ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಆರೋಪ: ಕೃಷಿ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರಾದ ಸಿದ್ದರಾಮಯ್ಯ ಅವರೇ ನಿಮ್ಮದೇ ಸಂಪುಟದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಎಂದು ಕಾಂಗ್ರೆಸ್‌ ಸರ್ಕಾರದ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಈ ಹಿಂದೆ … Continued

ಟ್ರಾಫಿಕ್ ಅವ್ಯವಸ್ಥೆಯಿಂದ ಬೆಂಗಳೂರಿಗೆ ಸುಮಾರು 20,000 ಕೋಟಿ ರೂ. ನಷ್ಟ: ಅಧ್ಯಯನ

ಬೆಂಗಳೂರು ತನ್ನ ಟೆಕ್ ಉದ್ಯಮ ಮತ್ತು ಕುಖ್ಯಾತ ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿದೆ. ಇದೀಗ ಹೊಸ ವರದಿಯೊಂದು ನಗರದ ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ಗಳ ಸ್ಥಗಿತ, ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದ ವರ್ಷಕ್ಕೆ ₹ 19,725 ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಸಂಚಾರ ತಜ್ಞ ಎಂ.ಎನ್. ಶ್ರೀಹರಿ ಮತ್ತು ಅವರ ತಂಡ … Continued

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2023 ಅಂಗೀಕರಿಸಿದ ಲೋಕಸಭೆ

ನವದೆಹಲಿ : ಖಾಸಗಿತನದ ಬಗ್ಗೆ ವಿಪಕ್ಷಗಳ ಪ್ರಶ್ನೆಗಳ ನಡುವೆಯೂ ಡೇಟಾ ಉಲ್ಲಂಘನೆಗೆ ಭಾರೀ ದಂಡವನ್ನು ವಿಧಿಸುವ ಡಿಜಿಟಲ್ ಪರ್ಸನಲ್‌ ಡೇಟಾ ಸಂರಕ್ಷಣಾ ಮಸೂದೆ-2023 ಡಿಜಿಟಲ್ ಹಕ್ಕುಗಳ ಕಾನೂನಿಗೆ ಲೋಕಸಭೆ ಇಂದು, ಸೋಮವಾರ ಅನುಮೋದನೆ ನೀಡಿತು. ಬ್ಯಾಂಕಿಂಗ್, ಆರೋಗ್ಯ, ವಿಮೆ ಅಥವಾ ಫೋನ್ ಕರೆ ದಾಖಲೆಗಳ ಡಿಜಿಟಲ್ ಸೇವೆಗಳನ್ನು ಬಳಸುವ ನಾಗರಿಕರ ವೈಯಕ್ತಿಕ ಡೇಟಾಗಳ ಸುರಕ್ಷತೆಗೆ ಭರವಸೆ … Continued

ಶಿಗ್ಗಾಂವಿ : ಹೆದ್ದಾರಿ ಪಕ್ಕ ನಿಂತಿದ್ದವರಿಗೆ ಕಾರು ಡಿಕ್ಕಿ ; ಇಬ್ಬರು ಸಾವು

ಹಾವೇರಿ: ಊರಿಗೆ ತೆರಳಲು ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಬಳಿ ಇರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಮೃತರನ್ನು ವಿರೂಪಾಕ್ಷಪ್ಪ ಕಾಳಿ (60) ಮತ್ತು ಚಿದಾನಂದ ಕುರುಬರ (53) ಎಂದು ಗುರುತಿಸಲಾಗಿದೆ. ಇಬ್ಬರೂ ನೀರಲಗಿ ಗ್ರಾಮದಿಂದ ಶಿಗ್ಗಾಂವಿ ಪಟ್ಟಣಕ್ಕೆ ಹೋಗಲು … Continued

4 ತಿಂಗಳ ನಂತರ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪನೆ : ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್ಸಿಗೆ ಬಲ

ನವದೆಹಲಿ: ಮೋದಿ ಉಪನಾಮ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದ ನಂತರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪುನಃಸ್ಥಾಪಿಸಿದ್ದಾರೆ. ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯು ಶಾಸಕರನ್ನು … Continued

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕಿನಲ್ಲಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ ವೇಳೆ ದುರಂತ ಸಂಭವಿಸಿದೆ ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ … Continued

ಬಿಜೆಪಿ ಹೈಕಮಾಂಡ್‌ ಬುಲಾವ್‌: ಮಾಜಿ ಸಿಎಂ ಬೊಮ್ಮಾಯಿ ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರಿಂದ ಈಗ ಬುಲಾವ್‌ ಬಂದಿದೆ. ಬೊಮ್ಮಾಯಿಯವರು ಭಾನುವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. … Continued

ಚಂದ್ರನ ಮೊದಲ ವೀಡಿಯೊ ತೆಗೆದ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ವೀಕ್ಷಿಸಿ

ನವದೆಹಲಿ: ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಒಂದು ದಿನದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ‘ಚಂದ್ರಯಾನ-3 ವೀಕ್ಷಿಸಿದಂತೆ’ ಚಂದ್ರನ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. “ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ … Continued

ವಿಶ್ವಕಪ್ ಕ್ರಿಕೆಟ್‌ 2023: ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ಗ್ರೀನ್‌ ಸಿಗ್ನಲ್‌ ನೀಡಿದ ಪಾಕಿಸ್ತಾನ

ನವದೆಹಲಿ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಸರ್ಕಾರವು ಪಾಕ್ ತಂಡಕ್ಕೆ ಭಾರತದ ಪ್ರವಾಸಕ್ಕೆ ತೆರಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಪಾಕಿಸ್ತಾನ ವಿಶ್ವಕಪ್‌ಗಾಗಿ ಭಾರತಕ್ಕೆ ಬರುತ್ತದೆಯೋ, ಇಲ್ಲವೋ ಎಂಬ ಅನೇಕ ಊಹಾಪೋಹಗಳಿದ್ದವು. ವಿಶ್ವಕಪ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ತಂಡದ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಕ್ರೀಡೆಯನ್ನು ರಾಜಕೀಯದಿಂದ ಪ್ರತ್ಯೇಕವಾಗಿಡಬೇಕು ಎಂಬುದನ್ನು ಪಾಕಿಸ್ತಾನ ಯಾವಾಗಲೂ … Continued

ವಿಶ್ವದಲ್ಲೇ ದಾಖಲೆ ಮೊತ್ತಕ್ಕೆ ಮಾರಾಟವಾದ ಬೃಹತ್ ಹಸು : ಬ್ರೆಜಿಲ್‌ನಲ್ಲಿ ಹರಾಜಿನಲ್ಲಿ ಬರೋಬ್ಬರಿ ₹35 ಕೋಟಿ ರೂ.ಗಳಿಗೆ ಖರೀದಿ; ಈ ಹಸುವಿನ ಮೂಲ ಭಾರತ

ಹಸು, ಎತ್ತುಗಳು ಲಕ್ಷಕ್ಕೆ ಮಾರಾಟವಾದರೂ ಬೆರಗಾಗುತ್ತಾರೆ. ಆದರೆ ಬ್ರೆಜಿಲ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ ಬಿಳಿ ಹಸುವೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದರ ಬೆಲೆ ಕೇಳಿದರೆ ಹೌಹಾರಲೇಬೇಕು. ಕಳೆದ ಜೂನ್ ತಿಂಗಳಿನಲ್ಲಿ ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 35 ಕೋಟಿ ರೂ.ಗಳಿಗೆ ಬೆಲೆಗೆ ಬೃಹತ್ ಬಿಳಿ ಹಸುವೊಂದು ಮಾರಾಟವಾಗಿದೆ. ನೆಲೋರ್ ತಳಿಯ ಹಸು 35 ಕೋಟಿ ರೂ.ಗೆ ಮಾರಾಟವಾಗಿದ್ದು, … Continued