ಅಂಕೋಲಾ : ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ, ಸ್ಥಳೀಯರಿಗೆ ಆತಂಕ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದು ಸುಮಾರು 7 ಅಡಿಗಳಷ್ಟು ಉದ್ದವಿರುವ ಬೃಹತ್ ಮೊಸಳೆ ಎನ್ನಲಾಗಿದೆ. ಮೊಸಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ಅವರು ಹೆಚ್ಚಾಗಿ ನದಿಯನ್ನು ಅವಲಂಬಿಸಿರುವುದರಿಂದ ಅವರಿಗೆ ಆತಂಕ ಎದುರಾಗಿದೆ. ನದಿ ತೀರದಲ್ಲಿ … Continued

ಮಳೆ ಕೊರತೆ ; 100ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ : ಕೃಷಿ ಸಚಿವ ಚಲುವರಾಯಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಅಣೆಕಟ್ಟೆಗಳು, ಕೆರೆಗಳು ನೀರಿಲ್ಲ ಸ್ಥಿತಿಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋಡಬಿತ್ತನೆ ಬಗ್ಗೆ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ, ಈ ಮೊದಲು … Continued

WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ

‘ಬ್ರೇ ವ್ಯಾಟ್’ ಎಂಬ ಹೆಸರಿನಿಂದ ಪರಿಚಿತರಾಗಿರುವ ಡಬ್ಲ್ಯುಡಬ್ಲ್ಯು ಇ ಕುಸ್ತಿಪಟು ವಿಂಡ್‌ಹ್ಯಾಮ್ ರೊಟುಂಡಾ ಗುರುವಾರ ಹೃದಯಾಘಾತದಿಂದ ನಿಧನರಾದರು. ಅಮೆರಿಕದ ಕುಸ್ತಿಪಟುವಿನ ಅನಿರೀಕ್ಷಿತ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ. “ಬ್ರೇ ವ್ಯಾಟ್ ಎಂದೂ ಕರೆಯಲ್ಪಡುವ ವಿಂಡ್‌ಹ್ಯಾಮ್ ರೊಟುಂಡಾ ಅವರು 36 ನೇ ವಯಸ್ಸಿನಲ್ಲಿ ಗುರುವಾರ, ಆಗಸ್ಟ್. 24 ರಂದು ನಿಧನರಾದರು ಎಂದು ತಿಳಿಸಲು ಡಬ್ಲ್ಯುಡಬ್ಲ್ಯು ಇ (WWE) … Continued

ಚೀನಾವೇ ಮನವಿ ಮಾಡಿತ್ತು : ಪ್ರಧಾನಿ ಮೋದಿ-ಚೀನಾ ಅಧ್ಯಕ್ಷರ ಭೇಟಿ ಬಗ್ಗೆ ಬೀಜಿಂಗ್‌ ಹೇಳಿಕೆ ನಿರಾಕರಿಸಿದ ಭಾರತ ; ಸರ್ಕಾರಿ ಮೂಲಗಳು

ನವದೆಹಲಿ: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಸಭೆ ನಡೆಸುವಂತೆ ಚೀನಾ ಮನವಿ ಮಾಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹಾಗೂ ನವದೆಹಲಿಯ ಒತ್ತಾಯದ ಮೇರೆಗೆ ಸಭೆ ನಡೆದಿದೆ ಎಂಬ ಬೀಜಿಂಗ್ ಹೇಳಿಕೆಯನ್ನು ತಳ್ಳಿಹಾಕಿದೆ “ದ್ವಿಪಕ್ಷೀಯ ಸಭೆಗಾಗಿ ಚೀನಾದ … Continued

ಕಾವೇರಿ ನದಿ ವಿವಾದ : ಸೆಪ್ಟಂಬರ್‌ 1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಕಾವೇರಿ ನದಿಯಿಂದ ಪ್ರತಿ ನಿತ್ಯ 24,000 ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ(ಸೆಪ್ಟಂಬರ್‌ 1) ಮುಂದೂಡಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ನೀರು ಬಿಡುವ ಕುರಿತು … Continued

ಚಂದ್ರಯಾನ ಯಶಸ್ಸು ಸಹಿಸದ ಬ್ರಿಟನ್​ ಪತ್ರಕರ್ತರು: ಭಾರತಕ್ಕೆ ನೆರವು ನಿಲ್ಲಿಸಲು ಒತ್ತಾಯ, ಲೂಟಿ ಮಾಡಿದ $45 ಟ್ರಿಲಿಯನ್ ಹಣ, ಕೊಹಿನೂರು ವಜ್ರ ವಾಪಸ್‌ ಮಾಡಿ ಎಂದ ನೆಟಿಜನ್‌ಗಳು

ನವದೆಹಲಿ: ಭಾರತದ ಚಂದ್ರಯಾನ 3 ಯೋಜನೆಯ ಯಶಸ್ಸಿಗೆ ಇಡೀ ಜಗತ್ತು ಅಭಿನಂದಿಸುತ್ತಿರುವ ಸಮಯದಲ್ಲಿ ಬ್ರಿಟನ್ನಿನ ಕೆಲವರು ತಮ್ಮ ಅಸೂಯೆಯನ್ನು ಹೊರಹಾಕಿದ್ದಾರೆ. ಬ್ರಿಟನ್‌, 2016 ಮತ್ತು 2021 ರ ನಡುವೆ ಭಾರತಕ್ಕೆ ನೀಡಿದ 2.3 ಶತಕೋಟಿ ಪೌಂಡ್ ನೆರವನ್ನು ಭಾರತ ಹಿಂದಿರುಗಿಸಬೇಕು ಎಂದು ಬ್ರಿಟಿಷ್ ಟಿವಿ ನಿರೂಪಕ ಹೇಳಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಚಂದ್ರನಲ್ಲಿಗೆ ಹೋಗಲು … Continued

ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಒಳಗಿದ್ದ ಪ್ರಗ್ಯಾನ ರೋವರ್ ಹೊರಬಂದ ವೀಡಿಯೊ ಬಿಡುಗಡೆ ಮಾಡಿದ ಇಸ್ರೋ | ವೀಕ್ಷಿಸಿ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಂ ಲ್ಯಾಂಡರ್‌ನಿಂದ ಪಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈಗೆ ಹೇಗೆ ಇಳಿಯಿತು ಎಂಬುದನ್ನು ತೋರಿಸುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. ‘… ಮತ್ತು ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ’ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ … Continued

ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ 6.5% ಕೋವಿಡ್ ರೋಗಿಗಳ ಸಾವು : ಐಎಂಸಿಆರ್‌ ಅಧ್ಯಯನ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಡಿ ಆಸ್ಪತ್ರೆಗಳ ನೆಟ್‌ವರ್ಕ್ ನಡೆಸಿದ ಅಧ್ಯಯನದಲ್ಲಿ ಮಧ್ಯಮದಿಂದ ತೀವ್ರತರವಾದ ಕೋವಿಡ್-19 ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ 6.5% ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬುದು ಕಂಡುಬಂದಿದೆ. ರೋಗಲಕ್ಷಣಗಳಿಲ್ಲದ ಕೋವಿಡ್ ರೋಗಿಗಳಿಗೆ ಹೋಲಿಸಿದರೆ, ಡಿಸ್ಚಾರ್ಜ್ ಆದ ನಂತರ ಕೋವಿಡ್ ನಂತರದ ಪರಿಸ್ಥಿತಿಗಳನ್ನು ಅನುಭವಿಸುವ … Continued

ಭಾರತ-ಚೀನಾ ಬಾಂಧವ್ಯದ ಬಗ್ಗೆ ‘ಪ್ರಾಮಾಣಿಕ, ಆಳವಾದ ದೃಷ್ಟಿಕೋನಗಳ ವಿನಿಮಯ’ ಮಾಡಿಕೊಂಡ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ : ಚೀನಾ

ನವದೆಹಲಿ: ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ದ್ವಿಪಕ್ಷೀಯ ಮಾತುಕತೆಗಳ ಕುರಿತು ಚೀನಾ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದೆ. ಚೀನಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವಿನಿಮಯಕ್ಕೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, … Continued

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಕೆಲವೇ ಸಮಯದಲ್ಲಿ ಶ್ಯೂರಿಟಿ ಮೇಲೆ ಬಿಡುಗಡೆ

ಅಟ್ಲಾಂಟಾ: ಜಾರ್ಜಿಯಾದಲ್ಲಿ ಪಿತೂರಿ ಆರೋಪದ ಮೇಲೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಔಪಚಾರಿಕವಾಗಿ ಬಂಧಿಸಲಾಯಿತು. ಮತ್ತು ಐತಿಹಾಸಿಕ ಮಗ್ ಶಾಟ್ ತೆಗೆದ ನಂತರ $ 2,00,000 ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಜಾರ್ಜಿಯಾದಲ್ಲಿ 2020 ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು 18 ಇತರ ಆರೋಪಿಗಳೊಂದಿಗೆ ಪಿತೂರಿ ರೂಪಿಸಿದ ಆರೋಪ ಹೊತ್ತಿರುವ ಟ್ರಂಪ್, … Continued