ದೆಹಲಿ ವಿಮಾನ ನಿಲ್ದಾಣದಲ್ಲಿ ಐಎಸ್ ಭಯೋತ್ಪಾದನೆ ಸಂಚಿನ ಆರೋಪಿಯನ್ನು ಬಂಧಿಸಿದ ಎನ್ಐಎ: ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೂ ನಂಟು..?

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕೀನ್ಯಾದ ನೈರೋಬಿಯಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಮುಖ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಚುಕೋರನನ್ನು ಬಂಧಿಸಿದೆ. ಅರಾಫತ್ ಅಲಿ ಎಂಬಾತ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಐಎಸ್‌ (IS) ISIS (ಇಸ್ಲಾಮಿಕ್ … Continued

ಸಿಸಿಬಿ ವಿಚಾರಣೆ ವೇಳೆ ಕುಸಿದು ಬಿದ್ದ ಚೈತ್ರಾ ಕುಂದಾಪುರ; ಆಸ್ಪತ್ರೆಗೆ ದಾಖಲು

ಬೆಂಗಳೂರು : ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಅವರು ಸಿಸಿಬಿ ವಿಚಾರಣೆ ವೇಳೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇಂದು, ಶುಕ್ರವಾರ ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾ ಅವರನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತರಲಾಗಿತ್ತು. 45 ನಿಮಿಷದ … Continued

2 ವಾರಗಳಿಗೂ ಹೆಚ್ಚು ಕಾಲದಿಂದ ‘ಕಾಣೆʼಯಾಗಿರುವ ಚೀನಾದ ರಕ್ಷಣಾ ಸಚಿವರು ; ತನಿಖೆಗೆ ಒಳಪಡಿಸಲಾಗಿದೆ : ವರದಿ

ನವದೆಹಲಿ: ಎರಡು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಮೆರಿಕ ಸರ್ಕಾರ ನಂಬುತ್ತದೆ. ಅಮೆರಿಕ ಪ್ರಕಾರ, ಶಾಂಗ್ಫು ಅವರು ರಕ್ಷಣಾ ಸಚಿವರಾಗಿದ್ದ ಅವರ ಜವಾಬ್ದಾರಿಗಳನ್ನು ಸಹ ಕಿತ್ತುಕೊಳ್ಳಲಾಗಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ತೆಗೆದುಕೊಂಡು, ಜಪಾನ್‌ಗೆ ಅಮೆರಿಕದ ರಾಯಭಾರಿಯಾಗಿರುವ ರಹಮ್ ಇಮ್ಯಾನುಯೆಲ್ ಅವರು X … Continued

ನುಹ್‌ ಹಿಂಸಾಚಾರ : ಕಾಂಗ್ರೆಸ್ ಶಾಸಕನ ಬಂಧನ

ನವದೆಹಲಿ: ಆಗಸ್ಟ್‌ನಲ್ಲಿ ಹರಿಯಾಣದ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಆರೋಪಿ ಎಂದು ಹೆಸರಿಸಲಾದ ಹರಿಯಾಣ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಗುರುವಾರ ಬಂಧಿಸಲಾಗಿದೆ. ಹರಿಯಾಣ ಪೊಲೀಸರ ಪ್ರಕಾರ, ವಿಶ್ವ ಹಿಂದೂ ಪರಿಷತ್ ಯಾತ್ರೆಯ ನಂತರ ನಡೆದ ಹಿಂಸಾಚಾರದಲ್ಲಿ ಅವನು ಭಾಗಿಯಾಗಿದ್ದಕ್ಕೆ “ಸಾಕಷ್ಟು ಪುರಾವೆಗಳು” ಇವೆ. ಬಂಧನದಿಂದ ರಕ್ಷಣೆ ಕೋರಿ ಫಿರೋಜ್‌ಪುರ ಜೀರ್ಕಾ ಶಾಸಕ ಮಮ್ಮನ್ … Continued

ಮಂಡ್ಯದಲ್ಲಿ ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಬೆಂಗಳೂರು : ಮಂಡ್ಯದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ನಡೆಸಲು ಉದ್ದೇಶಿಸಿದ್ದ ’87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಬರಗಾಲ ಹಿನ್ನೆಲೆ ಮುಂದಕ್ಕೆ ಹಾಕಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬರಗಾಲ ‍ಛಾಯೆ ಆವರಿಸಿದೆ. ರೈತ ಸಂಕಟದಲ್ಲಿರುವಾಗ ಸಂತಸ ಆಚರಿಸುವ ಸಮ್ಮೇಳನಕ್ಕೆ ಅರ್ಥವೇ ಇಲ್ಲ. ʻಅನ್ನ ಇದ್ದಾಗ ಸಂತಸ, ಸಂತಸ … Continued

₹1,000 ಕೋಟಿ ಆನ್‌ಲೈನ್ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಗೋವಿಂದ ವಿಚಾರಣೆ ಸಾಧ್ಯತೆ

1,000 ಕೋಟಿ ರೂಪಾಯಿ ಪ್ಯಾನ್-ಇಂಡಿಯಾ ಆನ್‌ಲೈನ್ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸ್‌ನ ಅಪರಾಧ ವಿಭಾಗದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಾಲಿವುಡ್ ನಟ ಗೋವಿಂದನನ್ನು ವಿಚಾರಣೆ ನಡೆಸಬಹುದು ಎಂದು ವರದಿಯೊಂದು ಹೇಳಿದೆ. ಸೋಲಾರ್ ಟೆಕ್ನೋ ಅಲೈಯನ್ಸ್ (ಎಸ್‌ಟಿಎ-ಟೋಕನ್) ಒಳಗೊಂಡ ಬಹುಕೋಟಿ ಪೋಂಜಿ ಹಗರಣದ ತನಿಖೆ ನಡೆಸುತ್ತಿರುವ ತಂಡದ ಭಾಗವಾಗಿರುವ ಇಒಡಬ್ಲ್ಯು ಡಿಎಸ್‌ಪಿ ಸಸ್ಮಿತಾ ಸಾಹು … Continued