ಯಾದಗಿರಿ: ‘ಚಂದ್ರಯಾನ -3’ರ ಸವಿನೆನಪಿಗಾಗಿ ತಮ್ಮ ಮಕ್ಕಳಿಗೆ ವಿಕ್ರಂ, ಪ್ರಗ್ಯಾನ್ ಎಂದು ಹೆಸರಿಟ್ಟ ದಂಪತಿಗಳು

ಯಾದಗಿರಿ : ಚಂದ್ರಯಾನ-3 ಯಶಸ್ಸಿನ ನೆನಪಿನ ಅಂಗವಾಗಿ ಯಾದಗಿರಿಯಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ವಿಕ್ರಂ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಐತಿಹಾಸಿಕ ಸನ್ನಿವೇಶನದ ನೆನಪಿಗಾಗಿ, ಯಾದಗಿರಿಯಲ್ಲಿ ಎರಡು ಕುಟುಂಬಗಳು ತಮ್ಮ ಮನೆಗಳಲ್ಲಿ ಇತ್ತೀಚೆಗೆ ಜನಿಸಿದ ಎರಡು ಕೂಸುಗಳಿಗೆ ನಾಮಕರಣ ಮಾಡುವ ವೇಳೆ ‘ವಿಕ್ರಮ’ ಹಾಗೂ ‘ಪ್ರಗ್ಯಾನ್’ ಎಂಬ ಹೆಸರನ್ನಿಟ್ಟಿದ್ದಾರೆ. ವಡಗೇರ … Continued

ಇಸ್ರೋ ಕೇಂದ್ರಕ್ಕೆ ಭೇಟಿ: ರಾಜಕಾರಣ, ರಾಜಕೀಯ ನಾಯಕರನ್ನು ದೂರವಿಟ್ಟ ಪ್ರಧಾನಿ ಮೋದಿ

ಬೆಂಗಳೂರು : ಚಂದ್ರಯಾನ-3 ರ ಯಶಸ್ಸಿನ ನಿಮಿತ್ತ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದಾರೆ. ಆದರೆ ಈ ಭೇಟಿಯನ್ನು ರಾಜಕೀಯ ಕಾರ್ಯಕ್ರಮವಾಗದಂತೆ ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟ ಪ್ರಧಾನಿ, ಬೆಂಗಳೂರಿನ ತಮ್ಮ ಇಸ್ರೋ ಭೇಟಿಯಲ್ಲಿ ಎಲ್ಲಿಯೂ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಆಸ್ಪದ ನೀಡಲಿಲ್ಲ. … Continued

ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅನಾಹುತ: 10 ಸಾವು, 20 ಕ್ಕೂ ಹೆಚ್ಚು ಮಂದಿ ಗಾಯ

ಮಧುರೈ : ಮಧುರೈ ರೈಲು ನಿಲ್ದಾಣದಲ್ಲಿ ಇಂದು, ಶನಿವಾರ ಮುಂಜಾನೆ ನಿಶ್ಚಲ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಯಾಣಿಕರೊಬ್ಬರು ಕಾಫಿ ಮಾಡಲು ಗ್ಯಾಸ್ ಸ್ಟೌವ್ ಹೊತ್ತಿಸಿದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅಕ್ರಮವಾಗಿ ತಂದ ಗ್ಯಾಸ್ ಸಿಲಿಂಡರ್” … Continued

ಬೆಂಗಳೂರು : ಇಸ್ರೋದಲ್ಲಿ ಚಂದ್ರಯಾನ-3 ಹೀರೋಗಳನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದ ಪ್ರಧಾನಿ ಮೋದಿ | ವೀಕ್ಷಿಸಿ

ಬೆಂಗಳೂರು: ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಭಾಗದ ಬಳಿ ಯಶಸ್ವಿಯಾಗಿ ಬಂದಿಳಿದ ಚಂದ್ರಯಾನ-3 ರ ಹೀರೊಗಳನ್ನು ಶ್ಲಾಘಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾವೋದ್ವೇಗಕ್ಕೆ ಒಳಗಾದರು ಹಾಗೂ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡರು. ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ಇತಿಹಾಸ ನಿರ್ಮಿಸಿದ ಇಸ್ರೋ ವಿಜ್ಞಾನಿಗಳನ್ನು … Continued

ಚಂದ್ರಯಾನ-3ರ ವಿಕ್ರಂ ಚಂದ್ರನ ಸ್ಪರ್ಷಿಸಿದ ಸ್ಥಳಕ್ಕೆ ʼಶಿವಶಕ್ತಿʼ ಎಂದು ನಾಮಕರಣ: ಇಸ್ರೋದಲ್ಲಿ ಪ್ರಧಾನಿ ಮೋದಿ ಘೋಷಣೆ

ಬೆಂಗಳೂರು: ಚಂದ್ರಯಾನ-3 ರ ಲ್ಯಾಂಡರ್ ವಿಕ್ರಂ ಸ್ಪರ್ಶಿಸಿದ ಚಂದ್ರನ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು, ಶನಿವಾರ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ನಲ್ಲಿ (ISTRAC) ಪ್ರಧಾನಿ ಮೋದಿಯವರು ಐತಿಹಾಸಿಕ ಚಂದ್ರಯಾನ-3 ಮಿಷನ್ ಹಿಂದೆ ವಿಜ್ಞಾನಿಗಳನ್ನು ಅಭಿನಂದಿಸಲು … Continued

ಸ್ಮಾರ್ಟ್ ಸಿಟಿ ಪ್ರಶಸ್ತಿಗಳ ಘೋಷಣೆ : ಇಂದೋರಿಗೆ ಅತ್ಯುತ್ತಮ “ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ, ಮಧ್ಯಪ್ರದೇಶ ಅತ್ಯುತ್ತಮ ರಾಜ್ಯ : 66 ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..

ನವದೆಹಲಿ: ಇಂದೋರ್ ನಗರವು ಶುಕ್ರವಾರ ಅತ್ಯುತ್ತಮ “ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ” ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಸೂರತ್ ಮತ್ತು ಆಗ್ರಾ ನಗರಗಳು ಪಡೆದುಕೊಂಡವು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2022 ರ ಭಾರತ ಸ್ಮಾರ್ಟ್ ಸಿಟಿ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದೆ. ಸೆಪ್ಟೆಂಬರ್ 27 ರಂದು ಇಂದೋರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು … Continued

ಚಂದ್ರನ ಮೇಲೆ 8 ಮೀಟರ್​ ದೂರದ ವರೆಗೆ ಕ್ರಮಿಸಿದ ರೋವರ್; ಇಸ್ರೋದಿಂದ ಮಾಹಿತಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಕುರಿತಂತೆ ಮತ್ತೊಂದು ಪ್ರಮುಖ ಮಾಹಿತಿ ಹಂಚಿಕೊಂಡಿದೆ. ಯೋಜಿಸಿದಂತೆಯೇ ರೋವರ್​ನ ಎಲ್ಲ ಚಲನೆಗಳು ಪರಿಶೀಲಿಸಲ್ಪಟ್ಟಿವೆ. ರೋವರ್ ಚಂದ್ರನ ಮೇಲೆ ಸುಮಾರು 8 ಮೀಟರ್​ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ತಿಳಿಸಿದೆ. ರೋವರ್ ಪೇಲೋಡ್ಸ್​ಗಳಾಗಿರುವ ಎಲ್​ಐಬಿಎಸ್​ ಮತ್ತು ಎಪಿಎಕ್ಸ್ಎಸ್​ ಆನ್​ ಆಗಿವೆ. ಪ್ರೊಪಲ್ಷನ್ ಮೋಡ್, ಲ್ಯಾಂಡರ್​ ಮಾಡ್ಯೂಲ್ ಮತ್ತು … Continued

ವ್ಲಾದಿಮಿರ್‌ ಪುತಿನ್ ನವದೆಹಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಖುದ್ದು ಭಾಗವಹಿಸಲು ಯೋಜಿಸಿಲ್ಲ: ರಷ್ಯಾ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂಬರುವ G20 ಶೃಂಗಸಭೆಯಲ್ಲಿ ಖುದ್ದು ಭಾಗವಹಿಸಲು ಯೋಜಿಸಿಲ್ಲ ಎಂದು ಕ್ರೆಮ್ಲಿನ್ ಶುಕ್ರವಾರ ತಿಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪುತಿನ್ ಭಾಗವಹಿಸುವಿಕೆಯ ಸ್ವರೂಪವನ್ನು ನಂತರ ನಿರ್ಧರಿಸಲಾಗುವುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾದ ಅಧ್ಯಕ್ಷರ ವಿರುದ್ಧ ಯುದ್ಧ ಅಪರಾಧಗಳ ಆರೋಪದ … Continued

ಪ್ರಧಾನಿ ಪದವಿ ಮಾನನಷ್ಟ ಪ್ರಕರಣ : ದೆಹಲಿ ಸಿಎಂಅರವಿಂದ್ ಕೇಜ್ರಿವಾಲಗೆ ಸುಪ್ರೀಂ ಕೋರ್ಟಿನಲ್ಲಿ ಸಿಗದ ರಿಲೀಫ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕುರಿತು ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಆರ್‌ಟಿಐ ಕಾಯ್ದೆಯಡಿ ಮೋದಿಯ ಪದವಿಗಳ ಬಗ್ಗೆ ಮಾಹಿತಿ ನೀಡುವಂತೆ … Continued

ಕಾರವಾರ : ಮನೆ ಮುಂದೆ ನಿಲ್ಲಿಸಿದ್ದ ಬೈಕಿನೊಳಗೆ ಅಡಗಿಕೊಂಡಿದ್ದ ಬೃಹತ್‌ ಕಾಳಿಂಗ ಸರ್ಪದ ರಕ್ಷಣೆ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶೇಜವಾಡ ಬಳಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪ ಪತ್ತೆಯಾದ ವಿದ್ಯಮಾನ ವರದಿಯಾಗಿದೆ…! ಶೇಜವಾಡದ ಮಂಜುನಾಥ ನಾಯ್ಕ ಎಂಬವರ ಬೈಕ್‌‌ನ ಒಳಗೆ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಬೈಕ್ ಹಿಂಬದಿಯ ಚೈನ್ ಪಾಕೆಟ್‌ ಬಳಿ ಈ ಬೃಹತ್‌ ಕಾಳಿಂಗ ಸರ್ಪ ಅಡಗಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು  ಅದನ್ನು … Continued