ತಮಿಳುನಾಡಿನಲ್ಲಿ ದೇವಸ್ಥಾನದ ಅರ್ಚಕರಾದ ಮೂವರು ಯುವತಿಯರು…

ಚೆನ್ನೈ: ವೃತ್ತಿಯಲ್ಲಿನ ಲಿಂಗದ ಅಂತರ ನಿವಾರಿಸುವ ಅವಕಾಶ ಬಳಸಿಕೊಂಡು, ಮೂವರು ಯುವತಿಯರು ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ. ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿ ಸ್ವೀಕರಿಸಿದ ಮೂವರು ಯುವತಿಯರಲ್ಲಿ ಒಬ್ಬರು ಕುಟುಂಬದಲ್ಲಿ ಮೊದಲ ಪದವೀಧರರು, ಇನ್ನೊಬ್ಬರು ಪದವೀಧರರು ಮತ್ತು ಮೂರನೆಯವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಸಂಬಳವು ಅತ್ಯಲ್ಪವಾಗಿದೆ ಆದರೆ ದೇವರು ತಮ್ಮ ಅಗತ್ಯಗಳನ್ನು ಪೂರೈಸುತ್ತಾನೆ ಎಂದು ಹೇಳುವ ಯುವತಿಯರಿಗೆ … Continued

ವೀಡಿಯೊ…| ಮಿಲಿಟರಿ ಸಮವಸ್ತ್ರ ಧರಿಸಿ ಕೊನೆ ಬಾರಿಗೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದ ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ 6 ವರ್ಷದ ಮಗ

ಚಂಡೀಗಢ : ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೂವರ ಪೈಕಿ ಒಬ್ಬರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಆರು ವರ್ಷದ ಮಗ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದ ಮನೆಗೆ ತಂದೆಯ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಮಿಲಿಟರಿ ಬಟ್ಟೆ ಧರಿಸಿ ಸೆಲ್ಯೂಟ್‌ ಮಾಡುವ ಮೂಲಕ ತಂದೆಗೆ ಗೌರವ ನಮನ ಸಲ್ಲಿಸಿದ್ದಾನೆ. ಶುಕ್ರವಾರ ಕೊನೆಯ ಬಾರಿಗೆ ಕರ್ನಲ್ … Continued

ನಿಪಾ ವೈರಸ್ ಸಾವಿನ ಪ್ರಮಾಣ 40%-70%, ಕೋವಿಡ್‌ಗಿಂತ ಬಹಳ ಹೆಚ್ಚು: ಐಸಿಎಂಆರ್ ಎಚ್ಚರಿಕೆ

ನವದೆಹಲಿ: ಕೋವಿಡ್-19 ಸೋಂಕಿಗೆ ಹೋಲಿಸಿದರೆ ನಿಪಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀಬ ಬಹ್ಲ್ ಶುಕ್ರವಾರ ಎಚ್ಚರಿಸಿದ್ದಾರೆ. ನಿಪಾ ವೈರಸ್ ಪ್ರಕರಣಗಳಲ್ಲಿ ಮರಣ ಪ್ರಮಾಣವು ಶೇಕಡಾ 40 ರಿಂದ 70 ರಷ್ಟಿದೆ, ಕೋವಿಡ್‌ನಲ್ಲಿನ ಮರಣ ಪ್ರಮಾಣವು ಶೇಕಡಾ 2ರಿಂದ 3 ರಷ್ಟಿದೆ … Continued

2023 : ಟೈಮ್ ಮ್ಯಾಗಜೀನ್‌ ವಿಶ್ವದ ಟಾಪ್‌-100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ ಗೆ ಮಾತ್ರ ಸ್ಥಾನ ; ವಿಶ್ವದ ಟಾಪ್‌- 10 ಕಂಪನಿಗಳ ಪಟ್ಟಿ…

ನವದೆಹಲಿ: 2023ರ ಟೈಮ್ ಮ್ಯಾಗಜೀನ್‌ನ ವಿಶ್ವದ ಅತ್ಯುತ್ತಮ ಅಗ್ರ 100 ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್‌ (Infosys) ಮಾತ್ರ ಸ್ಥಾನ ಪಡೆದ ಭಾರತದ ಏಕೈಕ ಕಂಪನಿಯಾಗಿದೆ. ಬೆಂಗಳೂರು ಮೂಲದ ಜಾಗತಿಕ ಸಲಹಾ ಮತ್ತು ಐಟಿ (IT) ಸೇವೆಗಳ ಕಂಪನಿಯು ಒಟ್ಟಾರೆ 88.38 ಅಂಕಗಳೊಂದಿಗೆ 64ನೇ ಸ್ಥಾನದಲ್ಲಿದೆ. ನಾವು ಟಾಪ್ 3 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿದ್ದೇವೆ ಮತ್ತು … Continued

ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ : ಅಂಜುಮನ್ ಸಂಸ್ಥೆ ಮೇಲ್ಮನವಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್ ಪೀಠ

ಧಾರವಾಡ: ಹುಬ್ಬಳ್ಳಿಯ ರಾಣಿ ಕಿತ್ತೂರು ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದ ಮಹಾನಗರ ಪಾಲಿಕೆಯ ನಿರ್ಧಾರವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ ಇಸ್ಲಾಂ ಸಂಸ್ಥೆಯವರು ಸಲ್ಲಿಸಿದ್ದ ಧಾರವಾಡ ಹೈಕೋರ್ಟ ಪೀಠ ತಿರಸ್ಕರಿಸಿದೆ. ವಿಚಾರಣೆ ನಡೆಸಿದ ನ್ಯಾ. ಸಚಿನ‌ ಮಗದುಮ್ಮ‌ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ಹೀಗಾಗಿ ಎರಡನೆ ವರ್ಷ ಈದ್ಗಾ … Continued

ಅಕ್ಟೋಬರ್‌ 1ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್‌, ಸರ್ಕಾರಿ ಉದ್ಯೋಗ ಪಡೆಯಲು ಜನನ ಪ್ರಮಾಣಪತ್ರ ಒಂದೇ ದಾಖಲೆ : ಹಾಗೆಂದರೆ…

ನವದೆಹಲಿ: ಅಕ್ಟೋಬರ್ 1 ರಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ವಿವಾಹ ನೋಂದಣಿ, ಚಾಲಕರ ಪರವಾನಗಿ, ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ನಾಗರಿಕರಿಗೆ ಜನನ ಪ್ರಮಾಣಪತ್ರಗಳು ಒಂದೇ ದಾಖಲೆಯಾಗಲಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ-2023 ಅನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವಾಲಯವು ಹೊಸ ಉಪಕ್ರಮವನ್ನು ‘ಸಾರ್ವಜನಿಕ ಸೇವೆಗಳು … Continued

ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಮಳೆಯಾಗುವ ಮುನ್ಸೂಚನೆ

ಬೆಂಗಳೂರು : ಕೊಡಗು ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದಿನಿಂದ ಸೆಪ್ಟೆಂಬರ್ 21ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 21ರವರೆಗೂ ಮಳೆ ಮುಂದುವರೆಯಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 16ರಂದುಗಾಳಿ … Continued

ತಿರುಪತಿ ಬಳಿ ಭೀಕರ ರಸ್ತೆ ಅಪಘಾತ : ಬೆಳಗಾವಿ ಜಿಲ್ಲೆಯ ಐವರು ಸಾವು, 11 ಮಂದಿಗೆ ಗಾಯ

ಹೈದರಾಬಾದ್‌/ ಬೆಳಗಾವಿ : ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಆಂಧ್ರದ ಅನ್ನಮಯ್ಯ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಮುಂದಿನ ಭಾಗ ನಜ್ಜುಗುಜ್ಜಾಗಿದ್ದರೆ, ಕ್ರೂಸರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಠಂಪಲ್ಲೆ … Continued

ಲಿಬಿಯಾ ಪ್ರವಾಹ: 11,000 ತಲುಪಿದ ಸಾವಿನ ಸಂಖ್ಯೆ ; 10,000 ಜನರು ನಾಪತ್ತೆ

ಲಿಬಿಯಾದ ಕರಾವಳಿ ನಗರವಾದ ಡರ್ನಾದಲ್ಲಿ ಎರಡು ಅಣೆಕಟ್ಟುಗಳು ಒಡೆದು ಉಂಟಾದ ಮಾರಣಾಂತಿಕ ಪ್ರವಾಹದಲ್ಲಿ ಸತ್ತವರ ಸಂಖ್ಯೆ 11,300 ಕ್ಕೆ ಏರಿದೆ ಹಾಗೂ ಇನ್ನೂ 10,000 ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಭಾರೀ ಮಳೆಯ ನಂತರ ನಗರದ ಹೊರಗಿನ ಎರಡು ಅಣೆಕಟ್ಟುಗಳು ಕುಸಿಯುವ ಮೊದಲು ನಗರದ ನಿವಾಸಿಗಳು ಭಾನುವಾರ (ಸೆ.10) ರಾತ್ರಿ ದೊಡ್ಡ ಸ್ಫೋಟಗಳನ್ನು ಕೇಳಿದರು. … Continued

ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ: ಮುಂದಿನ ಹಂತ ‘ಭೂ ಕ್ಷಕೆಯಿಂದ ಬೀಳ್ಕೊಡುಗೆ’

ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್1 (Aditya L1) ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ. ಗುರುವಾರ ಮಧ್ಯರಾತ್ರಿ 2 ಗಂಟೆಗೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಆದಿತ್ಯ ನೌಕೆ ಈಗ … Continued