್ಯಗಳ 14 ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪಿತೂರಿಯನ್ನು ವಿಫಲಗೊಳಿಸುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಐದು ರಾಜ್ಯಗಳಲ್ಲಿ ಸರಣಿ ದಾಳಿ ನಡೆಸಿದೆ. ಭಯೋತ್ಪಾದನಾ ತನಿಖಾ ಸಂಸ್ಥೆಯು ಕಣ್ಣೂರು, ಮಲಪ್ಪುರಂ (ಕೇರಳ), ದಕ್ಷಿಣ ಕನ್ನಡ (ಕರ್ನಾಟಕ), ನಾಸಿಕ್, ಕೊಲ್ಲಾಪುರ (ಮಹಾರಾಷ್ಟ್ರ), ಮುರ್ಷಿದಾಬಾದ್ (ಪಶ್ಚಿಮ ಬಂಗಾಳ) ಮತ್ತು ಕತಿಹಾರ್ … Continued